Mercury Transit: ಇನ್ನೆರಡು ದಿನದಲ್ಲಿ ಮೇಷ ರಾಶಿಗೆ ಬುಧನ ಪ್ರವೇಶ; ಈ 3 ರಾಶಿಯವರಿಗೆ ಶುಭಸುದ್ದಿ
- Mercury Transit in Aries: ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಬುಧನು ಮಾರ್ಚ್ 26 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದಾಗಿ ಮೂರು ರಾಶಿಯವರಿಗೆ ಅನೇಕ ವಿಚಾರಗಳಲ್ಲಿ ಶುಭಸುದ್ದಿ ಸಿಗಲಿದೆ.
- Mercury Transit in Aries: ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಬುಧನು ಮಾರ್ಚ್ 26 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಕಾರಣದಿಂದಾಗಿ ಮೂರು ರಾಶಿಯವರಿಗೆ ಅನೇಕ ವಿಚಾರಗಳಲ್ಲಿ ಶುಭಸುದ್ದಿ ಸಿಗಲಿದೆ.
(1 / 6)
ಬುಧನ ಅನುಗ್ರಹವಿದ್ದರೆ ಉದ್ಯೋಗ ಮತ್ತು ಶಿಕ್ಷಣ ಏಳಿಗೆ ಕಾಣುತ್ತದೆ, ಜ್ಞಾನ ಹೆಚ್ಚುತ್ತದೆ ಎಂದು ನಂಬಲಾಗಿದೆ. ಬುಧನು ಹೋಳಿ ಹಬ್ಬದ ನಂತರ ಅಂದರೆ ಮಾರ್ಚ್ 26 ರಂದು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ
(2 / 6)
ಒಂದು ವರ್ಷದ ನಂತರ ಬುಧನು ಮೇಷ ರಾಶಿಗೆ ಪ್ರವೇಶಿಸುತ್ತಿದ್ದು, ಬುಧನ ಸಂಕ್ರಮಣದಿಂದ ಮೂರು ರಾಶಿಯವರಿಗೆ ಪ್ರಯೋಜನಗಳು ಸಿಗಲಿವೆ.
(3 / 6)
ಮೇಷ: ಬುಧನು ನಿಮ್ಮ ರಾಶಿಚಕ್ರದ ಮೊದಲ ಮನೆಯಲ್ಲಿ ಸಂಚಾರ ಮಾಡುತ್ತಾನೆ. ಇದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಬೆಲೆ ಸಿಗಲಿದೆ. ಗೌರವ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಬಡ್ತಿ ಸಿಗಲಿದೆ ಮತ್ತು ಸಂಬಳ ಹೆಚ್ಚಲಿದೆ.
(4 / 6)
ಧನು: ಬುಧನು ನಿಮ್ಮ ರಾಶಿಚಕ್ರದ ಐದನೇ ಮನೆಯಲ್ಲಿ ಇರಲಿದ್ದಾನೆ. ಇದರಿಂದ ನಿಮಗೆ ಉತ್ತಮ ಯೋಗ ದೊರೆಯುತ್ತದೆ. ಮಕ್ಕಳು ನಿಮಗೆ ಒಳ್ಳೆಯ ಸುದ್ದಿ ನೀಡುತ್ತಾರೆ. ವಿದ್ಯಾರ್ಥಿಗಳು ವ್ಯಾಸಂಗದಲ್ಲಿ ಮೇಲುಗೈ ಸಾಧಿಸುತ್ತಾರೆ. ಪ್ರೇಮ ಜೀವನದಲ್ಲಿ ಸಂತೋಷವಿರಲಿದೆ. ಎಲ್ಲಾ ರೀತಿಯಲ್ಲೂ ಒಳ್ಳೆಯದೇ ಆಗುತ್ತದೆ.
(5 / 6)
ಮಿಥುನ: ಬುಧನು ನಿಮ್ಮ ರಾಶಿಯ 11ನೇ ಮನೆಯಲ್ಲಿ ಇರಲಿದ್ದು, ಇದರಿಂದ ಆದಾಯದಲ್ಲಿ ಭಾರಿ ಏರಿಕೆಯಾಗಲಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ದೊರೆಯುತ್ತದೆ. ವ್ಯಾಪಾರದಲ್ಲಿ ಉತ್ತಮ ಪ್ರಗತಿ ಕಂಡುಬರಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನೀವು ದೀರ್ಘಕಾಲ ಬಾಕಿ ಇರುವ ಹಣವನ್ನು ಪಡೆಯುತ್ತೀರಿ.
ಇತರ ಗ್ಯಾಲರಿಗಳು