Horoscope Today: ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ, ಉದ್ಯೋಗದಲ್ಲಿ ಅನುಕೂಲಕರ ಬೆಳವಣಿಗೆ; ಧನು ರಾಶಿಯಿಂದ ಮೀನದವರೆಗಿನ ದಿನಭವಿಷ್ಯ
ಮಾರ್ಚ್ 25, ಸೋಮವಾರದ ರಾಶಿ ಭವಿಷ್ಯ: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (25 March 2024 Daily Horoscope).
ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (25 March 2024 Daily Horoscope).
ಇಂದಿನ ಪಂಚಾಂಗ
ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲಪಕ್ಷ, ಸೋಮವಾರ
ತಿಥಿ : ಹುಣ್ಣಿಮೆ ಹ.11.18 ರವರೆಗು ಇರುತ್ತದೆ. ಆನಂತರ ಪಾಡ್ಯ ಆರಂಭವಾಗಲಿದೆ.
ನಕ್ಷತ್ರ : ಉತ್ತರ ನಕ್ಷತ್ರವು ಬೆ. 09.43 ರವರೆಗು ಇರುತ್ತದೆ. ಆನಂತರ ಹಸ್ತ ನಕ್ಷತ್ರವು ಆರಂಭವಾಗಲಿದೆ.
ಸೂರ್ಯೋದಯ: ಬೆ.06.21
ಸೂರ್ಯಾಸ್ತ: ಸ.06.30
ರಾಹುಕಾಲ : ಬೆ. 07.30 ರಿಂದ ಬೆ. 09.00
ರಾಶಿ ಫಲಗಳು
ಧನಸ್ಸು
ಕುಟುಂಬದ ಕೆಲಸ ಕಾರ್ಯಗಳಲ್ಲಿ ಹಿನ್ನಡೆ ಉಂಟಾಗಲಿದೆ. ಉದ್ಯೋಗದಲ್ಲಿ ಅನುಕೂಲಕರ ಬೆಳವಣಿಗೆಗಳು ಉಂಟಾಗಲಿವೆ. ಅಧಿಕಾರ ಗಳಿಸುವ ಆಸೆ ನನಸಾಗಲಿದೆ. ಹೊಸ ಜವಾಬ್ದಾರಿನ್ನು ಯಶಸ್ವಿಯಾಗಿ ನಿರ್ವಹಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ನಿರ್ದಿಷ್ಠವಾದ ಮನಸ್ಸು ಮುಖ್ಯವಾಗುತ್ತದೆ. ಪಾಲುಗಾರಿಕೆ ಆದಾಯದಲ್ಲಿ ಏರಿತಗಳು ಎದುರಾಗಲಿವೆ. ವಿದ್ಯಾರ್ಥಿಗಳು ಮನರಂಜನೆಯಿಂದಾಗಿ ಒತ್ತಡದಿಂದ ಪಾರಾಗಲಿದ್ದಾರೆ. ಬದಲಾದ ಆಹಾರ ಪದ್ದತಿ ಉತ್ತಮ ಆರೋಗ್ಯ ನೀಡಲಿದೆ. ಅನಾವಶ್ಯಕವಾಗಿ ಯಾವುದೇ ವಿಚಾರವನ್ನು ಮುಂದೂಡದಿರಿ. ನಿಮ್ಮಲ್ಲಿರುವ ಬುದ್ಧಿಶಕ್ತಿಯಿಂದ ಕುಟುಂಬದ ಸಮಸ್ಯೆಯೊಂದು ಪರಿಹಾರವಾಗುತ್ತದೆ. ಕುಟುಂಬದಲ್ಲಿ ನಡೆಯಬೇಕಿದ್ದ ವಿವಾಹಕಾರ್ಯವೊಂದು ಮುಂದೂಡಲ್ಪಡುತ್ತದೆ. ಆದಾಯಕ್ಕೆ ತಕ್ಕಂತಹ ಖರ್ಚು ವೆಚ್ಚಗಳು ಇರುತ್ತವೆ
ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 3
ಅದೃಷ್ಟದ ದಿಕ್ಕು : ದಕ್ಷಿಣ
ಅದೃಷ್ಟದ ಬಣ್ಣ: ಕಂದು ಬಣ್ಣ
ಮಕರ
ಕಷ್ಟ ನಷ್ಟ ಮರೆತು ಕುಟುಂಬದ ಎಲ್ಲರೊಂದಿಗೆ ಸಂತಸದಿಂದ ದಿನಕಳೆಯುವಿರಿ. ಉದ್ಯೋಗದಲ್ಲಿ ಕೆಲಸ ಮಾಡುವ ವಿಧಾನ ಎಲ್ಲರಿಗೂ ಮಾದರಿಯಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಪರಿಸ್ಥಿತಿಗೆ ತಕ್ಕಂತೆ ತೀರ್ಮಾನವನ್ನು ತೆಗೆದುಕೊಳ್ಳ ಬಲ್ಲಿರಿ. ವಿದ್ಯಾರ್ಥಿಗಳಿಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಮೂಡುತ್ತದೆ. ವಂಶದ ಆಸ್ತಿಯ ವಿಚಾರದಲ್ಲಿ ಸಂಪೂರ್ಣ ಅರಿವಿರುತ್ತದೆ. ಆದಾಯದ ಕೊರತೆ ನೀಗಲು ಕುಲಕಸುಬನ್ನು ಆರಂಭಿಸುವಿರಿ. ವಿದ್ಯಾರ್ಥಿಗಳಿಗೆ ಶುಭಸುದ್ಧಿಯೊಂದು ದೊರೆಯಲಿದೆ. ಕಬ್ಬಿಣದ ವಸ್ತುಗಳ ವ್ಯಾಪಾರವನ್ನು ಆತ್ಮೀಯರ ಜೊತೆ ಆರಂಭಿಸುವಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ದೊರೆಯುತ್ತದೆ.
ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 10
ಅದೃಷ್ಟದ ದಿಕ್ಕು : ನೈರುತ್ಯ
ಅದೃಷ್ಟದ ಬಣ್ಣ: ಕಪ್ಪು ಬಣ್ಣ
ಕುಂಭ
ಸ್ವಂತ ಇಚ್ಚೆಯಿಂದ ಕುಟುಂಬದ ಜವಾಬ್ದಾರಿ ನಿರ್ವಹಿಸುವಿರಿ. ಮಾತಿನ ಮೋಡಿಯಿಂದ ಕೆಲಸ ಸಾಧಿಸುವಿರಿ. ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಸಂಬಂಧಿಸಿದ ಸಂಸ್ಥೆಯಲ್ಲಿ ಉದ್ಯೋಗ ದೊರೆಯುತ್ತದೆ. ಕುಟುಂಬದ ಹಿರಿಯರ ಸಹಾಯದಿಂದ ಸ್ವಂತ ವ್ಯಾಪಾರವೊಂದನ್ನು ಆರಂಭಿಸುವಿರಿ. ಹಣದ ಬಗ್ಗೆ ವ್ಯಾಮೋಹ ಇರದು. ವಿದ್ಯಾರ್ಥಿಗಳು ಮೌನದಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಸಮಾಜದ ಮುಖ್ಯಸ್ಥರಾಗುವಿರಿ. ಸೋದರರ ವ್ಯಾಪಾರದಲ್ಲಿ ಸಹಭಾಗಿತ್ವ ಪಡೆಯುವಿರಿ. ಹಣದ ವಿವಾದವೊಂದು ಎದುರಾಗಲಿದೆ. ಆಹಾರ ಸೇವನೆಯ ಬಗ್ಗೆ ಎಚ್ಚರಿಕೆ ಇರಲಿ. ಮೌನವನ್ನು ತೊರೆದು ಮನಬಿಚ್ಚಿ ಮಾತನಾಡಿದಲ್ಲಿ ಯಾವುದೇ ತೊಂದರೆ ಕಾಣದು. ಉತ್ತಮ ಆರೋಗ್ಯವಿರುತ್ತದೆ.
ಪರಿಹಾರ : ಹಾಲಲ್ಲಿಟ್ಟು ಸ್ನಾನ ಮಾಡಿದ ನಂತರ ದಿನದ ಕೆಲಸ ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 1
ಅದೃಷ್ಟದ ದಿಕ್ಕು: ಪಶ್ಚಿಮ
ಅದೃಷ್ಟದ ಬಣ್ಣ: ನಸುಗೆಂಪು ಬಣ್ಣ
ಮೀನ
ಕುಟುಂಬದಲ್ಲಿ ಪ್ರೀತಿ ವಿಶ್ವಾಸ ಮನೆಮಾಡಿರುತ್ತದೆ. ಯಾರೊಬ್ಬರ ಸಲಹೆಯನ್ನೂ ಪರಿಗಣಿಸದೆ ಉದ್ಯೋಗವನ್ನು ಬದಲಿಸುವಿರಿ. ವಿದ್ಯಾರ್ಥಿಗಳು ಬೇರೊಬ್ಬರ ಸಹಾಯದಿಂದ ಕಲಿಕೆಯಲ್ಲಿ ಮುಳುಗುತ್ತಾರೆ. ಕಮಿಷನ್ ಏಜೆನ್ಸಿ ನಿರ್ವಹಣೆಯಿಂದ ಉತ್ತಮ ಲಾಭ ಗಳಿಸುವಿರಿ. ವಂಶಾಧಾರಿತ ವ್ಯಾಪಾರದಲ್ಲಿ ಒತ್ತಾಯಪೂರ್ವಕವಾಗಿ ಪಾಲೊಳ್ಳುವಿರಿ. ತಂದೆಯಿಂದ ಆಸ್ತಿಯ ಪಾಲು ದೊರೆಯುತ್ತದೆ. ಕೆಲಸ ಕಾರ್ಯಗಳ ಬಗ್ಗೆ ಬಗ್ಗೆ ಯಾರಿಗೂ ತಿಳಿಸುವುದಿಲ್ಲ. ಗುರುಪೀಠದ ಸಂಪೂರ್ಣ ಜವಾಬ್ವಾರಿಯನ್ನು ಹೊರುವಿರಿ. ಮನರಂಜನಾ ಸ್ಥಳಕ್ಕೆ ಪ್ರವಾಸ ಹೋಗುವಿರಿ. ಸಾಕುಪ್ರಾಣಿಗಳ ಬಗ್ಗೆ ಹೆಚ್ಚಿನ ಕರುಣೆ ಪ್ರೀತಿ ತೋರುವಿಎರಿ. ಅನಾವಶ್ಯಕ ಚಿಂತೆಗೆ ಒಳಗಾಗುವಿರಿ.
ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.
ಅದೃಷ್ಟದ ಸಂಖ್ಯೆ : 4
ಅದೃಷ್ಟದ ದಿಕ್ಕು : ಈಶಾನ್ಯ
ಅದೃಷ್ಟದ ಬಣ್ಣ : ಕಿತ್ತಳೆ ಬಣ್ಣ
-------------
ಜ್ಯೋತಿಷಿ: ಎಚ್. ಸತೀಶ್, ಬೆಂಗಳೂರು
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).
ವಿಭಾಗ