Bhagavad Gita: ಯಾರ ಮನಸ್ಸು ಸ್ಥಿರ, ಸಮಭಾವದಲ್ಲಿ ಇರುತ್ತದೆಯೋ ಅವರು ಎಲ್ಲವನ್ನೂ ಗೆಲ್ಲುತ್ತಾರೆ; ಭಗವದ್ಗೀತೆಯ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಯಾರ ಮನಸ್ಸು ಸ್ಥಿರ, ಸಮಭಾವದಲ್ಲಿ ಇರುತ್ತದೆಯೋ ಅವರು ಎಲ್ಲವನ್ನೂ ಗೆಲ್ಲುತ್ತಾರೆ; ಭಗವದ್ಗೀತೆಯ ಅರ್ಥ ಹೀಗಿದೆ

Bhagavad Gita: ಯಾರ ಮನಸ್ಸು ಸ್ಥಿರ, ಸಮಭಾವದಲ್ಲಿ ಇರುತ್ತದೆಯೋ ಅವರು ಎಲ್ಲವನ್ನೂ ಗೆಲ್ಲುತ್ತಾರೆ; ಭಗವದ್ಗೀತೆಯ ಅರ್ಥ ಹೀಗಿದೆ

Bhagavad Gita Updesh: ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಯಾರ ಮನಸ್ಸು ಸ್ಥಿರ, ಸಮಭಾವದಲ್ಲಿ ಇರುತ್ತದೆಯೋ ಅವರು ಎಲ್ಲವನ್ನೂ ಗೆಲ್ಲುತ್ತಾರೆ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 5: ಕರ್ಮಯೋಗ - ಕೃಷ್ಣಪ್ರಜ್ಞೆಯಲ್ಲಿ ಕಾರ್ಯ

19 ನೇ ಶ್ಲೋಕ

ಇಹೈವ ತೈರ್ಜಿತಃ ಸರ್ಗೋ ಯೇಷಾಂ ಸಾಮ್ಯೇ ಸ್ಥಿತಂ ಮನಃ |

ನಿರ್ದೋಷಂ ಹಿ ಸಮಂ ಬ್ರಹ್ಮ ತಸ್ಮಾದ್ ಬ್ರಹ್ಮಣಿ ತೇ ಸ್ಥಿತಾಃ ||19||

Bhagavad Gita in Kannada: ಯಾರ ಮನಸ್ಸು ಸ್ಥಿರವಾಗಿದ್ದು ಸಮಭಾವದಲ್ಲಿ ನೆಲೆಸಿರುವುದೋ ಅವರು ಆಗಲೇ ಹುಟ್ಟು ಸಾವುಗಳ ಸ್ಥಿತಿಯನ್ನು ಗೆದ್ದಿರುತ್ತಾರೆ. ಅವರು ಬ್ರಹ್ಮನ್‌ನಂತೆ ದೋಷರಹಿತರು. ಆದುದರಿಂದ ಅವರು ಆಗಲೇ ಬ್ರಹ್ಮನ್‌ನಲ್ಲಿ ಇರುತ್ತಾರೆ.

ಮೇಲೆ ಹೇಳಿದಂತೆ ಸಮಚಿತ್ತವು ಆತ್ಮಸಾಕ್ಷಾತ್ಕಾರದ ಗುರುತು. ಇಂತಹ ಸ್ಥಿತಿಯನ್ನು ತಲಪಿರುವ ವ್ಯಕ್ತಿಗಳು ಅಲೌಕಿಕ ಸ್ಥಿತಿಗಳನ್ನು, ಮುಖ್ಯವಾಗಿ ಹುಟ್ಟು ಸಾವುಗಳನ್ನು ಗೆದ್ದಿದ್ದಾರೆ ಎಂದು ಭಾವಿಸಬೇಕು. ಮನುಷ್ಯನು ತನ್ನನ್ನು ಈ ದೇಹದೊಂದಿಗೆ ಗುರುತಿಸಿಕೊಂಡಷ್ಟು ಕಾಲವೂ ಆತನನ್ನು ಬದ್ಧಾತ್ಮ ಎಂದೇ ಪರಿಗಣಿಸಬೇಕು. ಆದರೆ ಆತ್ಮಸಾಕ್ಷಾತ್ಕಾರದಿಂದ ಅವನು ಸಮಚಿತ್ತದ ನೆಲೆಗೆ ಏರಿದಾಗ ಅವನು ಬದ್ಧ ಬದುಕಿನಿಂದ ಮುಕ್ತನಾಗುತ್ತಾನೆ.

ಬೇರೆ ಮಾತುಗಳಲ್ಲಿ ಹೇಳವುದಾದರೆ, ಆತನು ಐಹಿಕ ಜಗತ್ತಿನಲ್ಲಿ ಹುಟ್ಟುವ ಅಗತ್ಯವಿಲ್ಲ. ಅವನು ಮರಣಾನಂತರ ಆಧ್ಯಾತ್ಮಿಕ ವ್ಯೋಮವನ್ನು ಪ್ರವೇಶಿಸಬಲ್ಲವು. ಭಗವಂತನಿಗೆ ಆಕರ್ಷಣೆಯೂ ದ್ವೇಷವೂ ಇಲ್ಲವಾದುದರಿಂದ ಅವನು ದೋಷರಹಿತನು. ಹೀಗೆಯೇ ಜೀವಿಗೆ ಆಕರ್ಷಣೆಯಾಗಲಿ ದ್ವೇಷವಾಗಲಿ ಇಲ್ಲವಾದಾಗ ಆತನೂ ದೋಷರಹಿತನಾಗುತ್ತಾನೆ. ಅಧ್ಯಾತ್ಮಿಕ ವ್ಯೋಮವನ್ನು ಪ್ರವೇಶಿಸಲು ಅರ್ಹನಾಗುತ್ತಾನೆ. ಇಂತಹವರನ್ನು ಆಗಲೇ ಮುಕ್ತರು ಎಂದು ಪರಿಗಣಿಸಲಾಗುತ್ತದೆ. ಅವರ ಲಕ್ಷಣಗಳನ್ನು ಮುಂದೆ ವರಿಸಿದೆ.

