ಗ್ರಹಗಳಿಂದ ಆಳಲ್ಪಡುವ ಕೈ ಬೆರಳುಗಳು; ಪವಿತ್ರ ಬೆರಳು ಅಂದರೆ ಯಾವುದು? ಹೆಬ್ಬೆರಳಿನ ಮುಖಾಂತರ ಎಳ್ಳು, ನೀರು ಬಿಡುವುದೇಕೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗ್ರಹಗಳಿಂದ ಆಳಲ್ಪಡುವ ಕೈ ಬೆರಳುಗಳು; ಪವಿತ್ರ ಬೆರಳು ಅಂದರೆ ಯಾವುದು? ಹೆಬ್ಬೆರಳಿನ ಮುಖಾಂತರ ಎಳ್ಳು, ನೀರು ಬಿಡುವುದೇಕೆ?

ಗ್ರಹಗಳಿಂದ ಆಳಲ್ಪಡುವ ಕೈ ಬೆರಳುಗಳು; ಪವಿತ್ರ ಬೆರಳು ಅಂದರೆ ಯಾವುದು? ಹೆಬ್ಬೆರಳಿನ ಮುಖಾಂತರ ಎಳ್ಳು, ನೀರು ಬಿಡುವುದೇಕೆ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೈ ಬೆರಳುಗಳು ಪ್ರತ್ಯೇಕವಾದ ಗ್ರಹಗಳಿಂದ ಸೂಚಿಸಲ್ಪಡುತ್ತದೆ. ಪ್ರತಿಯೊಂದು ಬೆರಳುಗಳು ಒಂದೊಂದು ಗ್ರಹದ ಪ್ರಭಾವಕ್ಕೆ ಒಳಗಾಗುತ್ತದೆ. ಎಳ್ಳು ನೀರು ಬಿಡುವಾಗ ಹೆಬ್ಬೆರಳು ಬಳಸುವುದೇಕೆ? ಪವಿತ್ರ ಬೆರಳು ಎಂದರೇನು? ಇಲ್ಲಿದೆ ಮಾಹಿತಿ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಗ್ರಹಗಳಿಂದ ಆಳಲ್ಪಡುವ ಕೈ ಬೆರಳುಗಳು; ಪವಿತ್ರ ಬೆರಳು ಅಂದರೆ ಯಾವುದು? ಹೆಬ್ಬೆರಳಿನ ಮುಖಾಂತರ ಎಳ್ಳು, ನೀರು ಬಿಡುವುದೇಕೆ?
ಗ್ರಹಗಳಿಂದ ಆಳಲ್ಪಡುವ ಕೈ ಬೆರಳುಗಳು; ಪವಿತ್ರ ಬೆರಳು ಅಂದರೆ ಯಾವುದು? ಹೆಬ್ಬೆರಳಿನ ಮುಖಾಂತರ ಎಳ್ಳು, ನೀರು ಬಿಡುವುದೇಕೆ? (PC: Unsplash)

ತೋರು ಬೆರಳನ್ನು ಗುರುವಿನ ಬೆರಳು ಎಂದು ಕರೆಯುತ್ತೇವೆ. ನಾವು ಬೇರೆಯವರಿಗೆ ಯಾವುದೇ ನಿರ್ದೇಶನ ನೀಡಬೇಕೆಂದರೂ ಸಾಮಾನ್ಯವಾಗಿ ನಮ್ಮ ತೋರು ಬೆರಳನ್ನು ಉಪಯೋಗಿಸುತ್ತೇವೆ. ಗುರುವು ಬುದ್ಧಿ ಶಕ್ತಿಗೆ ಸಂಬಂಧಿಸಿದ ಗ್ರಹ. ಆದ್ದರಿಂದ ಈ ಬೆರಳು ಚೆನ್ನಾಗಿದ್ದಲ್ಲಿ ಆ ವ್ಯಕ್ತಿಯು ಬುದ್ಧಿವಂತರಾಗಿರುತ್ತಾರೆ. ಹಣದ ತೊಂದರೆ ಬರುವುದಿಲ್ಲ.

