Bhagavad Gita: ಅಧ್ಯಾತ್ಮದಲ್ಲಿ ಇರುವವರೊಂದಿಗೆ ಭಗವಂತ ಸದಾ ಇರುತ್ತಾನೆ; ಭಗವದ್ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಅಧ್ಯಾತ್ಮದಲ್ಲಿ ಇರುವವರೊಂದಿಗೆ ಭಗವಂತ ಸದಾ ಇರುತ್ತಾನೆ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಅಧ್ಯಾತ್ಮದಲ್ಲಿ ಇರುವವರೊಂದಿಗೆ ಭಗವಂತ ಸದಾ ಇರುತ್ತಾನೆ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಐಹಿಕ ಶಕ್ತಿಯಿಂದ ವ್ಯಕ್ತಿ ಎಲ್ಲಿಯವರೆಗೆ ಬಂಧಿತನಾಗಿರುವನೋ ಅಲ್ಲಿಯವರೆಗೆ ಪರಮಾತ್ಮನಾದ ಪರಮ ಪ್ರಭುವು ಅವನೊಡನೆ ಇರುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 23 ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - ಶ್ಲೋಕ - 23

ಉಪದ್ರಷ್ಟಾನುಮನ್ತಾ ಚ ಭರ್ತಾ ಭೋಕ್ತಾ ಮಹೇಶ್ವರಃ |

ಪರಮಾತ್ಮೇತಿ ಚಾಪ್ಯುಕ್ತೋ ದೇಹೇಸ್ಮಿನ್ ಪುರುಷಃ ಪರಃ ||23||

ಅನುವಾದ: ಆದರೂ ಈ ದೇಹದಲ್ಲಿ ಇನ್ನೊಬ್ಬನಿದ್ದಾನೆ, ಅವನು ದಿವ್ಯಾನುಭವಿ, ಅವನು ಪ್ರಭು ಮತ್ತು ಪರಮ ಸ್ವಾಮಿ. ಅವನು ಮೇಲ್ವಿಚಾರಕನಾಗಿ ಮತ್ತು ಅಪ್ಪಣೆ ಕೊಡುವವನಾಗಿ ಇರುತ್ತಾನೆ. ಅವನಿಗೆ ಪರಮಾತ್ಮನೆಂದು ಹೆಸರು.

ಭಾವಾರ್ಥ: ಯಾವಾಗಲೂ ಜೀವಾತ್ಮನೊಂದಿಗೆ ಇರುವ ಪರಮಾತ್ಮನು ಪರಮ ಪ್ರಭುವಿನ ಪ್ರತಿನಿಧಿ ಎಂದು ಇಲ್ಲಿ ಹೇಳಿದೆ. ಅವನು ಸಾಮಾನ್ಯ ಜೀವಿಯಲ್ಲ. ಅದ್ವೈತ ತತ್ವಶಾಸ್ತ್ರಜ್ಞರು ಕ್ಷೇತ್ರಜ್ಞನು ಒಬ್ಬನೇ ಎಂದು ಭಾವಿಸುವುದರಿಂದ ಪರಮಾತ್ಮನಿಗೂ ಜೀವಾತ್ಮನಿಗೂ ವ್ಯತ್ಯಾಸವಿಲ್ಲ ಎಂದು ಪರಿಗಣಿಸುತ್ತಾರೆ. ಇದನ್ನು ಸ್ಪಷ್ಟಮಾಡಲು ಪ್ರಭುವು ಪರಮಾತ್ಮನಾಗಿ ಎಲ್ಲ ದೇಹಗಳಲ್ಲಿ ತನ್ನ ಪ್ರಾತಿನಿಧ್ಯವಿದೆ ಎಂದು ಹೇಳುತ್ತಾನೆ. ಆತನು ಪರ ಎಂದರೆ ದಿವ್ಯನು. ವ್ಯಕ್ತಿಗತ ಆತ್ಮವು ಒಂದು ವಿಶಿಷ್ಟ ಕ್ಷೇತ್ರದ ಚಟುವಟಿಕೆಗಳನ್ನು ಅನುಭವಿಸುತ್ತದೆ. ಆದರೆ ಪರಮಾತ್ಮನು ಮಿತಿಗಳಿರುವ ಭೋಕ್ತೃವಾಗಿಯಾಗಲಿ, ದೇಹದ ಚಟುವಟಿಕೆಗಳಲ್ಲಿ ಭಾಗವಹಿಸುವವನಾಗಿ ಆಗಲಿ ಅಲ್ಲಿರುವುದಿಲ್ಲ.

