Bhagavad Gita: ಮನುಷ್ಯನಿಗೆ ಅಜ್ಞಾನ ಇದ್ದರೆ ಯಾವುದೂ ಅರಿವಾಗಲ್ಲ; ಭಗವದ್ಗೀತೆಯ ಸಾರಾಂಶ ಹೀಗಿದೆ-spiritual news bhagavad gita updesh lord krishna human ignorance bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಮನುಷ್ಯನಿಗೆ ಅಜ್ಞಾನ ಇದ್ದರೆ ಯಾವುದೂ ಅರಿವಾಗಲ್ಲ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನುಷ್ಯನಿಗೆ ಅಜ್ಞಾನ ಇದ್ದರೆ ಯಾವುದೂ ಅರಿವಾಗಲ್ಲ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ಮನುಷ್ಯನಿಗೆ ಅಜ್ಞಾನ ಇದ್ದರೆ ಯಾವುದೂ ಅರಿವಾಗಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 14 ನೇ ಶ್ಲೋಕದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 14

ಸರ್ವತಃ ಪಾಣಿಪಾದಂ ತತ್ ಸರ್ವತೋಕ್ಷಿಶಿರೋಮುಖಮ್ |

ಸರ್ವತಃ ಶ್ರುತಿಮಲ್ಲೋಕೇ ಸರ್ವಮಾವೃತ್ಯ ತಿಷ್ಠತಿ ||14||

ಅನುವಾದ: ಅವನ ಕೈಗಳು ಮತ್ತು ಕಾಲುಗಳು, ಅವನ ಕಣ್ಣುಗಳು, ತಲೆಗಳು ಮತ್ತು ಮುಖಗಳು ಎಲ್ಲೆಲ್ಲೂ ಇವೆ. ಅವನಿಗೆ ಎಲ್ಲೆಲ್ಲೂ ಕಿವಿಗಳುಂಟು. ಹೀಗೆ ಪರಮಾತ್ಮನು ಸರ್ವಾವ್ಯಾಪಿಯಾಗಿ ಇದ್ದಾನೆ.

ಭಾವಾರ್ಥ: ತನ್ನ ಅಮಿತಕಿರಣಗಳನ್ನು ಪಸರಿಸುತ್ತ ಸೂರ್ಯನು ಇರುವಂತೆ ಪರಮಾತ್ಮನು ಅಥವಾ ದೇವೋತ್ತಮ ಪರಮ ಪುರುಷನು ಇದ್ದಾನೆ. ಅವನು ತನ್ನ ಸರ್ವವ್ಯಾಪಿ ರೂಪದಲ್ಲಿ ಇದ್ದಾನೆ. ಪ್ರಥಮ ಮಹಾಗುರು ಬ್ರಹ್ಮನಿಂದ ಪ್ರಾರಂಭಿಸಿ ಸಣ್ಣ ಇರುವೆಗಳವರೆಗೆ ಎಲ್ಲ ವ್ಯಕ್ತಿಗತ ಜೀವಿಗಳು ಅವನಲ್ಲಿ ಇವೆ. ತಲೆಗಳು, ಕೈಗಳು, ಕಾಲುಗಳು ಮತ್ತು ಕಣ್ಣುಗಳು ಹಾಗೂ ಜೀವಿಗಳಿಗೆ ಮಿತಿಯಿಲ್ಲ. ಎಲ್ಲರೂ ಪರಮಾತ್ಮನಲ್ಲಿದ್ದಾರೆ ಮತ್ತು ಅವನನ್ನು ಅವಲಂಬಿಸಿದ್ದಾರೆ. ಆದುದರಿಂದ ಪರಮಾತ್ಮ ಸರ್ವವ್ಯಾಪಿ. ಆದರೆ ವ್ಯಕ್ತಿಗತ ಆತ್ಮವು ತನ್ನ ಕೈಗಳು, ಕಾಲುಗಳು ಮತ್ತು ಕಣ್ಣುಗಳು ಎಲ್ಲೆಲ್ಲಿಯೂ ಇವೆ ಎಂದು ಹೇಳಲು ಸಾಧ್ಯವಿಲ್ಲ.

