ಸಿಎಸ್ಕೆ ಪ್ಲೇಆಫ್ಗೆ ಬರಲೆಂದು ಸಹಾಯ ಮಾಡಿತೇ ರಾಜಸ್ಥಾನ್ ರಾಯಲ್ಸ್; ತನಿಖೆಗೆ ಆಗ್ರಹಿಸಿದ ನೆಟ್ಟಿಗರು
CSK vs RR : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಉದ್ದೇಶ ನೋಡಿದರೆ ಫಿಕ್ಸಿಂಗ್ ಮಾಡಿಕೊಂಡಂತಿದೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ರೋಚಕ ಘಟ್ಟದತ್ತ ತಲುಪುತ್ತಿದೆ. ಟೂರ್ನಿ ಕೊನೆಯ ಹಂತ ತಲುಪಿದರೂ ಕೋಲ್ಕತ್ತಾ ನೈಟ್ ರೈಡರ್ಸ್ ಹೊರತುಪಡಿಸಿ ಯಾವುದೇ ತಂಡ ಪ್ಲೇಆಫ್ ಸ್ಥಾನ ಖಚಿತಪಡಿಸಿಲ್ಲ. ಇನ್ನೂ ಮೂರು ಸ್ಥಾನಗಳಿಗಾಗಿ 7 ತಂಡಗಳ ನಡುವೆ ಪೈಪೋಟಿ ನಡೆಯುತ್ತಿದೆ. ಎರಡನೇ ತಂಡವಾಗಿ ಪ್ಲೇಆಫ್ ಪ್ರವೇಶಿಸಲು ಸಜ್ಜಾಗಿದ್ದ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ (CSK vs RR) ವಿರುದ್ಧ 5 ವಿಕೆಟ್ಗಳ ಸೋಲನುಭವಿಸಿತು. ಇಂದು (ಮೇ 12) ಚೆನ್ನೈನಲ್ಲಿ ನಡೆದ ಈ ಪಂದ್ಯದ ನಂತರ ಫಿಕ್ಸಿಂಗ್ (Match Fixing) ಆಗಿದೆ ಎಂದು ಟ್ರೆಂಡ್ ಆಗುತ್ತಿದೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಆರ್ಆರ್, ಚೆನ್ನೈ ಎದುರು ಸೋತಿತು. ಉಭಯ ತಂಡಗಳು ಸಹ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಫ್ಯಾನ್ಸ್ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ಆರ್ಆರ್, ವೈಫಲ್ಯ ಅನುಭವಿಸಿತು. ರಿಯಾನ್ ಪರಾಗ್ (47) ಮತ್ತು ಧ್ರುವ್ ಜುರೆಲ್ (28) ಹೊರತುಪಡಿಸಿ ಉಳಿದವರು ಬ್ಯಾಟಿಂಗ್ನಲ್ಲಿ ಪರಿಣಾಮ ಬೀರಲು ವಿಫಲರಾದರು. ಯಶಸ್ವಿ ಜೈಸ್ವಾಲ್ (24), ಜೋಸ್ ಬಟ್ಲರ್ (21), ಸಂಜು ಸ್ಯಾಮ್ಸನ್ (15) ರನ್ ಗಳಿಸಲು ಪರದಾಡಿದರು.
ಪಂದ್ಯದ ಬೆನ್ನಲ್ಲೇ ರಾಜಸ್ಥಾನ್ ರಾಯಲ್ಸ್ ತಂಡ ಮತ್ತೆ ಫಿಕ್ಸಿಂಗ್ ಮಾಡಿಕೊಂಡಿದೆ. ನೆಟ್ಟಿಗರು ಪಂದ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಫಿಕ್ಸಿಂಗ್ ಆಗಿರಬಹುದು ಎಂದು ಹೇಳುತ್ತಿದ್ದಾರೆ. ಆರ್ಆರ್ ಕಳಪೆ ಬ್ಯಾಟಿಂಗ್ ನೋಡುತ್ತಿದ್ದರೆ, ಸಿಎಸ್ಕೆ ತಂಡವನ್ನು ಪ್ಲೇಆಫ್ಗೆ ಕೊಂಡೊಯ್ಯಲು ಸಹಾಯ ಮಾಡಿದಂತಿದೆ. ನೆಟ್ಟಿಗರು ಎಕ್ಸ್ನಲ್ಲಿ ಮ್ಯಾಚ್ ಫಿಕ್ಸಿಂಗ್ ವಿವಾದ ಹುಟ್ಟುಹಾಕಿದ್ದಾರೆ. ಚೆನ್ನೈ ತಂಡದ ಪ್ಲೇಆಫ್ ಕನಸನ್ನು ನನಸು ಮಾಡುವ ಉದ್ದೇಶದಿಂದಲೇ ಹೀಗೆ ಕಳಪೆ ಆಟವಾಡಿದೆ ಎಂದು ಆರೋಪಿಸಿದ್ದಾರೆ.
