Entertainment News in Kannada Live November 29, 2024: Samantha Ruth Prabhu: ಬಹುಭಾಷಾ ನಟಿ ಸಮಂತಾ ರುತ್ ಪ್ರಭುಗೆ ಪಿತೃ ವಿಯೋಗ; ತಂದೆ ಜೋಸೆಫ್ ಪ್ರಭು ನಿಧನ
ಇದು 'ಎಚ್‌ಟಿ ಕನ್ನಡ' ಜಾಲತಾಣದ ಸ್ವಯಂಚಾಲಿತ ಲೈವ್‌ಬ್ಲಾಗ್. ಕನ್ನಡ ಟಿವಿ ಧಾರಾವಾಹಿಗಳು, ಒಟಿಟಿ ಸರಣಿಗಳು, ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್, ಬಾಲಿವುಡ್, ಕನ್ನಡ ಕಿರುತೆರೆ, ಕನ್ನಡ ಸಿನಿಮಾ ಜಗತ್ತು, ಒಟಿಟಿ ತಾಣಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ಮತ್ತು ತಾಜಾ ಸುದ್ದಿ ಇಲ್ಲಿ ಲಭ್ಯ. ವಿವಿಧ ಜನಪ್ರಿಯ ಸಿನಿಮಾಗಳ ವಿಮರ್ಶೆ ಇಲ್ಲಿದೆ.
Fri, 29 Nov 202412:01 PM IST
- Samantha Ruth Prabhu Father Dies: ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಅವರ ತಂದೆ ಜೋಸೆಫ್ ಪ್ರಭು ನಿಧನರಾಗಿದ್ದಾರೆ. ನಟಿ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡು, ಭಾವುಕರಾಗಿದ್ದಾರೆ.
Fri, 29 Nov 202411:06 AM IST
- Viduthalai Part 2: ತಮಿಳಿನ ಸೂಕ್ಷ್ಮ ಸಂವೇದಿ ನಿರ್ದೇಶಕರಲ್ಲಿ ಒಬ್ಬರು ಎನಿಸಿಕೊಂಡಿರುವ ವೆಟ್ರಿಮಾರನ್ ಮತ್ತು ವಿಜಯ್ ಸೇತುಪತಿ ಜೋಡಿ ವಿಡುದಲೈ ಪಾರ್ಟ್ 2 ಸಿನಿಮಾದೊಂದಿಗೆ ಆಗಮಿಸುತ್ತಿದ್ದಾರೆ. ಡಿಸೆಂಬರ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದ್ದು, ಟ್ರೇಲರ್ ಸಹ ಕುತೂಹಲ ಮೂಡಿಸಿದೆ.
Fri, 29 Nov 202410:18 AM IST
- ಅಜಿತ್ ಕುಮಾರ್ ನಟನೆಯ ‘ವಿದಾಮುಯರ್ಚಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಎಲ್ಲರೂ ಸಿನಿಮಾದ ಬಗ್ಗೆ ಇನ್ನಷ್ಟು ಹೆಚ್ಚಿನ ನಿರೀಕ್ಷೆಸೃಷ್ಟಿಸಿಕೊಂಡಿದ್ದಾರೆ. ಟೀಸರ್ ನೋಡಿದರೆ ಈ ಸಿನಿಮಾ ಹಾಲಿವುಡ್ ಮೂವಿಗೆ ಸಮನಾಗಿದೆ ಎಂದಿದ್ದಾರೆ.
Fri, 29 Nov 202409:52 AM IST
Amaran OTT Release Date: ಅಮರನ್ ಸಿನಿಮಾ ಇನ್ನೇನು ಶೀಘ್ರದಲ್ಲಿ ಒಟಿಟಿಗೆ ಆಗಮಿಸಲಿದೆ. ವಿಶೇಷ ಏನೆಂದರೆ, ನಿಗದಿತ ದಿನಾಂಕದ ಒಂದು ವಾರ ಮೊದಲೇ ಅಮರನ್ ಸಿನಿಮಾವನ್ನು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು.
Fri, 29 Nov 202409:50 AM IST
- ಪುಷ್ಪ 2 ಸಿನಿಮಾದ ಕಿಸ್ಸಿಕ್ ಹಾಡು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಹಾಡು ಇಷ್ಟೊಂದು ಹಿಟ್ ಆಗಲು ಕಾರಣವೇನು? ಇಲ್ಲಿ ಶ್ರೀಲೀಲಾ ಸೌಂದರ್ಯದ ಜತೆಗೆ ಈ ಹಾಡಿನ ಸಾಹಿತ್ಯದಲ್ಲಿ ಗಂಡಸರ ದೌರ್ಬಲ್ಯದ ಅಣಕ, ಈಗಿನ ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುವ ರೀತಿ ಇತ್ಯಾದಿ ವಿಚಾರಗಳ ಸಾಹಿತ್ಯವೂ ಪ್ರಮುಖ ಕಾರಣ.