ಸಾಕ್ಷಿಯಾಗಿ, ಮೇಲ್ವಿಚಾರಕನಾಗಿ, ಅಪ್ಪಣೆ ಕೊಡುವವನಾಗಿ ಪರಮ ಭೋಕ್ತೃವಾಗಿ ಇರುತ್ತಾನೆ. ಅವನ ಹೆಸರು ಪರಮಾತ್ಮ. ಆತ್ಮನೆಂದಲ್ಲ. ಅವನು ದಿವ್ಯನು. ಆತ್ಮ, ಪರಮಾತ್ಮ ಬೇರೆ ಬೇರೆ ಎನ್ನುವುದು ಸುಸ್ಪಷ್ಟ. ಪರಮಾತ್ಮನಿಗೆ ಎಲ್ಲೆಲ್ಲೊ ಕಾಲುಗಳಿವೆ, ಕೈಗಳಿವೆ. ಆದರೆ ಜೀವಾತ್ಮನಿಗೆ ಹೀಗಿಲ್ಲ. ಪರಮಾತ್ಮನು ಪರಮ ಪ್ರಭುವಾದದ್ದರಿಂದ ಜೀವಾತ್ಮನಿಗಿರುವ ಐಹಿಕ ಭೋಗದ ಬಯಕೆಗೆ ಅನುಮತಿ ನೀಡಲು ಒಳಗಿದ್ದಾನೆ. ಪರಮಾತ್ಮನ ಅನುಮತಿ ಇಲ್ಲದೆ ಜೀವಾತ್ಮನು ಏನನ್ನೂ ಮಾಡುವಂತಿಲ್ಲ. ವ್ಯಕ್ತಿಯು ಭುಕ್ತ ಎಂದರೆ ಪಾಲಿತನಾದವನು. ಪರಮಾತ್ಮನು ಭೋಕ್ತಾ ಎಂದರೆ ಪಾಲಕನು. ಜೀವಿಗಳ ಸಂಖ್ಯೆಗೆ ಮಿತಿ ಇಲ್ಲ. ಅವನು ಅವರಲ್ಲಿ ಮಿತ್ರನಾಗಿ ಇದ್ದಾನೆ.

ವಾಸ್ತವಾಂಶವೆಂದರೆ ಪ್ರತಿಯೊಂದು ಜೀವಿಯೂ ನಿರಂತರವಾಗಿ ಪರಮ ಪ್ರಭುವಿನ ವಿಭಿನ್ನಾಂಶ. ಅವರಿಬ್ಬರದು ಆತ್ಮೀಯ ಸ್ನೇಹಿತರ ಸಂಬಂಧ. ಆದರೆ ಜೀವಾತ್ಮನಿಗೆ ಒಂದು ಪ್ರವೃತ್ತಿಯುಂಟು. ಅವನು ಪರಮ ಪ್ರಭುವಿನ ಒಪ್ಪಿಗೆಯನ್ನು ಕಡೆಗಣಿಸಿ, ಪ್ರಕೃತಿಯ ಮೇಲೆ ಯಜಮಾನಿಕೆ ನಡೆಸುವುದಕ್ಕಾಗಿ ಸ್ವತಂತ್ರವಾಗಿ ಕಾರ್ಯಪ್ರವೃತ್ತನಾಗುತ್ತಾನೆ. ಈ ಪ್ರವೃತ್ತಿ ಇರುವುದರಿಂದ ಅವನನ್ನು ಪರಮ ಪ್ರಭುವಿನ ಅಲ್ಪಪ್ರಮಾಣದ ಶಕ್ತಿ ಎಂದು ಕರೆಯಲಾಗಿದೆ. ಈ ಪ್ರವೃತ್ತಿ ಇರುವುದರಿಂದ ಅವನನ್ನು ಪರಮ ಪ್ರಭುವಿನ ಅಲ್ಪಪ್ರಮಾಣದ ಶಕ್ತಿ ಎಂದು ಕರೆಯಲಾಗಿದೆ.

