ಕೆನ್ನೆಯ ಮೇಲೆ ಬಿಳಿ ಮಚ್ಚೆ ಅದೃಷ್ಟದ ಸಂಕೇತವೇ; ಜೀವನದಲ್ಲಿ ಸಂತೋಷ ಸೇರಿ ಈ ವ್ಯಕ್ತಿತ್ವ ನಿಮ್ಮದಾಗಿರುತ್ತೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೆನ್ನೆಯ ಮೇಲೆ ಬಿಳಿ ಮಚ್ಚೆ ಅದೃಷ್ಟದ ಸಂಕೇತವೇ; ಜೀವನದಲ್ಲಿ ಸಂತೋಷ ಸೇರಿ ಈ ವ್ಯಕ್ತಿತ್ವ ನಿಮ್ಮದಾಗಿರುತ್ತೆ

ಕೆನ್ನೆಯ ಮೇಲೆ ಬಿಳಿ ಮಚ್ಚೆ ಅದೃಷ್ಟದ ಸಂಕೇತವೇ; ಜೀವನದಲ್ಲಿ ಸಂತೋಷ ಸೇರಿ ಈ ವ್ಯಕ್ತಿತ್ವ ನಿಮ್ಮದಾಗಿರುತ್ತೆ

ಎಲ್ಲರ ಮುಖ ಒಂದೇ ರೀತಿ ಇರುವುದಿಲ್ಲ. ಒಬ್ಬರಿಗೆ ಸ್ವಲ್ಪ ಉದ್ದ ಇದ್ದರೆ, ಮತ್ತೊಬ್ಬರಿಗೆ ಅಗಲ, ಮೋಟು ಹೀಗೆಲ್ಲಾ ಇರುತ್ತೆ. ಗುಳಿಕೆನ್ನೆ, ಅಲ್ಲಲ್ಲಿ ಮಚ್ಚೆಗಳು ಇರುವವರು ಇದ್ದಾರೆ. ಮಚ್ಚೆಗಳ ಪೈಕಿ ಕೆನ್ನೆಯಲ್ಲಿ ಬಿಳಿ ಮಚ್ಚೆ ಇದ್ದರೆ ಏನೆಲ್ಲಾ ಶುಭಫಲಗಳಿವೆ ಅನ್ನೋದನ್ನ ತಿಳಿಯೋಣ. (ಬರಹ: ಜ್ಯೋತಿಷಿ ಎಚ್‌. ಸತೀಶ್)

ಕೆನ್ನೆಯ ಆಕಾರದಿಂದಲೂ ನಿಮ್ಮ ವ್ಯಕ್ತಿತ್ವ ತಿಳಿಯಬಹುದಾದಿಗ್ದು, ಕೆನ್ನೆಯಲ್ಲಿ ಬಿಳಿ ಮಚ್ಚೆ ಇರುವವರ ವ್ಯಕ್ತಿತ್ವ ಹೇಗಿರತ್ತೆ ಅನ್ನೋದನ್ನು ತಿಳಿಯಿರಿ.
ಕೆನ್ನೆಯ ಆಕಾರದಿಂದಲೂ ನಿಮ್ಮ ವ್ಯಕ್ತಿತ್ವ ತಿಳಿಯಬಹುದಾದಿಗ್ದು, ಕೆನ್ನೆಯಲ್ಲಿ ಬಿಳಿ ಮಚ್ಚೆ ಇರುವವರ ವ್ಯಕ್ತಿತ್ವ ಹೇಗಿರತ್ತೆ ಅನ್ನೋದನ್ನು ತಿಳಿಯಿರಿ.

