ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Jupiter Transit: ವೃಷಭ ರಾಶಿಗೆ ಗುರು ಸಂಚಾರ; ಕೆಲವು ದಿನಗಳವರೆಗೆ ಈ ರಾಶಿಯವರಿಗೆ ಬಹಳ ಮುನ್ನೆಚರಿಕೆ ಅಗತ್ಯ

Jupiter Transit: ವೃಷಭ ರಾಶಿಗೆ ಗುರು ಸಂಚಾರ; ಕೆಲವು ದಿನಗಳವರೆಗೆ ಈ ರಾಶಿಯವರಿಗೆ ಬಹಳ ಮುನ್ನೆಚರಿಕೆ ಅಗತ್ಯ

ಮೇ 1 ರಂದು ಗುರುವು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ. ಈ ಹಿನ್ನೆಲೆಯಲ್ಲಿ, ಕೆಲವು ರಾಶಿಗಳ ಜನರಿಗೆ ಒಳಿತಾದರೆ ಇನ್ನೂ ಕೆಲವರಿಗೆ ಸಮಸ್ಯೆ ಉಂಟಾಗಲಿದೆ.  ವಾಹನ ಓಡಿಸುವ ವಿಚಾರವಾಗಲೀ, ಕೆಲಸದ ಸ್ಥಳದಲ್ಲಾಗಲೀ, ಹಣದ ವಿಚಾರದಲ್ಲಾಗಲೀ ಬಹಳ ಎಚ್ಚರಿಕೆಯಿಂದ ಇರಬೇಕು. 

ಪ್ರಸ್ತುತ ಮೇಷ ರಾಶಿಯಲ್ಲಿರುವ ಗುರುವು ಮೇ 1 ರಂದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾರೆ. ಈ ಪರಿಣಾಮವು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಇರುತ್ತದೆ. ಆದರೆ ಕೆಲವು ರಾಶಿಚಕ್ರದ ಚಿಹ್ನೆಗಳ ಮೇಲೆ ನಕಾರಾತ್ಮಕ ಫಲಿತಾಂಶಗಳು ಬೀರುವ ಸಾಧ್ಯತೆ ಇದೆ.
icon

(1 / 5)

ಮೇಷ ರಾಶಿ : ಮೇ 1 ರಂದು ವೃಷಭ ರಾಶಿಯಲ್ಲಿ ಗುರು ಸಂಕ್ರಮಿಸುತ್ತಿದ್ದಾನೆ. ಈ ಸಮಯದಲ್ಲಿ ಮೇಷ ರಾಶಿಯವರು ವಾಹನಗಳಲ್ಲಿ ಪ್ರಯಾಣಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು.  ನೆನಪಿನ ಶಕ್ತಿ ಕಳೆದುಕೊಳ್ಳುವ ಸಾಧ್ಯತೆ ಇದೆ. ಏನಾದರೂ ಮಾಡುವ ಮೊದಲು ಎರಡು ಬಾರಿ ಯೋಚನೆ ಮಾಡಿ ನಿರ್ಧಾರ ಕೈಗೊಳ್ಳಿ. ಕಷ್ಟಪಟ್ಟು ಓದಿದರೆ ಉತ್ತಮ ಅಂಕಗಳು ಬರುತ್ತವೆ. ವಿಶೇಷವಾಗಿ ಮೇಷ ರಾಶಿಯ ಜಾತಕರು ಈ ಅವಧಿಯಲ್ಲಿ ಪ್ರೀತಿಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಯಾವುದಕ್ಕೂ ಕೋಪ ಮಾಡಿಕೊಳ್ಳದೆ ಸಮಸ್ಯೆಯನ್ನು ತಾಳ್ಮೆಯಿಂದ ಬಗೆಹರಿಸಿ. 
icon

(2 / 5)

ಧನು ರಾಶಿ: ಈ ರಾಶಿಯವರು ಕೂಡಾ ಕೆಲವು ವಿಷಯಗಳಲ್ಲಿ ಎಚ್ಚರದಿಂದಿರಬೇಕು. ಈ ಅವಧಿಯಲ್ಲಿ ಮನಸ್ಸಿಗೆ ಶಾಂತಿ ಇರುವುದಿಲ್ಲ. ಯಾರೊಂದಿಗೂ ದ್ವೇಷ ಸಾಧಿಸಬೇಡಿ. ಅನಾವಶ್ಯಕ ವಾದಗಳಲ್ಲಿ ತೊಡಗಬೇಡಿ. ಬ್ಯಾಂಕಿನಲ್ಲಿ ಯಾರಿಗೂ ಗ್ಯಾರಂಟಿಗೆ ಸಹಿ ಮಾಡಬೇಡಿ. ಸಾಲ ಕೊಡಬೇಡಿ. ಸಾಲ ಕೊಟ್ಟವರಿಂದ ಹಣ ವಾಪಸ್‌ ಬರುವುದಿಲ್ಲ.  ಯಾವುದೇ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಶಾಂತವಾಗಿ ಎದುರಿಸಿ. ಮನೆ ಕಟ್ಟುವ ಪರಿಸ್ಥಿತಿ ಇದ್ದರೂ ಎರಡು ಬಾರಿ ಪರಿಣತರಿಂದ ಸ್ಥಳ ಪರಿಶೀಲನೆ ನಡೆಸಿ ಮುಂದುವರೆಯಿರಿ. ಕುಟುಂಬದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತದೆ. ಪ್ರತಿ ಹೆಜ್ಜೆಯಲ್ಲೂ ಬಹಳ ಎಚ್ಚರಿಕೆ ಅಗತ್ಯ. 
icon

(3 / 5)

ಕುಂಭ: ಮೇ 1 ರಿಂದ ಕುಂಭ ರಾಶಿಯವರು ಕೂಡಾ ಬಹಳ ಜಾಗರೂಕರಾಗಿರಬೇಕು. ಕಚೇರಿಯಲ್ಲಿ ಅನಗತ್ಯ ಸಮಸ್ಯೆಗಳು ಎದುರಾಗುತ್ತವೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಮನೆಯಲ್ಲಿ ಸಹೋದರರೊಂದಿಗೆ ಭಿನ್ನಾಭಿಪ್ರಾಯ ಉಂಟಾಗುತ್ತದೆ. ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅನಗತ್ಯ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಸಾಲ ಮಾಡಿ ವ್ಯಾಪಾರದಲ್ಲಿ ಹೂಡಿಕೆ ಮಾಡಬೇಡಿ. ಒಟ್ಟಿನಲ್ಲಿ ನೀವು ಎಲ್ಲಾ ವಿಚಾರದಲ್ಲೂ ಎಚ್ಚರಿಕೆಯಿಂದ ಮುಂದುವರೆಯಬೇಕು. 
icon

(4 / 5)

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
icon

(5 / 5)

IPL_Entry_Point

ಇತರ ಗ್ಯಾಲರಿಗಳು