Fri, 29 Nov 202409:00 AM IST
- 2024ರ ದಿ ಬೆಸ್ಟ್ ಸಿನಿಮಾ ನಮ್ಮದೇ ಆಗಿರಬೇಕು ಎಂದು ಎಲ್ಲ ಚಿತ್ರತಂಡಗಳಿಗೂ ಆಸೆ ಇರುತ್ತದೆ. ಅದೇ ರೀತಿ ಸೂಪರ್‌ಮ್ಯಾನ್ ಚಿತ್ರತಂಡ ಬೆಸ್ಟ್ ಟ್ರೇಲರ್ ರಿಲೀಸ್ ಮಾಡಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ.
Fri, 29 Nov 202408:28 AM IST
- ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಟೀಕೆ ಟಿಪ್ಪಣಿಗಳು ಕೇಳಿಬರುತ್ತಿವೆ. ಬೇಕಿರುವವರನ್ನು ಬಿಟ್ಟು, ಬೇಡವಾದ್ದನ್ನೇ ಖರೀದಿಸಿ ಕೋಟ್ಯಂತರ ಅಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಟೀಕೆಗಳು ಕೇಳಿ ಬರುತ್ತಿವೆ. ಆರ್‌ಸಿಬಿಯ ಕಟ್ಟಾ ಅಭಿಮಾನಿಯಾದ ಖ್ಯಾತ ಸಿನಿಮಾ ನಿರ್ದೇಶಕ ಸಿಂಪಲ್ ಸುನಿ, ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ತಿರುಗಿ ಬಿದ್ದಿದ್ದಾರೆ.
Fri, 29 Nov 202407:36 AM IST
- Who Is Sreeleela?: ಪುಷ್ಪ 2 ಸಿನಿಮಾದಲ್ಲಿ ಅಲ್ಲು ಅರ್ಜುನ್ ಜತೆ ಕಿಸ್ಸಿಕ್ ಹಾಡಿಗೆ ಕರ್ನಾಟಕ ಮೂಲದ ಪ್ರತಿಭಾನ್ವಿತ ನಟಿ ಶ್ರೀಲೀಲಾ ಐಟಂ ಡ್ಯಾನ್ಸ್ ಮಾಡಿದ್ದಾರೆ. 23 ವರ್ಷ ವಯಸ್ಸಿನ ಈ ಸುಂದರಿ ಕಿರಿಯ ವಯಸ್ಸಿನಲ್ಲೇ ಸಿನಿಜಗತ್ತಿನಲ್ಲಿ ಗಮನ ಸೆಳೆಯುತ್ತಿದ್ದಾರೆ.
Fri, 29 Nov 202407:13 AM IST
- ನೀವು ಅಂಬುಲೆನ್ಸ್ ನೋಡಿರ್ತೀರಾ ಆದ್ರೆ ‘ಆಂಬು ಆಟೋ’ ನೋಡಿರಲಿಕ್ಕಿಲ್ಲ. ನಿರ್ದೇಶಕ ಸತ್ಯಪ್ರಕಾಶ್ ಪರಿಕಲ್ಪನೆಯಲ್ಲಿ ಮೂಡಿಬರುತ್ತಿರುವ ‘X&Y’ ಚಿತ್ರದ ರಿಯಲ್ ಸ್ಟಾರ್ ಇದೇ ‘ಆಂಬು ಆಟೋ’
Fri, 29 Nov 202407:03 AM IST
- Dr Bro Kannada: ಮಾತಿನಲ್ಲಿ, ಬುದ್ಧಿವಂತಿಕೆಯಲ್ಲಿ ಚಾಣಾಕ್ಷನಾದರೂ, ಶಕ್ತಿಯಲ್ಲಿ ಡಾ. ಬ್ರೋ ಕೊಂಚ ಕೆಳಗಿದ್ದಾರೆ. ಈಗ ತಮ್ಮ ಆ ಶಕ್ತಿಗೆ ಸವಾಲು ಎಸೆದಿದ್ದಾರೆ. ಅಂದರೆ, ನೈಜೀರಿಯಾದಲ್ಲಿನ ಕಾನೋ ಪಟ್ಟಣಕ್ಕೆ ಡಾ. ಬ್ರೋ ಭೇಟಿ ನೀಡಿದ್ದಾರೆ. ಅಲ್ಲಿ ನಡೆದ ಮುಷ್ಠಿ ಕಾಳಗದಲ್ಲಿ ಭಾಗವಹಿಸಿ, ನೆರೆದಿದ್ದವರ ಕಣ್ಣಿಗೆ ಹಬ್ಬದಂತೆ ಕಂಡಿದ್ದಾರೆ.