ಈ ಜೀವಿಯು ಐಹಿಕ ಶಕ್ತಿಯಲ್ಲಾಗಲಿ, ಅಧ್ಯಾತ್ಮಿಕ ಶಕ್ತಿಯಲ್ಲಾಗಲಿ ನೆಲೆಸಿರಬಹುದು. ಐಹಿಕ ಶಕ್ತಿಯಿಂದ ಅವನು ಎಲ್ಲಿಯವರೆಗೆ ಬಂಧಿತನಾಗಿರುವನೋ ಅಲ್ಲಿಯವರೆಗೆ ಪರಮಾತ್ಮನಾದ ಪರಮ ಪ್ರಭುವು ಅವನೊಡನೆ ಇರುತ್ತಾನೆ. ಜೀವಿಯು ಅಧ್ಯಾತ್ಮಿಕ ಶಕ್ತಿಗೆ ಹಿಂದಿರುಗುವಂತೆ ಮಾಡುವುದೇ ಅವನ ಉದ್ದೇಶ. ಅವನನ್ನು ಮತ್ತೆ ಅಧ್ಯಾತ್ಮಿಕ ಶಕ್ತಿಗೆ ಕರೆದೊಯ್ಯಲು ಪ್ರಭು ಸದಾ ಕಾತರನಾಗಿರುತ್ತಾನೆ. ಆದರೆ ಅವನ ಅತ್ಯಲ್ಪ ಸ್ವಾತಂತ್ರ್ಯದಿಂದಾಗಿ ಜೀವಿಯು ಅಧ್ಯಾತ್ಮಿಕ ಬೆಳಕಿನ ಸಹಯೋಗವನ್ನು ಸದಾ ತಿರಸ್ಕರಿಸುತ್ತಾನೆ. ಸ್ವಾತಂತ್ರ್ಯದಿಂದಾಗಿ ಜೀವಿಯು ಅಧ್ಯಾತ್ಮಿಕ ಬೆಳಕಿನ ಸಹಯೋಗವನ್ನು ಸದಾ ತಿರಸ್ಕರಿಸುತ್ತಾನೆ.

ಸ್ವಾತಂತ್ರ್ಯದ ಈ ದುರುಪಯೋಗವು ಬದ್ಧ ಪ್ರಕೃತಿಯಲ್ಲಿ ಅವನ ಐಹಿಕ ಘರ್ಷಣೆಗೆ ಕಾರಣ. ಆದುದರಿಂದ ಪ್ರಭುವು ಸದಾ ಅಂತರಂಗದಿಂದ, ಹೊರಗಿನಿಂದ ಮಾರ್ಗದರ್ಶನವನ್ನು ಮಾಡುತ್ತಲೇ ಇರುತ್ತಾನೆ. ಭಗವದ್ಗೀತೆಯಲ್ಲಿ ಹೇಳಿರುವಂತೆ ಅವನು ಹೊರಗಿನಿಂದ ಮಾರ್ಗದರ್ಶನವನ್ನು ಮಾಡುತ್ತಾನೆ. ಒಳಗಿನಿಂದ ಅವನು ಐಹಿಕ ಕ್ಷೇತ್ರದಲ್ಲಿ ಜೀವಿಯ ಕಾರ್ಯ ರೀತಿಯು ನಿಜವಾದ ಸುಖದ ಹಾದಿಯಲ್ಲ ಎಂದು ಜೀವಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಾನೆ. ಇದನ್ನು ಬಿಟ್ಟು ಬಿಡು. ನಿನ್ನ ನಂಬಿಕೆಯನ್ನು ನನ್ನೆಡೆಗೆ ತಿರುಗಿಸು. ಆಗ ನೀನು ಸುಖವಾಗಿರುವೆ. ಎಂದು ಅವನು ಹೇಳುತ್ತಾನೆ. ಹೀಗೆ ವಿವೇಕಿಯು ಪರಮಾತ್ಮನಲ್ಲಿ ಅಥವಾ ದೇವೋತ್ತಮ ಪರಮ ಪುರುಷನಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾನೆ. ಇದರಿಂದ ಅವನು ನಿತ್ಯ ಜ್ಞಾನನಂದದ ಬದುಕಿನತ್ತ ನಡೆಯಲು ಪ್ರಾರಂಭಿಸುತ್ತಾನೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.