Bhagavad Gita: ಈ ಜಗತ್ತಿನಲ್ಲಿ ಎಲ್ಲಾ ವಸ್ತುಗಳ ಆಧಾರವೇ ಭಗವಂತ; ಭಗವದ್ಗೀತೆಯ ಅರ್ಥ ತಿಳಿಯಿರಿ-spiritual news bhagavad gita updesh lord krishna is basis of all things bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಈ ಜಗತ್ತಿನಲ್ಲಿ ಎಲ್ಲಾ ವಸ್ತುಗಳ ಆಧಾರವೇ ಭಗವಂತ; ಭಗವದ್ಗೀತೆಯ ಅರ್ಥ ತಿಳಿಯಿರಿ

Bhagavad Gita: ಈ ಜಗತ್ತಿನಲ್ಲಿ ಎಲ್ಲಾ ವಸ್ತುಗಳ ಆಧಾರವೇ ಭಗವಂತ; ಭಗವದ್ಗೀತೆಯ ಅರ್ಥ ತಿಳಿಯಿರಿ

‘Bhagavad Gita: ಜಗತ್ತಿನಲ್ಲಿ ಎಲ್ಲಾ ವಸ್ತುಗಳ ಆಧಾರವೇ ಭಗವಂತ. ಆದರೆ ಆತ ಐಹಿಕ ನೆಲೆಯಲ್ಲಿ ನೆಲೆಸಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಭಗವದ್ಗೀತೆಯಲ್ಲಿನ 13 ನೇ ಅಧ್ಯಾಯದ 18 ನೇ ಶ್ಲೋಕದಲ್ಲಿರುವ ಇದರ ಅರ್ಥವನ್ನು ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 18

ಜ್ಯೋತಿಷಾಮಪಿ ತತ್‌ಜೋತಿಸ್ತಮಸಃ ಪರಮುಚ್ಯತೇ |

ಜ್ಞಾನಂ ಜ್ಞೇಯಂ ಜ್ಞಾನಗಮ್ಯಂ ಹೃದಿ ಸರ್ವಸ್ಯ ವಿಷ್ಠಿತಮ್ ||18||

ಅನುವಾದ: ಆತನು ಎಲ್ಲ ಪ್ರಕಾಶಮಾನ ವಸ್ತುಗಳ ಬೆಳಕಿನ ಮೂಲ. ಆತನು ಜಡವಸ್ತುವಿನ ತಮಸ್ಸಿನಾಚೆ ಇದ್ದಾನೆ ಮತ್ತು ಅವನು ಅವ್ಯಕ್ತನು. ಅವನು ಜ್ಞಾನ, ಜ್ಞಾನದ ವಸ್ತು ಮತ್ತು ಜ್ಞಾನದ ಗುರಿ. ಅವನು ಎಲ್ಲರ ಹೃದಯಗಳಲ್ಲಿ ಪ್ರತಿಷ್ಠಿತನಾಗಿದ್ದಾನೆ.

ಭಾವಾರ್ಥ: ದೇವೋತ್ತಮ ಪರಮ ಪುರುಷನಾದ ಪರಮಾತ್ಮನು ಸೂರ್ಯ, ಚಂದ್ರ ಮತ್ತು ನಕ್ಷತ್ರಗಳಂತಹ ಪ್ರಕಾಶಮಾನ ವಸ್ತುಗಳ ಪ್ರಭೆಯ ಮೂಲ. ಅಧ್ಯಾತ್ಮಿಕ ಜಗತ್ತಿನಲ್ಲಿ ಸೂರ್ಯ ಚಂದ್ರರ ಅಗತ್ಯವೇ ಇಲ್ಲ. ಏಕೆಂದರೆ ಪರಮ ಪ್ರಭುವಿನ ಪ್ರಭೆಯೇ ಅಲ್ಲಿದೆ ಎನ್ನುವುದನ್ನು ವೇದ ಸಾಹಿತ್ಯದಲ್ಲಿ ಕಾಣುತ್ತೇವೆ. ಐಹಿಕ ಜಗತ್ತಿನಲ್ಲಿ ಪ್ರಭುವಿನ ದಿವ್ಯತೇಜಸ್ಸಾದ ಬ್ರಹ್ಮಜ್ಯೋತಿಯನ್ನು ಮಹತ್‌ತತ್ವವು ಎಂದರೆ ಐಹಿಕ ಫಟಕಾಂಶಗಳು ಮರೆಮಾಡಿರುತ್ತವೆ. ಆದುದರಿಂದ ಈ ಐಹಿಕ ಜಗತ್ತಿನಲ್ಲಿ ಬೆಳಕಿಗಾಗಿ ನಮಗೆ ಸೂರ್ಯ, ಚಂದ್ರ, ವಿದ್ಯುಚ್ಛಕ್ತಿ ಮೊದಲಾದವುಗಳ ನೆರವು ಬೇಕು. ಆದರೆ ಅಧ್ಯಾತ್ಮಿಕ ಜಗತ್ತಿನಲ್ಲಿ ಅಂತಹ ವಸ್ತುಗಳ ಅಗತ್ಯವಿಲ್ಲ.

