ಜೂನ್ 30 ರಿಂದ ಶನಿಯ ಹಿಮ್ಮುಖ ಚಲನೆ ಆರಂಭ; ಮೇಷ ಸೇರಿದಂತೆ ಈ 4 ರಾಶಿಯವರಿಗೆ ಹರಸಲಿದ್ದಾನೆ ಶನೈಶ್ಚರ
ಜೂನ್ 30 ಶನಿಯು ತನ್ನ ಸ್ವಂತ ರಾಶಿ ಕುಂಭದಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದು ಮೇಷ ಸೇರಿದಂತೆ 4 ರಾಶಿಯವರಿಗೆ ವಿವಿಧ ಪಲಗಳನ್ನು ನೀಡ ಆಶೀರ್ವದಿಸಲಿದ್ದಾನೆ. ಈ ರಾಶಿಯವರಿಗೆ ವೈಯಕ್ತಿಕ ವಿಚಾರ, ವೃತ್ತಿ ಜೀವನದಲ್ಲಿ ಕೆಲವೊಂದು ಬದಲಾವಣೆಗಳಾಗಲಿವೆ.
ಜ್ಯೋತಿಷ್ಯದಲ್ಲಿ ಶನಿದೇವನಿಗೆ ವಿಶೇಷ ಸ್ಥಾನವಿದೆ. ಜೂನ್ 30 ರಿಂದ ಶನಿಯ ಹಿಮ್ಮುಖ ಚಲನೆ ಆರಂಭವಾಗಲಿದೆ. ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಿದಾಗ ಕೆಲವು ರಾಶಿಚಕ್ರ ಚಿಹ್ನೆಗಳ ಜನರು ತಮ್ಮ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಆದರೆ ಕೆಲವರ ಅದೃಷ್ಟ ಹೆಚ್ಚಾಗುತ್ತದೆ.
ಶನಿದೇವನು ಜಾತಕದಲ್ಲಿ ಅಶುಭನಾಗಿದ್ದರೆ, ವ್ಯಕ್ತಿಯು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಅದು ಶುಭವಾಗಿದ್ದರೆ, ವ್ಯಕ್ತಿಯು ಅದೃಷ್ಟವನ್ನು ಪಡೆಯುತ್ತಾನೆ. ಬಡವನನ್ನೂ ರಾಜನನ್ನಾಗಿ ಮಾಡಬಲ್ಲ. ಶ್ರೀಮಂತನನ್ನು ನಿರ್ಗತಿಕರನ್ನಾಗಿ ಮಾಡಬಲ್ಲ ಶಕ್ತಿ ಶನಿಗೆ ಇದೆ. ಶನಿಯ ಹಿಮ್ಮುಖ ಚಲನೆಯಿಂದ ಯಾವ ರಾಶಿಚಕ್ರದವರಿಗೆ ಅದೃಷ್ಟ ಸುಧಾರಿಸುತ್ತದೆ ನೋಡೋಣ.
ಮೇಷ ರಾಶಿ
ಕೆಲಸದಲ್ಲಿ ಉತ್ಸಾಹ ಇರುತ್ತದೆ. ಧಾರ್ಮಿಕ ಚಟುವಟಿಕೆಗಳತ್ತ ಒಲವು ಹೆಚ್ಚಾಗುವುದು. ನಿಮ್ಮ ತಾಯಿಯಿಂದ ಬೆಂಬಲ ಪಡೆಯುತ್ತೀರಿ. ತಾಯಿ ನಿಮಗೆ ಹಣದ ಸಹಾಯ ಮಾಡಲಿದ್ದಾರೆ. ಸ್ನೇಹಿತರೊಬ್ಬರು ನಿಮ್ಮನ್ನು ಭೇಟಿ ಮಾಡಲಿದ್ದಾರೆ. ಬೌದ್ಧಿಕ ಕೆಲಸದಿಂದ ಸಮೃದ್ಧಿ ಇರುತ್ತದೆ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ. ನಿಮ್ಮ ಕುಟುಂಬದೊಂದಿಗೆ ಯಾವುದಾದರೂ ಧಾರ್ಮಿಕ ಸ್ಥಳಕ್ಕೆ ಪ್ರವಾಸಕ್ಕೆ ಹೋಗಬಹುದು.
ಮಿಥುನ ರಾಶಿ
ವ್ಯಾಪಾರವನ್ನು ವಿಸ್ತರಿಸುವ ಯೋಜನೆಗಳು ನಿಜವಾಗುತ್ತವೆ. ನೀವು ಸಹೋದರರಿಂದ ಬೆಂಬಲ ಪಡೆಯುತ್ತೀರಿ. ಕುಟುಂಬದಲ್ಲಿ ಶುಭ ಕಾರ್ಯ ನಡೆಯಲಿವೆ. ಹೊಸ ವಸ್ತ್ರಗಳಿಗೆ ಹಣ ಖರ್ಚು ಮಾಡಲಿದ್ದೀರಿ. ಉದ್ಯೋಗ ಬದಲಾವಣೆಯೊಂದಿಗೆ, ನೀವು ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಆಮದು-ರಫ್ತು ವ್ಯವಹಾರದಲ್ಲಿ ಲಾಭದ ಅವಕಾಶಗಳಿವೆ. ಹೊಸ ವಾಹನ ಕೊಳ್ಳಲಿದ್ದೀರಿ.
ಸಿಂಹ ರಾಶಿ
ಶನಿಯ ಹಿಮ್ಮೆಟುವಿಕೆಯಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಕುಟುಂಬದ ಸೌಕರ್ಯ ವಿಸ್ತರಿಸುತ್ತವೆ. ಲಾಭದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ನಿಮ್ಮ ಕೆಲಸದಲ್ಲಿ ನೀವು ಅಧಿಕಾರಿಗಳಿಂದ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು. ಕೆಲಸದ ಸ್ಥಳದಲ್ಲಿ ಬದಲಾವಣೆ ಉಂಟಾಗಲಿದೆ. ಸಾಕಷ್ಟು ಕಠಿಣ ಪರಿಶ್ರಮ ಇರುತ್ತದೆ. ನೀವು ತಾಯಿಯ ಸಹಕಾರ ಬೆಂಬಲವನ್ನು ಪಡೆಯುತ್ತೀರಿ.
ಧನು ರಾಶಿ
ಮನಸ್ಸಿನಲ್ಲಿ ಸಂತೋಷದ ಭಾವನೆಗಳಿರುತ್ತವೆ, ಆದರೂ ನಿಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಡಬೇಕು. ಕೆಲಸಕ್ಕಾಗಿ ನೀವು ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಆದಾಯ ಹೆಚ್ಚಲಿದೆ. ಅಧಿಕಾರಿಗಳು ಹಾಗೂ ಕುಟುಂಬದವರ ಬೆಂಬಲ ಪಡೆಯುತ್ತೀರಿ. ವಸ್ತ್ರಗಳನ್ನು ಕೊಳ್ಳಲು ಹೆಚ್ಚಿನ ಹಣ ಖರ್ಚಾಗಬಹುದು.
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.