ಸಿಂಹ ರಾಶಿ ಭವಿಷ್ಯ ಸೆಪ್ಟೆಂಬರ್ 3: ಪ್ರೀತಿಯಲ್ಲಿ ಸವಾಲುಗಳ ಮುನ್ಸೂಚನೆ, ಕಚೇರಿಯಲ್ಲಿ ಪ್ರಶಂಸೆ; ಈ ದಿನ ಶುಭದಿನ
Leo Daily Horoscope September 2, 2024: ರಾಶಿಚಕ್ರದ ಐದನೇ ಚಿಹ್ನೆ ಇದು. ಜನನದ ಸಮಯದಲ್ಲಿ ಚಂದ್ರನು ಸಿಂಹರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರದ ಚಿಹ್ನೆ ಸಿಂಹ. ಸೆಪ್ಟೆಂಬರ್ 2ರ ಸಿಂಹ ರಾಶಿ ಭವಿಷ್ಯದ ಪ್ರಕಾರ, ಆರೋಗ್ಯದತ್ತ ಹೆಚ್ಚು ಗಮನ ಹರಿಸಿ, ಸಂಗಾತಿಯ ಜೊತೆ ಪ್ರಾಮಾಣಿಕವಾಗಿರಿ.
ಸಿಂಹ ರಾಶಿಯವರ ಇಂದಿನ (ಸೆಪ್ಟೆಂಬರ್ 2, ಸೋಮವಾರ) ಭವಿಷ್ಯದಲ್ಲಿ ಹೊಸ ಆರಂಭಗಳು ಮತ್ತು ಸಾಮಾಜಿಕ ಸಂವಹನಗಳಿಗೆ ಅನುಕೂಲಕರ ಪರಿಸ್ಥಿತಿ ಹೊಂದಿರುವ ದಿನ ಇದಾಗಿದೆ. ನಿಮ್ಮ ಪ್ರವೃತ್ತಿಯನ್ನು ನಂಬಿ ಮತ್ತು ಹೆಚ್ಚಿನ ಅವಕಾಶಗಳಿಗಾಗಿ ಸ್ಪಷ್ಟ ಸಂವಹನ ಮಾಡಿ. ನಿಮ್ಮ ದಿನವನ್ನು ಸಮತೋಲಿತವಾಗಿ ಮತ್ತು ಉತ್ಪಾದಕವಾಗಿಡಲು ಪ್ರಯತ್ನಿಸಿ ಮತ್ತು ಅತಿಯಾಗಿ ಯೋಚಿಸುವುದನ್ನು ತಪ್ಪಿಸಿ. . ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಸಿಂಹ ರಾಶಿಯ ಪ್ರೇಮ ಜಾತಕ (Leo Love Horoscope) ನೀವು ಇತರರಿಗೆ ವಿಶೇಷವಾಗಿ ಆಕರ್ಷಕವಾಗಿ ಕಾಣುತ್ತೀರ. ನೀವು ಈಗಾಗಲೇ ಯಾರೊಂದಿಗಾದರೂ ಸಂಬಂಧ ಹೊಂದಿದ್ದರೆ ಅವರ ಜೊತೆ ಸರಳವಾಗಿ ಮಾತಾಡುವ ಬದಲು ಆಳವಾಗಿ ಮಾತಾಡಿ ನಿಮ್ಮ ಮನಸಿನ ಭಾವನೆಗಳನ್ನು ಅವರ ಜೊತೆ ಹಂಚಿಕೊಳ್ಳಿ. ಆಳವಾದ ಸಂಭಾಷಣೆಗಳನ್ನು ಮಾಡುವುದು ತುಂಬಾ ಮುಖ್ಯವಾಗುತ್ತದೆ. ಉತ್ಸಾಹವನ್ನು ಹಂಚಿಕೊಳ್ಳುವ ಯಾರಿಗಾದರೂ ಗಮನವಿರಲಿ ಪ್ರತಿಬಾರಿಯೂ ನೀವೊಂದುಕೊಂಡ ಹಾಗೆ ಯಾವುದೂ ನಡೆಯುವುದಿಲ್ಲ.
