ಪ್ರೇಮ, ಆರೋಗ್ಯ ವಾರ ಭವಿಷ್ಯ: ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ, ದಾಂಪತ್ಯದಲ್ಲಿನ ಸಣ್ಣ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ
ಪ್ರೇಮ, ಆರೋಗ್ಯ ಭವಿಷ್ಯ ಸೆಪ್ಟೆಂಬರ್ 20, 2024: ದ್ವಾದಶ ರಾಶಿಗಳ ಆರೋಗ್ಯ ಹಾಗೂ ಪ್ರೇಮ ಭವಿಷ್ಯದ ಪ್ರಕಾರ, ಯಾವುದೇ ಆರೋಗ್ಯ ಸಮಸ್ಯೆ ಇರುವುದಿಲ್ಲ, ದಾಂಪತ್ಯದಲ್ಲಿನ ಸಣ್ಣ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಿ. 12 ರಾಶಿಯವರ ಆರೋಗ್ಯ ಮತ್ತು ಪ್ರೇಮ ಭವಿಷ್ಯ ತಿಳಿಯಿರಿ.
ಮೇಷ ರಾಶಿ
ಪ್ರೇಮ ಭವಿಷ್ಯ: ಪ್ರೇಮಿಯ ಭಾವನೆಗಳನ್ನು ನೋಯಿಸದಂತೆ ನೋಡಿಕೊಳ್ಳಿ. ವಾದ ಮಾಡುವಾಗ ಸಾಧ್ಯವಾದಷ್ಟು ತಾಳ್ಮೆಯಿಂದ ಇರಿ. ಕೋಪವನ್ನು ನಿಯಂತ್ರಿಸಿಕೊಳ್ಳಿ. ನಿಮ್ಮ ಮತ್ತು ಪ್ರೇಮಿಯ ನಡುವೆ ತಪ್ಪು ತಿಳುವಳಿಕೆಗಳು ಇರಬಹುದು, ಆದರೆ ಮುಕ್ತವಾಗಿ ಮಾತನಾಡುವುದು ಸಮಸ್ಯೆಯನ್ನು ಪರಿಹರಿಸುತ್ತದೆ.
ಆರೋಗ್ಯ ಭವಿಷ್ಯ: ಯಾವುದೇ ಪ್ರಮುಖ ವೈದ್ಯಕೀಯ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ. ಆದರೆ, ಕೆಲವು ವಯಸ್ಸಾದವರಿಗೆ ಒತ್ತಡ-ಸಂಬಂಧಿತ ಸಮಸ್ಯೆಗಳ ಜೊತೆಗೆ ಉಸಿರಾಟದ ತೊಂದರೆಗಳು ಇರುತ್ತವೆ. ಕೆಲವರಿಗೆ ವೈರಲ್ ಜ್ವರ, ಗಂಟಲು ನೋವು ಹಾಗೂ ದೃಷ್ಟಿ ಸಮಸ್ಯೆಗಳು ಸಹ ಸಾಮಾನ್ಯವಾಗಿರುತ್ತವೆ.
ವೃಷಭ ರಾಶಿ
ಪ್ರೇಮ ಭವಿಷ್ಯ: ಪ್ರೀತಿಯಲ್ಲಿ ಉತ್ತಮ ಕ್ಷಣಗಳನ್ನು ಕಳೆಯುತ್ತೀರಿ. ವೈಯಕ್ತಿಕ ಮತ್ತು ವೃತ್ತಿಪರ ಪ್ರಯತ್ನಗಳಲ್ಲಿ ನೀವಿಬ್ಬರೂ ಪರಸ್ಪರವಾಗಿ ಬೆಂಬಲಿಸಿಕೊಳ್ಳುತ್ತೀರಿ. ಹಿಂದಿನ ಸಮಸ್ಯೆಗಳನ್ನು ಪರಿಹರಿಸಲು ಉತ್ತಮ ದಿನವಲ್ಲ. ನಿಮ್ಮ ಪ್ರೇಮಿಯನ್ನು ನೋಯಿಸಲು ಹೋಗಬೇಡಿ. ಹೊಸ ಸಂಬಂಧದಲ್ಲಿರುವವರು ಒಟ್ಟಿಗೆ ಹೆಚ್ಚು ಸಮಯ ಕಳೆಯಬೇಕು.
