ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳುವವನು ನಿಜವಾದ ಶಾಂತಿಯನ್ನು ಪಡೆಯುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita: ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳುವವನು ನಿಜವಾದ ಶಾಂತಿಯನ್ನು ಪಡೆಯುತ್ತಾನೆ; ಗೀತೆಯ ಸಾರಾಂಶ ತಿಳಿಯಿರಿ

Bhagavad Gita Updesh: ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳುವವನು ನಿಜವಾದ ಶಾಂತಿಯನ್ನು ಪಡೆಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯಿರಿ.

ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳುವವನು ನಿಜವಾದ ಶಾಂತಿಯನ್ನು ಪಡೆಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯೋಣ.
ಶ್ರೀಕೃಷ್ಣನನ್ನು ಅರ್ಥಮಾಡಿಕೊಳ್ಳುವವನು ನಿಜವಾದ ಶಾಂತಿಯನ್ನು ಪಡೆಯುತ್ತಾನೆ ಎಂಬುದರ ಅರ್ಥವನ್ನು ಭಗವದ್ಗೀತೆಯಲ್ಲಿ ತಿಳಿಯೋಣ.

ಅಧ್ಯಾಯ 6- ಧ್ಯಾನ ಯೋಗ: ಶ್ಲೋಕ - 15

ಯಞ್ಜನ್ನೇವಂ ಸದಾತ್ಮಾನಂ ಯೋಗೀ ನಿಯತಮಾನಸಃ |

ಶಾನ್ತಿಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ ||15||

Bhagavad Gita Updesh in Kannada: ಹೀಗೆ ದೇಹ, ಮನಸ್ಸು ಮತ್ತು ಕಾರ್ಯಗಳ ನಿರಂತರ ನಿಯಂತ್ರಣವನ್ನು ಅಭ್ಯಾಸ ಮಾಡುತ್ತ ಯೋಗಿಯು ತನ್ನ ಮನಸ್ಸನ್ನು ನಿಯತಗೊಳಿಸಿಕೊಂಡು ಭಗವಂತನ ರಾಜ್ಯವನ್ನು (ಅಥವಾ ಕೃಷ್ಣನ ನಿವಾಸವನ್ನು) ಐಹಿಕ ಅಸ್ತಿತ್ವದ ಅಂತ್ಯದ ಮೂಲ ಪಡೆಯುತ್ತಾನೆ.

ಯೋಗಾಭ್ಯಾಸದ ಅಂತಿಮ ಗುರಿಯನ್ನು ಈಗ ಸ್ಪಷ್ಟವಾಗಿ ವಿವರಿಸಿದೆ. ಯೋಗಾಭ್ಯಾಸದ ಗುರಿ ಯಾವುದೇ ಐಹಿಕ ಸೌಲಭ್ಯವಲ್ಲ. ಅದರ ಗುರಿ ಎಲ್ಲ ಐಹಿಕ ಅಸ್ತಿತ್ವವನ್ನು ಕೊನೆಗಾಣಿಸುವುದು. ಭಗವದ್ಗೀತೆಯ ಪ್ರಕಾರ, ಆರೋಗ್ಯವನ್ನು ಉತ್ತಮಗೊಳಿಸಿಕೊಳ್ಳಲು ಬಯಸುವವನು ಅಥವಾ ಐಹಿಕ ಪರಿಪೂರ್ಣತೆಯನ್ನು ಬಯಸುವವನು ಯೋಗಿಯಲ್ಲ. ಐಹಿಕ ಭಗವಂತನ ಸೃಷ್ಟಿಯಲ್ಲಿ ಎಲ್ಲಿಯೂ ಶೂನ್ಯವಿಲ್ಲ. ಐಹಿಕ ಅಸ್ತಿತ್ವದ ಅಂತ್ಯದಿಂದ ಮನುಷ್ಯನು ಭಗವಂತನ ನಿವಾಸದ ಅಧ್ಯಾತ್ಮಿಕ ಗಗನವನ್ನು ಪ್ರವೇಶಿಸುವುದು ಸಾಧ್ಯವಾಗುತ್ತದೆ.

ಭಗವದ್ಗೀತೆಯು ಭಗವಂತನ ನಿವಾಸವನ್ನು ಸೂರ್ಯ, ಚಂದ್ರ ಅಥವಾ ವಿದ್ಯುಚ್ಛಕ್ತಿ ಯಾವುದರ ಅಗತ್ಯವೂ ಇಲ್ಲದ ಸ್ಥಳ ಎಂದು ಸ್ಪಷ್ಟವಾಗಿ ವರ್ಣಿಸಿದೆ. ಅಧ್ಯಾತ್ಮಿಕ ರಾಜ್ಯದಲ್ಲಿ ಎಲ್ಲ ಗ್ರಹಗಳಿಗೂ ಐಹಿಕ ಗಗನದಲ್ಲಿ ಸೂರ್ಯನಿಗಿರುವಂತೆ, ಸ್ವಯಂಪ್ರಕಾಶವಿದೆ. ಭಗವಂತನ ರಾಜ್ಯವು ಎಲ್ಲೆಲ್ಲಿಯೂ ಇದೆ. ಆದರೆ ಅಧ್ಯಾತ್ಮಿಕ ಗಗನವನ್ನು ಮತ್ತು ಗ್ರಹಗಳನ್ನು ಪರಂಧಾಮ ಎಂದು ಕರೆಯುತ್ತಾರೆ.