ಶ್ಲೋಕ - 20

ನ ಪ್ರಹೃಷ್ಯೇತ್ ಪ್ರಿಯಂ ಪ್ರಾಪ್ಯ ನೋದ್ವಿಜೇತ್ ಪ್ರಾಪ್ಯ ಚಾಪ್ರಿಯಮ್ |

ಸ್ಥಿರಬುದ್ಧಿರಸಮ್ಮೂಢೋ ಬ್ರಹ್ಮವಿದ್ ಬ್ರಹ್ಮಣಿ ಸ್ಥಿತಃ ||20||

ಪ್ರಿಯವಾದುದನ್ನು ಸಾಧಿಸಿದಾಗ ಹರ್ಷಿಸದಿರುವವನೂ, ಅಪ್ರಿಯವಾದುದು ಘಟಿಸಿದಾಗ ಶೋಕಿಸದಿರುವವನೂ, ಸ್ಥಿರಬುದ್ಧಿಯುಳ್ಳವನೂ, ದಿಗ್ಭ್ರಮೆ ಹೊಂದದವನೂ ಭಗವದ್ವಿಜ್ಞಾನವನ್ನು ತಿಳಿದವನೂ ಆದ ಮನುಷ್ಯನು ಆಗಲೇ ಆಧ್ಯಾತ್ಮಿಕ ನೆಲೆಯನ್ನು ಹೊಂದಿದ್ದಾನೆ.

ಆತ್ಮಸಾಕ್ಷಾತ್ಕಾರವನ್ನು ಸಾಧಿಸಿದ ಮನುಷ್ಯನ ಲಕ್ಷಣಗಳನ್ನು ಇಲ್ಲಿ ಹೇಳಲಾಗಿದೆ. ದೇಹವನ್ನೇ ಆತ್ಮವೆಂದು ತಪ್ಪಾಗಿ ಗುರುತಿಸುವ ಮಾಯೆಗೆ ಒಳಗಾಗುವುದಿಲ್ಲ ಎನ್ನುವುದು ಮೊದಲನೆಯ ಲಕ್ಷಣ. ತಾನು ದೇಹವಲ್ಲ, ದೇವೋತ್ತಮ ಪರಮ ಪುರುಷನ ಒಂದು ಪ್ರತ್ಯೇಕ ಭಾಗ ಎಂದು ಅವನಿಗೆ ಸಂಪೂರ್ಣವಾಗಿ ತಿಳಿದಿರುತ್ತದೆ. ಆದುದದರಿಂದ ಆತನು ಏನನ್ನಾದರೂ ಸಾಧಿಸಿದಾಗ ಹಿಗ್ಗುವುದಿಲ್ಲ. ತನ್ನ ದೇಹಕ್ಕೆ ಸಂಬಂಧಿಸಿದ ಏನನ್ನಾದರೂ ಕಳೆದುಕೊಂಡಾಗ ಕುಗ್ಗುವುದಿಲ್ಲ. ಇದಕ್ಕೆ ಸ್ಥಿರಬುದ್ಧಿಃ ಎಂದು ಹೆಸರು. ಆದುದದರಿಂದ ಅವನು ಜಡದೇಹವನ್ನು ಆತ್ಮವೆಂದು ತಪ್ಪಾಗಿ ತಿಳಿದು ದಿಗ್ಭ್ರಮೆ ಹೊಂದುವುದಿಲ್ಲ.

ದೇಹವು ಶಾಶ್ವತವೆಂದು ಭಾವಿಸುವುದಿಲ್ಲ ಮತ್ತು ಆತ್ಮನ ಅಸ್ತಿತ್ವವನ್ನು ಕಡೆಗಣಿಸುವುದಿಲ್ಲ. ಇದರಿಂದ ಅವನು ಪರಮಸತ್ಯದ ಸಂಪೂರ್ಣ ವಿಜ್ಞಾನವನ್ನು ಎಂದರೆ ಬ್ರಹ್ಮನ್, ಪರಮಾತ್ಮ ಮತ್ತು ಭಗವಂತನನ್ನು ತಿಳಿದುಕೊಳ್ಳುವ ಮಟ್ಟಕ್ಕೇರುತ್ತಾನೆ. ಆತನು ಪರಮಸತ್ಯದೊಂದಿಗೆ ಎಲ್ಲ ರೀತಿಗಳಲ್ಲೂ ಒಂದಾಗುವ ಹುಸಿ ಪ್ರಯತ್ನವನ್ನು ಮಾಡದೆ ತನ್ನ ನಿಜಸ್ವರೂಪವನ್ನು ತಿಳಿದಿರುತ್ತಾನೆ. ಇದಕ್ಕೆ ಬ್ರಹ್ಮನ್ ಸಾಕ್ಷಾತ್ಕಾರ ಅಥವಾ ಆತ್ಮಸಾಕ್ಷಾತ್ಕಾರ ಎಂದು ಹೆಸರು. ಇಂತಹ ಸ್ಥಿರಪ್ರಜ್ಞೆಯನ್ನು ಕೃಷ್ಣಪ್ರಜ್ಞೆ ಎಂದು ಕರೆಯುತ್ತಾರೆ. (This copy first appeared in Hindustan Times Kannada website. To read more like this please logon to kannada.hindustantime.com).

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.