Saturn Transit: ದಸರಾ ಸಮಯದಲ್ಲಿ ಶನಿ ನಕ್ಷತ್ರ ಪ್ರವೇಶ; ಈ ರಾಶಿಯವರಿಗೆ ಒಲಿದ ಅದೃಷ್ಟ, ಹಣಕ್ಕೆ ಕೊರತೆಯೇ ಇರಲ್ಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Saturn Transit: ದಸರಾ ಸಮಯದಲ್ಲಿ ಶನಿ ನಕ್ಷತ್ರ ಪ್ರವೇಶ; ಈ ರಾಶಿಯವರಿಗೆ ಒಲಿದ ಅದೃಷ್ಟ, ಹಣಕ್ಕೆ ಕೊರತೆಯೇ ಇರಲ್ಲ

Saturn Transit: ದಸರಾ ಸಮಯದಲ್ಲಿ ಶನಿ ನಕ್ಷತ್ರ ಪ್ರವೇಶ; ಈ ರಾಶಿಯವರಿಗೆ ಒಲಿದ ಅದೃಷ್ಟ, ಹಣಕ್ಕೆ ಕೊರತೆಯೇ ಇರಲ್ಲ

Saturn Nakshatra Transit: ನ್ಯಾಯದ ದೇವರು ಶನಿ ಕೆಲವೇ ದಿನಗಳಲ್ಲಿ ರಾಹುವಿನ ನಕ್ಷತ್ರ ಶತಭಿಷವನ್ನ ಪ್ರವೇಶಿಸಲಿದ್ದಾನೆ. ಶನಿಯ ಈ ಸಂಚಾರ ಕೆಲವು ರಾಶಿಯವರಿಗೆ ಪ್ರಯೋಜನವಾಗಲಿದೆ. ವ್ಯಾಪಾರ, ಉದ್ಯೋಗದಲ್ಲಿ ಯಶಸ್ಸು ಸಿಗುತ್ತೆ. ಪ್ರತಿ ಕೆಲಸದಲ್ಲೂ ಮೇಲುಗೈ ಸಾಧಿಸುತ್ತಾರೆ. ಶನಿಯಿಂದಾಗಿ ಯಾವ ರಾಶಿಗಳಿಗೆ ಉತ್ತಮ ಫಲಿತಾಂಶಗಳಿವೆ ಅನ್ನೋದನ್ನು ತಿಳಿಯೋಣ.

Saturn Transit: ದಸರಾ ಸಮಯದಲ್ಲಿ ಶನಿ ನಕ್ಷತ್ರ ಪ್ರವೇಶ; ಈ ರಾಶಿಯವರಿಗೆ ಒಲಿದ ಅದೃಷ್ಟ, ಹಣಕ್ಕೆ ಕೊರತೆಯೇ ಇರಲ್ಲ
Saturn Transit: ದಸರಾ ಸಮಯದಲ್ಲಿ ಶನಿ ನಕ್ಷತ್ರ ಪ್ರವೇಶ; ಈ ರಾಶಿಯವರಿಗೆ ಒಲಿದ ಅದೃಷ್ಟ, ಹಣಕ್ಕೆ ಕೊರತೆಯೇ ಇರಲ್ಲ

