Bhagavad Gita: ನಮ್ರತೆಯಿಲ್ಲದೆ ಅರಿವನ್ನು ಪಡೆಯುವುದು ನಿಜವಾಗಿಯೂ ಸಾಧ್ಯವಿಲ್ಲ; ಭಗವದ್ಗೀತೆಯ ಅರ್ಥ ತಿಳಿಯಿರಿ-spiritual news bhagavad gita updesh lord krishna humility and awareness bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ನಮ್ರತೆಯಿಲ್ಲದೆ ಅರಿವನ್ನು ಪಡೆಯುವುದು ನಿಜವಾಗಿಯೂ ಸಾಧ್ಯವಿಲ್ಲ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ನಮ್ರತೆಯಿಲ್ಲದೆ ಅರಿವನ್ನು ಪಡೆಯುವುದು ನಿಜವಾಗಿಯೂ ಸಾಧ್ಯವಿಲ್ಲ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ನಮ್ರತೆಯಿಲ್ಲದೆ ಅರಿವನ್ನು ಪಡೆಯುವುದು ನಿಜವಾಗಿಯೂ ಸಾಧ್ಯವಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 8 ರಿಂದ 12 ನೇ ಶ್ಲೋಕದಲ್ಲಿನ ಕೊನೆಯ ಭಾಗವನ್ನು ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 8-12

ಅಮಾನಿತ್ವಮದಮ್ಭಿತ್ವಮಹಿಂಸಾ ಕ್ಷಾನ್ತಿರಾರ್ಜಮಮ್ |
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ||8|

ಇನ್ದ್ರಿಯಾರ್ಥೇಷು ವೈರಾಗ್ಯಮನಹನ್ಕಾರ ಏವ ಚ |ಜನ್ಮಮೃತ್ಯಜರಾವ್ಯಾಧಿದುಃಖದೋಷಾನುದರ್ಶನಮ್ ||9||

ಅಸಕ್ತಿರನಭಿಷ್ಟಂಗಃ ಪುತ್ರದಾರಗೃಹಾದಿಷು |
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು ||10||

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |ವಿವಕ್ತದೇಶಸೇವಿತ್ವಮರತಿರ್ಜನಸಂಸದಿ ||11||

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವ ಜ್ಞಾನಾರ್ಥದರ್ಶನಮ್ |
ಏತಜ್‌ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋನ್ಯಥಾ ||12||

ಆತ್ಮಸಾಕ್ಷಾತ್ಕಾರದ ವಿಷಯ ಹೇಳುವುದಾದರೆ ಭಕ್ತಿಯೋಗವು ವಿಶೇಷವಾಗಿ ಕಾರ್ಯಸಾಧ್ಯವಾದದ್ದು ಎಂದೇ ಸ್ಪಷ್ಟವಾಗಿ ಹೇಳಿದೆ. ಭಕ್ತಿಯ ಪ್ರಶ್ನೆ ಬಂದಾಗ ಪರಮಾತ್ಮ ಮತ್ತು ವ್ಯಕ್ತಿಗತ ಆತ್ಮಗಳ ಸಂಬಂಧವನ್ನು ಪರಿಶೀಲಿಸಬೇಕು. ವ್ಯಕ್ತಿಗತ ಆತ್ಮವೂ ಪರಮಾತ್ಮನೂ ಒಂದಾಗಲು ಸಾಧ್ಯವಿಲ್ಲ. ಭಕ್ತಿ ಪರಿಕಲ್ಪನೆಯಲ್ಲಂತೂ ಸಾಧ್ಯವೇ ಇಲ್ಲ. ಸ್ಪಷ್ಟವಾಗಿ ಹೇಳಿರುವಂತೆ ವ್ಯಕ್ತಿಗತ ಆತ್ಮವು ಪರಮಾತ್ಮನಿಗೆ ಸಲ್ಲಿಸುವ ಸೇವೆ ನಿತ್ಯವಾದದ್ದು, ನಿರಂತರವಾದದ್ದು. ಆದುದರಿಂದ ಭಕ್ತಿಯು ಶಾಶ್ವತವಾದದ್ದು. ಈ ತತ್ವಶಾಸ್ತ್ರದ ದೃಢನಂಬಿಕೆಯಲ್ಲಿ ಮನುಷ್ಯನು ಸ್ಥಿರವಾಗಿರಬೇಕು.

