ವೃಷಭ ರಾಶಿಯಲ್ಲಿ ಸೂರ್ಯ, ಬುಧ ಸಂಯೋಜನೆಯಿಂದ ಬುಧಾದಿತ್ಯ ರಾಜಯೋಗ; ಈ ರಾಶಿಯವರಿಗೆ ಸರ್ಕಾರಿ ಕೆಲಸ ಗ್ಯಾರಂಟಿ
ಕೆಲವೇ ದಿನಗಳಲ್ಲಿ ಗ್ರಹಗಳ ಅಧಿಪತಿ ಸೂರ್ಯ ಹಾಗೂ ಬುಧ ಇಬ್ಬರೂ ವೃಷಭ ರಾಶಿಯಲ್ಲಿ ಎದುರಾಗಲಿದ್ದು ಇದು ಬುಧಾದಿತ್ಯ ರಾಜಯೋಗವನ್ನು ಸೃಷ್ಟಿಸುತ್ತಿದೆ.
(1 / 6)
ನವಗ್ರಹಗಳು ನಿಯಮಿತ ಅಂತರದಲ್ಲಿ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಚಲಿಸುತ್ತವೆ. ಇದನ್ನು ಜ್ಯೋತಿಷ್ಯ ಶಾಸ್ತ್ರದಲ್ಲಿ 'ಗ್ರಹ ಸಂಕ್ರಮಣ' ಎನ್ನುತ್ತಾರೆ. ಗ್ರಹಗಳ ಸಂಚಾರವು ಕೆಲವು ರಾಶಿಯವರಿಗೆ ಶುಭ, ಕೆಲವು ರಾಶಿಯವರಿಗೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ.
(2 / 6)
ಗ್ರಹಗಳ ರಾಜ ಸೂರ್ಯ ಮೇ 14 ಸಂಜೆ 05:41 ಕ್ಕೆ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮೇ 31 ರಂದು ಮಧ್ಯಾಹ್ನ 12:02 ಕ್ಕೆ, ಬುಧ ಕೂಡಾ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ರೀತಿಯಾಗಿ ಸೂರ್ಯ ಮತ್ತು ಬುಧರು ವೃಷಭ ರಾಶಿಯಲ್ಲಿ ಸಂಧಿಸುವುದರಿಂದ ಬುಧಾದಿತ್ಯ ರಾಜಯೋಗ ರೂಪುಗೊಳ್ಳುತ್ತದೆ. ಈ ಯೋಗದಿಂದ ವೃಷಭ ಸೇರಿದಂತೆ ಕೆಲವೊಂದು ರಾಶಿಯವರಿಗೆ ಒಳ್ಳೆಯ ದಿನಗಳು ಎದುರಾಗಲಿದೆ.
(3 / 6)
ವೃಷಭ ರಾಶಿಯಲ್ಲಿ ಸೂರ್ಯ ಮತ್ತು ಬುಧ ಸಂಯೋಗ ಅದೇ ರಾಶಿಯವರಿಗೆ ಬಹಳ ಅನುಕೂಲಗಳನ್ನು ನೀಡಲಿದೆ. ಈ ಅವಧಿಯಲ್ಲಿ ಇದುವರೆಗೂ ಒಂದಲ್ಲಾ ಒಂದು ರೀತಿ ಕಷ್ಟ ಅನುಭವಿಸುತ್ತಿದ್ದವರ ಜೀವನದಲ್ಲಿ ಒಳ್ಳೆ ದಿನಗಳು ಬರುತ್ತವೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ಗಳಿಸುತ್ತಾರೆ. ಕಚೇರಿಯಲ್ಲಿ ಕೂಡಾ ಉತ್ತಮ ವಾತಾವರಣ ಇರುತ್ತದೆ. ಈ ಸಮಯದಲ್ಲಿ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಪತಿ ಪತ್ನಿಯರ ನಡುವೆ ಅನ್ಯೋನ್ಯತೆ ಹೆಚ್ಚುತ್ತದೆ. ಆರ್ಥಿಕವಾಗಿ ಲಾಭ ದೊರೆಯವುದರಿಂದ ಉದ್ಯಮಿಗಳಿಗೆ ಇದು ಉತ್ತಮ ಸಮಯ.
(4 / 6)
ಕರ್ಕಾಟಕ ರಾಶಿಯವರಿಗೆ ಸೂರ್ಯ ಮತ್ತು ಬುಧ ಉತ್ತಮ ಫಲಿತಾಂಶಗಳನ್ನು ನೀಡುತ್ತವೆ. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಸುಧಾರಿಸುತ್ತದೆ. ಖಿನ್ನತೆ ದೂರವಾಗುತ್ತದೆ. ವಿದೇಶಕ್ಕೆ ಹೋಗುವ ಸಾಧ್ಯತೆಗಳುಂಟು. ಈ ಅವಧಿಯಲ್ಲಿ ನಿಮಗೆ ಹೆಚ್ಚಿನ ಅವಕಾಶಗಳು ಒಲಿದು ಬರಲಿದೆ. ವ್ಯಾಪಾರವನ್ನು ವಿಸ್ತರಿಸಲು ಇದು ಒಳ್ಳೆ ಸಮಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವಿರಿ.
(5 / 6)
ಸಿಂಹ ರಾಶಿಯವರಿಗೆ ಬುಧಾದಿತ್ಯ ರಾಜಯೋಗವು ಬಹಳ ಪ್ರಯೋಜನಕಾರಿಯಾಗಿದೆ. ವ್ಯಾಪಾರಿಗಳಿಗೆ ಇದು ಅತ್ಯಂತ ಲಾಭದಾಯಕ ಅವಧಿಯಾಗಿದೆ. ವ್ಯಾಪಾರಸ್ಥರಿಗೆ ಉತ್ತಮ ಆದಾಯ ದೊರೆಯುತ್ತದೆ. ಹೆಚ್ಚಿನ ಲಾಭವನ್ನು ಪಡೆಯುತ್ತೀರಿ. ಅದೇ ಸಮಯದಲ್ಲಿ, ವೇತನ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯುವ ಅವಕಾಶವಿದೆ. ಉದ್ಯೋಗ ಹುಡುಕುತ್ತಿರುವ ಈ ರಾಶಿಯವರಿಗೆ ಸರ್ಕಾರಿ ಕೆಲಸ ದೊರೆಯುವ ಸಾಧ್ಯತೆಗಳಿವೆ.
ಇತರ ಗ್ಯಾಲರಿಗಳು