ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜುಲೈನಲ್ಲಿ ಶುಕ್ರ ಚಂದ್ರನಲ್ಲಿ ಸಂಚಾರ; ಈ 5 ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ಸಂತೋಷ ಸೇರಿ ಹಲವು ಲಾಭ

ಜುಲೈನಲ್ಲಿ ಶುಕ್ರ ಚಂದ್ರನಲ್ಲಿ ಸಂಚಾರ; ಈ 5 ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ಸಂತೋಷ ಸೇರಿ ಹಲವು ಲಾಭ

ಶುಕ್ರ ಪ್ರೀತಿ ಮತ್ತು ವೈವಾಹಿಕ ಜೀವನದ ಅಧಿಪತಿ. ಈ ವರ್ಷದ ಜುಲೈನಲ್ಲಿ ಶುಕ್ರ ಚಂದ್ರನನ್ನು ಪ್ರವೇಶಿಸಲಿದ್ದಾನೆ. ಈ ಕಾರಣದಿಂದಾಗಿ 5 ರಾಶಿಯವರಿಗೆ ಪ್ರೀತಿಯ ಜೀವನದಲ್ಲಿ ಸಂತೋ ಇರಲಿದೆ. ಅದ್ಭುತ ಲಾಭಗಳನ್ನು ಪಡೆಯಲಿರುವ ಆ ರಾಶಿಯವರ ವಿವರ ಇಲ್ಲಿದೆ.

ಜುಲೈನಲ್ಲಿ ಶುಕ್ರ ಚಂದ್ರನಲ್ಲಿ ಸಂಚಾರ; ಈ 5 ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ಸಂತೋಷ ಸೇರಿ ಹಲವು ಲಾಭ
ಜುಲೈನಲ್ಲಿ ಶುಕ್ರ ಚಂದ್ರನಲ್ಲಿ ಸಂಚಾರ; ಈ 5 ರಾಶಿಯವರಿಗೆ ದಾಂಪತ್ಯ ಜೀವನದಲ್ಲಿ ಸಂತೋಷ ಸೇರಿ ಹಲವು ಲಾಭ

ಜುಲೈ ತಿಂಗಳಲ್ಲಿ ಹಲವು ಪ್ರಮುಖ ಗ್ರಹಗಳು ತಮ್ಮ ರಾಶಿಗಳನ್ನು ಬದಲಾಯಿಸುತ್ತವೆ. ಸೂರ್ಯ, ಬುಧ, ಶುಕ್ರ ಜುಲೈನಲ್ಲಿ ಸ್ಥಾನ ಬದಲಾಯಿಸುತ್ತವೆ. ಸಂಪತ್ತು, ಪ್ರೀತಿ ಮತ್ತು ಸಂತೋಷದ ಸಂಕೇತವಾದ ಶುಕ್ರ, ಜೂನ್ 12 ರಂದು ಸಂಜೆ 6.15ಕ್ಕೆ ಮಿಥುನ ರಾಶಿಯನ್ನು ಪ್ರವೇಶಿಸುತ್ತಾನೆ. ಪ್ರಸ್ತುತ ಈ ರಾಶಿಯಲ್ಲಿ ಅಸ್ತಂಗತದ ಹಂತದಲ್ಲಿದ್ದಾರೆ. ಜೂನ್ 30 ರಂದು ಉದಯಿಸಲಿದ್ದಾನೆ. 2024ರ ಜುಲೈ 7 ರವರೆಗೆ ಮಿಥನ ರಾಶಿಯಲ್ಲೇ ಶುಕ್ರ ಉಳಿಯುತ್ತಾನೆ. ನಂತರ ತನ್ನ ಮುಂದಿನ ರಾಶಿಗೆ ಪ್ರವೇಶಿಸುತ್ತಾನೆ. ಜುಲೈ ತಿಂಗಳಲ್ಲಿ ಶುಕ್ರ ಕಟಕ ರಾಶಿ ಪ್ರವೇಶಿಸುತ್ತಾನೆ. ಈ ರಾಶಿಯ ಆಡಳಿತಗಾರ ತಣ್ಣನೆ ಹೃದಯವಂತ ಚಂದ್ರ. ಶುಕ್ರ ಕಟಕ ಪ್ರವೇಶಿಸುವುದರಿಂದ ಅನೇಕ ರಾಶಿಯವಿಗೆ ವಿಶೇಷ ಪ್ರಯೋಜಗಳಿವೆ. 5 ರಾಶಿಯವರಿಗೆ ಸುವರ್ಣಯುಗ ಆರಂಭವಾಗುತ್ತದೆ. ಶುಕ್ರನ ಸಂಚಾರಿಂದ ಯಾವ ರಾಶಿಯವರಿಗೆ ಲಾಭವಿದೆ ಅನ್ನೋದನ್ನ ತಿಳಿಯೋಣ.