ನಮ್ಮ ಭವಿಷ್ಯ ಹೇಗಿರುತ್ತೆ ಅಂತ ತಿಳಿಯಲು ಕೆಲವರು ಜ್ಯೋತಿಷಿಗಳ ಮೊರೆ ಹೋಗುತ್ತಾರೆ. ಇನ್ನೂ ಕೆಲವರಿಗೆ ವ್ಯಕ್ತಿತ್ವ ತಿಳಿಯುವುದರಲ್ಲಿ ಆಸಕ್ತಿ ಹೆಚ್ಚಿರುತ್ತೆ. ವ್ಯಕ್ತಿತ್ವವನ್ನು ಹಲವು ರೀತಿಯಲ್ಲಿ ತಿಳಿಯಬಹುದು. ಕಣ್ಣು, ಕಿವಿ, ಮೂಗು, ಹಣೆ, ಕೆನ್ನೆಯ ಆಕಾರದಿಂದ ನಿಮ್ಮ ಅದೃಷ್ಟ ಹೇಗಿದೆ ಅಂತ ಮೊದಲೇ ಹೇಳಲಾಗುತ್ತೆ. ಕೆನ್ನೆಯಲ್ಲಿ ಬಿಳಿ ಮಚ್ಚೆಗಳು ಇರುವವರು ಎಷ್ಟು ಅದೃಷ್ಟವಂತರು. ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಬಗ್ಗೆ ಏನು ಹೇಳಲಾಗಿದೆ ಎಂಬುದನ್ನು ತಿಳಿಯೋಣ. ಸಾಮಾನ್ಯವಾಗಿ ಕೆಲವರಿಗೆ ಕೆನ್ನೆಯ ಮೇಲೆ ಬಿಳಿ ಬಣ್ಣದ ಮಚ್ಚೆಗಳು ಇರುತ್ತವೆ. ಇಂಥವರ ಜೀವನದಲ್ಲಿ ಮಿಶ್ರ ಫಲಗಳಿರುತ್ತವೆ. ಸ್ತ್ರೀಯರಾಗಲಿ ಪುರುಷರಾಗಲಿ ಇವರಿಗೆ ವಂಶದ ಆಸ್ತಿಯು ದೊರೆಯುವುದಿಲ್ಲ. ಒಂದು ವೇಳೆ ದೊರೆತರೂ ನ್ಯಾಯಯುತ ಪಾಲು ಅವರಿಗೆ ಸಿಗುವುದಿಲ್ಲ. ಬಾಲ್ಯದಲ್ಲಿ ಉತ್ತಮ ಹಣಕಾಸಿನ ಅನುಕೂಲವಿರುವ ಮನೆಯಲ್ಲಿ ಜನಿಸುತ್ತಾರೆ. ಇವರ ಬಾಲ್ಯವು ಸುಖ ಸಂತೋಷದಿಂದ ಕೂಡಿರುತ್ತದೆ. ಇವರಿಗೆ ಇಷ್ಟವಾದಂತಹ ವಸ್ತುಗಳಿಗೆ ಹೆಚ್ಚಿನ ಹಣ ವೆಚ್ಚವಾಗುತ್ತದೆ. ಜೀವನದಲ್ಲಿ ಯಾವುದೇ ಬದಲಾವಣೆಗಳು ಉಂಟಾಗುವುದಿಲ್ಲ.

ಕೆನ್ನೆಯ ಮೇಲೆ ಬಿಳಿ ಮಚ್ಚೆಗಳನ್ನು ಹೊಂದಿರುವವರು ಜೀವನವಿಡಿ ಸುಖ ಸಂತೋಷಗಳು ಮನೆ ಮಾಡಿರುತ್ತದೆ. ಆದರೆ ಉದ್ಯೋಗಸ್ಥರದಲ್ಲಿ ಅಗಾಧವಾದ ಪ್ರಯತ್ನದ ನಡುವೆಯೂ ಉನ್ನತಮಟ್ಟವನ್ನು ತಲುಪಲು ಸಾಧ್ಯವಾಗುವುದಿಲ್ಲ. ಬೇರೆಯವರ ತಪ್ಪಿಗೆ ಇವರಿಗೆ ತೊಂದರೆ ಉಂಟಾಗುತ್ತದೆ. ಹಣಕಾಸಿನ ವ್ಯವಹಾರದಲ್ಲಿ ಹಿನ್ನೆಡೆ ಉಂಟಾಗುತ್ತದೆ. ಆದರೆ ಸಂಗಾತಿಯ ಸಹಾಯ ಸಹಕಾರದಿಂದ ಸುಖ ಜೀವನ ನಡೆಸುತ್ತಾರೆ.