Saturn Nakshatra Transit: ಕೆಲವೇ ಕೆಲವು ದಿನಗಳಲ್ಲಿ ನವರಾತ್ರಿ ಆರಂಭವಾಗಲಿವೆ. ಈ ಸಮಯದಲ್ಲಿ ಶನಿಯು ತನ್ನ ನಕ್ಷತ್ರ ಸ್ಥಾನವನ್ನು ಬದಲಾಯಿಸಲಿದ್ದಾನೆ. ಮುಂದಿನ ತಿಂಗಳು ಶನಿ ರಾಶಿ ಬದಲಾಗುತ್ತಿದೆ. ಅಕ್ಟೋಬರ್‌ನಲ್ಲಿ ಉಂಟಾಗಲಿರುವ ಸೂರ್ಯಗ್ರಹಣ ದಿನವೇ ಶನಿಯು ರಾಹುವಿನ ನಕ್ಷತ್ರಕ್ಕೆ ಸಾಗುತ್ತಾನೆ. ಅಕ್ಟೋಬರ್ 2 ರ ಬುಧುವಾರಸೂರ್ಯಗ್ರಹಣ ಸಂಭವಿಸಲಿದೆ. ಅದೇ ಸಮಯದಲ್ಲಿ ಶನಿ ನಕ್ಷತ್ರವೂ ಬದಲಾಗಲಿದೆ. ಅದೇ ದಿನದಿಂದ ನವರಾತ್ರಿಗಳು ಆರಂಭವಾಗಲಿವೆ. ಅಂದು ಕಲಶ ಸ್ಥಾಪನೆ ಮಾಡಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಶನಿಯು ರಾಹುವಿನ ನಕ್ಷತ್ರವಾದ ಶತಭಿಷದಲ್ಲಿ ಸಂಕ್ರಮಿಸುತ್ತಾನೆ.

2024 ರ ಅಕ್ಟೋಬರ್ 3 ರಂದು ಮಧ್ಯಾಹ್ನ 12.10 ಗಂಟೆಗೆ ಶನಿಯು ರಾಹು ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಸುಮಾರು 88 ದಿನಗಳ ಕಾಲ ಶತಭಿಷ ನಕ್ಷತ್ರದಲ್ಲೇ ಇರುತ್ತಾರೆ. ಶನಿಯು ಪ್ರಸ್ತುತ ಗುರುವಿನ ಪೂರ್ವಾಭಾದ್ರಪದ ನಕ್ಷತ್ರದಲ್ಲಿದ್ದಾನೆ.

ನಕ್ಷತ್ರ ಮಂಡಲದ ಶತತ್ರ ಎಂದೇರನು?

ಶನಿಯು ಪ್ರಸ್ತುತ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಶನಿಯು ಮುಂದಿನ ವರ್ಷ ಅಂದರೆ 2025 ರವರೆಗೆ ಕುಂಭ ರಾಶಿಯಲ್ಲಿ ಇರುತ್ತಾನೆ. ಶತಭಿಷಾ ನಕ್ಷತ್ರವು ಎಲ್ಲಾ ನಕ್ಷತ್ರಗಳಲ್ಲಿ 24 ನೇ ಸ್ಥಾನದಲ್ಲಿದೆ. ರಾಹು ಈ ನಕ್ಷತ್ರದ ಆಡಳಿತ ಗ್ರಹ. ಈ ನಕ್ಷತ್ರವು ಕುಂಭ ರಾಶಿಯಲ್ಲಿ ಬರುತ್ತದೆ. ಈ ನಕ್ಷತ್ರವನ್ನು ನೂರು ವೈದ್ಯರು ಎಂದು ಪರಿಗಣಿಸಲಾಗುತ್ತದೆ. ಕೆಲವರು ಈ ನಕ್ಷತ್ರ ಮಂಡಲವನ್ನು ಶತತ್ರ ಎಂದೂ ಕರೆಯುತ್ತಾರೆ. ಇದರರ್ಥ 100 ನಕ್ಷತ್ರಗಳ ಸಮೂಹ. ರಾಹು ನಕ್ಷತ್ರದಲ್ಲಿ ಶನಿಯ ಸಂಚಾರವು ಯಾವ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಶತಭಿಷ ನಕ್ಷತ್ರದಲ್ಲಿ ಶನಿ ಪ್ರವೇಶವು ನಕಾರಾತ್ಮಕ ಪರಿಣಾಮಗಳನ್ನು ಹೆಚ್ಚಿಸುತ್ತದೆ. ಈ ಕಾರಣಕ್ಕಾಗಿ ಅದರ ವ್ಯಾಪಕ ಪ್ರಭಾವವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಕಂಡುಬರುತ್ತದೆ. ಪಂಡಿತರ ಪ್ರಕಾರ, ಶನಿಯ ಋಣಾತ್ಮಕ ಪ್ರಭಾವದ ಅಡಿಯಲ್ಲಿ ರಾಶಿಚಕ್ರ ಚಿಹ್ನೆಗಳಿಗೆ ನಕಾರಾತ್ಮಕತೆ ಹೆಚ್ಚಾಗುತ್ತದೆ. ಇದರೊಂದಿಗೆ, ಜನ್ಮ ಕುಂಡಲಿಯಲ್ಲಿ ಯಾವುದೇ ರೀತಿಯಲ್ಲಿ ರಾಹು ಕೂಡ ನಕಾರಾತ್ಮಕ ಪ್ರಭಾವದಲ್ಲಿದ್ದರೆ, ಶನಿಯ ನಕಾರಾತ್ಮಕ ಪ್ರಭಾವವು ಹೆಚ್ಚು ಗೋಚರಿಸುತ್ತದೆ.