ಎಕ್ಸ್ನಲ್ಲಿ ಫಿಕ್ಸಿಂಗ್ ಆಗಿದೆ ಎಂದು ನೆಟ್ಟಿಗರು ಆರೋಪಿಸಿರುವುದು ಸಖತ್ ಟ್ರೆಂಡ್ ಆಗುತ್ತಿದೆ. ಈ ಕೂಡಲೇ ಪಂದ್ಯಕ್ಕೆ ಸಂಬಂಧಿಸಿ ತನಿಖೆ ನಡೆಸಬೇಕು. ಮತ್ತೊಮ್ಮೆ ಎರಡೂ ತಂಡಗಳನ್ನೂ ಎರಡು ವರ್ಷಗಳ ಕಾಲ ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಉಭಯ ತಂಡಗಳ ಆಟವನ್ನು ಗಮನಿಸಿದರೆ, ಇದರ ಹಿಂದೆ ಬೇರೆಯದ್ದೇ ಉದ್ದೇಶ ಇದೆ. ಒಂದು ಸಲ ಫಿಕ್ಸರ್ ಆದವರು ಮತ್ತೆ ಫಿಕ್ಸರ್ಗಳೇ ಆಗಿರುತ್ತಾರೆ ಎಂದು 2 ತಂಡಗಳನ್ನು ಟ್ರೋಲ್ ಮಾಡಲಾಗುತ್ತಿದೆ.
2016-2017ರಲ್ಲಿ ಆರ್ಆರ್-ಸಿಎಸ್ಕೆ ಬ್ಯಾನ್
2013ರ ಐಪಿಎಲ್ ಆವೃತ್ತಿಯಲ್ಲಿ ನಡೆದ ಬೆಟ್ಟಿಂಗ್ ಚಟುವಟಿಕೆಯಲ್ಲಿ ಪ್ರಮುಖ ಅಧಿಕಾರಿಗಳೇ ಭಾಗಿಯಾಗಿದ್ದರು. ಇದು ವಿಶ್ವಮಟ್ಟದಲ್ಲಿ ಸುದ್ದಿಯಾಗಿತ್ತು. ಹೀಗಾಗಿ ತನಿಖೆ ಕೈಗೊಳ್ಳಲಾಗಿತ್ತು. ಆದರೆ ತನಿಖೆಯಲ್ಲಿ ಎರಡು ತಂಡಗಳು ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದು ಸಾಬೀತಾಗಿತ್ತು. ಈ ಬೆನ್ನಲ್ಲೇ ಎರಡು ತಂಡಗಳನ್ನು 2016 ಮತ್ತು 2017ರಲ್ಲಿ ಎರಡು ವರ್ಷಗಳ ನಿಷೇಧ ಮಾಡಲಾಯಿತು. ಇದೀಗ ಮತ್ತೊಮ್ಮೆ ಅದೇ ಆರೋಪ ಕೇಳಿ ಬಂದಿದೆ. ಆದರೆ ಸಿಎಸ್ಕೆ ಫ್ಯಾನ್ಸ್ ಇದು ಆರ್ಸಿಬಿ ಅಭಿಮಾನಿಗಳ ಕುತಂತ್ರ ಎಂದು ತಿರುಗೇಟು ನೀಡುತ್ತಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ಗೆ ಭರ್ಜರಿ ಗೆಲುವು
ಚೆನ್ನೈನ ಚೆಪಾಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 62ನೇ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ಮೊದಲು ಬ್ಯಾಟಿಂಗ್ ನಡೆಸಿತು. ಆದರೆ ಬೌಲರ್ಗಳಿಗೆ ಪಿಚ್ನಲ್ಲಿ ಬ್ಯಾಟಿಂಗ್ ಮಾಡಲು ತತ್ತರಿಸಿದ ಆರ್ಆರ್ ಬ್ಯಾಟರ್ಸ್, 20 ಓವರ್ಗಳಲ್ಲಿ 141 ರನ್ ಗಳಿಸಲಷ್ಟೇ ಶಕ್ತರಾದರು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ ಬ್ಯಾಟರ್ಸ್ ಕೂಡ ರನ್ ಗಳಿಸಲು ಪರದಾಡಿದರು. ಅಂತಿಮವಾಗಿ 19ನೇ ಓವರ್ನಲ್ಲಿ ಸಿಎಸ್ಕೆ ಗೆದ್ದು ಬೀಗಿತು. ಅಲ್ಲದೆ, ಪ್ಲೇಆಫ್ ಆಸೆಯನ್ನೂ ಜೀವಂತವಾಗಿಟ್ಟುಕೊಂಡಿತು.