ಪುರುಷರಾದಲ್ಲಿ ಕುಟುಂಬದಲ್ಲಿ ಉತ್ತಮ ಬಾಂಧವ್ಯ ಇರುವುದಿಲ್ಲ. ನೆಮ್ಮದಿ ಮತ್ತು ಶಾಂತಿಯ ಕೊರತೆ ಇವರನ್ನು ಸದಾ ಕಾಡುತ್ತದೆ. ಕೈ ತುಂಬಾ ಹಣವಿದ್ದರೂ ಅದನ್ನು ಸರಿಯಾದ ಮಾರ್ಗದಲ್ಲಿ ಉಪಯೋಗಿಸಲು ವಿಫಲರಾಗುತ್ತಾರೆ. ಇವರ ಅರಿವಿಗೆ ಬಾರದಂತೆ ಇರುವ ಹಣವೆಲ್ಲ ಖರ್ಚಾಗುತ್ತದೆ. ದುಂದು ವೆಚ್ಚದಿಂದ ಕುಟುಂಬದವರ ಬೇಸರ ಉಂಟಾಗುತ್ತದೆ. ಇವರ ವೈವಾಹಿಕ ಜೀವನವು ಅಡೆತಡೆಗಳಿಂದ ಕೂಡಿರುತ್ತದೆ. ದುಬಾರಿ ವಸ್ತುಗಳಿಗೆ ಮನಸೊಲುತ್ತಾರೆ. ಆರೋಗ್ಯದಲ್ಲಿ ತೊಂದರೆ ಇರುತ್ತದೆ.

ಎಂಥ ಪರಿಸ್ಥಿತಿ ಬಂದರೂ ಬೇರೆಯವರಿಂದ ಸಾಲ ಪಡೆಯಲ್ಲ

ಪತ್ನಿ ಮತ್ತು ಮಕ್ಕಳ ಜೊತೆ ಸಾಮಾನ್ಯವಾಗಿ ವಾದ ವಿವಾದಗಳಿರುತ್ತವೆ. ಆದರೆ ಮಕ್ಕಳು ಮಾತ್ರ ಇವರ ಮನಸ್ಸನ್ನು ಬದಲಾಯಿಸಬಲ್ಲರು. ಜೀವನ ಕಳೆಯುತ್ತಾ ತಮ್ಮ ಸಣ್ಣ ಪುಟ್ಟ ವಿಚಾರಗಳಿಗೂ ಬೇರೆಯವರ ಮೇಲೆ ಅವರಂಭಿತರಾಗುತ್ತಾರೆ. ಮಕ್ಕಳು ತಮ್ಮ ಪಾಲುಗಾರಿಕೆಯಲ್ಲಿ ಇವರೊಂದಿಗೆ ವ್ಯಾಪಾರವನ್ನು ಆರಂಭಿಸುತ್ತಾರೆ. ಆದರೆ ಯಾವುದೇ ಪರಿಸ್ಥಿತಿಯಲ್ಲಿಯು ಬೇರೆಯವರಿಂದ ಸಾಲವಾಗಿ ಹಣವನ್ನು ಪಡೆಯುವುದಿಲ್ಲ. ಒಟ್ಟಾರೆ ಶಾಂತಿ ಸಹನೆಯಿಂದ ಎಲ್ಲರೊಂದಿಗೆ ಬಾಳುವುದು ಒಳ್ಳೆಯದು.

ಜೊತು ಬಿದ್ದಂತೆ ಕೆನ್ನೆ ಇರುವವರ ವ್ಯಕ್ತಿತ್ವ ಹೇಗಿರುತ್ತೆ?

ಕೆಲವರ ಕೆನ್ನೆಗಳು ಜೊತು ಬಿದ್ದಂತೆ ಇರುತ್ತದೆ. ಕೆನ್ನೆಗಳಲ್ಲಿ ರಕ್ತದ ಕೊರತೆ ಕಾಣುತ್ತದೆ. ಇವರು ಜೀವನವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಹೊಂದಾಣಿಕೆಯ ಗುಣವುವಿಶೇಷವಾಗಿರುತ್ತದೆ. ನಂಬಿದವರಿಗೆ ಎಂದಿಗೂ ಇವರು ಮೋಸ ಮಾಡುವುದಿಲ್ಲ. ಸಮಾಜದಲ್ಲಿನ ಗೌರವ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಲು ಸದಾಕಾಲ ಪ್ರಯತ್ನಿಸುತ್ತಾರೆ. ಚಿಕ್ಕ ವಯಸ್ಸಿನಲ್ಲಿ ನಾಯಕತ್ವದ ಗುಣವಿದ್ದು ಬೇರೆಯವರಿಗೆ ಅಚ್ಚರಿ ಮೂಡುವಂತೆ ವರ್ತಿಸುತ್ತಾರೆ. ಆದರೆ ತಮ್ಮ ಸ್ವಾರ್ಥಕ್ಕಾಗಿತಮ್ಮ ಇಷ್ಟಾರ್ಥವನ್ನು ಪೂರೈಸಿಕೊಳ್ಳುವುದಕ್ಕಾಗಿ ಎಂದಿಗೂ ಮನಸ್ಸು ಮಾಡುವುದಿಲ್ಲ.

