IAS Posting: ಐಎಎಸ್ ಅಧಿಕಾರಿ ವರ್ಗಾವಣೆ: ಕರ್ನಾಟಕ ಹೂಡಿಕೆ ವೇದಿಕೆ ಹೊಸ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ಸಿಇಒ
Karnataka IAS Posting: ಕರ್ನಾಟಕ ಸರ್ಕಾರವು ಹಿರಿಯ ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ಅವರನ್ನು ಹೊಸದಾಗಿ ಸೃಷ್ಟಿಸಿರುವ ಕರ್ನಾಟಕ ಹೂಡಿಕೆದಾರರ ವೇದಿಕೆ ಸಿಇಒ ಆಗಿ ನೇಮಿಸಿದೆ.
Karnataka IAS Posting: ಕರ್ನಾಟಕದಲ್ಲಿ ಮುಂದಿನ ವರ್ಷ 2025ರ ಫೆಬ್ರವರಿಯಲ್ಲಿ ಬೃಹತ್ ಮಟ್ಟಿದಲ್ಲಿ ನಡೆಸಲಾಗುತ್ತಿರುವ ಜಾಗತಿಕ ಕರ್ನಾಟಕ ಹೂಡಿಕೆದಾರರ ಸಮಾವೇಶಕ್ಕೆ ತಯಾರಿ ಜೋರಾಗಿಯೇ ನಡೆದಿದೆ. ಈಗಾಗಲೇ ಇದಕ್ಕಾಗಿ ದೇಶ ವಿದೇಶಗಳಿಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಇಲಾಖೆ ಸಚಿವ ಡಾ.ಎಂ.ಬಿ.ಪಾಟೀಲ ಅವರ ನೇತೃತ್ವದ ತಂಡ ಪ್ರವಾಸ ಕೈಗೊಂಡಿದೆ. ಹೂಡಿಕೆದಾರರನ್ನು ಕರ್ನಾಟಕಕ್ಕೆ ಆಕರ್ಷಿಸುತ್ತಿದೆ. ಈ ಜಾಗತಿಕ ಹೂಡಿಕೆಯನ್ನು ಕರ್ನಾಟಕಕ್ಕೆ ಆಕರ್ಷಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯಲ್ಲಿ ಹೊಸ ಹುದ್ದೆ ಸೃಷ್ಟಿಸಲಾಗಿದೆ. ಕರ್ನಾಟಕ ಹೂಡಿಕೆದಾರರ ವೇದಿಕೆ(Invest Karnataka forum)ಗೆ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಯನ್ನು ಸೃಷ್ಟಿಸಲಾಗಿದ್ದು,. ಹಿರಿಯ ಐಎಎಸ್ ಅಧಿಕಾರಿ ಗುಂಜನ್ ಕೃಷ್ಣ ಅವರನ್ನು ಸಿಇಒ ಆಗಿ ನಿಯೋಜನೆ ಮಾಡಲಾಗಿದೆ.
ಈಗಾಗಲೇ ಕರ್ನಾಟಕ ಕೈಗಾರಿಕಾ ಇಲಾಖೆ ಆಯುಕ್ತರು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸುತ್ತಿರುವ ಗುಂಜನ್ ಕೃಷ್ಣ ಅವರು ಈ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.
ಗುಂಜನ್ ಕೃಷ್ಣ ಅವರು 2004ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಉತ್ತರ ಭಾರತ ಮೂಲದವರು. ಎರಡು ದಶಕದಿಂದ ಕರ್ನಾಟಕದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಕೈಗಾರಿಕಾ ಇಲಾಖೆ ಆಯುಕ್ತರು ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ದೇಶಕರಾಗಿ ಬಹುತೇಕ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಹಿಂದಿನ ಸಮ್ಮಿಶ್ರ ಸರ್ಕಾರ, ನಂತರ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರದ ಒಂದೂವರೆ ವರ್ಷದ ಅವಧಿಯಲ್ಲೂ ಅವರೇ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೂಡಿಕೆ ದಾರರ ಸಮಾವೇಶಗಳನ್ನು ನಾನಾ ಭಾಗಗಳಲ್ಲಿ ನಡೆಸಲಾಗಿದ್ದು, ಮುಂದಿನ ವರ್ಷ ಸಮಾವೇಶ ನಡೆಯುತ್ತಿದೆ. ಇದಕ್ಕಾಗಿಯೇ ಕರ್ನಾಟಕ ಹೂಡಿಕೆದಾರರ ವೇದಿಕೆ(Invest Karnataka forum) ರಚಿಸಿ ಅದಕ್ಕೆ ಐಎಎಸ್ ಅಧಿಕಾರಿಯೊಬ್ಬರನ್ನು ಸಿಇಒ ಆಗಿ ನೇಮಿಸುವ ಪರಿಪಾಠ ಶುರು ಮಾಡಲಾಗಿದೆ. ಇದಕ್ಕೆ ಗುಂಜನ್ ಅವರನ್ನೇ ಹೆಚ್ಚುವರಿ ಪ್ರಭಾರದೊಂದಿಗೆ ನೇಮಿಸಲಾಗಿದೆ.