ವೆಂಕಟ ಜೊತೆ ಪಿವಿ ಸಿಂಧು ಮದುವೆ: 3 ಅರಮನೆಗಳಲ್ಲಿ ಕಾರ್ಯಕ್ರಮ, ಮೇವಾರಿ ಆಹಾರ, ರಾಜಸ್ಥಾನಿ ಅಲಂಕಾರ, ರಾಜಮನೆತನದ ವಿವಾಹದ ವೈಶಿಷ್ಟ್ಯ ಇಲ್ಲಿದೆ
ಕನ್ನಡ ಸುದ್ದಿ  /  ಕ್ರೀಡೆ  /  ವೆಂಕಟ ಜೊತೆ ಪಿವಿ ಸಿಂಧು ಮದುವೆ: 3 ಅರಮನೆಗಳಲ್ಲಿ ಕಾರ್ಯಕ್ರಮ, ಮೇವಾರಿ ಆಹಾರ, ರಾಜಸ್ಥಾನಿ ಅಲಂಕಾರ, ರಾಜಮನೆತನದ ವಿವಾಹದ ವೈಶಿಷ್ಟ್ಯ ಇಲ್ಲಿದೆ

ವೆಂಕಟ ಜೊತೆ ಪಿವಿ ಸಿಂಧು ಮದುವೆ: 3 ಅರಮನೆಗಳಲ್ಲಿ ಕಾರ್ಯಕ್ರಮ, ಮೇವಾರಿ ಆಹಾರ, ರಾಜಸ್ಥಾನಿ ಅಲಂಕಾರ, ರಾಜಮನೆತನದ ವಿವಾಹದ ವೈಶಿಷ್ಟ್ಯ ಇಲ್ಲಿದೆ

PV Sindhu Venkata Datta Sai Wedding: ಎರಡು ಬಾರಿ ಒಲಿಂಪಿಕ್ ಪದಕ ಗೆದ್ದಿರುವ ಪಿವಿ ಸಿಂಧು ಅವರು ಇಂದು (ಡಿಸೆಂಬರ್ 22 ಭಾನುವಾರ) ಉದ್ಯಮಿ ವೆಂಕಟ ದತ್ತಾ ಸಾಯಿ ಅವರನ್ನು ವರಿಸಲಿದ್ದಾರೆ. ಮದುವೆ ಎಲ್ಲಿ, ವಿಶೇಷತೆಗಳೇನು ಎನ್ನುವುದರ ವಿವರ ಇಲ್ಲಿದೆ.

ವೆಂಕಟ ಜೊತೆ ಪಿವಿ ಸಿಂಧು ಮದುವೆ: ಮೂರು ಅರಮನೆಗಳಲ್ಲಿ ಮದುವೆ, ಮೇವಾರಿ ಆಹಾರ, ರಾಜಸ್ಥಾನಿ ಅಲಂಕಾರ, ರಾಜಮನೆತನದ ವಿವಾಹದ ವಿಶೇಷತೆ ಇಲ್ಲಿದೆ
ವೆಂಕಟ ಜೊತೆ ಪಿವಿ ಸಿಂಧು ಮದುವೆ: ಮೂರು ಅರಮನೆಗಳಲ್ಲಿ ಮದುವೆ, ಮೇವಾರಿ ಆಹಾರ, ರಾಜಸ್ಥಾನಿ ಅಲಂಕಾರ, ರಾಜಮನೆತನದ ವಿವಾಹದ ವಿಶೇಷತೆ ಇಲ್ಲಿದೆ

