Best Couple: ಜನ್ಮರಾಶಿಗೆ ಅನುಗುಣವಾಗಿ ಈ ರಾಶಿಯವರೇ ನೋಡಿ ಬೆಸ್ಟ್ ಜೋಡಿ ಆಗೋದು; ಈ ಎರಡು ರಾಶಿಗಳು ಒಂದಾದ್ರೆ ಬದುಕೆಲ್ಲಾ ಹಾಲು ಜೇನು
Zodiac Couples Who Make The Best Pair: ನಮ್ಮ ರಾಶಿಯ ಮೂಲಕ ನಾವು ಮದುವೆಯಾಗುವ ಅಥವಾ ಪ್ರೀತಿಸುವ, ಪ್ರೀತಿ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯೊಂದಿಗೆ ನಾವು ಹೊಂದಿಕೊಳ್ಳುತ್ತೇವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಸರಿ ಈ ಲೇಖನದಲ್ಲಿ ಯಾವ ರಾಶಿಯವರಿಗೆ ಯಾವ ರಾಶಿಯವರು ಬೆಸ್ಟ್ ಜೋಡಿ ಎಂಬುದನ್ನು ತಿಳಿದುಕೊಳ್ಳೋಣ.
ಗಂಡ-ಹೆಂಡತಿಯಾಗಿರಲಿ, ಪ್ರೇಮಿಗಳಾಗಿರಲಿ ಯಾವುದೇ ಪ್ರಣಯ ಸಂಬಂಧ ಉತ್ತಮ ರೀತಿಯಲ್ಲಿ ಮುಂದುವರಿಯಬೇಕು ಅಂದ್ರೆ ಪ್ರೀತಿ, ನಂಬಿಕೆ, ವಿಶ್ವಾಸ ಹಾಗೂ ಹೊಂದಾಣಿಕೆ ಬಹಳ ಮುಖ್ಯ. ಗಂಡು ಹೆಣ್ಣು ಒಬ್ಬರಿಗೆ ಒಬ್ಬರು ಆಕರ್ಷಿತರಾದರೂ ಸಂಬಂಧ ಉಳಿಯಲು ಸಾಕಷ್ಟು ತಿಳುವಳಿಕೆ ಬೇಕು. ಜೊತೆಗೆ ನಮ್ಮ ಗುಣ, ವರ್ತನೆಗಳು ನಾವು ಪ್ರೀತಿಸುವ ಅಥವಾ ಮದುವೆಯಾಗಲು ಬಯಸುವ ವ್ಯಕ್ತಿಯೊಂದಿಗೆ ಹೊಂದಾಣಿಕೆಯಾಗಬೇಕು. ನಮ್ಮ ವ್ಯಕ್ತಿತ್ವದ ಆಧಾರದ ಮೇಲೆ ನಮಗೆ ಯಾರು ಹೊಂದಿಕೆಯಾಗುತ್ತಾರೆ ಎಂದು ನಿರ್ಧರಿಸಲಾಗುತ್ತದೆ. ಹೀಗೆ ಜೋಡಿ ಹೊಂದಾಣಿಕೆ ತಿಳಿಯಲು ಇರುವ ಇನ್ನೊಂದು ಮಾರ್ಗವೆಂದರೆ ರಾಶಿ ನಕ್ಷತ್ರಗಳು. ನಮ್ಮ ರಾಶಿಯ ಮೂಲಕ ನಾವು ಮದುವೆಯಾಗುವ ಅಥವಾ ಪ್ರೀತಿಸುವ, ಪ್ರೀತಿ ಮಾಡಬೇಕು ಎಂದುಕೊಂಡಿರುವ ವ್ಯಕ್ತಿಯೊಂದಿಗೆ ನಾವು ಹೊಂದಿಕೊಳ್ಳುತ್ತೇವೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬಹುದು. ಸರಿ ಈ ಲೇಖನದಲ್ಲಿ ಯಾವ ರಾಶಿಯವರಿಗೆ ಯಾವ ರಾಶಿಯವರು ಬೆಸ್ಟ್ ಜೋಡಿ ಎಂಬುದನ್ನು ತಿಳಿದುಕೊಳ್ಳೋಣ.