ಆರೋಗ್ಯ ಭವಿಷ್ಯ: ಸಣ್ಣ ವೈದ್ಯಕೀಯ ಸಮಸ್ಯೆಗಳು ಇರುತ್ತವೆ ಆದರೆ ದೈನಂದಿನ ಜೀವನದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಜೀರ್ಣಕಾರಿ ಸಮಸ್ಯೆಗಳು ಉಂಟಾಗುವುದರಿಂದ ಹೊರಗಿನ ಆಹಾರವನ್ನು ತಿನ್ನುವುದನ್ನು ತಪ್ಪಿಸಿ. ಕೆಲವರಿಗೆ ವೈರಲ್ ಜ್ವರ, ಗಂಟಲು ನೋವು ಮತ್ತು ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಮಿಥುನ ರಾಶಿ
ಪ್ರೇಮ ಭವಿಷ್ಯ: ಪ್ರೇಮ ವ್ಯವಹಾರಗಳಲ್ಲಿ ಸಣ್ಣ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಹಳೆಯ ಪ್ರೇಮ ಸಂಬಂಧವು ಮತ್ತೆ ನಿಮ್ಮ ಮುಂದೆ ಬರಬಹುದು, ಆದರೆ ಅದು ಅಸ್ತಿತ್ವದಲ್ಲಿರುವ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಈ ಬಿಕ್ಕಟ್ಟನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿ. ವಾದಗಳನ್ನು ತಪ್ಪಿಸಿ. ನಿಮ್ಮ ಸಂಗಾತಿಯೊಂದಿಗೆ ಸಂತೋಷವಾಗಿರುತ್ತೀರಿ.
ಆರೋಗ್ಯ ಭವಿಷ್ಯ: ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸಮಸ್ಯೆಗಳು ಇರುವುದಿಲ್ಲ. ಔಷಧಿಗಳನ್ನು ತೆಗೆದುಕೊಳ್ಳಲು ಮರೆಯಬೇಡಿ. ಎದೆಗೆ ಸಂಬಂಧಿಸಿದ ಸಣ್ಣ ಸಮಸ್ಯೆಗಳು ಇರುತ್ತವೆ. ನೀವು ವೈದ್ಯರನ್ನು ಸಂಪರ್ಕಿಸಬೇಕಾಗಬಹುದು. ಮಧುಮೇಹದಿಂದ ಬಳಲುತ್ತಿರುವ ಮಿಥುನ ರಾಶಿಯವರಿಗೆ ಸಂಜೆಯ ನಂತರ ವೈದ್ಯಕೀಯ ಆರೈಕೆಯ ಅಗತ್ಯ ಇರುತ್ತೆ.
ಕಟಕ ರಾಶಿ
ಪ್ರೇಮ ಭವಿಷ್ಯ: ಪ್ರೇಮಿಯೊಂದಿಗೆ ಸಮಯ ಕಳೆಯುವಾಗ ನಿಮ್ಮ ವರ್ತನೆ ಮುಖ್ಯ. ಸಣ್ಣ ಭಿನ್ನಾಭಿಪ್ರಾಯಗಳು ಇರುತ್ತವೆ ಆದರೆ ಘರ್ಷಣೆಯ ಮನಸ್ಥಿತಿಗೆ ಹೋಗಬೇಡಿ ಏಕೆಂದರೆ ಅದು ಪ್ರೇಮಿಯನ್ನು ಅಸಮಾಧಾನಗೊಳಿಸುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಿ. ರೊಮ್ಯಾಂಟಿಕ್ ಡಿನ್ನರ್ ಯೋಜಿಸಿ, ಅಲ್ಲಿ ನೀವು ಪ್ರೇಮಿಯನ್ನು ಪೋಷಕರಿಗೆ ಪರಿಚಯಿಸಬಹುದು.
ಆರೋಗ್ಯ ಭವಿಷ್ಯ: ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇರುವುದಿಲ್ಲ. ಆದರೆ, ಉಸಿರಾಟದ ತೊಂದರೆ ಇರುವವರು ವೈದ್ಯರನ್ನು ಸಂಪರ್ಕಿಸಬೇಕಾಗುತ್ತೆ. ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿರುವವರು ಯೋಗ ಮತ್ತು ಧ್ಯಾನ ಸೇರಿದಂತೆ ನೈಸರ್ಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು. ಆಲ್ಕೋಹಾಲ್ ಮತ್ತು ತಂಬಾಕನ್ನು ತಪ್ಪಿಸುವುದು ಒಳ್ಳೆಯದು.