Fri, 29 Nov 202406:40 AM IST
- ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್ ಜನರಿಗೆ ಸಖತ್ ಮಜ ನೀಡಿದೆ. ರಾಜನಾಗಿ ಉಗ್ರಂ ಮಂಜು ಹಾಗೇ ಯುವರಾಣಿಯಾಗಿ ಮೋಕ್ಷಿತಾ ಕಾಣಿಸಿಕೊಂಡಿದ್ದಾರೆ. ಆದರೆ ಬಿಗ್ ಬಾಸ್ ಈಗ ಅವರಿಬ್ಬರನ್ನೇ ಬಂಧನದಲ್ಲಿಟ್ಟಿದ್ದಾರೆ.
Fri, 29 Nov 202406:02 AM IST
- ರಾಮಾಚಾರಿ ಕುಟುಂಬ ಈಗ ಅಣ್ಣಾಜಿ ಮನೆಯಲ್ಲಿ ಸಿಕ್ಕಿಬಿದ್ದಿದೆ. ನಿಮಗೆಲ್ಲ ಸಾವಿನ ಉಡುಗೊರೆ ಕೊಡುತ್ತೇನೆ ಎಂದು ಅಣ್ಣಾಜಿ ಬಂದೂಕು ಹಿಡಿದು ನಿಂತಿದ್ದಾರೆ. ರಾಮಾಚಾರಿ ಮನೆಯ ಎಲ್ಲರನ್ನೂ ಕೊಲ್ಲುತ್ತೇನೆ ಎಂದಿದ್ಧಾರೆ.
Fri, 29 Nov 202405:51 AM IST
- Puttakkana Makkalu Serial: ಆರೂರು ಜಗದೀಶ್ ನಿರ್ದೇಶನದ ʼಪುಟ್ಟಕ್ಕನ ಮಕ್ಕಳುʼ ಧಾರಾವಾಹಿಯಲ್ಲಿ ಹಳೇ ಸ್ನೇಹಾ ಪಾತ್ರ ಅಂತ್ಯವಾಗಿದೆ. ಆದರೂ ಕೂಡ ಇನ್ನೊಂದು ಸ್ನೇಹಾ ಪಾತ್ರ ಎಂಟ್ರಿ ಆಗಿದೆ. ಈ ಸ್ನೇಹಾ ಪಾತ್ರಕ್ಕೆ ನಟಿ ಅಪೂರ್ವ ನಾಗರಾಜ್ ಅವರು ಬಣ್ಣ ಹಚ್ಚಿದ್ದಾರೆ. ಈ ಸೀರಿಯಲ್ ಬಗ್ಗೆ ಅಪೂರ್ವ ಹೇಳುವುದೇನು? - ಸಂದರ್ಶನ ಪದ್ಮಶ್ರೀ ಭಟ್
Fri, 29 Nov 202405:27 AM IST
- Amruthadhaare serial today episode: ಅಮೃತಧಾರೆಯಲ್ಲಿ ಸುಧಾಳ ಬಗ್ಗೆ ಗೌತಮ್‌ಗೆ ಅನುಮಾನ ಬಂದಿದೆ. ಆಕೆ ವಾಪಸ್ ಬಂದ ಬಳಿಕ ಅನುಮಾನ ನಿವಾರಣೆಯಾಗಿದೆ. ಇದೇ ಸಮಯದಲ್ಲಿ ಜೈದೇವ್‌ಗೆ ತನ್ನ ತಾಯಿ ಮತ್ತು ಮಾವ ಏನೋ ದೊಡ್ಡ ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಅನುಮಾನ ಬಂದಿದೆ.