ಶನಿಗೆ ಸಂಬಂಧಿಸಿದ ಮಧ್ಯದ ಬೆರಳು

ಮಧ್ಯದ ಬೆರಳನ್ನು ಶನಿಯ ಬೆರಳು ಎಂದು ಕರೆಯುತ್ತೇವೆ. ನಾವು ಯಾವುದೇ ಕೆಲಸ ಮಾಡಬೇಕೆಂದರೂ ಮಧ್ಯದ ಬೆರಳು ಅತಿ ಮುಖ್ಯವಾಗುತ್ತದೆ. ಕನಿಷ್ಠ ಪಕ್ಷ ಯಾವುದೇ ವಸ್ತುವನ್ನು ಕೈಯಲ್ಲಿ ಹಿಡಿಯಬೇಕೆಂದರೂ ಉಳಿದ ಬೆರಳುಗಳಿಗೆ ಮಧ್ಯದ ಬೆರಳಿನ ಆಸರೆ ಬೇಕಾಗುತ್ತದೆ. ಹಾಗೆಯೇ ಎಷ್ಟೇ ಹಣವಿದ್ದರೂ ಪ್ರತಿಯೊಬ್ಬರೂ ಅವರಿಗಾಗಿ ಕೆಲಸ ಮಾಡುವ ಕಾರ್ಮಿಕರನ್ನು ಅವಲಂಬಿಸಿರುತ್ತಾರೆ. ಶನಿ ಗ್ರಹವು ಕಷ್ಟಪಟ್ಟು ಕೆಲಸ ಮಾಡುವ ಜನರನ್ನು ಸೂಚಿಸುತ್ತದೆ. ಆದ್ದರಿಂದ ಮಧ್ಯದ ಬೆರಳು ಶನಿಯ ಪ್ರಭಾವವನ್ನು ಅವಲಂಬಿಸುತ್ತದೆ.

ಮಧ್ಯದ ಬೆರಳು ಮತ್ತು ಕೊನೆಯ ಬೆರಳಿನ ನಡುವೆ ಇರುವ ಬೆರಳನ್ನು ಉಂಗುರದ ಬೆರಳು ಎಂದು ಕರೆಯುತ್ತೇವೆ. ಈ ಬೆರಳಿಗೆ ಪವಿತ್ರ ಬೆರಳು ಎಂಬ ಹೆಸರು ಇದೆ. ಕೆಲವು ವರ್ಗದ ಜನ ಶ್ರಾದ್ದ ಕರ್ಮಗಳನ್ನು ಮಾಡುವ ವೇಳೆ ಧರ್ಬೆಯಿಂದ ಮಾಡಿರುವ ಪವಿತ್ರವನ್ನು ಈ ಬೆರಳಲ್ಲಿ ಧರಿಸುತ್ತಾರೆ. ಶ್ರಾದ್ಧ ಕರ್ಮಗಳನ್ನು ನಿಧನರಾದ ಕುಟುಂಬದ ಜನರಿಗಾಗಿ ಮಾಡುತ್ತೇವೆ. ಈ ಕಾರಣದಿಂದ ಈ ಬೆರಳು ರವಿಯ ಪ್ರಭಾವಕ್ಕೆ ಒಳಗಾಗುತ್ತದೆ. ರವಿಯು ಜ್ಯೋತಿಷ್ಯದಲ್ಲಿ ತಂದೆಯನ್ನು ಸೂಚಿಸುತ್ತಾನೆ. ಆದ್ದರಿಂದ ಈ ಬೆರಳು ರವಿಗ್ರಹದ ಪ್ರಭಾವಕ್ಕೆ ಒಳಪಡುತ್ತದೆ. ಈ ಕಾರಣದಿಂದಾಗಿ ಬಂಗಾರ, ಬೆಳ್ಳಿ ಅಥವಾ ಯಾವುದೇ ಲೋಹದ ಉಂಗುರವನ್ನು ಈ ಬೆರಳಿನಲ್ಲಿ ಧರಿಸುತ್ತಾರೆ. ಅದರಲ್ಲಿಯೂ ಮುಖ್ಯವಾಗಿ ತಾಮ್ರ, ಪಂಚಲೋಹ ಅಥವ ಬೆಳ್ಳಿ ಉಂಗುರವನ್ನು ಈ ಬೆರಳಲ್ಲಿ ಧರಿಸುವುದು ಶ್ರೇಯಸ್ಕರ.

