ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಳೆಯಿಂದಾಗಿ ಕೆಕೆಆರ್‌ Vs ಗುಜರಾತ್ ಪಂದ್ಯ ರದ್ದು; ಜಿಟಿ ಟೂರ್ನಿಯಿಂದ ಔಟ್‌, ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ಕೋಲ್ಕತ್ತಾ

ಮಳೆಯಿಂದಾಗಿ ಕೆಕೆಆರ್‌ vs ಗುಜರಾತ್ ಪಂದ್ಯ ರದ್ದು; ಜಿಟಿ ಟೂರ್ನಿಯಿಂದ ಔಟ್‌, ಕ್ವಾಲಿಫೈಯರ್‌ಗೆ ಲಗ್ಗೆ ಇಟ್ಟ ಕೋಲ್ಕತ್ತಾ

  • ಐಪಿಎಲ್‌ 2024ರ ಲೀಗ್‌ ಹಂತದ 63ನೇ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಕೋಲ್ಕತ್ತಾ ನೈಟ್‌ ರೈಡರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳ ನಡುವಿನ ಪಂದ್ಯವು ರದ್ದಾಗಿದ್ದು, ಕೆಕೆಆರ್‌ ತಂಡವು ನೇರವಾಗಿ ಕ್ವಾಲಿಫೈಯರ್‌ಗೆ ಲಗ್ಗೆ ಹಾಕಿದೆ. ಇದೇ ವೇಳೆ ಶುಭ್ಮನ್ ಗಿಲ್‌ ನೇತೃತ್ವದ ಜಿಟಿ ಟೂರ್ನಿಯಿಂದ ಎಲಿಮನೇಟ್‌ ಆಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವು, ಮಳೆಯಿಂದಾಗಿ ವಿಳಂಬವಾಯ್ತು. ರಾತ್ರಿ ಗಂಟೆ 10.30 ಆದರೂ ಟಾಸ್‌ ಪ್ರಕ್ರಿಯೆ ನಡೆಸಲು ಸಾಧ್ಯವಾಗಲಿಲ್ಲ.
icon

(1 / 6)

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಪಂದ್ಯವು, ಮಳೆಯಿಂದಾಗಿ ವಿಳಂಬವಾಯ್ತು. ರಾತ್ರಿ ಗಂಟೆ 10.30 ಆದರೂ ಟಾಸ್‌ ಪ್ರಕ್ರಿಯೆ ನಡೆಸಲು ಸಾಧ್ಯವಾಗಲಿಲ್ಲ.(AP)

ಕನಿಷ್ಠ 5 ಓವರ್‌ಗಳ ಮ್ಯಾಚ್‌ ಆರಂಭಿಸಲು ರಾತ್ರಿ 10.56ರವರೆಗೆ ಸಮವಿತ್ತು. ಅದಕ್ಕಿಂತ ಕನಿಷ್ಟ 15 ನಿಮಿಷಗಳ ಮುಂಚಿತವಾಗಿ ಟಾಸ್‌ ನಡೆಯಬೇಕಿತ್ತು. ಆದರೆ, ಮಳೆ ಮುಂದುವರೆದ ಕಾರಣ ಪಂದ್ಯ ರದ್ದಾಯ್ತು.
icon

(2 / 6)

ಕನಿಷ್ಠ 5 ಓವರ್‌ಗಳ ಮ್ಯಾಚ್‌ ಆರಂಭಿಸಲು ರಾತ್ರಿ 10.56ರವರೆಗೆ ಸಮವಿತ್ತು. ಅದಕ್ಕಿಂತ ಕನಿಷ್ಟ 15 ನಿಮಿಷಗಳ ಮುಂಚಿತವಾಗಿ ಟಾಸ್‌ ನಡೆಯಬೇಕಿತ್ತು. ಆದರೆ, ಮಳೆ ಮುಂದುವರೆದ ಕಾರಣ ಪಂದ್ಯ ರದ್ದಾಯ್ತು.

