Bhagavad Gita: ಪ್ರಭುವಿನ ಪರಿಶುದ್ಧ ಭಕ್ತರು ಮಾತ್ರ ಈ 3 ಅಂಶಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲರು; ಭಗವದ್ಗೀತೆಯ ಸಾರಾಂಶ ಹೀಗಿದೆ-spiritual bhagavad gita updesh lord krishna pure devotee can understand 3 points bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪ್ರಭುವಿನ ಪರಿಶುದ್ಧ ಭಕ್ತರು ಮಾತ್ರ ಈ 3 ಅಂಶಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲರು; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಪ್ರಭುವಿನ ಪರಿಶುದ್ಧ ಭಕ್ತರು ಮಾತ್ರ ಈ 3 ಅಂಶಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲರು; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಪ್ರಭುವಿನ ಪರಿಶುದ್ಧ ಭಕ್ತರು ಮಾತ್ರ ಈ 3 ಅಂಶಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲರು ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 19ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ

ಇತಿ ಕ್ಷೇತ್ರಂ ತಥಾ ಜ್ಞಾನಂ ಜ್ಞೇಯಂ ಚೋಕ್ತಂ ಸಮಾಸತಃ |

ಮದ್ಭಕ್ತ ಏತದ್ವಿಜ್ಞಾಯ ಮದ್ಭಾವಾಯೋಪಪದ್ಯತೇ ||19||

ಅನುವಾದ: ಹೀಗೆ ನಾನು ಕ್ಷೇತ್ರ (ದೇಹ), ಜ್ಞಾನ ಮತ್ತು ಜ್ಞಾನಕ್ಕೆ ನಿಲುಕುವುದು ಎಂದರೆ ಜ್ಞೇಯ - ಇವನ್ನು ಸಂಗ್ರಹವಾಗಿ ಹೇಳಿದ್ದಾಯಿತು. ನನ್ನ ಭಕ್ತರು ಮಾತ್ರ ಇದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡು ನನ್ನ ಸ್ವಭಾವವನ್ನು ಪಡೆಯುತ್ತಾರೆ.

ಭಾವಾರ್ಥ: ಪ್ರಭುವು ದೇಹ, ಜ್ಞಾನ ಮತ್ತು ಜ್ಞೇಯಗಳನ್ನು ಸಂಕ್ಷೇಪವಾಗಿ ವರ್ಣಿಸಿದ್ದಾನೆ. ಈ ಜ್ಞಾನವು ಮೂರು ವಸ್ತುಗಳನ್ನು ಕುರಿತದ್ದು - ಕ್ಷೇತ್ರಜ್ಞ, ಜ್ಞೇಯ ಮತ್ತು ಜ್ಞಾನದ ಪ್ರಕ್ರಿಯೆ. ಮೂರನ್ನು ಸೇರಿಸಿ ವಿಜ್ಞಾನ ಎಂದು ಕರೆಯುತ್ತಾರೆ. ಭಗವಂತನ ಪರಿಶುದ್ಧ ಭಕ್ತರು ಪರಿಪೂರ್ಣ ಜ್ಞಾನವನ್ನು ನೇರವಾಗಿ ತಿಳಿಯಬಲ್ಲರು. ಇತರರಿಗೆ ತಿಳಿಯಲು ಸಾಧ್ಯವಾಗವುದಿಲ್ಲ. ಕಟ್ಟಕಡೆಯ ಹಂತದಲ್ಲಿ ಈ ಮೂರೂ ಒಂದೇ ಆಗುತ್ತವೆ ಎಂದು ಅದ್ವೈತಿಗಳು ಹೇಳುತ್ತಾರೆ (Bhagavad Gita Updesh in Kannada).

ಆದರೆ ಭಕ್ತರು ಇದನ್ನು ಒಪ್ಪುವುದಿಲ್ಲ. ಜ್ಞಾನ ಮತ್ತು ಜ್ಞಾನದಲ್ಲಿ ಬೆಳವಣಿಗೆ ಎಂದರೆ ಕೃಷ್ಣಪ್ರಜ್ಞೆಯಲ್ಲಿ ತನ್ನನ್ನು ಕೃಷ್ಣನ ಕೆಲಸ ಕಾರ್ಯಗಳಿಗೆ ವರ್ಗಾಯಿಸಿ ಕೃಷ್ಣನೇ ಸರ್ವಸ್ವ ಎಂದು ಅರ್ಥಮಾಡಿಕೊಳ್ಳುತ್ತಲೇ ನಾವು ನಿಜವಾದ ಜ್ಞಾನವನ್ನು ಸಾಧಿಸುತ್ತೇವೆ. ಜ್ಞಾನವೆಂದರೆ ಭಕ್ತಿಸೇವೆಯ ಪೂರ್ವಭಾವಿ ಅರಿವು ಮಾತ್ರವಲ್ಲದೆ ಬೇರೇನೂ ಅಲ್ಲ. ಹದಿನೈದನೆಯ ಅಧ್ಯಾಯದಲ್ಲಿ ಇದನ್ನು ಇದನ್ನು ಬಹು ಸ್ಪಷ್ಟವಾಗಿ ವಿವರಿಸಲಾಗುವುದು.