ಮಿಥುನ ಮತ್ತು ಕುಂಭ
ಮಿಥುನ ಹಾಗೂ ಕುಂಭ ರಾಶಿಯವರು ಒಂದೇ ರೀತಿ ಅತಿರಂಜಿತ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಈ ಎರಡೂ ರಾಶಿಯವರಲ್ಲಿ ಸೃಜನಶೀಲತೆ ಹಾಗೂ ಬೌದ್ಧಿಕ ಸಾಮರ್ಥ್ಯ ಸಮನಾಗಿರುತ್ತದೆ. ಈ ಎರಡೂ ರಾಶಿಗಳಿಗೆ ಅಧಿಪತಿ ಸೂರ್ಯ. ಆ ಕಾರಣದಿಂದ ಇಬ್ಬರೂ ಒಂದಾದರೆ ಅದ್ಭುತ ಸೃಷ್ಟಿಯಾಗಬಹುದು. ತಮ್ಮ ಹಾಸ್ಯ ಹಾಗೂ ನಗಿಸುವ ಸ್ವಭಾವದಿಂದ ಪರಸ್ಪರ ಖುಷಿಯಾಗಿರುವುದಲ್ಲದೇ ಇತರರನ್ನೂ ಖುಷಿಯಾಗಿ ಇಡುತ್ತಾರೆ. ಇವರು ಪರಸ್ಪರ ಖಾಸಗೀತನ ಹಾಗೂ ಏಕಾಂತವನ್ನು ಹೆಚ್ಚು ಬಯಸುತ್ತಾರೆ.
ಮಕರ ಮತ್ತು ವೃಷಭ
ಮಕರ ರಾಶಿಯವರು ನಮ್ಮ ಬದುಕಿನಲ್ಲಿ ವೇಳಾಪಟ್ಟಿ ರಚಿಸಿಕೊಂಡು ಅದರಂತೆ ಬದುಕುವವರು. ಇವರು ಎಲ್ಲವನ್ನೂ ಸರಿಯಾಗಿ ಯೋಚಿಸಿ ನಿರ್ಧರಿಸುತ್ತಾರೆ. ಇವರು ತಮ್ಮ ಕೆಲಸದ ಬದ್ಧತೆಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಹೀಗಾಗಿ ಇವರು ತಮ್ಮ ಗುರಿ ಹಾಗೂ ಮಹತ್ವಾಕಾಂಕ್ಷೆಯನ್ನು ಅರ್ಥ ಮಾಡಿಕೊಳ್ಳುವವರನ್ನು ಹುಡುಕುತ್ತಿರುತ್ತಾರೆ. ವೃಭಷ ರಾಶಿಯವರು ಮಕರ ರಾಶಿಯವರಿಗೆ ಹೊಂದುತ್ತಾರೆ. ಈ ರಾಶಿಯವರು ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡನ್ನೂ ಸಮರ್ಪಕ ಭಾವದಿಂದ ನಿಭಾಯಿಸುತ್ತಾರೆ. ಈ ಎರಡೂ ರಾಶಿಯವರು ಒಂದಾದರೆ ಖಂಡಿತ ಇವರ ಬದುಕು ಯಶಸ್ಸಿನ ಹಾದಿನಲ್ಲಿ ಸಾಗುತ್ತದೆ. ಈ ಇಬ್ಬರೂ ಸಂಬಂಧದ ಸುರಕ್ಷತೆಯ ಬಗ್ಗೆ ಚಿಂತಿಸುವವರೂ ಆಗಿದ್ದಾರೆ.
