Bhagavad Gita: ಪ್ರಕೃತಿಯ ಈ 3 ಗುಣಗಳಿಂದ ಭ್ರಮೆಗೊಳಗಾದ ಜೀವಿಗಳ ಹಿಂದೆ ಭಗವಂತ ಇದ್ದಾನೆ; ಗೀತೆಯ ಸಾರಾಂಶ ಹೀಗಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Bhagavad Gita: ಪ್ರಕೃತಿಯ ಈ 3 ಗುಣಗಳಿಂದ ಭ್ರಮೆಗೊಳಗಾದ ಜೀವಿಗಳ ಹಿಂದೆ ಭಗವಂತ ಇದ್ದಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita: ಪ್ರಕೃತಿಯ ಈ 3 ಗುಣಗಳಿಂದ ಭ್ರಮೆಗೊಳಗಾದ ಜೀವಿಗಳ ಹಿಂದೆ ಭಗವಂತ ಇದ್ದಾನೆ; ಗೀತೆಯ ಸಾರಾಂಶ ಹೀಗಿದೆ

Bhagavad Gita Updesh: ಪ್ರಕೃತಿಯ ಈ 3 ಗುಣಗಳಿಂದ ಭ್ರಮೆಗೊಳಗಾದ ಜೀವಿಗಳ ಹಿಂದೆ ಭಗವಂತ ಇದ್ದಾನೆ ಎಂಬುದರ ಅರ್ಥ ಭಗವದ್ಗೀತೆಯ 7ನೇ ಅಧ್ಯಾಯದ 13ನೇ ಶ್ಲೋಕವನ್ನು ಓದಿ.

ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.

7ನೇ ಅಧ್ಯಾಯದ ಪರತ್ಪರ ಜ್ಞಾನ - ಶ್ಲೋಕ - 13

ತ್ರಿಭಿರ್ಗುಣಮಯೈರ್ಭಾರೇಭಿಃ ಸರ್ವಮಿದಂ ಜಗತ್ |

ಮೋಹಿತಂ ನಾಭಿಜಾನಾತಿ ಮಾಮೇಭ್ಯಃ ಪರಮವ್ಯಯಮ್||13||

ಅನುವಾದ: (ಸಾತ್ವಿಕ, ರಾಜಸ ಮತ್ತು ತಾಮಸವೆನ್ನುವ) ಮೂರು ಗುಣಗಳಿಂದ ಮೋಹಿತವಾಗಿ ಈ ಸಮಸ್ತ ಜಗತ್ತು ನನ್ನನ್ನು ಅರಿಯದೆ ಇದೆ. ನಾನು ಈ ಗುಣಗಳನ್ನು ಮೀರಿದವನು ಮತ್ತು ಅವ್ಯಯನು.

ಭಾವಾರ್ಥ: ಇಡೀ ಜಗತ್ತು ಐಹಿಕ ಪ್ರಕೃತಿಯ ಮೂರು ಗುಣಗಳಿಂದ ಮೋಹಗೊಂಡಿದೆ. ಈ ಮೂರು ಗುಣಗಳಿಂದ ಗೊಂದಲಕ್ಕೆ ಸಿಕ್ಕಿರುವವರು ಈ ಐಹಿಕ ಪ್ರಕೃತಿಯನ್ನು ಮೀರಿದ ಪರಮ ಪ್ರಭು ಕೃಷ್ಣನಿದ್ದಾನೆ ಎಂದು ಅರ್ಥಮಾಡಿಕೊಳ್ಳಲಾರರು.

Bhagavad Gita Updesh in Kannada: ಐಹಿಕ ಪ್ರಕೃತಿಯ ಪ್ರಭಾವಕ್ಕೆ ಸಿಕ್ಕಿರುವ ಪ್ರತಿಯೊಂದು ಜೀವಿಗೂ ಒಂದು ವಿಶಿಷ್ಟ ದೇಹವೂ ಅದಕ್ಕನುಗುಣವಾಗಿ ಒಂದು ವಿಶಿಷ್ಟ ರೀತಿಯ ಮಾನಸಿಕ ಮತ್ತು ದೈಹಿಕ ಚಟುವಟಿಕೆಗಳೂ ಇರುತ್ತದೆ. ಪ್ರಕೃತಿಯ ತ್ರಿಗುಣಗಳಲ್ಲಿ ನಾಲ್ಕು ವರ್ಗಗಳ ಜನರು ಕಾರ್ಯಪ್ರವೃತ್ತರಾಗಿದ್ದಾರೆ. ಸಂಪೂರ್ಣವಾಗಿ ಸಾತ್ವಿಕ ಗುಣದವರನ್ನು ಬ್ರಾಹ್ಮಣರು ಎಂದು ಕರೆಯುತ್ತಾರೆ. ಸಂಪೂರ್ಣವಾಗಿ ರಾಜಸ ಗುಣದವರನ್ನು ಕ್ಷತ್ರಿಯರು ಎಂದು ಕರೆಯುತ್ತಾರೆ. ರಾಜಸ ಮತ್ತು ತಾಮಸ ಎರಡೂ ಗುಣಗಳಿರುವವರನ್ನು ವೈಶ್ಯರು ಎಂದು ಕರೆಯುತ್ತಾರೆ. ಸಂಪೂರ್ಣವಾಗಿ ತಾಮಸದಲ್ಲಿರುವವರಿಗೆ ಶೂದ್ರರು ಎಂದು ಹೆಸರು. ಅದಕ್ಕೂ ಕೀಳಾಗಿರುವವರು ಪ್ರಾಣಿಗಳು. ಆದರೆ ಈ ಉಪಾಧಿಗಳು ಶಾಶ್ವತವಾದುವಲ್ಲ. ನಾವು ಬ್ರಾಹ್ಮಣರೋ, ಕ್ಷತ್ರಿಯರೋ, ವೈಶ್ಯರೋ ಅಥವಾ ಏನಾದರೂ ಆಗಿರಬಹುದು.

