Bhagavad Gita: ನಾವು ಅಧ್ಯಾತ್ಮಿಕ ಸ್ಥಾನದಲ್ಲಿದಾಗ ಈ ಸಂಗತಿಗಳು ನಮ್ಮನ್ನು ಕಲಕುವುದಿಲ್ಲ; ಭಗವದ್ಗೀತೆಯ ಸಾರಾಂಶ ಹೀಗಿದೆ-spiritual news bhagavad gita updesh lord krishna man with god bhagavad gita quotes in kannada rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ನಾವು ಅಧ್ಯಾತ್ಮಿಕ ಸ್ಥಾನದಲ್ಲಿದಾಗ ಈ ಸಂಗತಿಗಳು ನಮ್ಮನ್ನು ಕಲಕುವುದಿಲ್ಲ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ನಾವು ಅಧ್ಯಾತ್ಮಿಕ ಸ್ಥಾನದಲ್ಲಿದಾಗ ಈ ಸಂಗತಿಗಳು ನಮ್ಮನ್ನು ಕಲಕುವುದಿಲ್ಲ; ಭಗವದ್ಗೀತೆಯ ಸಾರಾಂಶ ಹೀಗಿದೆ

Bhagavad Gita: ನಾವು ಅಧ್ಯಾತ್ಮಿಕ ಸ್ಥಾನದಲ್ಲಿದಾಗ ಈ ಸಂಗತಿಗಳು ನಮ್ಮನ್ನು ಕಲಕುವುದಿಲ್ಲ ಎಂಬುದರ ಅರ್ಥವನ್ನು ಭಗವದ್ಗೀತೆಯ 13 ನೇ ಅಧ್ಯಾಯದ 8 ರಿಂದ 12 ರವರೆಗಿನ ಶ್ಲೋಕಗಳ ಮುಂದುವರಿದ ಭಾಗದಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅಧ್ಯಾಯ - 13: ಪ್ರಕೃತಿ, ಪುರುಷ ಹಾಗೂ ಪ್ರಜ್ಞೆ - 8-12

ಅಮಾನಿತ್ವಮದಮ್ಭಿತ್ವಮಹಿಂಸಾ ಕ್ಷಾನ್ತಿರಾರ್ಜಮಮ್ |
ಆಚಾರ್ಯೋಪಾಸನಂ ಶೌಚಂ ಸ್ಥೈರ್ಯಮಾತ್ಮವಿನಿಗ್ರಹಃ ||8|

ಇನ್ದ್ರಿಯಾರ್ಥೇಷು ವೈರಾಗ್ಯಮನಹನ್ಕಾರ ಏವ ಚ |
ಜನ್ಮಮೃತ್ಯಜರಾವ್ಯಾಧಿದುಃಖದೋಷಾನುದರ್ಶನಮ್ ||9||

ಅಸಕ್ತಿರನಭಿಷ್ಟಂಗಃ ಪುತ್ರದಾರಗೃಹಾದಿಷು |
ನಿತ್ಯಂ ಚ ಸಮಚಿತ್ತತ್ವಮಿಷ್ಟಾನಿಷ್ಟೋಪಪತ್ತಿಷು ||10||

ಮಯಿ ಚಾನನ್ಯಯೋಗೇನ ಭಕ್ತಿರವ್ಯಭಿಚಾರಿಣೀ |ವಿವಕ್ತದೇಶಸೇವಿತ್ವಮರತಿರ್ಜನಸಂಸದಿ ||11||

ಅಧ್ಯಾತ್ಮಜ್ಞಾನನಿತ್ಯತ್ವಂ ತತ್ತ್ವ ಜ್ಞಾನಾರ್ಥದರ್ಶನಮ್ |
ಏತಜ್‌ಜ್ಞಾನಮಿತಿ ಪ್ರೋಕ್ತಮಜ್ಞಾನಂ ಯದತೋನ್ಯಥಾ ||12||

