ಪ್ಲೇಆಫ್ ಪ್ರವೇಶಿಸಿದ ಕೆಕೆಆರ್ಗೆ ಡಬಲ್ ಆಘಾತ; ವಿಂಡೀಸ್ ಸ್ಟಾರ್ ಆಲ್ರೌಂಡರ್, ಇಂಗ್ಲೆಂಡ್ ಓಪನರ್ ರೂಲ್ಡ್ ಔಟ್?
- Andre Russell - Phil Salt: ಪ್ಲೇಆಫ್ಗೆ ಪ್ರವೇಶಿಸಿದ ಬೆನ್ನಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಡಬಲ್ ಆಘಾತವಾಗಿದೆ. ಪ್ಲೇಆಫ್ ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆಂಡ್ರೆ ರಸೆಲ್ ಮತ್ತು ಇಂಗ್ಲೆಂಡ್ ಓಪನರ್ ಫಿಲ್ ಸಾಲ್ಟ್ ಅಲಭ್ಯರಾಗಲಿದ್ದಾರೆ.
- Andre Russell - Phil Salt: ಪ್ಲೇಆಫ್ಗೆ ಪ್ರವೇಶಿಸಿದ ಬೆನ್ನಲ್ಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಡಬಲ್ ಆಘಾತವಾಗಿದೆ. ಪ್ಲೇಆಫ್ ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಆಂಡ್ರೆ ರಸೆಲ್ ಮತ್ತು ಇಂಗ್ಲೆಂಡ್ ಓಪನರ್ ಫಿಲ್ ಸಾಲ್ಟ್ ಅಲಭ್ಯರಾಗಲಿದ್ದಾರೆ.
(1 / 5)
17ನೇ ಆವೃತ್ತಿಯ ಐಪಿಎಲ್ನಲ್ಲಿ ಪ್ಲೇಆಫ್ ಪ್ರವೇಶಿಸಿರುವ ಕೋಲ್ಕತಾ ನೈಟ್ ರೈಡರ್ಸ್ ದೊಡ್ಡ ಆಘಾತ ಎದುರಾಗಿದೆ. ಪ್ಲೇಆಫ್ ಪಂದ್ಯಗಳಿಗೆ ಸ್ಟಾರ್ ಆಲ್ರೌಂಡರ್ ತಂಡವನ್ನು ತೊರೆಯುವ ಸಾಧ್ಯತೆ ಇದೆ. ತಂಡದ ಗೆಲುವಿನಲ್ಲಿ ಬಹುದೊಡ್ಡ ಪಾತ್ರವಹಿಸುತ್ತಿರುವ ರಸೆಲ್ ಅಲಭ್ಯತೆ ತಂಡಕ್ಕೆ ಕಾಡುವುದಂತೂ ಸುಳ್ಳಲ್ಲ. ಆತನ ಸ್ಥಾನಕ್ಕೆ ಆಯ್ಕೆಯೂ ಕಠಿಣ ಸವಾಲಾಗಲಿದೆ.
(2 / 5)
ಜೂನ್ 1 ರಿಂದ ಶುರುವಾಗುವ ಟಿ20 ವಿಶ್ವಕಪ್ಗೂ ಮುನ್ನ ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ನಡುವೆ ಟಿ20 ಸರಣಿ ನಡೆಯಲಿದೆ. ಮೇ 23 ರಿಂದ ಮೇ 26ರ ತನಕ ಈ ಸರಣಿ ನಡೆಯಲಿದೆ. ಹೀಗಾಗಿ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಲಿದ್ದಾರೆ ರಸೆಲ್. ಈ ಮೂರು ಪಂದ್ಯಗಳ ಟಿ20 ಸರಣಿ ಮೈಕಾದ ಸಬೀನಾ ಪಾರ್ಕ್ನಲ್ಲಿ ನಡೆಯಲಿದೆ.
(3 / 5)
ಐಪಿಎಲ್ ಪ್ಲೇಆಫ್ ಪಂದ್ಯಗಳು ಮೇ 21 ರಿಂದ ಪ್ರಾರಂಭವಾಗಲಿವೆ. ಕೆಕೆಆರ್ ಪ್ಲೇಆಫ್ಗೆ ಅರ್ಹತೆ ಪಡೆದುಕೊಂಡಿದೆ. ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯುವ ತಂಡಗಳಲ್ಲಿ ಯಾವುದೇ ತಂಡ ಗೆದ್ದರೂ ನೇರವಾಗಿ ಫೈನಲ್ ಪ್ರವೇಶಿಸದೆ. 3-4ನೇ ಸ್ಥಾನಿ ತಂಡಗಳು ಎಲಿಮಿನೇಟರ್ ಪಂದ್ಯವನ್ನಾಡಲಿವೆ.. ಸೋತವರು ನಾಕೌಟ್ ಆಗಲಿದ್ದರೆ, ಗೆದ್ದ ತಂಡ 2ನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ. ಕ್ವಾಲಿಫೈಯರ್ 1 ರಲ್ಲಿ ಸೋತವರು ಮತ್ತು ಎಲಿಮಿನೇಟರ್ ವಿಜೇತರು ಕ್ವಾಲಿಫೈಯರ್ 2ರಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಮೇ 26ರಂದು ಫೈನಲ್ ಪಂದ್ಯ.
(4 / 5)
ರಸೆಲ್ ಮಾತ್ರವಲ್ಲ, ಒಂದು ವೇಳೆ ಸನ್ರೈಸರ್ಸ್ ಹೈದರಾಬಾದ್ ಪ್ಲೇಆಫ್ ಪ್ರವೇಶಿಸಿದರೆ, ಸೌತ್ ಆಫ್ರಿಕಾ ಆಟಗಾರರು ಸಹ ಆ ತಂಡವನ್ನು ತೊರೆಯಲಿದ್ದಾರೆ. ಅಲ್ಲದೆ, ಪಾಕಿಸ್ತಾನ ವಿರುದ್ಧದ ಸರಣಿಗೆ ಇಂಗ್ಲೆಂಡ್ ಸ್ಟಾರ್ಗಳಾದ ಫಿಲ್ ಸಾಲ್ಟ್ (ಕೆಕೆಆರ್), ಜೋಸ್ ಬಟ್ಲರ್ ಕೂಡ ಪ್ಲೇ ಆಫ್ಗೆ ಲಭ್ಯ ಇರುವುದಿಲ್ಲ. ಹೀಗಾಗಿ ಕೋಲ್ಕತ್ತಾ ಮತ್ತು ರಾಜಸ್ಥಾನ ತಂಡ ತೊಂದರೆಗೆ ಸಿಲುಕುತ್ತದೆ. ಇಂಗ್ಲೆಂಡ್ ಮೇ 22ರಿಂದ ಪಾಕಿಸ್ತಾನ ವಿರುದ್ಧ ನಾಲ್ಕು ಪಂದ್ಯಗಳ ಟಿ20 ಸರಣಿ ಆಡಲಿದೆ.
ಇತರ ಗ್ಯಾಲರಿಗಳು