ಸಿಂಹ ರಾಶಿ
ಪ್ರೇಮ ಭವಿಷ್ಯ: ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ ಮತ್ತು ಬೇಷರತ್ತಾಗಿ ಪ್ರೀತಿಸಿ. ಪ್ರೇಮ ಸಂಬಂಧವನ್ನು ಗೌರವಿಸಿ ಮತ್ತು ಪ್ರೇಮಿಗೆ ವೈಯಕ್ತಿಕ ಸ್ಥಳವನ್ನು ನೀಡಿ. ಪ್ರಪೋಸ್ ಮಾಡಲು ಒಳ್ಳೆಯ ದಿನ. ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲು ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ.
ಆರೋಗ್ಯ ಭವಿಷ್ಯ: ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ ಆದರೆ ಹೃದಯ ಸಂಬಂಧಿತ ದೂರುಗಳನ್ನು ಹೊಂದಿರುವವರು ಜಾಗರೂಕರಾಗಿರಬೇಕು. ಯೋಗ ಮತ್ತು ಧ್ಯಾನದ ಮೂಲಕ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ವಹಿಸಿ
ಕನ್ಯಾ ರಾಶಿ
ಪ್ರೇಮ ಭವಿಷ್ಯ: ನಿಮ್ಮ ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯುವುದನ್ನು ಖಚಿತಪಡಿಸಿಕೊಳ್ಳಿ. ಸಂಬಂಧದಲ್ಲಿ ಅಹಂ ಇರಬಾರದು. ಸಂಗಾತಿಯೊಂದಿಗೆ ಚರ್ಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ. ಇದು ಸಂಬಂಧವನ್ನು ಗಟ್ಟಿಗೊಳಿಸುತ್ತೆ. ಮದುವೆಯ ಬಗ್ಗೆ ಚರ್ಚಿ ನಡೆಯುತ್ತೆ. ಪೋಷಕರು ಸಹ ನಿಮ್ಮ ನಿರ್ಧಾರವನ್ನು ಬೆಂಬಲಿಸುತ್ತಾರೆ.
ಆರೋಗ್ಯ ಭವಿಷ್ಯ: ದಿನವಿಡೀ ಆರೋಗ್ಯ ಉತ್ತಮವಾಗಿರುತ್ತೆ. ಕೆಲ ಕನ್ಯಾ ರಾಶಿಯವರಿಗೆ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತೆ. ಜಂಕ್ ಫುಡ್ ತಿನ್ನಬೇಡಿ, ಆಹಾರದಲ್ಲಿ ಹಣ್ಣುಗಳು ಮತ್ತು ತರಕಾರಿಗಳು ಸಮೃದ್ಧವಾಗಿವೆ ಎಂದು ಖಚಿತಪಡಿಸಿಕೊಳ್ಳಿ. ಆಲ್ಕೋಹಾಲ್ ಮತ್ತು ತಂಬಾಕು ಎರಡನ್ನೂ ತ್ಯಜಿಸುವುದು ಒಳ್ಳೆಯದು.
ತುಲಾ ರಾಶಿ
ಪ್ರೇಮ ಭವಿಷ್ಯ: ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗದಂತೆ ನೋಡಿಕೊಳ್ಳಿ. ಪರಸ್ಪರ ಮಾತುಕತೆ ನಡೆಸಿ. ನಿಮ್ಮ ಸಂಗಾತಿಯ ಆಸೆಗಳನ್ನು ಪೂರೈಸಲು ಪ್ರಯತ್ನಿಸಿ. ಅವರು ಕೇಳಿದ್ದನ್ನು ತಂದುಕೊಡಲು ಪ್ರಯತ್ನಿಸುತ್ತೀರಿ. ಹಳೆಯ ವಿವಾದಗಳನ್ನು ಪರಿಹರಿಸಿದರೆ ಸಂತೋಷಪಡುತ್ತಾರೆ. ಸಮಸ್ಯೆಗಳನ್ನು ಪರಿಹರಿಸಲು ಮುಕ್ತವಾಗಿ ಚರ್ಚಿಸಿ.