ಏನಿದ್ದರೂ ಈ ಜನ್ಮವು ತಾತ್ಕಾಲಿಕ. ಬದುಕು ತಾತ್ಕಾಲಿಕವಾದರೂ ಮತ್ತು ಮುಂದಿನ ಜನ್ಮದಲ್ಲಿ ಏನಾಗುತ್ತೇವೆ ಎಂದು ತಿಳಿಯದಿದ್ದರೂ ಮಾಯಾಶಕ್ತಿಯ ಸಮ್ಮೋಹನದಿಂದ ನಾವು ಬುದಕಿನ ದೈಹಿಕ ಪರಿಕಲ್ಪನೆಯಲ್ಲಿಯೇ ನಮ್ಮ ವಿಷಯವನ್ನು ಯೋಜನೆ ಮಾಡುತ್ತೇವೆ. ನಾವು ಅಮೆರಿಕನ್ನರು, ಭಾರತೀಯರು, ರಷ್ಯನರು ಅಥವಾ ಬ್ರಾಹ್ಮಣ, ಹಿಂದೂ, ಮುಸ್ಲಿ ಇತ್ಯಾದಿಯಾಗಿ ಯೋಚಿಸುತ್ತೇವೆ. ನಾವು ಐಹಿಕ ಪ್ರಕೃತಿಯ ಗುಣಗಳಲ್ಲಿ ಸಿಕ್ಕಿಬಿದ್ದರೆ ದೇವೋತ್ತಮ ಪರಮ ಪುರುಷನನ್ನು ಮರೆತುಬಿಡುತ್ತೇವೆ. ಆತನು ಎಲ್ಲ ಗುಣಗಳ ಹಿಂದಿದ್ದಾನೆ. ಪ್ರಕೃತಿಯ ಈ ಮೂರು ಗುಣಗಳಿಂದ ಭ್ರಮೆಗೊಳಗಾದ ಜೀವಿಗಳು ಈ ಐಹಿಕ ಹಿನ್ನೆಲೆಯ ಹಿಂದೆ ದೇವೋತ್ತಮ ಪರಮ ಪುರುಷನು ಇದ್ದಾನೆ ಎಂದು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಶ್ರೀಕೃಷ್ಣನು ಹೇಳುತ್ತಾನೆ.

ಮನುಷ್ಯರು, ದೇವತೆಗಳು, ಪ್ರಾಣಿಗಳು ಇತ್ಯಾದಿ ಹಲವಾರು ಬೇರೆ ಬೇರೆ ವರ್ಗಗಳ ಜೀವಿಗಳಿದ್ದಾರೆ. ಪ್ರತಿಯೊಬ್ಬರೂ ಐಹಿಕ ಪ್ರಕೃತಿಯ ಪ್ರಭಾವಕ್ಕೆ ಒಳಗಾಗಿದ್ದಾರೆ. ಅವರೆಲ್ಲರೂ ದಿವ್ಯನಾದ ದೇವೋತ್ತಮ ಪುರುಷನನ್ನು ಮರೆತಿದ್ದಾರೆ. ರಾಜಸ ಮತ್ತು ತಾಮಸ ಗುಣದವರು ಮತ್ತು ಸಾತ್ವಿಕ ಗುಣದವರು ಸಹ ಪರಾತ್ಪರ ಸತ್ಯದ ನಿರಾಕಾರ ಬ್ರಹ್ಮನ್ ಪರಿಕಲ್ಪನೆಯಾಚನೆ ಹೋಗಲಾರರು.

ಪರಮ ಪ್ರಭುವಿನ ವೈಯಕ್ತಿಕ ಸ್ವರೂಪದಲ್ಲಿ ಎಲ್ಲ ಸೌಂದರ್ಯ, ಶ್ರೀಮಂತಿಕೆ, ಜ್ಞಾನ, ಶಕ್ತಿ, ಕೀರ್ತಿ ಮತ್ತು ತ್ಯಾಗಗಳು ಸೇರಿವೆ. ಜೀವಿಗಳು ಪ್ರಭುವಿನ ಸನ್ನಿಧಿಯಲ್ಲಿ ಗೊಂದಲಕ್ಕೊಳಗಾಗುತ್ತಾರೆ. ಸಾತ್ವಿಕ ಗುಣದವರಿಗೆ ಸಹ ಅರ್ಥವಾಗದಿದ್ದರೆ ರಾಜಸ ಮತ್ತು ತಾಮಸ ಗುಣದವರ ಪಾಡೇನು? ಕೃಷ್ಣಪ್ರಜ್ಞೆಯು ಐಹಿಕ ಪ್ರಕೃತಿಯ ಈ ಮೂರು ಗುಣಗಳನ್ನೂ ಮೀರಿದು. ಕೃಷ್ಣಪ್ರಜ್ಞೆಯಲ್ಲಿ ನೆಲೆಸಿರುವವರು ವಾಸವವಾಗಿ ಮುಕ್ತಿಯನ್ನು ಪಡೆಯುತ್ತಾರೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.