ಇಲ್ಲಿ ಭಗವಂತನೇ ಸ್ಪಷ್ಟವಾಗಿ ಹೇಳಿರುವಂತೆ (ಮತ್‌ಚಿತ್ತಃ ಮತ್ ಪರಃ, ಮತ್‌ಸ್ಥಾನಮ್) ಶ್ರೀಕಷ್ಣನನ್ನು ಅರ್ಥಮಾಡಿಕೊಳ್ಳುವುದರಲ್ಲಿ ಪರಿಪೂರ್ಣವಾದ ಯೋಗಿಯು ನಿಜವಾದ ಶಾಂತಿಯನ್ನು ಪಡೆಯಬಲ್ಲ ಮತ್ತು ಅವನ ಪರಂಧಾಮವಾದ ಕೃಷ್ಣಲೋಕವನ್ನು ಅಥವಾ ಗೋಲೋಕ ವೃಂದಾವನವನ್ನು ಕಟ್ಟಕಡೆಗೆ ತಲಪಬಲ್ಲ. ಬ್ರಹ್ಮ ಸಂಹಿತೆಯಲ್ಲಿ (5.37) ಗೋಲೋಕ ಏವ ನಿವಸತಿ ಅಖಿಲಾತ್ಮಭೂತಃ ಎಂದು ಸ್ಪಷ್ಟವಾಗಿ ಹೇಳಿದೆ. ಭಗವಂತನು ಗೋಲೋಕವೆಂಬ ಹೆಸರಿನ ತನ್ನ ನಿವಾಸದಲ್ಲಿ ಸದಾ ವಾಸಿಸುತ್ತಾನೆ. ಆದರೂ ತನ್ನ ಶ್ರೇಷ್ಠ ಅಧ್ಯಾತ್ಮಿಕ ಚೈತನ್ಯಗಳಿಂದ ಅವನು ಸರ್ವವ್ಯಾಪಿ ಬ್ರಹ್ಮನ್ ಅಲ್ಲದೆ ಅಂತರ್ಯಾಮಿ ಪರಮಾತ್ಮನೂ ಆಗಿದ್ದಾನೆ.

ಕೃಷ್ಣನನ್ನು ಮತ್ತು ಅವನ ಸ್ವಾಂಶ ವಿಸ್ತರಣವಾದ ವಿಷ್ಣುವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಯಾರೂ ಅಧ್ಯಾತ್ಮಿಕ ಗಗನವನ್ನು (ವೈಕುಂಠ) ತಲಪಲಾರರು, ಭಗವಂತನ ನಿರಂತರ ಆವಾಸವನ್ನು (ಗೋಲೋಕ ವೃಂದಾವನ) ಪ್ರವೇಶಿಲಾರರು. ಆದುದರಿಂದ, ಕೃಷ್ಣಪ್ರಜ್ಞೆಯಲ್ಲಿ ಕೆಲಸ ಮಾಡುವವನ ಮನಸ್ಸು ಕೃಷ್ಣನ ಕಾರ್ಯಗಳಲ್ಲಿ ಸದಾ ಮಗ್ನವಾಗಿರುವುದರಿಂದ (ಸ ವೈ ಮನಃ ಕೃಷ್ಣಪದಾರವಿನ್ದಯೋಃ) ಅವನು ಪರಿಪೂರ್ಣ ಯೋಗಿಯವು.

ವೇದಗಳಲ್ಲಿ ಸಹ (ಶ್ವೇತಾಶ್ವತರ ಉಪನಿಷತ್ತು 3.8) ತಮ್ ಏವ ವಿದಿತ್ವಾತಿ ಮೃತ್ಯಮ್ ಏತಿ-ದೇವೋತ್ತಮ ಪರಮ ಪುರುಷನಾದ ಕೃಷ್ಣನನ್ನು ಅರ್ಥಮಾಡಿಕೊಳ್ಳುವುದರಿಂದ ಮಾತ್ರವೇ ಹುಟ್ಟು ಸಾವುಗಳ ಮಾರ್ಗದಿಂದ ಬಿಡುಗಡೆಯಾಬಗಹುದು ಎಂದು ಹೇಳಿದೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಯೋಗಪದ್ಧತಿಯ ಪರಿಪೂರ್ಣತೆ ಎಂದರೆ ಐಹಿಕ ಅಸ್ತಿತ್ವದಿಂದ ಬಿಡುಗಡೆಯನ್ನು ಹೊಂದುವುದು. ಅದು ಮುಗ್ಧಜನರಿಗೆ ಮೋಸಮಾಡುವ ಯಕ್ಷಿಣಿಯಲ್ಲ. ಅಂಗಸಾಧನೆಯ ಕಸರತ್ತುಗಳೂ ಅಲ್ಲ.

(This copy first appeared in Hindustan Times Kannada website. To read more like this please logon to kannada.hindustantimes.com )