ಸಂಗ್ರಹವಾಗಿ ಹೇಳುವುದಾದರೆ, ಮಹಾಭೂತಾನಿಯಿಂದ ಪ್ರಾರಂಭವಾಗಿ ಚೇತನಾ ಧೃತಿಃ ಎನ್ನುವವರೆಗೆ ಆರು ಮತ್ತು ಏಳನೆಯ ಶ್ಲೋಕಗಳು ಐಹಿಕ ಮೂಲ ಘಟಕಗಳನ್ನು, ಬದುಕಿನ ಲಕ್ಷಣಗಳ ಕೆಲವು ಅಭಿವ್ಯಕ್ತಿಯನ್ನು ವಿಶ್ಲೇಷಣೆ ಮಾಡುತ್ತವೆ ಎಂದು ಅರ್ಥಮಾಡಿಕೊಳ್ಳಬಹುದು. ಇವು ಒಂದುಗೂಡಿ ದೇಹ ಅಥವಾ ಕ್ಷೇತ್ರ ಆಗುತ್ತದೆ. ಅಮಾನಿತ್ವಮ್‌ನಿಂದ ತತ್ವಜ್ಞಾನಾರ್ಥ ದರ್ಶನಮ್‌ವರೆಗೆ ಎಂಟರಿಂದ ಹನ್ನೆರಡನೆಯ ಶ್ಲೋಕಗಳು ಎರಡು ಬಗೆಯ ಕ್ಷೇತ್ರಜ್ಞರನ್ನು ಅರ್ಥಮಾಡಿಕೊಳ್ಳುವ ಪ್ರಕ್ರಿಯೆಯನ್ನು ವರ್ಣಿಸುತ್ತವೆ. ಆತ್ಮ ತ್ತಮು ಪರಮಾತ್ಮ ಈ ಕ್ಷೇತ್ರಜ್ಞರು. ಅನಾದಿ ಮತ್‌ಪರಮ್‌ನಿಂದ ಪ್ರಾರಂಭವಾಗಿ ಹೃದಿ ಸರ್ವಸ್ಯ ವಿಷ್ಠಿತಮ್‌ವರೆಗೆ ಹದಿಮೂರರಿಂದ ಹದಿನೆಂಟರವರೆಗಿನ ಶ್ಲೋಕಗಳು ಆತ್ಮನನ್ನೂ ಪರಮ ಪ್ರಭು ಅಥವಾ ಪರಮಾತ್ಮನನ್ನೂ ವರ್ಣಿಸುತ್ತವೆ.

ಈ ಮೂರು ಅಂಶಗಳನ್ನು ವರ್ಣಿಸಿದೆ - ಕ್ಷೇತ್ರ (ದೇಹ), ಜ್ಞಾನದ ಪ್ರಕ್ರಿಯೆ ಮತ್ತು ಆತ್ಮ ಹಾಗೂ ಪರಮಾತ್ಮ. ಪ್ರಭುವಿನ ಪರಿಶುದ್ಧ ಭಕ್ತರು ಮಾತ್ರ ಈ ಮೂರು ಅಂಶಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲರು ಎಂದು ಇಲ್ಲಿ ವಿಶೇಷವಾಗಿ ವರ್ಣಿಸಿದೆ. ಆದುದರಿಂದ ಭಕ್ತರಿಗೆ ಭಗವದ್ಗೀತೆಯು ಸಂಪೂರ್ಣವಾಗಿ ಉಪಯುಕ್ತವಾಗಿದೆ. ಪರಮ ಪ್ರಭುವಾದ ಕೃಷ್ಣನ ಸ್ವಭಾವವೇ ಪರಮಗುರಿ. ಇದನ್ನು ಪಡೆಯಬಲ್ಲವರು ಈ ಭಕ್ತರು. ಬೇರೆ ಮಾತುಗಳಲ್ಲಿ ಹೇಳುವುದಾದರೆ ಭಕ್ತರು ಮಾತ್ರ ಭಗವದ್ಗೀತೆಯನ್ನು ಅರ್ಥಮಾಡಿಕೊಳ್ಳಬಲ್ಲರು ಮತ್ತು ಅಪೇಕ್ಷಿತ ಪರಿಣಾಮವನ್ನು ಪಡೆಯಬಲ್ಲರು. ಇತರರಿಗೆ ಇದು ಸಾಧ್ಯವಿಲ್ಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.