ಆರೋಗ್ಯ ಭವಿಷ್ಯ: ಪ್ರಮುಖ ಕಾಯಿಲೆಗಳಿಂದ ಪರಿಹಾರವನ್ನು ಕಂಡುಕೊಳ್ಳುವಿರಿ. ರಜೆ ಪ್ಲಾನ್ ಮಾಡುವುದು ಒಳ್ಳೆಯದು ಆದರೆ ವೈದ್ಯರು ಸೂಚಿಸಿದ ಎಲ್ಲಾ ಔಷಧಿಗಳನ್ನು ಖರೀದಿಸುತ್ತೀರಿ.
ವೃಶ್ಚಿಕ ರಾಶಿ
ಪ್ರೇಮ ಭವಿಷ್ಯ: ಪ್ರೀತಿಯಲ್ಲಿ ಸಂತೋಷದ ಕ್ಷಣಗಳನ್ನು ಕಳೆಯುತ್ತೀರಿ. ಉತ್ತಮ ಕೇಳುಗರಾಗಿರಬೇಕು ಮತ್ತು ತೊಂದರೆಯನ್ನು ಉಂಟುಮಾಡುವ ಭಾವನೆಗಳಿಗೆ ಅವಕಾಶ ನೀಡಬೇಡಿ. ಯಾವುದೇ ಸಮಸ್ಯೆ, ಅದು ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ, ಬೆಳೆಯಲು ಬಿಡಬೇಡಿ. ಬದಲಾಗಿ ನಿಮಗೆ ಸಾಧ್ಯವಾದಷ್ಟು ಬೇಗ ಅದನ್ನು ಸರಿಪಡಿಸಿ.
ಆರೋಗ್ಯ ಭವಿಷ್ಯ: ಆರೋಗ್ಯ ಉತ್ತಮವಾಗಿರುವುದರಿಂದ ಸುಲಭವಾಗಿ ಉಸಿರಾಡಬಹುದು. ಆದರೆ, ಅಗತ್ಯವಿದ್ದಾಗ ವೈದ್ಯರನ್ನು ಸಂಪರ್ಕಿಸಿ. ಕೆಲವು ಹಿರಿಯರು ಎದೆ ಸಂಬಂಧಿತ ಸೋಂಕುಗಳ ಬಗ್ಗೆ ದೂರು ನೀಡುತ್ತಾರೆ. ಮಕ್ಕಳಲ್ಲಿ ವೈರಲ್ ಜ್ವರ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ.
ಧನು ರಾಶಿ
ಪ್ರೇಮ ಭವಿಷ್ಯ: ಸಂಬಂಧದಲ್ಲಿ ಪ್ರೀತಿ ಮತ್ತು ಕಾಳಜಿಯನ್ನು ಹೆಚ್ಚಿರಲಿ. ಆದರೆ, ಸಂಗಾತಿಯೊಂದಿಗಿನ ನಿಮ್ಮ ವಿವಾದಗಳನ್ನು ಪರಿಹರಿಸಿಕೊಳ್ಳುತ್ತೀರಿ. ಹಿಂದಿನ ಸಂತೋಷ ಮುಂದುವರಿಯುತ್ತೆ. ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ ಮತ್ತು ಭವಿಷ್ಯದ ಯೋಜನೆಗಳನ್ನು ಚರ್ಚಿಸಿ.
ಆರೋಗ್ಯ ಭವಿಷ್ಯ: ಸಮತೋಲಿತ ಕಚೇರಿ ಮತ್ತು ವೈಯಕ್ತಿಕ ಜೀವನವನ್ನು ಕಾಪಾಡಿಕೊಳ್ಳಿ. ಪ್ರಯಾಣಿಸುವಾಗ ವೈದ್ಯಕೀಯ ಕಿಟ್ ನಿಮ್ಮೊಂದಿಗಿರಲಿ. ಪ್ರೋಟೀನ್‌ಗಳು, ಜೀವಸತ್ವಗಳು ಹಾಗೂ ಕಾರ್ಬೋಹೈಡ್ರೇಟ್‌ಗಳ ಉತ್ತಮ ಸಂಯೋಜನೆಯಾಗಿರಬೇಕು.