ಶ್ರೀಮದ್ಭಾಗವತದಲ್ಲಿ (1.2.11) ಇದನ್ನು ವಿವರಿಸಿದೆ. ವದನ್ತಿ ತತ್ ತತ್ತ್ವವಿದಸ್ ತತ್ತ್ವಂ ಯಜ್ಞ್‌ಜ್ಞಾನಂ ಅದ್ವಯಮ್ - ಪರಿಪೂರ್ಣ ಸತ್ಯವನ್ನು ವಾಸ್ತವವಾಗಿ ಬಲ್ಲವರು ಆತ್ಮಸಾಕ್ಷಾತ್ಕಾರವು ಬ್ರಹ್ಮನ್, ಪರಮಾತ್ಮ ಮತ್ತು ಭಗವಾನ್ ಈ ಮೂರು ಬೇರೆ ಬೇರೆ ಹಂತಗಳಲ್ಲಿ ಆಗುತ್ತದೆ ಎನ್ನುವುದನ್ನು ಬಲ್ಲರು. ಪರಿಪೂರ್ಣ ಸತ್ಯದ ಸಾಕ್ಷಾತ್ಕಾರದಲ್ಲಿ ಭಗವಾನನೇ ಕಡೆಯ ಮಾತು. ಆದುದರಿಂದ ಮನುಷ್ಯನು ದೇವೋತ್ತಮ ಪರಮ ಪುರುಷನನ್ನು ಅರ್ಥಮಾಡಿಕೊಳ್ಳವ ಆ ನೆಲೆಯನ್ನು ಏರಬೇಕು ಮತ್ತು ಪ್ರಭುವಿನ ಭಕ್ತಿಸೇವೆಯಲ್ಲಿ ನಿರತನಾಗಬೇಕು. ಜ್ಞಾನದ ಪರಿಪೂರ್ಣತೆ ಇದೇ.

ನಮ್ರತೆಯ ಅಭ್ಯಾಸಿಂದ ಪ್ರಾಂಭಿಸಿ ಪರಮ ಸತ್ಯನಾದ ದೇವೋತ್ತಮ ಪರಮ ಪುರುಷನ ಸಾಕ್ಷಾತ್ಕಾರದವರೆಗೆ ಈ ಪ್ರಕ್ರಿಯೆಯು ನೆಲದ ಅಂತಸ್ತಿನಿಂದ ಪ್ರಾರಂಭಿಸಿ ಮೇಲಿನ ಅಂತಸ್ತಿನವರೆಗೆ ಹೋಗುವ ಮೆಟ್ಟಿಲು ಶ್ರೇಣಿಯಂತೆ. ಈ ಮೆಟ್ಟಿಲುಗಳ ಶ್ರೇಣಿಯಲ್ಲಿ ಮೊದನೆಯ, ಎರಡನೆಯ ಅಥವಾ ಮೂರನೆಯ ಅಂತಸ್ತನ್ನು ತಲಪಿದವರಿದ್ದಾರೆ. ಆದರೆ ಅತ್ಯಂತ ಮೇಲಿನ ಅಂತಸ್ತನ್ನು ಮನುಷ್ಯ ಮುಟ್ಟದಿದ್ದರೆ ಆತನು ಜ್ಞಾನದ ಕೆಳಹಂತದಲ್ಲಿಯೇ ಇರುತ್ತಾನೆ. ಕೃಷ್ಣನ ಅರಿವೇ ಈ ಅತ್ಯಂತ ಮೇಲಿನ ಅಂತಸ್ತು. ಯಾರಾದರೂ ದೇವರೊಡನೆ ಸ್ಪರ್ಧೆಹೂಡಿ ಅದೇ ಸಮಯದಲ್ಲಿಯೇ ಅಧ್ಯಾತ್ಮಿಕ ಜ್ಞಾನದಲ್ಲಿ ಮುನ್ನಡೆಯಲು ಬಯಸಿದರೆ ಆತನು ವಿಫಲನಾಗುತ್ತಾನೆ.

ನಮ್ರತೆಯಿಲ್ಲದೆ ಅರಿವನ್ನು ಪಡೆಯುವುದು ನಿಜವಾಗಿಯೂ ಸಾಧ್ಯವಿಲ್ಲ ಎಂದು ಹೇಳಿದೆ. ತಾನೇ ದೇವರು ಎಂದು ಬೀಗುವುದು ಅಹಂಕಾರದ ಪರಮಾವಧಿ. ಐಹಿಕ ಪ್ರಕೃತಿಯ ಕಟ್ಟುನಿಟ್ಟಾದ ನಿಯಮಗಳು ಜೀವಿಯನ್ನು ಸದಾ ಒದೆಯುತ್ತಿದ್ದರೂ, ಅವನು ಅಜ್ಞಾನದಿಂದ ನಾನೇ ದೇವರು ಎಂದು ಯೋಚಿಸುತ್ತಾನೆ. ಜ್ಞಾನದ ಪ್ರಾರಂಭವು ಅಮಾನಿತ್ವ, ನಮ್ರತೆ, ಮನುಷ್ಯನು ನಮ್ರನಾಗಿರಬೇಕು ಮತ್ತು ತಾನು ಪರಮ ಪ್ರಭುವಿಗೆ ಅಧೀನ ಎಂದು ತಿಳಿದುಕೊಳ್ಳಬೇಕು. ಪರಮ ಪ್ರಭುವಿಗೆ ವಿರುದ್ಧವಾಗಿ ದಂಗೆ ಎದ್ದರೆ ಮನುಷ್ಯನು ಐಹಿಕ ಪ್ರಕೃತಿಗೆ ಅಧೀನನಾಗುತ್ತಾನೆ. ಈ ಸತ್ಯವನ್ನು ತಿಳಿದುಕೊಂಡು ಅದನ್ನು ದೃಢವಾಗಿ ನಂಬಬೇಕು.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.