ಮೇಷ ಮತ್ತು ಧನುರಾಶಿ
ಸಾಹಸಮಯ ಮನೋಭಾವ, ವಿನೋದ ಹಾಗೂ ಹೆಚ್ಚು ಪ್ರೀತಿಸುವ ವ್ಯಕ್ತಿತ್ವ ಹೊಂದಿರುವ ಈ ಎರಡು ರಾಶಿಯವರು ಒಂದಾದರೆ ಬದುಕು ಹಾಲುಜೇನಿನಂತೆ ಸಾಗುವುದು ಖಂಡಿತ. ಈ ಇಬ್ಬರೂ ತಾವು ಇಷ್ಟಪಟ್ಟಿದ್ದನ್ನು ಮಾಡಿಯೇ ತೀರುತ್ತೇವೆ ಎಂಬ ಮನೋಭಾವ ಹೊಂದಿದವರು. ಇವರು ಅನ್ನಿಸಿದ್ದನ್ನು ಮಾಡಿದರೂ ಕೂಡ ತಮಗೊಂದು ವೈಯಕ್ತಿಕ ಜೀವನ ಇದೇ ಎಂದು ಸಂಬಂಧಕ್ಕೆ ಬೆಲೆ ಕೊಡುತ್ತಾರೆ. ಈ ರಾಶಿಯವರು ಒಟ್ಟಿಗೆ ಇದ್ದಾಗ ಥ್ರಿಲ್ಲಿಂಗ್ ಹಾಗೂ ರೊಮ್ಯಾಂಟಿಕ್ ಆಗಿ ಇರುತ್ತಾರೆ.
ವೃಶ್ಚಿಕ ಮತ್ತು ಸಿಂಹ
ಈ ಎರಡೂ ರಾಶಿಯವರಲ್ಲಿ ಒಂದು ರೀತಿಯ ಉತ್ಸಾಹ, ಹುಮ್ಮಸ್ಸಿನ ಮನೋಭಾವವಿರುತ್ತದೆ. ಇವರು ತಾವು ಅಂದುಕೊಂಡಿದ್ದನ್ನು ಸಾಧಿಸದೇ ಬಿಡುವುದಿಲ್ಲ. ಈ ರಾಶಿಯವರ ಪಟ್ಟು ಬಿಡದ ಉತ್ಸಾಹ ಮತ್ತು ಪ್ರಬಲ ವ್ಯಕ್ತಿತ್ವಗಳು ಅವರ ದುರಹಂಕಾರ ಮತ್ತು ಭಾವನಾತ್ಮಕ ಅಜ್ಞಾನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದರ ಈ ರಾಶಿಯವರ ಸಂಬಂಧ ದೀರ್ಘಾವಧಿಯವರೆಗೆ ಉತ್ತಮ ರೀತಿಯಲ್ಲಿ ಸಾಗಲು ನೆರವಾಗುತ್ತದೆ.
ತುಲಾ ಮತ್ತು ಮಿಥುನ
ತುಲಾ ಹಾಗೂ ಮಿಥುನ ರಾಶಿಯವರು ಒಬ್ಬರಿಗೊಬ್ಬರು ಬಹಳ ಇಷ್ಟಪಡುತ್ತಾರೆ. ಈ ಎರಡೂ ರಾಶಿಯವರು ಪರಸ್ಪರ ಬೆಳೆಯಲು ಸಹಕಾರವಾಗಿ ನಿಲ್ಲುತ್ತಾರೆ. ಅದ್ಭುತವಾದ ವಿಷಯಗಳನ್ನು ಸಾಧಿಸಲು ಪರಸ್ಪರ ಪ್ರೇರೇಪಿಸುತ್ತಾರೆ. ಉತ್ತಮ ಪ್ರಣಯ ಸಂಬಂಧವನ್ನು ಹೊಂದಿರುವುದರ ಜೊತೆಗೆ, ಅವರು ಬಲವಾದ ಬೌದ್ಧಿಕ ಸಂಪರ್ಕವನ್ನು ಸಹ ಇರಿಸಿಕೊಂಡಿರುತ್ತಾರೆ. ಇದು ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲ ಸಹಾಯ ಮಾಡುತ್ತದೆ.