ಕೆನ್ನೆ ಜೋತು ಬಿದ್ದಿರುವಂತೆ ಇರುವವರ ವ್ಯಕ್ತಿತ್ವದಲ್ಲಿ ತಾವೇ ಕಷ್ಟದಲ್ಲಿದ್ದರೂ ಬೇರೆಯವರಿಗೆ ಸಹಾಯ ಮಾಡುವ ಮನಸ್ಸಿರುತ್ತದೆ. ಸಭೆ ಸಮಾರಂಭಗಳಲ್ಲಿ ಇವರಿಗೆ ಮೊದಲ ಪ್ರಾಶಸ್ತ್ಯ ದೊರೆಯುತ್ತದೆ. ಸಮಾಜದಲ್ಲಿ ಉನ್ನತ ಸ್ಥಾನ ಗಳಿಸುವ ಆಸೆ ಮತ್ತು ಗುರಿ ಇವರದಾಗುತ್ತದೆ. ತಾವು ಕಷ್ಟಪಟ್ಟು ದುಡಿದ ಹಣವನ್ನು ಸುಲಭವಾಗಿ ಖರ್ಚು ಮಾಡುವುದಿಲ್ಲ. ಇವರಿಗೆ ದುರಾಸೆಯ ಮನಸ್ಸು ಇರುವುದಿಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದೊಂದಿಗೆ ವರ್ತಿಸುತ್ತಾರೆ.

ದಾಂಪತ್ಯದಲ್ಲಿ ಪ್ರೀತಿ ವಿಶ್ವಾಸ ಸದಾಕಾಲ ನೆಲೆಸಿರುತ್ತದೆ. ಮಕ್ಕಳನ್ನು ಶಿಸ್ತಿನಿಂದ ಬೆಳೆಸಿದರೂ ಮಮತೆಗೆ ಕೊರತೆ ತೋರುವುದಿಲ್ಲ. ಕುಟುಂಬದ ಹಿರಿಯರ ಒಪ್ಪಿಗೆಯಂತೆ ವಿವಾಹವಾಗುತ್ತಾರೆ. ಸಮಾಜ ಸೇವೆ ಇವರ ಹೆಗ್ಗುರಿಯಾಗುತ್ತದೆ. ಸಾಮಾನ್ಯವಾಗಿ ಇವರ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಹಣದ ಕೊರತೆ ಕಂಡುಬರುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಉದ್ಯೋಗಕ್ಕೆ ಸೇರಬೇಕಾದ ಸಂದರ್ಭ ಇರುತ್ತದೆ. ಆತ್ಮಾಭಿಮಾನಿಗಳು. ಎಲ್ಲರನ್ನೂ ಗೌರವಿಸುವ ಇವರು ಬೇರೆಯವರಿಂದಲೂ ಗೌರವವನ್ನು ನಿರೀಕ್ಷಿಸುವರು. ಆತ್ಮೀಯರ ಜೊತೆಯಲಿ ದೀರ್ಘಕಾಲದ ಪ್ರವಾಸವನ್ನು ಇಷ್ಟಪಡುತ್ತಾರೆ. ಸ್ವತಂತ್ರ ಜೀವನ ನಡೆಸುವ ಸಲುವಾಗಿ ಸಣ್ಣ ಪ್ರಮಾಣದ ವ್ಯಾಪಾರವನ್ನು ಆರಂಭಿಸುವರು. ವಯಸ್ಸಿಗೆ ಸಂಬಂಧಿಸಿದ ಅನಾರೋಗ್ಯ ಇವರನ್ನು ಕಾಡುತ್ತದೆ. ತಮ್ಮ ನೋವಿನ ಸಮಯದಲ್ಲಿಯೂ ಬೇರೆಯವರಿಗೆ ಸಂತೋಷವನ್ನೇ ಹಂಚುತ್ತಾರೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.