ಮಕರ ರಾಶಿ
ಪ್ರೇಮ ಭವಿಷ್ಯ: ಸಂಬಂಧವನ್ನು ಗೌರವಿಸಿ. ನಿಮ್ಮ ಸಂಗಾತಿ ಅದನ್ನು ಗುರುತಿಸುತ್ತಾರೆ. ಭಿನ್ನಾಭಿಪ್ರಾಯಗಳ ಹೊರತಾಗಿಯೂ, ಪ್ರೇಮಿಯೊಂದಿಗಿನ ನಿಮ್ಮ ಸಂಬಂಧವು ಹಾಗೇ ಇರುತ್ತದೆ. ಪ್ರೇಮ ಸಂಬಂಧದಲ್ಲಿ ಯಾವುದೇ ದೊಡ್ಡ ಬಿಕ್ಕಟ್ಟು ಉದ್ಭವಿಸುವುದಿಲ್ಲ. ನೀವು ಒಟ್ಟಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ.
ಆರೋಗ್ಯ ಭವಿಷ್ಯ: ಸಣ್ಣ ಆರೋಗ್ಯ ಸಮಸ್ಯೆಗಳು ಇರುತ್ತವೆ. ಜೀರ್ಣಕ್ರಿಯೆ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಮಾನಸಿಕವಾಗಿ ಆರೋಗ್ಯವಾಗಿರಲು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಿ.
ಕುಂಭ ರಾಶಿ
ಪ್ರೇಮ ಭವಿಷ್ಯ: ಸಂಗಾತಿಯನ್ನು ಗೌರವದಿಂದ ನಡೆಸಿಕೊಳ್ಳಿ. ನೀವು ಅದೇ ಗೌರವವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯ ಪೋಷಕರನ್ನು ನಿಂದಿಸಬೇಡಿ ಏಕೆಂದರೆ ಈ ಕಾರಣದಿಂದಾಗಿ ಹೆಚ್ಚಿನ ಸಂಬಂಧಗಳು ದುಃಖಕರವಾಗಿ ಕೊನೆಗೊಳ್ಳಬಹುದು. ನಿಮ್ಮ ಪ್ರೇಮಿ ನಿಮ್ಮ ಉಪಸ್ಥಿತಿಯನ್ನು ಬಯಸುತ್ತಾರೆ.
ಆರೋಗ್ಯ ಭವಿಷ್ಯ: ನಿಮ್ಮ ಆರೋಗ್ಯದ ಬಗ್ಗೆ ಗಮನ ಕೊಡಿ. ಮಹಿಳೆಯರಿಗೆ ಮೈಗ್ರೇನ್ ಅಥವಾ ಸಂಪೂರ್ಣ ವಿಶ್ರಾಂತಿಯ ಅಗತ್ಯವಿರುವ ತೀವ್ರವಾದ ದೇಹದ ನೋವುಗಳು ಉಂಟಾಗಬಹುದು. ಸೌಮ್ಯ ವ್ಯಾಯಾಮದೊಂದಿಗೆ ದಿನವನ್ನು ಪ್ರಾರಂಭಿಸಿ.
ಮೀನ ರಾಶಿ
ಪ್ರೇಮ ಭವಿಷ್ಯ: ಪ್ರೇಮಿಗಳ ನಡುವೆ ಸಣ್ಣ ಘರ್ಷಣೆ ಇರುತ್ತೆ. ಆದರೆ ದಿನ ಮುಗಿಯುವ ಮೊದಲು ಅದನ್ನು ಪರಿಹರಿಸಿ. ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ ಮತ್ತು ವೈಯಕ್ತಿಕ ಮತ್ತು ಅಧಿಕೃತ ಸಾಧನೆಗಳಲ್ಲಿ ಯಶಸ್ಸಿಗಾಗಿ ಯಾವಾಗಲೂ ಸಂಗಾತಿಯನ್ನು ಹೊಗಳಿ.
ಆರೋಗ್ಯ ಭವಿಷ್ಯ: ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚು ಜಾಗರೂಕರಾಗಿರಬೇಕು. ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ ಮತ್ತು ಜಂಕ್ ಫುಡ್ ಅನ್ನು ನಿಮ್ಮ ಆಹಾರದ ಮೆನುದಿಂದ ದೂರವಿಡಿ. ಸೊಪ್ಪು, ತರಕಾರಿಗಳನ್ನು ಆಹಾರದ ಒಂದು ಭಾಗವಾಗಿ ಮಾಡಿಕೊಳ್ಳಿ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.