ಅನುವಾದ: ನಮ್ರತೆ, ಜಂಬವಿಲ್ಲದಿರುವುದು, ಅಹಿಂಸೆ, ತಾಳ್ಮೆ, ಸರಳತೆ, ನಿಜವಾದ ಗುರುವಿನ ಬಳಿಗೆ ಹೋಗುವುದು, ಶೌಚ, ಸ್ಥೈರ್ಯ, ಆತ್ಮಸಂಯಮ, ಇಂದ್ರಿಯ ತೃಪ್ತಿಯ ವಸ್ತುಗಳಲ್ಲಿ ವೈರಾಗ್ಯ, ಅಹಂಕಾರವಿಲ್ಲದಿರುವುದು, ಜನ್ಮ, ಸಾವು, ಮುಪ್ಪು ಮತ್ತು ರೋಗಗಳ ಕೆಡುಕನ್ನು ಗ್ರಹಿಸುವುದು, ಅನಾಸಕ್ತಿ, ಮಕ್ಕಳು ಹೆಂಡತಿ, ಮನ ಮತ್ತಿತರ ವಿಷಯಗಳಲ್ಲಿ ಸಿಕ್ಕಿಕೊಳ್ಳದೆ ಮುಕ್ತವಾಗಿರುವುದು, ಇಷ್ಟಾನಿಷ್ಟಗಳ ಮಧ್ಯೆ ಸಮಚಿತ್ತತೆ, ನನ್ನಲ್ಲಿ ನಿರಂತರವಾದ ಮತ್ತು ಪರಿಶುದ್ಧವಾದ ಭಕ್ತಿ, ಏಕಾಂತಪ್ಪರದೇಶದಲ್ಲಿ ವಾಸಮಾಡುವ ಅಭಿಲಾಷೆ, ಜನಸಮೂಹದಲ್ಲಿ ಆಸಕ್ತಿಯಿಲ್ಲದಿರುವುದು, ಆತ್ಮಸಾಕ್ಷಾತ್ಕಾರದ ಮಹತ್ವವನ್ನು ಒಪ್ಪಿಕೊಳ್ಳುವುದು, ಪರಿಪೂರ್ಣ ಸತ್ಯದ ತತ್ವಜ್ಞಾನಾರ್ಥ ಅನ್ವೇಷಣೆ - ಇವೆಲ್ಲ ಜ್ಞಾನ ಎಂದು ನಾನು ಘೋಷಿಸುತ್ತೇನೆ. ಇದಲ್ಲದೆ ಇರುವುದೆಲ್ಲ ಅಜ್ಞಾನ.

ಭಗವದ್ಗೀತೆಯ 13ನೇ ಅಧ್ಯಾಯದ 8 ರಿಂದ 12 ಶ್ಲೋಕಗಳಲ್ಲಿನ ಮುಂದುವರಿದ ಭಾಗದಲ್ಲಿ ಸುಖ ದುಃಖಗಳು ಐಹಿಕ ಬಾಳಿನಲ್ಲಿ ಹಾಸುಹೊಕ್ಕಾಗಿರುವ ಅಂಶಗಳು. ಭಗವದ್ಗೀತೆಯಲ್ಲಿ ಉಪದೇಶ ಮಾಡಿದಂತೆ ಮನುಷ್ಯನು ಸಹನೆಯನ್ನು ಕಲಿಯಬೇಕು. ಸುಖ ಮತ್ತು ಸಂಕಟಗಳು ಬರುವುದನ್ನೂ ಹೋಗುವುದನ್ನೂ ಮನುಷ್ಯನು ನಿಯಂತ್ರಿಸಲಾರ. ಆದುದರಿಂದ ಪ್ರಾಪಂಚಿಕ ಬದುಕಿನ ರೀತಿಯಲ್ಲಿ ನಿರ್ಲಿಪ್ತನಾಗಿರಬೇಕು ಮತ್ತು ಸುಖದುಃಖಗಳೆರಡರಲ್ಲಿಯೂ ಸಮಚಿತ್ತನಾಗಿರಬೇಕು.