ಜನ್ಮ ಲಗ್ನವನ್ನು ತಿಳಿಸುವ ಹೆಬ್ಬೆರಳು

5 ಬೆರಳುಗಳಲ್ಲಿ ಕೊನೆಯ ಬೆರಳನ್ನು ಕಿರುಬೆರಳು ಎಂದು ಕರೆಯುತ್ತೇವೆ. ಸಾಮಾನ್ಯವಾಗಿ ಈ ಬೆರಳು ಅವಶ್ಯಕತೆಗಳಿಗೆ ತಕ್ಕಂತೆ ಸಹಾಯ ಮಾಡುತ್ತದೆ. ಜ್ಯೋತಿಷ್ಯದಲ್ಲಿ ಬುಧಗ್ರಹನಿಗೆ ತನ್ನದೇ ಆದ ಗುಣಲಕ್ಷಣಗಳು ಇದ್ದರೂ ಬುಧನು ತನ್ನ ಜೊತೆ ಇರುವ ಬೇರೆ ಗ್ರಹಗಳನ್ನು ಆಧರಿಸಿ ಫಲಗಳನ್ನು ನೀಡುತ್ತಾನೆ. ಕಿರು ಬೆರಳು ಸಹ ಸ್ವತಂತ್ರವಾಗಿ ಯಾವುದೇ ಕೆಲಸವನ್ನು ಮಾಡಲು ಅಸಮರ್ಥವಾಗುತ್ತದೆ. ಆದರೆ ಉಳಿದ ಬೆರಳುಗಳ ಜೊತೆಯಲ್ಲಿ ಒಳ್ಳೆಯ ಶಕ್ತಿಯನ್ನು ಪಡೆಯುತ್ತದೆ.

ಹೆಬ್ಬೆಟ್ಟು ಯಾವುದೇ ಗ್ರಹವನ್ನು ಸೂಚಿಸುವುದಿಲ್ಲ ಆದರೆ ನಾಡಿ ಜ್ಯೋತಿಷ್ಯದ ಅನ್ವಯ ಜನ್ಮ ಕುಂಡಲಿ ಇಲ್ಲದೇ ಹೋದರೂ ಹೆಬ್ಬೆಟ್ಟಿನ ಸಹಾಯದಿಂದ ನಮ್ಮ ಜನ್ಮ ಲಗ್ನವನ್ನು ತಿಳಿಯಬಹುದು. ಅಂದರೆ ಹೆಬ್ಬೆಟ್ಟಿನ ಮೇಲೆ ಲಗ್ನಾಧಿಪತಿಯ ಪ್ರಭಾವವು ಇರುತ್ತದೆ. ಈ ಕಾರಣದಿಂದಲೇ ಪ್ರತಿಯೊಂದು ಬೆರಳಿಗೂ ಹೆಬ್ಬೆಟ್ಟು ಆಧಾರವಾಗಿ ನಿಲ್ಲುತ್ತದೆ. ಸಾಮಾನ್ಯವಾಗಿ ಎಲ್ಲಾ ಐದು ಬೆರಳುಗಳಲ್ಲಿ ಹೆಬ್ಬೆಟ್ಟಿಗೆ ವಿಶೇಷ ಶಕ್ತಿ ಇರುತ್ತದೆ. ಕೆಲವು ಜ್ಯೋತಿಷ್ಯ ಗ್ರಂಥ ಮತ್ತು ಧಾರ್ಮಿಕ ಗ್ರಂಥಗಳ ಪ್ರಕಾರ ನಮ್ಮ ಹೆಬ್ಬೆಟ್ಟಿನ ಮೇಲೆ ನಮ್ಮ ಕುಲದ ಹಿರಿಯರ ಪ್ರಭಾವವು ಇರುತ್ತದೆ ಎಂದು ಹೇಳಲಾಗಿದೆ. ಇದೇ ಕಾರಣದಿಂದ ತರ್ಪಣ ಬಿಡುವ ವೇಳೆ ಎಳ್ಳು ಮತ್ತು ನೀರನ್ನು ಹೆಬ್ಬೆಟ್ಟಿನ ಮುಖಾಂತರ ಬಿಡುತ್ತಾರೆ. ಇಷ್ಟು ಮಾತ್ರವಲ್ಲ ನಮ್ಮ ಬೆರಳುಗಳ ಬಣ್ಣ ನಮ್ಮ ಗುಣಗಳನ್ನು ಸೂಚಿಸುತ್ತದೆ. ಹಾಗೆಯೇ ಬೆರಳುಗಳ ತುದಿಯಲ್ಲಿ ಶಂಖು, ಚಕ್ರ ಮುಂತಾದಹ ಗುರುತುಗಳು ಇರುತ್ತವೆ. ಬೆರಳಿನಲ್ಲಿರುವ ಚುಕ್ಕೆಗಳು ಸಹ ನಮ್ಮ ಗುಣ ಧರ್ಮಗಳನ್ನು ಸೂಚಿಸುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.