ಪಂದ್ಯವು ರದ್ದಾದ ಕಾರಣದಿಂದ ಉಭಯ ತಂಡಗಳಿಗೂ ತಲಾ ಒಂದು ಅಂಕಗಳನ್ನು ನೀಡಲಾಯ್ತು. 19 ಅಂಕಗಳನ್ನು ಪಡೆದ ಕೆಕೆಆರ್‌ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುವುದು ಖಚಿತವಾಯ್ತು. ಹೀಗಾಗಿ ಶ್ರೇಯಸ್‌ ಅಯ್ಯರ್‌ ಪಡೆ ನೇರವಾಗಿ ಕ್ವಾಲಿಫೈಯರ್‌ 1ಕ್ಕೆ ಪ್ರವೇಶ ಪಡೆದಿದೆ.
icon

(3 / 6)

ಪಂದ್ಯವು ರದ್ದಾದ ಕಾರಣದಿಂದ ಉಭಯ ತಂಡಗಳಿಗೂ ತಲಾ ಒಂದು ಅಂಕಗಳನ್ನು ನೀಡಲಾಯ್ತು. 19 ಅಂಕಗಳನ್ನು ಪಡೆದ ಕೆಕೆಆರ್‌ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನಗಳಲ್ಲಿ ಒಂದು ಸ್ಥಾನ ಪಡೆಯುವುದು ಖಚಿತವಾಯ್ತು. ಹೀಗಾಗಿ ಶ್ರೇಯಸ್‌ ಅಯ್ಯರ್‌ ಪಡೆ ನೇರವಾಗಿ ಕ್ವಾಲಿಫೈಯರ್‌ 1ಕ್ಕೆ ಪ್ರವೇಶ ಪಡೆದಿದೆ.(AFP)

ಇತ್ತ 1 ಅಂಕ ಪಡೆದ ಗುಜರಾತ್‌ ಒಟ್ಟು 11 ಅಂಕಗಳೊಂದಿಗೆ ಪ್ಲೇಆಫ್‌ಗೆ ಲಗ್ಗೆ ಹಾಕಲು ಸಾಧ್ಯವಾಗಲಿಲ್ಲ. ಇದರೊಂದಿಗೆ ತಂಡವು ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಮುಂಬೈ, ಪಂಜಾಬ್‌ ಬಳಿಕಟೂರ್ನಿಯಿಂದ ಎಲಿಮನೇಟ್‌ ಆದ ಮೂರೇ ತಂಡ ಗುಜರಾತ್.
icon

(4 / 6)

ಇತ್ತ 1 ಅಂಕ ಪಡೆದ ಗುಜರಾತ್‌ ಒಟ್ಟು 11 ಅಂಕಗಳೊಂದಿಗೆ ಪ್ಲೇಆಫ್‌ಗೆ ಲಗ್ಗೆ ಹಾಕಲು ಸಾಧ್ಯವಾಗಲಿಲ್ಲ. ಇದರೊಂದಿಗೆ ತಂಡವು ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಮುಂಬೈ, ಪಂಜಾಬ್‌ ಬಳಿಕಟೂರ್ನಿಯಿಂದ ಎಲಿಮನೇಟ್‌ ಆದ ಮೂರೇ ತಂಡ ಗುಜರಾತ್.(PTI)

ಮುಂದೆ ಟೂರ್ನಿಯಲ್ಲಿ ಪ್ಲೇಆಫ್‌ ಹಂತಕ್ಕೆ ಪ್ರವೇಶಿಸಲು 6 ತಂಡಗಳ ನಡುವೆ ಪೈಪೋಟಿ ಶುರುವಾಗಿದೆ. ಮೂರು ಸ್ಥಾನಗಳಿಗೆ ಆರು ತಂಡಗಳು ಕೊನೆಯ ಲೀಗ್‌ ಪಂದ್ಯದವರೆಗೆ ಪೈಪೋಟಿ ನಡೆಸಲಿದೆ.
icon

(5 / 6)

ಮುಂದೆ ಟೂರ್ನಿಯಲ್ಲಿ ಪ್ಲೇಆಫ್‌ ಹಂತಕ್ಕೆ ಪ್ರವೇಶಿಸಲು 6 ತಂಡಗಳ ನಡುವೆ ಪೈಪೋಟಿ ಶುರುವಾಗಿದೆ. ಮೂರು ಸ್ಥಾನಗಳಿಗೆ ಆರು ತಂಡಗಳು ಕೊನೆಯ ಲೀಗ್‌ ಪಂದ್ಯದವರೆಗೆ ಪೈಪೋಟಿ ನಡೆಸಲಿದೆ.(AFP)

ಪಂದ್ಯ ರದ್ದಾದ ಕಾರಣದಿಂದಾಗಿ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. 
icon

(6 / 6)

ಪಂದ್ಯ ರದ್ದಾದ ಕಾರಣದಿಂದಾಗಿ, ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳಿಗೆ ನಿರಾಶೆಯಾಗಿದೆ. (AFP)


IPL_Entry_Point

ಇತರ ಗ್ಯಾಲರಿಗಳು