ಭಾರತದ ಸ್ಟಾರ್ ಮಹಿಳಾ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು (PV Sindhu) ತಮ್ಮ ಕನಸಿನ 'ರಾಜಕುಮಾರ'ನನ್ನು ಕಂಡುಕೊಂಡಿದ್ದಾರೆ. ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು, ಇಂದು (ಡಿಸೆಂಬರ್ 22 ಭಾನುವಾರ) ಉದ್ಯಮಿ ವೆಂಕಟ ದತ್ತಾ ಸಾಯಿ (Venkata Datta Sai) ಅವರನ್ನು ವರಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಡಿಸೆಂಬರ್​ 21ರಂದು ಸಂಗೀತ ಕಾರ್ಯಕ್ರಮ ಮತ್ತು ಮೆಹೆಂದಿ ಕಾರ್ಯಕ್ರಮ ಮುಗಿದಿದೆ. ವರದಿಯ ಪ್ರಕಾರ, ಉದಯಪುರದ ಉದಯ್ ಸಾಗರ್ ಸರೋವರದಲ್ಲಿ ನಿರ್ಮಿಸಲಾದ ಪಂಚತಾರಾ ರಾಫೆಲ್ಸ್ ಹೋಟೆಲ್​​ನಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಇಬ್ಬರೂ ಐಷರಾಮಿ ಶೈಲಿಯಲ್ಲಿ ಮದುವೆ ಆಗಲಿದ್ದು, ಅದ್ಧೂರಿ ವಿವಾಹಕ್ಕೆ ಕ್ರೀಡೆ, ರಾಜಕೀಯ ಮತ್ತು ಚಿತ್ರರಂಗದ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಹಾಗಾಗಿ ಐಷಾರಾಮಿ ಮದುವೆ ಮಂಟಪದಿಂದ ಹಿಡಿದು ಅಲಂಕಾರ, ಆಹಾರದ ತನಕ ಏನೆಲ್ಲಾ ವಿಶೇಷಗಳಿವೆ ಎಂಬುದರ ಕುರಿತು ತಿಳಿಯೋಣ.

3 ಅರಮನೆಗಳಲ್ಲಿ ಮದುವೆ ಸಮಾರಂಭ

ಭಾರತ ತಂಡದ ಸ್ಟಾರ್ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮದುವೆಯಾದ ಹೋಟೆಲ್​​ನಲ್ಲೇ ಪಿವಿ ಸಿಂಧು ವಿವಾಹವಾಗಲಿದ್ದಾರೆ ಎಂಬುದು ವಿಶೇಷ. ಆದರೆ, ಸಿಂಧು ಮದುವೆ ಹಾರ್ದಿಕ್ ಅವರಿಗಿಂತಲೂ ಅದ್ಧೂರಿಯಾಗಿ ನಡೆಯಲಿದೆ ಎಂದು ವರದಿಯಾಗಿದೆ. ನ್ಯೂಸ್ 18 ವರದಿ ಪ್ರಕಾರ, ಉದಯಪುರದ 3 ವಿಭಿನ್ನ ಐತಿಹಾಸಿಕ ಸ್ಥಳಗಳಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಜೀಲ್ ಮಹಲ್, ಲೀಲಾ ಮಹಲ್ ಮತ್ತು ಜಗ್ ಮಂದಿರವನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಮದುವೆ ಹೋಟೆಲ್​ಗಳನ್ನು ವೈಭವೋಪೇತವಾಗಿ ಅಲಂಕರಿಸಲಾಗಿದೆ. ಮದುವೆಗೆ ಆಗಮಿಸುವ ಅತಿಥಿಗಳನ್ನೂ ದೋಣಿ ಮೂಲಕ ಸ್ಥಳಕ್ಕೆ ಕರೆದೊಯ್ಯಲಾಗುತ್ತದೆ. ಮದುವೆಯಲ್ಲಿ ಭಾರತೀಯ ಹಾಗೂ ವಿದೇಶಿ ಅತಿಥಿಗಳಿಗೆ ಹಲವು ಬಗೆಯ ರಾಜಮನೆತನದ ಖಾದ್ಯಗಳನ್ನು ಏರ್ಪಡಿಸಲಾಗಿದೆ. ಈ ಎಲ್ಲಾ ಖಾದ್ಯಗಳು ರಾಜಸ್ಥಾನಿ ಖಾದ್ಯಗಳಾಗಿದ್ದು, ಮೇವಾರಿ ಶೈಲಿಯಲ್ಲಿ ಮಾಡಲಾಗುವುದು. ಇಂದು (ಡಿಸೆಂಬರ್ 22 ರಂದು) ಮದುವೆ ನಡೆಯಲಿದ್ದು, ದಂಪತಿಗಳು ಡಿಸೆಂಬರ್ 23 ರಂದು ಉದಯಪುರದಿಂದ ಹೊರಡಲಿದ್ದಾರೆ. ಡಿಸೆಂಬರ್ 24 ರಂದು ಹೈದರಾಬಾದ್‌ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ.

