Shani Sade Sati: 2025 ರಲ್ಲಾದರೂ ಕುಂಭ ರಾಶಿಯವರು ಶನಿ ಸಾಡೇಸಾತಿಯ ಪ್ರಭಾವದಿಂದ ಹೊರಬರುತ್ತಾರಾ? ಅವರಿಗೆ ಹೊಸ ವರ್ಷ ಹೇಗಿರಲಿದೆ
Shani Sade Sati: ಕುಂಭ ರಾಶಿಯವರು ವರ್ಷಪೂರ್ತಿ ಶನಿ ಸಾಡೇಸಾತಿಯ ಪ್ರಭಾವಕ್ಕೆ ಒಳಗಾಗಿರುತ್ತಾರೆ. ಅವರು ಕನಿಷ್ಠ 2025 ರಲ್ಲಾದರೂ ಏಳೂವರೆ ಶನಿಯಿಂದ ಹೊರಬರುತ್ತಾರಾ? ಅವರಿಗೆ ಹೊಸ ವರ್ಷ ಹೇಗಿರಲಿದೆ ಎಂಬುದನ್ನು ನೋಡೋಣ.
Shani Sade Sati: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯು ನಿಧಾನವಾಗಿ ಚಲಿಸುವ ಗ್ರಹ. ವ್ಯಕ್ತಿಯು ಮಾಡುವ ಕರ್ಮಗಳನ್ನು ಅವಲಂಬಿಸಿ ಶನಿ ಪ್ರಭಾವವು ಇರುತ್ತದೆ. ಶನಿಯ ಕೃಪೆಯಿಲ್ಲದವರ ಜೀವನವು ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ. ಶನಿ ಸಾಡೇಸಾತಿ ಅಥವಾ ಏಳೂವರೆ ಶನಿಯ ಪ್ರಭಾವವು ಕೆಲವರಿಗೆ ಒಳ್ಳೆಯದು ಮತ್ತು ಇತರರಿಗೆ ತುಂಬಾ ಕೆಟ್ಟ ಪರಿಸ್ಥಿತಿಯನ್ನು ಉಂಟುಮಾಡಬಹುದು. ಶನಿ ಸಾಡೇಸಾತಿಯ ಸಂದರ್ಭದಲ್ಲಿ ಮೂರು ದೆಶೆಗಳಿರುತ್ತವೆ. ಪ್ರತಿ ದೆಶೆಯೂ ಎರಡೂವರೆ ವರ್ಷ ಕಾಲ ಇರುತ್ತದೆ. ಈ ರೀತಿಯಾಗಿ ಶನಿಯ ಪ್ರಭಾವವು ವ್ಯಕ್ತಿಯ ಬದುಕಿನ ಮೇಲೆ ಮೂರು ದೆಶೆಗಳಲ್ಲಿ ಹಂತಗಳಲ್ಲಿ ಸೇರಿ ಏಳೂವರೆ ವರ್ಷಗಳವರೆಗೆ ಇರುತ್ತದೆ. ಪ್ರಸ್ತುತ ಶನಿಯು ತನ್ನದೇ ಆದ ಕುಂಭ ರಾಶಿಯಲ್ಲಿ ಸಾಗುತ್ತಿದ್ದಾನೆ. ಈ ಸಂಚಾರದ ಅವಧಿಯಲ್ಲಿ ಶನಿಯ ಪ್ರಭಾವವು ಆ ರಾಶಿಯ ಜನರ ಮೇಲೆ ಹೆಚ್ಚು ಇರುತ್ತದೆ. ಕುಂಭ ರಾಶಿಯವರಿಗೆ 2025ರಲ್ಲೂ ಶನಿ ಸಂಚಾರ ಇರುತ್ತದಾ? ಹೇಗಿದೆ ಅವರ ಹೊಸ ವರ್ಷದ ಫಲಾಫಲ, ವಿವರ ತಿಳಿಯೋಣ.
ಕುಂಭ ರಾಶಿಗೆ ಅಧಿಪತಿ ಶನಿ. ತನ್ನದೇ ರಾಶಿಯಲ್ಲಿ ಶನಿ ಸಂಚಾರ ಇದೆ. 2025ರ ಮಾರ್ಚ್ ತಿಂಗಳಲ್ಲಿ ಶನಿ ತನ್ನ ರಾಶಿ ಬದಲಾವಣೆ ಮಾಡಲಿದ್ದಾನೆ. ಆಗ ಶನಿಯು ಮೀನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಆ ಸಂದರ್ಭದಲ್ಲಿ ಕುಂಭ ರಾಶಿಯವರಿಗೆ ಏಳೂವರೆ ಶನಿಯ ಮೂರನೇ ದೆಶೆ ಶುರುವಾಗುತ್ತದೆ. ಅದು 2027ರ ತನಕವೂ ಇರಲಿದೆ.