ಯಾರಿಗೆ ಏನು ಲಾಭ?

ಶನಿ ಗ್ರಹಕ್ಕೆ ಸಂಬಂಧಿಸಿದಂತೆ ಈ ಬೆಳವಣಿಗೆ ಧನಾತ್ಮಕವಾಗಿರುತ್ತದೆ. ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶವು ಮೇಷ, ಮಿಥುನ, ಸಿಂಹ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯವರಿಗೆ ವಿಶೇಷ ಲಾಭವನ್ನು ನೀಡುತ್ತದೆ. ಆದರೆ ಮೂಲ ಜಾತಕದಲ್ಲಿ ಶನಿಯ ಸ್ಥಾನವನ್ನು ಅವಲಂಬಿಸಿ, ಫಲಿತಾಂಶಗಳು ಲಭ್ಯವಿವೆ.

ಶನಿಯು ಶತಭಿಷ ನಕ್ಷತ್ರಕ್ಕೆ ಪ್ರವೇಶಿಸುವುದರಿಂದ ವ್ಯಾಪಾರ ಕ್ಷೇತ್ರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಆರೋಗ್ಯ ಸುಧಾರಿಸುತ್ತದೆ. ಹಣ ಗಳಿಸುವ ಅವಕಾಶಗಳೂ ಇವೆ. ಉದ್ಯೋಗದ ನಿರೀಕ್ಷೆಯಲ್ಲಿರುವ ನಿರುದ್ಯೋಗಿಗಳಿಗೆ ಸಿಹಿ ಸುದ್ದಿಯಿದೆ. ಕೆಲವರಿಗೆ ಹೆಚ್ಚಿನ ಆದಾಯ ಇರುತ್ತೆ. ಇದು ಹಣಕಾಸಿನ ಸಮಸ್ಯೆಗಳನ್ನು ಬಗಹರಿಸಲು ಸಹಾಯ ಮಾಡುತ್ತೆ. ಅನಿರೀಕ್ಷಿತ ಆರ್ಥಿಕ ಲಾಭಗಳು ಅಧಿಕವಾಗಿರುತ್ತದೆ.

ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಲು ಈ ಸಮಯ ಅನುಕೂಲಕರವಾಗಿದೆ. ಕುಟುಂಬ ಸದಸ್ಯರೊಂದಿಗೆ ಉತ್ತಮ ಬಾಂಧವ್ಯ ಇರುತ್ತದೆ. ಆರೋಗ್ಯದ ಜೊತೆಗೆ ಹಣಕಾಸಿನ ಸ್ಥಿತಿಯೂ ಬದಲಾಗುತ್ತದೆ. ಈ ಅವಧಿಯು ಅತ್ಯಂತ ಮಂಗಳಕರವಾಗಿದೆ. ನೀವು ಇಡುವ ಪ್ರತಿಯೊಂದು ಹೆಜ್ಜೆಯೂ ನಿಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.