ಸಾಮಾನ್ಯವಾಗಿ ನಮಗೆ ಇಷ್ಟವಾದದ್ದು ದೊರೆತಾಗ ಬಹಳ ಸಂತೋಷಪಡುತ್ತೇವೆ ಮತ್ತು ಇಷ್ಟವಲ್ಲದ್ದು ಪ್ರಾಪ್ತಿಯಾದಾಗ ದುಃಖಿಸುತ್ತೇವೆ. ಆದರೆ ನಾವು ಅಧ್ಯಾತ್ಮಿಕ ಸ್ಥಾನದಲ್ಲಿದಾಗ ಈ ಸಂಗತಿಗಳು ನಮ್ಮನ್ನು ಕಲಕುವುದಿಲ್ಲ. ಆ ಸ್ಥಿತಿಯನ್ನು ತಲಪಲು ನಾವು ಅವಿಚ್ಛಿನ್ನ ಭಕ್ತಿಸೇವೆಯನ್ನು ಅಭ್ಯಾಸ ಮಾಡಬೇಕು. ಕೃಷ್ಣನಿಗೆ ಏಕಾಗ್ರಚಿತ್ತದ ಭಕ್ತಿಸೇವೆ ಎಂದರೆ ಒಂಬತ್ತನೆಯ ಅಧ್ಯಾಯದ ಕಡೆಯ ಶ್ಲೋಕದಲ್ಲಿ ಹೇಳಿದ ಕೀರ್ತನೆ, ಶ್ರವಣ, ಅರ್ಚನ, ನಮಸ್ಕಾರ ಮೊದಲಾದ ಭಕ್ತಿಸೇವೆಯ ಒಂಬತ್ತು ಪ್ರಕ್ರಿಯೆಗಳಲ್ಲಿ ತೊಡಗುವುದು. ಈ ಪ್ರಕ್ರಿಯೆಯನ್ನು ಅನುಸರಿಸಬೇಕು.

ಸಹಜವಾಗಿಯೇ ಅಧ್ಯಾತ್ಮಿಕ ಜೀವನರೀತಿಗೆ ಹೊಂದಿಕೊಂಡವನು ಪ್ರಾಪಂಚಿಕ ಮನೋಧರ್ಮದ ಜನರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ, ಅದು ಅವನ ಮನೋಧರ್ಮಕ್ಕೆ ವಿರೋಧವಾಗುತ್ತದೆ. ಅನಗತ್ಯವಾದ ಸಹವಾಸವಿಲ್ಲದೆ ಏಕಾಂತ ಸ್ಥಳದಲ್ಲಿ ವಾಸಿಸುವುದರಲ್ಲಿ ತನಗೆಷ್ಟು ಒಲವಿದೆ ಎಂದು ನೋಡಿಕೊಂಡು ಮನುಷ್ಯನು ತನ್ನನ್ನು ತಾನೇ ಪರೀಕ್ಷೆ ಮಾಡಿಕೊಳ್ಳಬಹುದು. ಸಹಜವಾಗಿ ಭಕ್ತನಿಗೆ ಅನಗತ್ಯವಾದ ಕ್ರೀಡೆ ಅಥವಾ ಚಲನಚಿತ್ರಕ್ಕೆ ಹೋಗುವುದು ಅಥವಾ ಒಂದು ಸಾಮಾಜಿಕ ಸಮಾರಂಭದಲ್ಲಿ ಸಂತೋಷಪಡುವುದು ಇವುಗಳಲ್ಲಿ ಅಭಿರುಚಿಯಿರುವುದಿಲ್ಲ. ಏಕೆಂದರೆ ಇವುಗಳಿಂದ ವ್ಯರ್ಥ ಕಾಲಹರಣವಾಗುತ್ತದೆ ಎಂದು ಅನೇಕ ಮಂದಿ ಸಂಶೋಧಕ ವಿದ್ವಾಂಸರೂ, ತತ್ವಶಾಸ್ತ್ರಜ್ಞರೂ ಇದ್ದಾರೆ.

ಆದರೆ ಭಗವದ್ಗೀತೆಯ ಪ್ರಕಾರ ಇಂತಹ ಸಂಶೋಧನೆ ಅಥವಾ ತತ್ವಶಾಸ್ತ್ರದ ಊಹಾತ್ಮಕ ಚಿಂತನೆಗೆ ಯಾವ ಬೆಲೆಯೂ ಇಲ್ಲ. ಇದು ಸ್ವಲ್ಪ ಹೆಚ್ಚೂಕಡಮೆ ಅಸಂಬದ್ಧವೇ. ಭಗವದ್ಗೀತೆಯ ಪ್ರಕಾರ ತತ್ವಶಾಸ್ತ್ರದ ವಿವೇಚನೆಯನ್ನು ಬಳಸಿ ಮನುಷ್ಯನು ಆತ್ಮದ ಸ್ವರೂಪದ ವಿಷಯದಲ್ಲಿ ಸಂಶೋಧನೆ ಮಾಡಬೇಕು. ಆತ್ಮವನ್ನು ಅರ್ಥಮಾಡಿಕೊಳ್ಳಲು ಸಂಶೋಧನೆ ಮಾಡಬೇಕು. ಹೀಗೆಂದು ಇಲ್ಲಿ ಸಲಹೆ ಮಾಡಿದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.