ಭಗವದ್ಗೀತೆ: ಆಧ್ಯಾತ್ಮ ಜೀವನದಲ್ಲಿ ವ್ಯಕ್ತಿಗತ ಅಸ್ತಿತ್ವದ ಜ್ಞಾನವೇ ನಿಜವಾದ ಜ್ಞಾನ; ಗೀತೆಯ ಅರ್ಥ ಹೀಗಿದೆ-spiritual news bhagavad gita updesh lord krishna what is real knowledge bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಭಗವದ್ಗೀತೆ: ಆಧ್ಯಾತ್ಮ ಜೀವನದಲ್ಲಿ ವ್ಯಕ್ತಿಗತ ಅಸ್ತಿತ್ವದ ಜ್ಞಾನವೇ ನಿಜವಾದ ಜ್ಞಾನ; ಗೀತೆಯ ಅರ್ಥ ಹೀಗಿದೆ

ಭಗವದ್ಗೀತೆ: ಆಧ್ಯಾತ್ಮ ಜೀವನದಲ್ಲಿ ವ್ಯಕ್ತಿಗತ ಅಸ್ತಿತ್ವದ ಜ್ಞಾನವೇ ನಿಜವಾದ ಜ್ಞಾನ; ಗೀತೆಯ ಅರ್ಥ ಹೀಗಿದೆ

Bhagavad Gita Updesh: ಕುರುಕ್ಷೇತ್ರದ ಯುದ್ಧದಲ್ಲಿ ಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಆಧ್ಯಾತ್ಮ ಜೀವನದಲ್ಲಿ ವ್ಯಕ್ತಿಗತ ಅಸ್ತಿತ್ವದ ಜ್ಞಾನವೇ ನಿಜವಾದ ಜ್ಞಾನ ಎಂಬುದರ ಅರ್ಥ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ |

ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್ ||16||

ಅಜ್ಞಾನವನ್ನು ನಾಶಮಾಡುವ ಜ್ಞಾನದ ಬೆಳಕನ್ನು ಮನುಷ್ಯನು ಪಡೆದುಕೊಂಡಾಗ ಹಗಲು ಹೊತ್ತಿನಲ್ಲಿ ಸೂರ್ಯನು ಎಲ್ಲದರ ಮೇಲೂ ಬೆಳಕು ಹರಿಸುವಂತೆ ಅವನ ಜ್ಞಾನವು ಎಲ್ಲವನ್ನೂ ಪ್ರಕಾಶಗೊಳಿಸುತ್ತದೆ. (Bhagavad Gita Updesh)

ಕೃಷ್ಣನನ್ನು ಮರೆತವರು ದಿಗ್ಬ್ರಮೆಗೊಳ್ಳಲೇಬೇಕು. ಆದರೆ ಕೃಷ್ಣಪ್ರಜ್ಞೆಯಲ್ಲಿರುವವರಿಗೆ ದಿಗ್ಭ್ರಮೆಯೇ ಇಲ್ಲ. ಭಗವದ್ಗೀತೆಯಲ್ಲಿ ಸರ್ವಂ ಜ್ಞಾನ ಪ್ಲವೇನ, ಜ್ಞಾನಾಗ್ನಿಃ ಸರ್ವಕರ್ಮಾಣಿ ಎಂದೂ ನ ಹಿ ಜ್ಞಾನೇನ ಸದೃಶ್ಯಮ್ ಎಂದೂ ಹೇಳಿದೆ. ಜ್ಞಾನಕ್ಕೆ ಯಾವಾಗಲೂ ಬಹು ಗೌರವ. ಆ ಜ್ಞಾನ ಯಾವುದು? ಕೃಷ್ಣನಿಗೆ ಶರಣಾದಾಗ ಪರಿಪೂರ್ಣ ಜ್ಞಾನವು ಲಭಿಸುತ್ತದೆ. ಭಗವದ್ಗೀತೆಯ ಏಳನೆಯ ಅಧ್ಯಾಯದ 19ನೆಯ ಶ್ಲೋಕದಲ್ಲಿ ಹೇಳಿರುವಂತೆ-ಬಹೂನಾಂ ಜನ್ಮನಾಮ್ ಅನ್ತೇ ಜ್ಞಾನವಾನ್ ಮಾಂ ಪ್ರಪದ್ಯತೇ.

