Bhagavad Gita: ಭಗವಂತನ ದೇಹ ಸಂಪೂರ್ಣ ಜ್ಞಾನಾನಂದಗಳ ಸಂಕೇತ; ಗೀತೆಯ ಅರ್ಥ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಭಗವಂತನ ದೇಹ ಸಂಪೂರ್ಣ ಜ್ಞಾನಾನಂದಗಳ ಸಂಕೇತ; ಗೀತೆಯ ಅರ್ಥ ಹೀಗಿದೆ

Bhagavad Gita: ಭಗವಂತನ ದೇಹ ಸಂಪೂರ್ಣ ಜ್ಞಾನಾನಂದಗಳ ಸಂಕೇತ; ಗೀತೆಯ ಅರ್ಥ ಹೀಗಿದೆ

Bhagavad Gita Updesh: ಭಗವಂತನ ದೇಹ ಸಂಪೂರ್ಣ ಜ್ಞಾನಾನಂದಗಳ ಸಂಕೇತ ಎಂಬುದರ ಅರ್ಥವನ್ನು ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕ 11ರಲ್ಲಿ ತಿಳಿಯಿರಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

ಅವಜಾನನ್ತಿ ಮಾಂ ಮೂಢಾ ಮಾನನುಷೀಂ ತನುಮಾಶ್ರಿತಮ್ |

ಪರಂ ಭಾವಮಜಾನನ್ತೋ ಮಮ ಭೂತಮಹೇಶ್ವರಮ್ ||11||

ಭಗವದ್ಗೀತೆಯ 9ನೇ ಅಧ್ಯಾಯದ ಶ್ಲೋಕ 11ರಲ್ಲಿನ ಮುಂದುವರಿದ ಭಾಗದಲ್ಲಿ ಶ್ರಿಕೃಷ್ಣನ ದೇಹಕ್ಕೆ ದಿವ್ಯಗುಣಗಳಿದ್ದರೂ, ಅದು ಜ್ಞಾನಾನಂದಮಯವಾದರೂ ವಿದ್ವಾಂಸರೆಂದು ಕರೆಸಿಕೊಳ್ಳುವ ಎಷ್ಟೋಮಂದಿ ಮತ್ತು ಭಗವದ್ಗೀತೆಯ ಹಲವರು ವ್ಯಾಖ್ಯಾನಕಾರರು ಅವನನ್ನು ಸಾಮಾನ್ಯ ಮನುಷ್ಯನೆಂದು ತಿರಸ್ಕಾರದಿಂದ ಕಾಣುತ್ತಾರೆ. ಹಿಂದಿನ ಪುಣ್ಯಕಾರ್ಯದ ಫಲವಾಗಿ ವಿದ್ವಾಂಸನು ಅಸಾಧಾರಣ ಮನುಷ್ಯನಾಗಿ ಹುಟ್ಟಿರಬಹುದು. ಆದರೆ ಕೃಷ್ಣನನ್ನು ಕುರಿತು ಈ ಕಲ್ಪನೆಯು ಅಲ್ಪಜ್ಞಾನದಿಂದ ಬಂದದ್ದು. ಆದುದರಿಂದ ಈ ಮನುಷ್ಯನನ್ನು ಮೂಢಾ ಎಂದು ಕರೆದಿದೆ. ಮೂಢರು ಮಾತ್ರ ಕೃಷ್ಣನು ಸಾಮಾನ್ಯ ಮನುಷ್ಯ ಎಂದು ಭಾವಿಸುತ್ತಾರೆ. ಪರಮ ಪ್ರಭುವಿನ ರಹಸ್ಯ ಚಟುವಟಿಕೆಗಳನ್ನು, ಅವನ ವಿವಿಧ ಶಕ್ತಿಗಳನ್ನು, ತಿಳಿಯದಿರುವುದರಿಂದ ಮೂಢರು ಕೃಷ್ಣನನ್ನು ಸಾಮಾನ್ಯ ಮನುಷ್ಯ ಎಂದು ಭಾವಿಸುತ್ತಾರೆ (Bhagavad Gita Updesh in Kannada).

ಕೃಷ್ಣನ ದೇಹವು ಸಂಪೂರ್ಣ ಜ್ಞಾನಾನಂದಗಳ ಸಂಕೇತ. ಅಸ್ತಿತ್ವದಲ್ಲಿರುವ ಎಲ್ಲದರ ಒಡೆಯ ಅವನು. ಆತನು ಯಾರಿಗಾದರೂ ಮುಕ್ತಿಯನ್ನು ಅನುಗ್ರಹಿಸಬಲ್ಲ ಎಂಬುದನ್ನು ಅವರು ತಿಳಿಯರು. ಕೃಷ್ಣನಲ್ಲಿ ಅನೇಕ ದಿವ್ಯ ಅರ್ಹತೆಗಳು ಇವೆ ಎಂದು ಅವರಿಗೆ ತಿಳಿಯದು. ಆದುದರಿಂದ ಅವರು ಆತ್ಮನನ್ನು ಅಪಹಾಸ್ಯ ಮಾಡುತ್ತಾರೆ.