ಸಿಂಹ ರಾಶಿ ವೃತ್ತಿ ಭವಿಷ್ಯ (Leo Professional Horoscope): ನಿಮ್ಮ ವೃತ್ತಿಪರ ಕ್ಷೇತ್ರದಲ್ಲಿ ನಿಮಗೆ ಇಂದು ಶುಭ ದಿನ. ಎಲ್ಲಾ ಅವಕಾಶಗಳು ನಿಮ್ಮನ್ನೇ ಹುಡುಕಿ ಬರುವ ಸಾಧ್ಯತೆ ಇದೆ. ನೀವು ಈ ಅವಕಾಶವನ್ನು ಬಳಸಿಕೊಂಡು ಬೆಳೆಯುವುದಷ್ಟೇ ಬೇಕಿದೆ. ನಿಮ್ಮ ನಾಯಕತ್ವ ಮತ್ತು ಸಮಸ್ಯೆ ಬಗೆಹರಿಸುವ ಕೌಶಲ್ಯ ಎಲ್ಲರಿಗೂ ತುಂಬಾ ಇಷ್ಟವಾಗುತ್ತದೆ. ನೀವು ನಾಯಕನಾಗಿ ತಂಡವನ್ನು ಮುಂದುವರೆಸುತ್ತೀರಿ. ನಿಮ್ಮ ತಂಡಕ್ಕೆ ಸ್ಫೂರ್ತಿ ನೀಡಿ. ನೀವು ಹೊಸ ಉದ್ಯಮ ಅಥವಾ ಉದ್ಯೋಗ ಬದಲಾವಣೆಯನ್ನು ಮಾಡಲು ಆಲೋಚಿಸುತ್ತಿದ್ದರೆ ಆ ಬಗ್ಗೆ ಇಂದೇ ಹೆಚ್ಚಿನ ಗಮನಕೊಡಿ.
ಸಿಂಹ ರಾಶಿ ಆರ್ಥಿಕ ಜಾತಕ (Leo Money Horoscope): ಆರ್ಥಿಕವಾಗಿ, ಇಂದಿನ ನಕ್ಷತ್ರಗಳು ನಿಮ್ಮನ್ನು ಧೈರ್ಯಶಾಲಿ ಮತ್ತು ವಿವೇಕಯುತವಾಗಿರಲು ಪ್ರೇರೇಪಿಸುತ್ತವೆ, ಸಿಂಹ. ನಿಮ್ಮ ವಿಶ್ವಾಸವು ಲಾಭದಾಯಕವಾಗಿರಲಿದೆ. ಅಂದರೆ ನೀವು ಏನು ಆಲೋಚನೆ ಮಾಡಿ ಹೂಡಿಕೆ ಮಾಡುತ್ತೀರೋ ಅದು ಸರಿ ಇರುತ್ತದೆ. ನಿಮ್ಮ ಹೂಡಿಕೆಗಳು ಮತ್ತು ಖರ್ಚು ಎರಡರ ಬಗ್ಗೆಯೂ ಗಮನವಿರಲಿ. ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಆರ್ಥಿಕ ತಜ್ಞರಿಂದ ಸಲಹೆ ಪಡೆಯುವುದನ್ನು ಮರೆಯಬೇಡಿ. ದೀರ್ಘಾವಧಿಯ ಆರ್ಥಿಕ ಗುರಿಗಳನ್ನು ಯೋಜಿಸಲು ಇದೇ ಉತ್ತಮ ದಿನ.