ಹೋಟೆಲ್ ಬಾಡಿಗೆಯೇ ಲಕ್ಷ ಲಕ್ಷ

ರಾಫೆಲ್ಸ್ ಹೋಟೆಲ್‌ನ ಕೊಠಡಿಗಳ ಬಗ್ಗೆ ಹೇಳುವುದಾದರೆ, ಈ ಹೋಟೆಲ್‌ನಲ್ಲಿ ಒಟ್ಟು 101 ಕೊಠಡಿಗಳಿವೆ. ಕೆರೆಯ ಮಧ್ಯದಲ್ಲಿ ನಿರ್ಮಿಸಿರುವ ಈ ಹೋಟೆಲ್​​ನ ದಿನದ ಬಾಡಿಗೆ 50 ಸಾವಿರದಿಂದ 1 ಲಕ್ಷ ರೂಪಾಯಿ ತನಕ ಇರಲಿದೆ. ಆನ್‌ಲೈನ್ ಬುಕಿಂಗ್ ಸೈಟ್ ಪ್ರಕಾರ, ಸೀಸನ್‌ಗೆ ಅನುಗುಣವಾಗಿ ದರಗಳು ಬದಲಾಗುತ್ತಲೇ ಇರುತ್ತವೆ. ರಾಫೆಲ್ಸ್ ಹೋಟೆಲ್​​ನಲ್ಲಿ 2 ಬಗೆಯ ವಿಶೇಷ ಕೊಠಡಿಗಳಿವೆ. ಇದರ ರಾತ್ರಿ ಬಾಡಿಗೆ 1 ಲಕ್ಷದ 44 ಸಾವಿರ. ಇದು ಆಕರ್ಷಕ ಅಲಂಕಾರಗಳನ್ನು ಹೊಂದಿದೆ. ಸರೋವರದ ಸುಂದರ ನೋಟವನ್ನು ಬಹಳ ಹತ್ತಿರದಿಂದ ನೋಡಬಹುದು. 2ನೇ ಸೂಟ್ ರಾಫೆಲ್ ಓಯಸಿಸ್ ಸೂಟ್ ವಿತ್ ಬ್ರಿಡ್ಜ್ ಆಗಿದೆ. ಈ ವಿಶೇಷ ಸೂಟ್ ಕ್ಯಾಬಾನಾ, ಲಿವಿಂಗ್ ರೂಮ್, ಖಾಸಗಿ ಬಾಲ್ಕನಿ, ವಾಕ್-ಇನ್ ವಾರ್ಡ್‌ರೋಬ್, ವೈಯಕ್ತಿಕ ಸೌಕರ್ಯ, ಧುಮುಕುವ ಪೂಲ್ ಒಳಗೊಂಡಿದೆ.

ಮದುವೆಗೆ ಬರುವ ಅತಿಥಿಗಳು

ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ತಮ್ಮ ಮದುವೆಗೆ ಕ್ರೀಡೆ, ರಾಜಕೀಯ ಮತ್ತು ಚಿತ್ರರಂಗದ ಗಣ್ಯರನ್ನು ಆಹ್ವಾನಿಸಿದ್ದಾರೆ. ಮಾಹಿತಿ ಪ್ರಕಾರ ಭಾರತದ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮದುವೆಗೆ ಆಗಮಿಸಲಿದ್ದಾರೆ. ಇವರಲ್ಲದೆ, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಶಿವರಾಜ್ ಸಿಂಗ್ ಚೌಹಾಣ್, ತೆಲಂಗಾಣ ಸಿಎಂ ರೇವಂತ್ ರೆಡ್ಡಿ, ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಸೇರಿದಂತೆ ಹಲವು ರಾಜಕೀಯ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ. ಸಿಂಧು ಸಿನಿಮಾ ತಾರೆಯರನ್ನು ಕೂಡ ಆಹ್ವಾನಿಸಿದ್ದಾರೆ.

Whats_app_banner
ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.