ಕಟಕ ಮತ್ತು ಮೀನ ರಾಶಿ
ಪ್ರಣಯ ಸಂಬಂಧದ ವಿಚಾರಕ್ಕೆ ಬರುವುದಾದರೆ ಕಟಕ ಹಾಗೂ ಮೀನರಾಶಿಯವರು ಉತ್ತಮ ಜೋಡಿಯಾಗುತ್ತಾರೆ. ಈ ರಾಶಿಯವರು ಬೆಸ್ಟ್ ಲವ್‌ಬರ್ಡ್ಸ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಮೀನ ರಾಶಿಯವರು ಪ್ರೀತಿ ವಿಚಾರದಲ್ಲಿ ಯಾವಾಗಲೂ ಒಂದು ಕೈ ಮುಂದಿರುತ್ತಾರೆ. ಕಟಕ ರಾಶಿಯವರಲ್ಲಿ ಪ್ರೀತಿ ಹಾಗೂ ಭಾವೋದ್ರೇಕದ ಗುಣ ಇರುತ್ತದೆ. ಹಾಗಾಗಿ ಇವರು ಮೀನ ರಾಶಿಯವರ ವ್ಯಕ್ತಿತ್ವವನ್ನು ಸಹಿಸಿಕೊಂಡು ಉತ್ತಮ ಜೀವನ ದಾರಿಯಲ್ಲಿ ಸಾಗಲು ನೆರವಾಗುತ್ತಾರೆ.
ಕನ್ಯಾರಾಶಿ ಮತ್ತು ವೃಷಭ ರಾಶಿ
ವೃಷಭ ರಾಶಿಯವರು ನಮ್ಮ ಕಂಫರ್ಟ್ ಜೋನ್‌ನಲ್ಲಿ ಇರಲು ಬಯಸುತ್ತಾರೆ. ಇವರು ಸಂಬಂಧಕ್ಕೆ ನಿಷ್ಠೆಯಿಂದ ಇರುತ್ತಾರೆ. ಜೊತೆಗೆ ಸಂಬಂಧದಲ್ಲಿ ಭದ್ರತೆ ಹಾಗೂ ಸ್ಥಿರತೆಯನ್ನು ಬಯಸುತ್ತಾರೆ. , ಕನ್ಯಾ ರಾಶಿಯವರು ಸಂಬಂಧದಲ್ಲಿ ಸ್ವಲ್ಪ ಹೆಚ್ಚು ವಿಮರ್ಶಾತ್ಮಕವಾಗಿರಬಹುದು, ಆದರೆ ವೃಷಭ ರಾಶಿಯವರಿಗೆ ಅವರು ಪರಿಪೂರ್ಣ ಪಾಲುದಾರರಾಗುತ್ತಾರೆ.
ಸಿಂಹ ಮತ್ತು ಧನು ರಾಶಿ
ಸಿಂಹ ಹಾಗೂ ಧನು ರಾಶಿಯವರು ವಿನೋದದ ಮನೋಭಾವವನ್ನು ಹೊಂದಿದ್ದು, ಈ ಗುಣವೇ ಈ ಎರಡು ರಾಶಿಯವರನ್ನು ಉತ್ತಮ ಜೋಡಿಯನ್ನಾಗಿಸುತ್ತದೆ. ಈ ಇಬ್ಬರೂ ಒಬ್ಬರಿಗೊಬ್ಬರು ಜೊತೆ ಇರಲು ಇಷ್ಟಪಡುತ್ತಾರೆ. ಧನು ರಾಶಿಯವರ ಆಕರ್ಷಕ ವರ್ತನೆ ಮತ್ತು ಸಿಂಹ ರಾಶಿಯವರ ಮನಸೂರೆಗೊಳ್ಳುವ ವ್ಯಕ್ತಿತ್ವದೊಂದಿಗೆ ಈ ಇಬ್ಬರು ಉತ್ತಮ ಜೋಡಿಗಳಾಗುತ್ತಾರೆ.