ಅನೇಕಾನೇಕ ಜನ್ಮಗಳು ಕಳೆದನಂತರ ಮನುಷ್ಯನು ಪರಿಪೂರ್ಣಜ್ಞಾನದಲ್ಲಿ ಕೃಷ್ಣನಿಗೆ ಶರಣಾಗತನಾದಾಗ ಅಥವಾ ಕೃಷ್ಣಪ್ರಜ್ಞೆಯನ್ನು ಗಳಿಸಿದಾಗ, ಸೂರ್ಯನು ಹಗಲಿನಲ್ಲಿ ಎಲ್ಲವನ್ನು ತೋರಿಸಿಕೊಡುವಂತೆ, ಅವನಿಗೆ ಎಲ್ಲ ತೆರೆದಿಟ್ಟಂತಾಗುತ್ತದೆ. ಜೀವಿಯು ಹಲವಾರು ರೀತಿಗಳಲ್ಲಿ ದಿಗ್ಬ್ರಮೆ ಹೊಂದುತ್ತಾನೆ. ಉದಾಹರಣೆಗೆ ಅವಿನಯದಿಂದ ಆತನು ತಾನೇ ದೇವರು ಎಂದುಕೊಂಡಾಗ ಅವನ ಅಜ್ಞಾನದ ಕಟ್ಟಕಡೆಯ ಬಲೆಗೆ ಬೀಳುತ್ತಾನೆ. ಜೀವಿಯೊಬ್ಬನು ದೇವರಾದರೆ ಅವನು ಅಜ್ಞಾನದಿಂದ ದಿಗ್ಬ್ರಮೆಗೊಳ್ಳುವುದು ಹೇಗೆ? ಅಜ್ಞಾನದಿಂದ ದೇವರು ದಿಗ್ಬ್ರಮೆಗೊಳ್ಳುವನೆ? ಹಾಗಿದ್ದರೆ, ಅಜ್ಞಾನ ಅಥವಾ ಸೈತಾನ ದೇವರಿಗಿಂತ ದೊಡ್ಡವನೆಂದಾಯಿತು.

ಆತ್ಮಕ್ಕೂ ಪರಮಾತ್ಮನಿಗೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಿ

ನಿಜವಾದ ಜ್ಞಾನವನ್ನು ಕೃಷ್ಣಪ್ರಜ್ಞೆಯಲ್ಲಿ ಪರಿಪೂರ್ಣನಾದವನಿಂದ ಪಡೆದುಕೊಳ್ಳಬಹುದು. ಆದುದರಿಂದ ಮನುಷ್ಯನು ನಿಜವಾದ ಗುರುವನ್ನು ಹುಡುಕಿ ಪಡೆಯಬೇಕು. ಅವನಿಂದ ಕೃಷ್ಣ ಕೃಷ್ಣಪ್ರಜ್ಞೆ ಎಂದರೇನು ಎಂದು ಕಲಿಯಬೇಕು. ಏಕೆಂದರೆ, ಸೂರ್ಯನು ಕತ್ತಲನ್ನೆಲ್ಲ ಹೊಡೆದಟ್ಟುವಂತೆ ಕೃಷ್ಣಪ್ರಜ್ಞೆಯು ಎಲ್ಲ ಅಜ್ಞಾನವನ್ನು ಹೊಡೆದಟ್ಟುವುದು. ತಾನು ಈ ದೇಹವಲ್ಲ, ದೇಹವನ್ನು ಮೀರಿದವನು ಎಂದು ಸಂಪೂರ್ಣವಾಗಿ ತಿಳಿದವನೂ ಕೂಡ ಆತ್ಮಕ್ಕೂ ಪರಮಾತ್ಮನಿಗೂ ಇರುವ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳದೆ ಹೋಗಬಹುದು. ಆದರೆ ಆತನು ಪರಿಪೂರ್ಣನಾದ ನಿಜವಾದ ಕೃಷ್ಣಪ್ರಜ್ಞೆಯುಳ್ಳ ಗುರುವಿನ ಆಶ್ರಯ ಪಡೆಯುವ ಮನಸ್ಸು ಮಾಡಿದರೆ ಎಲ್ಲವನ್ನೂ ಚೆನ್ನಾಗಿ ತಿಳಿದುಕೊಳ್ಳಬಹುದು.