ಮೇಷ ರಾಶಿ

ಶುಕ್ರನ ಸಂಕ್ರಮಣದಿಂದ ಮೇಷ ರಾಶಿಯವರಿಗೆ ಉತ್ತಮ ಲಾಭಗಳಿವೆ. ಪ್ರೀತಿಯ ಅಧಿಪತಿ ಶುಕ್ರನ ಪ್ರಭಾವದ ಅಡಿಯಲ್ಲಿ, ನಿಮ್ಮ ಸಂಗಾತಿಯಂದ ನೀವು ಸಂಪೂರ್ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಪ್ರಣಯ ಸಂಬಂಧಗಳು ಸುಧಾರಿಸುತ್ತವೆ. ಈ ಹಿಂದೆ ಒತ್ತಡಕ್ಕೆ ಕಾರಣವಾಗಿದ್ದ ಸಮಸ್ಯೆಗಳು ಬಗೆಹರಿಯುತ್ತವೆ. ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುವವರು ಪೂರ್ಣ ಲಾಭವನ್ನು ಪಡೆಯುತ್ತಾರೆ. ನಿಮ್ಮ ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿಮ್ಮ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವ ಅವಕಾಶವನ್ನು ಪಡೆಯುತ್ತೀರಿ.

ವೃಷಭರಾಶಿ

ಶುಕ್ರ ಸಂಕ್ರಮಣದಿಂದಾಗಿ ವೃಷಭ ರಾಶಿಯವರಿಗೆ ಶುಭ ಮುಹೂರ್ತ ಆರಂಭವಾಗುತ್ತೆ. ವ್ಯಾಪಾರಸ್ಥರಿಗೆ ಲಾಭದಾಯಕ ಅವಕಾಶಗಳು ಸಿಗುತ್ತವೆ. ಹಣಕಾಸಿನ ಪ್ರಯ್ನಗಳಲ್ಲಿ ಯಶಸ್ಸು ನಿಮ್ಮದಾಗುತ್ತೆ. ಆತ್ಮವಿಶ್ವಾಸ ಹೆಚ್ಚಾಗುತ್ತೆ. ಹಣವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಹಣವನ್ನು ಉಳಿಸುತ್ತೀರಿ. ಉದ್ಯೋಗದಲ್ಲಿರುವವರಿಗ ಬಡ್ತಿ ದೊರೆಯುವ ಸಾಧ್ಯತೆ ಇದೆ.

ಮಿಥುನ ರಾಶಿ

ಶುಕ್ರನು ಮಿಥುನ ರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸುತ್ತಾನೆ. ಇದರ ಪರಿಣಾಮವಾಗಿ ಮಿಥುನ ರಾಶಿಯವರಿಗೆ ಹಲವು ರೀತಿಯ ಪ್ರಯೋಜನಗಳಿವೆ. ಮಾನಸಿಕ ನೆಮ್ಮದಿ ಇರಲಿದೆ. ವೃತ್ತಿಯಲ್ಲಿ ಪ್ರಗತಿ ಇಱುತ್ತದೆ. ಬುದ್ಧಿವಂತಿಕೆ ಮತ್ತು ತಿಳುವಳಿಕೆಯಿಂದ ವೃತ್ತಿಯಲ್ಲಿ ಪ್ರಗತಿ ಸಾಧಿಸುತ್ತೀರಿ. ವೈವಾಹಿಕ ಜೀವನದಲ್ಲಿ ಪತಿ, ಪತ್ನಿಯ ನಡುವೆ ಅತ್ಯುತ್ತಮ ಸಾಮರಸ್ಯದೊಂದಿಗೆ ಪ್ರೀತಿ ಬೆಳೆಯುತ್ತದೆ. ನಿಮ್ಮ ಆದಾಯ ಹೆಚ್ಚಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಶುಕ್ರ ಸಂಚಾರದಿಂದ ಭಾರಿ ಲಾಭವಿದೆ. ಆರ್ಥಿಕ ಲಾಭ ಪಡೆಯಲು ಅವಕಾಶಗಳಿವೆ. ಉದ್ಯೋಗಿಗಳ ಉದ್ಯೋಗದಲ್ಲಿ ಬದಲಾವಣಯ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೆ ಲಾಭವಿದೆ. ಮಕ್ಕಳ ಬಗ್ಗೆ ಸಕಾರಾತ್ಮಕ ಸುದ್ದಿ ಬರುವ ಸಾಧ್ಯತೆ ಇದೆ. ಒಡಹುಟ್ಟಿದವರು ಮತ್ತು ಸ್ನೇಹಿತರಿಂದ ಬೆಂಬಲ ಸಿಗುತ್ತದೆ.

ಕಟಕ ರಾಶಿ

ಶುಕ್ರ ಚಂದ್ರನ ಆಳ್ವಿಕೆಯ ಕಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಇದು ಈ ರಾಶಿಯವರಿಗೆ ಹಲವು ಪ್ರಯೋಜನಗಳಿವೆ. ಆರ್ಥಿಕ ಲಾಭಗಳು ಇರಲಿವೆ. ನೆಮ್ಮದಿಯ ಜೀವನ ನಡೆಸುವ ಅವಕಾಶಗಳಿವೆ. ಆದರೆ ಈ ಸಮಯದಲ್ಲಿ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯವಾಗುತ್ತದೆ.

(ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.)

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.