Fri, 29 Nov 202405:12 AM IST
- Seetha Rama Serial: ಸೀತಾ ರಾಮ ಸೀರಿಯಲ್‌ನಲ್ಲಿ ಸಿಹಿಯ ಸಾವಿನ ದಿನ ಹತ್ತಿರ ಬರುತ್ತಿದೆ. ಆಸ್ತಿ ವಿಚಾರವಾಗಿ, ಸೀತಾಳನ್ನು ಹತ್ಯೆ ಮಾಡುವ ಪ್ಲಾನ್ ಭಾರ್ಗವಿಯದ್ದು. ಆದರೆ, ಈ ದುರಂತದಲ್ಲಿ ಸೀತಾ ಬದಲು ಸಿಹಿ ಸಾವನ್ನಪ್ಪುತ್ತಾಳೆ. ಈಗ ಆ ಪುಟಾಣಿ ಸಾವಿನ ಸಂಚಿಕೆ ಸಮೀಪಿಸುತ್ತಿದೆ.
Fri, 29 Nov 202404:57 AM IST
- ಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ಮತ್ತೆ ಒಂದಾಗುತ್ತಿದ್ದಾರೆ ಎಂಬ ಸುದ್ದಿ ಕುತೂಹಲ ಹುಟ್ಟಿಸುತ್ತಿದೆ. ವಕೀಲೆ ವಂದನಾ ಶಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಇಬ್ಬರ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
Fri, 29 Nov 202404:21 AM IST
- Krishnam Pranaya sakhi OTT: ಗೋಲ್ಸನ್ ಸ್ಟಾರ್ ಗಣೇಶ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಸಿನಿಮಾ ಕೃಷ್ಣ ಪ್ರಣಯ ಸಖಿ ಕೊನೆಗೂ ಒಟಿಟಿ ಅಂಗಳ ಪ್ರವೇಶಿಸಿದೆ. ಚಿತ್ರಮಂದಿಗಳಲ್ಲಿ ಬರೋಬ್ಬರಿ ನೂರು ದಿನಗಳ ಸಂಭ್ರಮದ ಬಳಿಕವೇ ಈ ಒಟಿಟಿಗೆ ಆಗಮಿಸಿದೆ.
Fri, 29 Nov 202404:19 AM IST
Lakshmi Nivasa Serial: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರಾವಾಹಿ ನವೆಂಬರ್ 28ರ ಎಪಿಸೋಡ್‌ನಲ್ಲಿ ಗುರುಗಳು ಮಾತು ಕೇಳಿದ ನಂತರ ಜವರೇಗೌಡ , ಸೊಸೆಯನ್ನು ಮನೆಯಲ್ಲೇ ಉಳಿಸಿಕೊಳ್ಳುವ ನಿರ್ಧಾರ ಮಾಡುತ್ತಾನೆ. ಸಿದ್ದು ಇದನ್ನೆಲ್ಲಾ ಬೇಕಂತಲೇ ಮಾಡಿಸಿರುವುದು ಎಂಬ ಸತ್ಯ ಭಾವನಾಗೆ ತಿಳಿಯುತ್ತದೆ.
Fri, 29 Nov 202403:13 AM IST
- Bhairathi Ranagal: ನವೆಂಬರ್ 15ರಂದು ಬಿಡುಗಡೆಯಾಗಿದ್ದ ‘ಭೈರತಿ ರಣಗಲ್’ ಚಿತ್ರವು ಎರಡು ವಾರಗಳನ್ನು ಯಶಸ್ವಿಯಾಗಿ ಮುಗಿಸಿ, ಮೂರನೇ ವಾರಕ್ಕೆ ಕಾಲಿಡುತ್ತಿದೆ. ಸಹಜವಾಗಿಯೇ ಪ್ರೇಕ್ಷಕರ ಸಂಖ್ಯೆಯೂ ಕಡಿಮೆಯಾಗಿದೆ. ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಚಿತ್ರತಂಡ ಹೊಸ ಆಫರ್ ನೀಡಿದೆ.
Fri, 29 Nov 202403:01 AM IST
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ನವೆಂಬರ್ 28ರ ಎಪಿಸೋಡ್‌ನಲ್ಲಿ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಬರುವಂತೆ ಭಾಗ್ಯಾ, ಶ್ರೇಷ್ಠಾಗೆ ಕರೆ ಮಾಡಿ ಕರೆಯುತ್ತಾಳೆ. ಮದುವೆ ಮಂಟಪ ತಯಾರಿಸುವಂತೆ ಡೆಕೊರೇಷನ್ ಮಾಡುವವರಿಗೆ ಹೇಳುತ್ತಾಳೆ. ಭಾಗ್ಯಾ ವಿಚಿತ್ರವಾಗಿ ವರ್ತಿಸುವುದನ್ನು ನೋಡಿ ಮನೆಯವರು ಗಾಬರಿಯಾಗಿದ್ದಾರೆ.