Kannada Panchanga: ಸೆಪ್ಟೆಂಬರ್ 30 ರ ನಿತ್ಯ ಪಂಚಾಂಗ; ದಿನ ವಿಶೇಷ, ಮುಹೂರ್ತ, ಯೋಗ, ಕರಣ, ಇತರೆ ಅಗತ್ಯ ಧಾರ್ಮಿಕ ವಿವರ
Kannada Panchanga 2024: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಸೆಪ್ಟೆಂಬರ್ 30 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.
ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್ನ ಈ ದಿನದ ಅಂದರೆ ಸೆಪ್ಟೆಂಬರ್ 30 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.
ಸೆಪ್ಟೆಂಬರ್ 30 ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 15 ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಭಾದ್ರಪದ ಮಾಸ, ಬುಧವಾರ, ಬೆಂಗಳೂರಿನಲ್ಲಿ ಸೂರ್ಯೋದಯ: ಬೆಳಗ್ಗೆ 06: 09, ಸೂರ್ಯಾಸ್ತ: ಸಂಜೆ 06:10, ಚಂದ್ರೋದಯ ಅಕ್ಟೋಬರ್ 1ರ ನಸುಕಿನ 04:54, ಚಂದ್ರಾಸ್ತ - 04: 49 PM, ಹಗಲಿನ ಅವಧಿ 11:56, ತಿಥಿ: ಇಂದು 07: 08 PM ರ ವರೆಗೆ ತ್ರಯೋದಶಿ. ನಂತರ ಕೃಷ್ಣ ಪಕ್ಷದ ಚತುರ್ದಶಿ ಶುರು.
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ: ಇಂದು 06: 20 AM ತನಕ ಮಖಾ. ಅದಾಗಿ ಪುಬ್ಬಾ ನಕ್ಷತ್ರ ಚರಣ - ಮಖ-4 ಇಂದು 06:20 AM ವರೆಗೆ, ಪುಬ್ಬ-1 ಇಂದು 01:03 PM ವರೆಗೆ, ಪುಬ್ಬ-2 ಇಂದು 07:47 PM ವರೆಗೆ, ಪುಬ್ಬ-3 ನಾಳೆ (ಸೆಪ್ಟೆಂಬರ್ 01) 02:31 AM ವರೆಗೆ, ಯೋಗ: ಸಾಧ್ಯ ಇಂದು 12: 47 AM ತನಕ, ನಂತರ ಶುಭ,
ಕರಣ: ಪ್ರಥಮ ಕರಣ ಗರಿಜ ಇಂದು 05: 56 AM ರ ತನಕ, ದ್ವಿತೀಯ ಕರಣ ವಣಿಜ ಇಂದು 07: 08 PM ತನಕ, ಸೂರ್ಯ ರಾಶಿ – ಕನ್ಯಾ ರಾಶಿ 16/09/2024, 19:38:19 ರಿಂದ 17/10/2024, 07:34:14 ರ ವರೆಗೆ, ಚಂದ್ರ ರಾಶಿ - ಸಿಂಹ ರಾಶಿ 29/09/2024, 03:39:06 ರಿಂದ 01/10/2024, 16:03:24 ವರೆಗೆ, ರಾಹು ಕಾಲ- 07:40 AM ರಿಂದ 09:10 AM ವರೆಗೆ, ಗುಳಿಗ ಕಾಲ – 01:39 PM ರಿಂದ 03:08 PM ವರೆಗೆ, ಯಮಗಂಡ- 10:39 AM ರಿಂದ 12:09 PM ವರೆಗೆ, ಅಭಿಜಿತ್ ಮುಹೂರ್ತ: 11:45 AM ರಿಂದ 12:33 PM ವರೆಗೆ, ದುರ್ಮುಹೂರ್ತ- 12:33 PM ರಿಂದ 01:21 PM ತನಕ ಮತ್ತು 02:56 PM ರಿಂದ 03:44 PM ವರೆಗೆ, ಅಮೃತ ಕಾಲ ಅಕ್ಟೋಬರ್ 1ರ 02:05 AM ರಿಂದ 03:52 AM ತನಕ, ವರ್ಜ್ಯಂ- ಇಂದು 03:19 PM ರಿಂದ 05:06 PM ತನಕ
ತಾರಾಬಲ: ಅಶ್ವಿನಿ, ಭರಣಿ, ಕೃತ್ತಿಕಾ, ಮೃಗಶಿರ, ಪುನರ್ವಸು, ಆಶ್ಲೇಷ, ಮಾಘಾ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಚಿತ್ತ, ವಿಶಾಖ, ಜ್ಯೇಷ್ಟ, ಮೂಲ, ಪೂರ್ವಾಷಾಡ, ಉತ್ತರಾಷಾಡ, ಧನಿಷ್ಠ, ಪೂರ್ವಭಾದ್ರಪದ, ರೇವತಿ. ಚಂದ್ರಬಲ: ಮಿಥುನ, ಸಿಂಹ, ತುಲಾ, ವೃಶ್ಚಿಕ, ಕುಂಭ, ಮೀನ
----------------------------------------------------------------
(This copy first appeared in Hindustan Times Kannada website. To read more like this please logon to kannada.hindustantimes.com)