ಭಗವಂತನ ಪ್ರತಿನಿಧಿಯನ್ನು ಭೇಟಿಯಾದಾಗ ಮಾತ್ರ ಭಗವಂತನನ್ನೂ ಭಗವಂತನೊಡನೆ ತನ್ನ ಸಂಬಂಧವನ್ನೂ ತಿಳಿಯಲು ಸಾಧ್ಯ. ಭಗವಂತನ ಪ್ರತಿನಿಧಿಗೆ ಸಾಮಾನ್ಯವಾಗಿ ಭಗವಂತನಿಗೆ ಸಲ್ಲಿಸುವ ಎಲ್ಲ ಗೌರವವೂ ಸಲ್ಲುತ್ತದೆ. ಏಕೆಂದರೆ ಆತನಿಗೆ ದೇವರ ವಿಷಯ ಗೊತ್ತು. ಆದರೆ ಆತನು ತಾನೇ ದೇವರೆಂದು ಎಂದೂ ಹೇಳಿಕೊಳ್ಳುವುದಿಲ್ಲ. ದೇವರಿಗೂ ಜೀವಿಗೂ ಇರುವ ವ್ಯಾತ್ಯಾಸವನ್ನು ತಿಳಿದುಕೊಳ್ಳಬೇಕು. ಆದ್ದರಿಂದಲೇ ಶ್ರೀಕೃಷ್ಣನು ಎರಡನೆಯ ಅಧ್ಯಾಯದಲ್ಲಿ (2.12) ಪ್ರತಿಯೊಂದು ಜೀವಿಯೂ ಪ್ರತ್ಯೇಕ ವ್ಯಕ್ತಿಯೇ ಮತ್ತು ಭಗವಂತನೂ ಪ್ರತ್ಯೇಕ ಪುರುಷನೇ ಎಂದು ಹೇಳಿದನು. ಅ್ವರೆಲ್ಲರೂ ಹಿಂದೆ ಪ್ರತ್ಯೇಕ ವ್ಯಕ್ತಿಗಳಾಗಿದ್ದರು.

ಈಗ ಪ್ರತ್ಯೇಕ ವ್ಯಕ್ತಿಗಳಾಗಿದ್ದಾರೆ. ಮತ್ತು ಮುಕ್ತಿಯನ್ನು ಪಡೆದ ಅನಂತರವೂ ಭವಿಷ್ಯದಲ್ಲಿ ಪ್ರತ್ಯೇಕ ವ್ಯಕ್ತಿಗಳಾಗಿರುತ್ತಾರೆ. ರಾತ್ರಿಯ ಕತ್ತಲಿನಲ್ಲಿ ಎಲ್ಲವೂ ಒಂದೇ ಆಗಿ ಕಾಣುತ್ತದೆ. ಆದರೆ ಹಗಲಿನಲ್ಲಿ ಸೂರ್ಯನು ಮೇಲೇರಿದಾಗ ಪ್ರತಿಯೊಂದು ವಸ್ತುವನ್ನು ಅದರ ನಿಜವಾದ ಸ್ವರೂಪದಲ್ಲಿ ಕಾಣುತ್ತೇವೆ. ಆಧ್ಯಾತ್ಮ ಜೀವನದಲ್ಲಿ ವ್ಯಕ್ತಿಗತ ಅಸ್ತಿತ್ವದ ಜ್ಞಾನವೇ ನಿಜವಾದ ಜ್ಞಾನ. (This copy first appeared in Hindustan Times Kannada website. To read more like this please logon to kannada.hindustantime.com).

mysore-dasara_Entry_Point

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.