ತನ್ನ ಕೈಗಳು ಮತ್ತು ಕಾಲುಗಳು ಎಲ್ಲೆಲ್ಲಿಯೂ ಇವೆ ಎನ್ನುವುದು ಅಜ್ಞಾನದಿಂದ ತನಗೆ ಅರಿವಾಗಿಲ್ಲ, ಆದರೆ ಯೋಗ್ಯವಾದ ಜ್ಞಾನವನ್ನು ಪಡೆದಾಗ ತಾನು ಆ ಘಟ್ಟಕ್ಕೆ ಬರುತ್ತೇನೆ ಎಂದು ಅವನು ಯೋಚಿಸಿದರೆ ಅವನ ಯೋಚನೆಯಲ್ಲಿ ವಿರೋಧಾಭಾಸವಿದೆ. ಐಹಿಕ ಪ್ರಕೃತಿಯಿಂದ ಬದ್ಧವಾದ ವ್ಯಕ್ತಿಗತ ಆತ್ಮಕ್ಕಿಂತ ಭಿನ್ನ. ಪರಮ ಪ್ರಭುವು ಮಿತಿಯಿಲ್ಲದಂತೆ ತನ್ನ ಕೈಯನ್ನು ಚಾಚಬಲ್ಲ. ವ್ಯಕ್ತಿಗತ ಆತ್ಮಕ್ಕಿಂತ ಭಿನ್ನ. ಪರಮ ಪ್ರಭವು ಮಿತಿಯಿಲ್ಲದಂತೆ ತನ್ನ ಕೈಯನ್ನು ಚಾಚಬಲ್ಲಿ. ವ್ಯಕ್ತಿಗತ ಆತ್ಮನು ಇದನ್ನು ಮಾಡಲಾರ. ಭಗವದ್ಗೀತೆಯಲ್ಲಿ ಪ್ರಭುವು ಯಾರಾದರೂ ತನಗೆ ಒಂದು ಹೂವನ್ನೋ ಅಥವಾ ಹಣ್ಣನ್ನೋ ಅಥವಾ ಒಂದಿಷ್ಟು ನೀರನ್ನೋ ಅರ್ಪಿಸಿದರೆ ಅವನ್ನು ಸ್ವೀಕರಿಸುತ್ತೇನೆ ಎಂದು ಹೇಳಿದ್ದಾನೆ.

ಪ್ರಭುವು ಬಹುದೂರದಲ್ಲಿದ್ದರೆ ಅವನು ಈ ವಸ್ತುಗಳನ್ನು ಸ್ವೀಕರಿಸಲು ಹೇಗೆ ಸಾಧ್ಯ? ಇದು ಪ್ರಭುವಿನ ಸರ್ವಶಕ್ತಿ - ಭೂಮಿಯಿಂದ ಬಹುದೂರ ಇರುವ ತನ್ನ ನಿವಾಸದಲ್ಲಿಯೇ ಆತನು ಇದ್ದರೂ ಯಾರಾದರೂ ಅರ್ಪಿಸಿದುದನ್ನು ಸ್ವೀಕರಿಸಲು ಅವನು ತನ್ನ ಕೈಯನ್ನು ಚಾಚಬಲ್ಲ. ಇದು ಅವನ ಶಕ್ತಿ. ಬ್ರಹ್ಮ ಸಂಹಿತೆಯಲ್ಲಿ (5.37) ಹೀಗೆ ಹೇಳಿದೆ - ಗೋಲೋಕ ಏವ ನಿವಸತಿ ಅಖಿಲಾತ್ಮ ಭೂತಃ - ತನ್ನ ದಿವ್ಯಲೋಕದಲ್ಲಿ ಸದಾ ಲೀಲೆಗಳಲ್ಲಿ ಮಗ್ನನಾಗಿದ್ದರೂ ಅವನು ಎಲ್ಲೆಲ್ಲಿಯೂ ಇದ್ದಾನೆ. ವ್ಯಕ್ತಿಗತ ಆತ್ಮವು ತಾನು ಎಲ್ಲೆಲ್ಲಿಯೂ ಇದ್ದೇನೆ ಎಂದು ಹೇಳಿಕೊಳ್ಳಲಾರದು. ಆದುದರಿಂದ ಈ ಶ್ಲೋಕವು ಪರಮಾತ್ಮನನ್ನು, ದೇವೋತ್ತಮ ಪರಮ ಪುರುಷನನ್ನು ವರ್ಣಿಸುತ್ತದೆ, ವ್ಯಕ್ತಿಗತ ಆತ್ಮವನ್ನಲ್ಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.