ಪರಮಾತ್ಮನ ಪ್ರಕಾಶಮಾನ ತೇಜಸ್ಸಿನಿಂದ ಎಲ್ಲದರ ಮೇಲೂ ಬೆಳಕು ಬೀಳುತ್ತದೆ ಎಂದು ವೇದಸಾಹಿತ್ಯದಲ್ಲಿ ಸ್ಪಷ್ಟವಾಗಿ ಹೇಳಿದೆ. ಆದುದರಿಂದ ಆತನು ಐಹಿಕ ಜಗತ್ತಿನಲ್ಲಿ ನೆಲೆಸಿಲ್ಲ ಎಂದು ಸ್ಪಷ್ಟವಾಗಿದೆ. ಅವನಿರುವುದು ಅಧ್ಯಾತ್ಮಿಕ ಜಗತ್ತಿನಲ್ಲಿ. ಅದು ಅಧ್ಯಾತ್ಮಿಕ ಗಗನದಲ್ಲಿ ಬಹುದೂರ ಇದೆ. ಇದನ್ನು ವೇದ ಸಾಹಿತ್ಯದಲ್ಲಿಯೂ ದೃಢಪಡಿಸಿದೆ - ಆದಿತ್ಯವರ್ಣಂ ತಮಸಃ ಪರಸ್ತಾತ್ (ಶ್ವೇತಾಶ್ವತರ ಉಪನಿಷತ್ತು 3.8) ಆತನು ಸೂರ್ಯನಂತೆ ನಿರಂತರವಾಗಿ ಪ್ರಕಾಶಮಾನನು. ಆದರೆ ಈ ಐಹಿಕ ಜಗತ್ತಿನ ಕತ್ತಲೆಯಿಂದ ಬಹುದೂರ ಇದ್ದಾನೆ.

ಆತನದು ದಿವ್ಯಜ್ಞಾನ. ವೇದಸಾಹಿತ್ಯವು ಬ್ರಹ್ಮನ್ ಕೇಂದ್ರೀಕರಿಸಿದ ದಿವ್ಯಜ್ಞಾನ ಎನ್ನುವುದನ್ನು ದೃಢಪಡಿಸುತ್ತದೆ. ಆ ಅಧ್ಯಾತ್ಮಿಕ ಜಗತ್ತಿಗೆ ಸೇರಬೇಕೆಂದು ಕಾತಾರನಾದವನಿಗೆ ಪರಮ ಪ್ರಭುವು ಜ್ಞಾನವನ್ನು ನೀಡುತ್ತಾನೆ. ಪ್ರಭುವು ಪ್ರತಿಯೊಬ್ಬರ ಹೃದಯದಲ್ಲಿಯೂ ಪ್ರತಿಷ್ಠಿತನಾಗಿದ್ದಾನೆ. ಒಂದು ವೈದಿಕ ಮಂತ್ರ ಹೀಗೆದೆ - ತಂ ಹ ದೇವಮ್ ಆತ್ಮ ಬುದ್ಧಿ ಪ್ರಕಾಶಂ ಮುಮುಕ್ಷುರ್ ವೈ ಶರಣಮ್ ಅಹಂ ಪ್ರಪದ್ಯೇ (ಶ್ವೇತಾಶ್ವತರ ಉಪನಿಷತ್ತು 6.18) ಬಿಡುಗಡೆಯನ್ನು ಬಯಸುವವನು ದೇವೋತ್ತಮ ಪರಮ ಪುರುಷನಿಗೆ ಶರಣಾಗಬೇಕು.