ಈ ಐಹಿಕ ಜಗತ್ತಿನಲ್ಲಿ ದೇವೋತ್ತಮ ಪರಮ ಪುರುಷನ ಅವತಾರವು ಆತನ ಅಂತರಂಗ ಶಕ್ತಿಯ ಅಭಿವ್ಯಕ್ತಿ ಎಂದೂ ಅವರಿಗೆ ತಿಳಿಯದು. ಆತನು ಐಹಿಕ ಶಕ್ತಿಯ ಪ್ರಭು. ಅನೇಕ ಸ್ಥಳಗಳಲ್ಲಿ ವಿವರಿಸಿರುವಂತೆ (ಮನು ಮಾಯಾ ದುರತ್ಯಯಾ), ಎಲ್ಲ ಐಹಿಕ ಶಕ್ತಿಯೂ, ಅದರ ಬಲ ಎಷ್ಟೇ ಇರಲಿ, ತನ್ನ ಅಧೀನ, ಮತ್ತು ತನಗೆ ಯಾರು ಶರಣಾಗುತ್ತಾರೋ ಅವರು ಈ ಐಹಿಕ ಶಕ್ತಿಯ ನಿಯಂತ್ರಣದಿಂದ ಪಾರಾಗಬಹುದು ಎಂದು ಅವನು ಹೇಳುತ್ತಾನೆ. ಕೃಷ್ಣನಿಗೆ ಶರಣಾಗುವ ಆತ್ಮವು ಐಹಿಕ ಶಕ್ತಿಯ ಪ್ರಭಾವದಿಂದ ಪಾರಾಗಬಹುದಾದರೆ ಇಡೀ ವಿಶ್ವದ ದೃಷ್ಟಿ, ಸ್ಥಿತಿ ಮತ್ತು ಲಯಗಳನ್ನು ನಿರ್ವಹಿಸುವ ಪರಮ ಪ್ರಭುವಿಗೆ ನಮ್ಮ ದೇಹಗಳಂತಹ ಭೌತಿಕ ದೇಹವು ಇರುವುದು ಹೇಗೆ ಸಾಧ್ಯ? ಆದುದರಿಂದ ಕೃಷ್ಣನನ್ನು ಕುರಿತ ಈ ಕಲ್ಪನೆ ಸಂಪೂರ್ಣವಾಗಿ ದಡ್ಡತನ.

ಸಾಮಾನ್ಯ ಮನುಷ್ಯನ ರೂಪದಲ್ಲಿ ಕಾಣಿಸಿಕೊಳ್ಳುವ ದೇವೋತ್ತಮ ಪರಮ ಪುರುಷನಾದ ಕೃಷ್ಣನು ಹೇಗೆ ಎಲ್ಲ ಪರಮಾಣುಗಳ ಮತ್ತು ವಿಶ್ವರೂಪದ ಬೃಹತ್ ಅಭಿವ್ಯಕ್ತಿಗಳ ನಿಯಂತ್ರಕನಾಗಬಲ್ಲ ಎಂದು ಮೂಢರು ಕಲ್ಪಿಸಿಕೊಳ್ಳಲಾರರು. ಬೃಹತ್ತಾದದ್ದು ಅವರ ಕಲ್ಪನಾಶಕ್ತಿಗೆ ಮೀರಿದ್ದು. ಆದುದರಿಂದ, ಮನುಷ್ಯನಂತಹ ರೂಪವು ಅನಂತವಾದದನ್ನೂ ಅತ್ಯಂತ ಸೂಕ್ಷ್ಮವಾದದ್ದನ್ನೂ ನಿಯಂತ್ರಿಸಬಲ್ಲದು ಎಂದು ಅವರು ಕಲ್ಪಿಸಿಕೊಳ್ಳಲಾರರು. ವಾಸ್ತವಾಗಿ ಆತನು ಅನಂತವನ್ನೂ ಪರಿಮಿತವನ್ನೂ ನಿಯಂತ್ರಿಸುತ್ತಿದ್ದರೂ ಆತನು ಈ ಎಲ್ಲ ಅಭಿವ್ಯಕ್ತಿಯಿಂದ ಪ್ರತ್ಯೇಕವಾಗಿದ್ದಾನೆ.

ಆತನ ಯೋಗಮ್ ಐಶ್ವರ್ಮ್ - ಊಹಾತೀತ ದಿವ್ಯ ಶಕ್ತಿಯನ್ನು ಕುರಿತು - ಆತನು ಏಕಕಾಲದಲ್ಲಿ ಅನಂತವಾದದ್ದನ್ನು ಪರಿಮಿತವಾದುದನ್ನು ನಿಯಂತ್ರಿಸಬಲ್ಲ, ಹಾಗೆಯೇ ಅವುಗಳಿಂದ ಪ್ರತ್ಯೇಕವಾಗಿ ಇರಬಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಮನುಷ್ಯನಂತೆಯೇ ಕಾಣುವ ಕೃಷ್ಣನು ಅನಂತವನ್ನು ಪರಿಮಿತವನನ್ನು ಹೇಗೆ ನಿಯಂತ್ರಿಸಬಲ್ಲ ಎಂದು ಮೂಢರು ಕಲ್ಪಿಸಿಕೊಳ್ಳಲಾರರು. ಆದರೆ ಪರಿಶುದ್ಧ ಭಕ್ತರು ಇದನ್ನು ಒಪ್ಪಿಕೊಳ್ಳುತ್ತಾರೆ. ಏಕೆಂದರೆ ಕೃಷ್ಣನು ದೇವೋತ್ತಮ ಪರಮ ಪುರುಷ ಎಂದು ಅವರಿಗೆ ಗೊತ್ತು. ಆದುದರಿಂದ ಅವರು ಆತನಿಗೆ ಸಂಪೂರ್ಣವಾಗಿ ಶರಣಾಗುತ್ತಾರೆ ಮತ್ತು ಕೃಷ್ಣಪ್ರಜ್ಞೆಯಲ್ಲಿ, ಪ್ರಭುವಿನ ಭಕ್ತಿಸೇವೆಯಲ್ಲಿ ನಿರತರಾಗುತ್ತಾರೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.