2025ರಲ್ಲಿ ಶನಿ ಸಾಡೇಸಾತಿಯ ಪ್ರಭಾವ ಕುಂಭ ರಾಶಿಯವರ ಮೇಲೆ ಹೇಗಿರಲಿದೆ
ಜ್ಯೋತಿಷಿ ಪಂಡಿತ ನರೇಂದ್ರ ಉಪಾಧ್ಯಾಯರು ಹೇಳುವ ಪ್ರಕಾರ, ಶನಿಯು ಕುಂಭ ರಾಶಿಯ ಅಧಿಪತಿ. ಶನಿ ಸಾಡೇಸಾತಿ ಪೀಡಿತರು ದೈಹಿಕ, ಆರ್ಥಿಕ ಮತ್ತು ಮಾನಸಿಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. 12 ನೇ ಮನೆಯಲ್ಲಿ ಶನಿಯ ಸ್ಥಾನ ಪಲ್ಲಟವಿದೆ. ಆಗ, ಕುಂಭ ರಾಶಿಯವರಿಗೆ ಶನಿ ಸಾಡೇಸಾತಿ ಪ್ರಭಾವ ಪ್ರತಿಕೂಲವಾಗಿರುತ್ತದೆ. ಆರ್ಥಿಕವಾಗಿ, ಹಣಕಾಸಿನ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ, 2025ರಲ್ಲಿ ಕುಂಭ ರಾಶಿಯವರ ಸ್ಥಿತಿ ಹದಗೆಡಲಿದೆ.ಇತರರಿಂದ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು ಇವೆ.
ಕುಂಭ ರಾಶಿಯವರಿಗೆ ಶನಿ ಸಾಡೇಸಾತಿಯಿಂದ ಮುಕ್ತಿ ಯಾವಾಗ
ಕುಂಭ ರಾಶಿಯಲ್ಲಿ ಶನಿಯ ಮೂರನೇ ಹಂತವು ಮಾರ್ಚ್ 2025 ರಲ್ಲಿ ಪ್ರಾರಂಭವಾಗುತ್ತದೆ. ಇದು 2027 ಜೂನ್ 3 ರ ವರೆಗೆ ಮುಂದುವರಿಯುತ್ತದೆ. 2027ರ ಜೂನ್ ತಿಂಗಳಿನಲ್ಲಿ ಕುಂಭ ರಾಶಿಯವರಿಗೆ ಶನಿ ಸಾಡೇಸಾತಿಯಿಂದ ಮುಕ್ತಿ ದೊರೆಯಲಿದೆ.
ಶನಿ ಸಾಡೇಸಾತಿ ಪ್ರಭಾವ ತಗ್ಗಿಸುವುದು ಹೇಗೆ
ಕುಂಭ ರಾಶಿಯವರು ಶನಿ ಸಾಡೇಸಾತಿಯ ಅಶುಭ ಪರಿಣಾಮಗಳನ್ನು ಕಡಿಮೆ ಮಾಡಲು ಶಿವ ಮತ್ತು ಹನುಮಂತನನ್ನು ಆರಾಧಿಸಬೇಕು. ಹನುಮಾನ್ ಚಾಲೀಸಾ ಪಠಣ ಮಾಡುವುದು ಹೆಚ್ಚು ಪ್ರಯೋಜನಕಾರಿ. ಶನಿವಾರದಂದು ಶನಿ ದೇವಸ್ಥಾನಕ್ಕೆ ಭೇಟಿ ನೀಡಿ. ಶನಿದೇವರಿಗೆ ಎಳ್ಳೆಣ್ಣೆಯನ್ನು ಅರ್ಪಿಸಿ. ಶನಿವಾರ ಉಪವಾಸ ಮಾಡಬೇಕು. ಅಶ್ವತ್ಥ ಮರದ ಬಳಿ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಬೇಕು. ಶನಿಯ ಆಶೀರ್ವಾದ ಪಡೆಯಲು ಕಪ್ಪು ಬಟ್ಟೆಗಳನ್ನು ದಾನ ಮಾಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಶನಿವಾರದಂದು ಸುಂದರಕಾಂಡ ಮತ್ತು ಹನುಮಾನ್ ಚಾಲೀಸಾ ಪಠಿಸುವುದು ಶುಭ. ಹಸುಗಳು, ಕಪ್ಪು ನಾಯಿಗಳು ಮತ್ತು ಕಾಗೆಗಳಿಗೆ ಆಹಾರವನ್ನು ನೀಡಬೇಕು. ಹೀಗೆ ಮಾಡುವುದರಿಂದ ಶನಿ ಸಾಡೇಸಾತಿಯ ದುಷ್ಪರಿಣಾಮಗಳು ದೂರವಾಗುತ್ತವೆ ಎಂಬುದು ನಂಬಿಕೆ.'
ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.