ಕಟ್ಟಕಡೆಯ ಜ್ಞಾನದ ಗುರಿಯನ್ನು ಕುರಿತು ಹೇಳುವುದಾದರೆ ಅದನ್ನು ವೇದ ಸಾಹಿತ್ಯವು ದೃಢಪಡಿಸುತ್ತದೆ - ತಂ ಏವ ವಿದಿತ್ವಾತಿ ಮೃತ್ಯುಮ್ ಏತಿ ಅವನನ್ನು ತಿಳಿಯುವುದರಿಂದ ಮಾತ್ರ ಮನುಷ್ಯನು ಹುಟ್ಟು ಸಾವುಗಳ ಎಲ್ಲೆಯನ್ನು ಮೀರಬಲ್ಲನು (ಶ್ವೇತಾಶ್ವತರ ಉಪನಿಷತ್ತು 3.8).

ಆತನು ಪರಮ ನಿಯಂತ್ರಕರನಾಗಿ ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲೆಸಿದ್ದಾನೆ. ಪರಮ ಪ್ರಭುವಿನ ಕಾಲುಗಳು, ಕೈಗಳು ಎಲ್ಲೆಡೆ ಹಂಚಿಹೋಗಿವೆ. ವ್ಯಕ್ತಿಗತ ಆತ್ಮದ ವಿಷಯದಲ್ಲಿ ಈ ಮಾತನ್ನು ಹೇಳಲು ಸಾಧ್ಯವಿಲ್ಲ. ಆದುದರಿಂದ ಇಬ್ಬರು ಕ್ಷೇತ್ರಜ್ಞರು - ವ್ಯಕ್ತಿಗತ ಆತ್ಮ ಮತ್ತು ಪರಮಾತ್ಮ - ಇದ್ದಾರೆ ಎಂಬುದನ್ನು ಒಪ್ಪಲೇಬೇಕು. ಇವರಲ್ಲಿ ಒಬ್ಬರ ಕೈಕಾಲುಗಳು ಒಂದು ಸ್ಥಳದಲ್ಲಿ ಹಂಚಿವೆ. ಆದರೆ ಕೃಷ್ಣನ ಕೈಗಳು ಮತ್ತು ಕಾಲುಗಳು ಎಲ್ಲೆಡೆ ಹಂಚಿ ಹೋಗಿವೆ. ಇದನ್ನು ಶ್ವೇತಾತ್ವತರ ಉಪನಿಷತ್ತು ದೃಢಪಡಿಸುತ್ತದೆ (3.17) - ಸರ್ವಸ್ಯ ಪ್ರಭುಮ್ ಈಶಾನಂ ಸರ್ವಸ್ಯ ಶರಣಂ ಬೃಹತ್. ದೇವೋತ್ತಮ ಪರಮ ಪುರುಷನಾದ ಪರಮಾತ್ಮನು ಎಲ್ಲ ಜೀವಿಗಳ ಪ್ರಭು. ಅವನು ಎಲ್ಲ ಜೀವಿಗಳ ಕಟ್ಟಕಡೆಯ ಆಶ್ರಯನು. ಆದುದರಿಂದ ಅತ್ಯುಚ್ಚ ಪರಮಾತ್ಮನೂ ವ್ಯಕ್ತಿಗತ ಆತ್ಮನೂ ಯಾವಾಗಲೂ ಬೇರೆ ಬೇರೆಯೇ ಎನ್ನುವ ವಾಸ್ತವಾಂಶವನ್ನು ನಿರಾಕರಿಸಲಾಗುವುದಿಲ್ಲ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.