ಸಿಂಹ ರಾಶಿ ಆರೋಗ್ಯ ಜಾತಕ (Leo Health Horoscope): ಹೊಸ ಫಿಟ್ನೆಸ್ ದಿನಚರಿಯನ್ನು ಕಿಕ್ಸ್ಟಾರ್ಟ್ ಮಾಡಲು ಅಥವಾ ನಿಮ್ಮ ಪ್ರಸ್ತುತ ನೀವೇನು ಮಾಡುತ್ತಿದ್ದೀರೋ ಅದನ್ನೇ ಮುಂದುವರೆಸಲು ಪ್ರಯತ್ನ ಮಾಡಿ. ಮಾನವನಿಗೆ ಆರೋಗ್ಯವೇ ಭಾಗ್ಯ. ಆರೋಗ್ಯ ಇಲ್ಲ ಎಂದರೆ ಯಾವ ಸಾಧನೆಯೂ ಮಾಡಲು ಸಾಧ್ಯವಿಲ್ಲ ಎಂಬುದನ್ನು ನೆನಪಿನಲ್ಲಿಡಿ.ಒತ್ತಡ ನಿರ್ವಹಣೆಯು ನಿರ್ಣಾಯಕವಾಗಿದೆ, ಆದ್ದರಿಂದ ನಿಮ್ಮ ದಿನದಲ್ಲಿ ಧ್ಯಾನ ಅಥವಾ ಯೋಗದಂತಹ ವಿಶ್ರಾಂತಿ ತಂತ್ರಗಳನ್ನು ಅಳವಡಿಸಿಕೊಳ್ಳಿ. ಮಾನಸಿಕ ವಿಶ್ರಾಂತಿಯೊಂದಿಗೆ ದೈಹಿಕ ಪರಿಶ್ರಮವನ್ನು ಸಮತೋಲನಗೊಳಿಸುವುದರಿಂದ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ಸಿಂಹ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಅಧಿಪತಿ: ಸೂರ್ಯ, ಶುಭ ದಿನಾಂಕಗಳು: 1, 4, 5, 6, 9, 15, 24. ಶುಭ ವಾರಗಳು: ಭಾನುವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ವರ್ಣ: ಕಿತ್ತಳೆ, ಕೆಂಪು ಮತ್ತು ಹಸಿರು. ಅಶುಭ ವರ್ಣ: ನೀಲಿ ಮತ್ತು ಬಿಳಿ. ಶುಭ ದಿಕ್ಕು: ಪೂರ್ವ ಮತ್ತು ದಕ್ಷಿಣ. ಶುಭ ತಿಂಗಳು: ಡಿಸೆಂಬರ್ 15ರಿಂದ ಜುಲೈ 14. ಶುಭ ಹರಳು: ಹವಳ, ಕನಕ, ಪುಷ್ಯರಾಗ ಮತ್ತು ಮಾಣಿಕ್ಯ. ಶುಭ ರಾಶಿ: ವೃಶ್ಚಿಕ, ಧನಸ್ಸು ಮತ್ತು ಮೇಷ. ಅಶುಭ ರಾಶಿ: ತುಲಾ, ಮಕರ, ಕುಂಭ ಮತ್ತು ವೃಷಭ.
ಸಿಂಹ ರಾಶಿಯವರು ಶುಭ ಫಲ ಪಡೆಯಲು ಸರಳ ಪರಿಹಾರಗಳು
1) ಆದಿತ್ಯಹೃದಯ: ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.
2) ಈ ದಾನಗಳಿಂದ ಶುಭ ಫಲ: ಹಸಿರು ಬಣ್ಣದ ಬಟ್ಟೆ ಮತ್ತು ಹೆಸರುಬೇಳೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3) ದೇವಾಲಯ, ದೇವರ ಪೂಜೆ: ಶ್ರೀ ಗಣಪತಿ ದೇಗುಲಕ್ಕೆ ಕಪ್ಪು ಮತ್ತು ಬಿಳಿ ಮಿಶ್ರಿತ ನೆಲಹಾಸು ದಾನ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತದೆ. ಬಾಯಿಗೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತವೆ. ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.
4) ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನಿಮ್ಮ ಬಳಿ ಸದಾ ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಕರವಸ್ತ್ರ ಇರಿಸಿಕೊಳ್ಳಿ. ನಿರೀಕ್ಷಿತ ಫಲಗಳು ದೊರೆಯಲು ಇದು ಸಹಕಾರಿ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.