Shiva Rudraksha Facts: ಶಿವನಿಗೆ ಏಕೆ ಈ ರುದ್ರಾಕ್ಷ ಬಲು ಇಷ್ಟ? ಈ ರುದ್ರಾಕ್ಷಿ ಕುರಿತು ನಿಮಗೆ ಗೊತ್ತಿರದ 14 ವಿಚಾರಗಳು
ಶಿವನಿಗೆ ರುದ್ರಾಕ್ಷ ಎಂದರೆ ಇಷ್ಟ. ಶಿವನ ಪೂಜೆ ಮಾಡುವಾಗಲೂ ರುದ್ರಾಕ್ಷಿ ಮಾಲೆ ಇರುವುದು ಕಡ್ಡಾಯ. ಇಲ್ಲದಿದ್ದರೆ, ಆ ಪೂಜೆ ಸಂಪನ್ನವಾಗದು. ರುದ್ರಾಕ್ಷ ಮಾಲೆಯ ಕೆಲವು ವಿಶೇಷ ವಿಚಾರಗಳನ್ನು ಜ್ಯೋತಿಷಿ. ಎಚ್ ಸತೀಶ್ ಪ್ರಸ್ತುತಪಡಿಸಿದ್ದಾರೆ.
Shiva Rudraksha Facts: ದೈವಾರಾದನೆಯಲ್ಲಿ ರುದ್ರಾಕ್ಷಿ ಮತ್ತು ತುಳಸಿ ಮಾಲೆ ವಿಶೇಷ ಸ್ಥಾನವನ್ನು ಅಲಂಕರಿಸಿದೆ. ರುದ್ರಾಕ್ಷಿಯ ಬಗ್ಗೆ ಜಾಬಲೋಪನಿಷತ್ ಮತ್ತು ರುದ್ರಾಕ್ಷ ಮಹಿಮಾಸ್ತೋತ್ರದಲ್ಲಿ ಸಂಪೂರ್ಣ ವಿವರ ದೊರೆಯುತ್ತದೆ. ರುದ್ರಾಕ್ಷಿ ಧಾರಣ, ವಿಭೂತಿ ಮತ್ತು ಶಿವ ಪಂಚಾಕ್ಷರಿ ಮಂತ್ರ ಮುಖ್ಯವೆನಿಸುತ್ತದೆ
ರುದ್ರಾಕ್ಷಿಯು ಮರದಿಂದ ಬಂದ ವಸ್ತುವಾಗಿದೆ. ಕೇವಲ ಧಾರ್ಮಿಕ ತಯಾರಿಕೆ ಮಾತ್ರವಲ್ಲ ಪ್ರಪಂಚದ ಖ್ಯಾತ ವಿಜ್ಞಾನಿಗಳು ಸಹ ರುದ್ರಾಕ್ಷಿಯಲ್ಲಿರುವ ಔಷಧೀಯ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ರುದ್ರಾಕ್ಷಿಯ ಬಗ್ಗೆ ನಮಗೆ ಶಿವಪುರಾಣ, ಬ್ರಹ್ಮಪುರಾಣ ಮತ್ತು ದೇವೀಭಾಗವತದಲ್ಲಿ ತಿಳಿದು ಬರುತ್ತದೆ. ಯಾವುದೇ ಪೂಜೆಯಾಗಲಿ ರುದ್ರಾಕ್ಷಿಯಿಂದ ಮಂತ್ರಮುಖೇನ ಅಭಿಷೇಕವನ್ನು ಮಾಡುತ್ತೇವೆ. ಒಟ್ಟಾರೆ ಶಿವ ಪುರಾಣದಂತೆ ವಿಭೂತಿ ಮತ್ತು ರುದ್ರಾಕ್ಷಿ ಇಲ್ಲದೆ ಶಿವನನ್ನು ವಹಿಸಿಕೊಳ್ಳಲು ಸಾಧ್ಯವೇ ಇಲ್ಲ. ಶಿವನು ಸಾಮವೇದ ಪ್ರಿಯ.
ಪುರಾಣ ಕಥೆ ಏನು ಹೇಳುತ್ತದೆ?
ರುದ್ರ ಎಂದರೆ ಶಿವ ಅಕ್ಷಿ ಎಂದರೆ ಕಣ್ಣುಗಳು. ಪೌರಾಣಿಕ ಕಥೆಯ ಅನ್ವಯ ಶ್ರೀಪುರಾಸುರನ ಸಂಹಾರಕ್ಕಾಗಿ ಶಿವನು ಆಯುಧವನ್ನು ಸೃಷ್ಟಿಸುತ್ತಾನೆ. ಆ ಸಮಯದಲ್ಲಿ ಶಿವನಿಗೆ ಆದ ಆನಂದ ಕಣ್ಣೀರಿನ ರೂಪದಲ್ಲಿ ಹೊರಬರುತ್ತದೆ. ಈ ಕಣ್ಣೀರಿನ ಹನಿಗಳು ಭೂಮಿಯ ಮೇಲೆ ಬಿದ್ದ ಕಾರಣ ರುದ್ರಾಕ್ಷಿಯ ಮರಗಳು ಬೆಳೆದವು ಎಂಬ ಪ್ರತೀತಿ ಇದೆ . ಕೆಲವು ಗ್ರಂಥಗಳಲ್ಲಿ ರುದ್ರಾಕ್ಷಿಯು ಶಿವನ ಬೆವರಿನಿಂದ ಸೃಷ್ಠಿಯಾಯಿತು ಎಂದೂ ಹೇಳುತ್ತಾರೆ.
ರುದ್ರಾಕ್ಷಗಳಲ್ಲಿ 14 ವಿಧಗಳಿವೆ
ಏಕಮುಖ ರುದ್ರಾಕ್ಷಿ ಇಂದ ಹಿಡಿದು ಚತುರ್ದಶಮುಖ ರುದ್ರಾಕ್ಷಿಯವರೆಗೂ ಒಟ್ಟು 14 ರೀತಿಯ ರುದ್ರಾಕ್ಷಿಗಳಿವೆ. ಈ 14 ರೀತಿ ರುದ್ರಾಕ್ಷಿಗಳು ಪ್ರತಿಯೊಂದು ತನ್ನದೇ ಆದ ಫಲಗಳನ್ನು ನೀಡುತ್ತವೆ. ಅದು ಜನ್ಮಕುಂಡಲಿಯ ಮೇಲೆ ನಿರ್ಧರಿತವಾಗುತ್ತದೆ. ವಿದ್ಯಾಭ್ಯಾಸ ಮತ್ತು ಉತ್ತಮ ಆರೋಗ್ಯ ಕುಟುಂಬದಲ್ಲಿನ ಕಲಹ ನಿಲ್ಲಲು ಇನ್ನೂ ಅನೇಕ ತೊಂದರೆಗಳಿಂದ ಪಾರಾಗಲು ರುದ್ರಾಕ್ಷಿಯ ಅವಶ್ಯಕತೆ ಇದೆ.
14 ಬಗೆಯ ರುದ್ರಾಕ್ಷಿಗಳು ಮತ್ತು ಅವುಗಳಿಗಿರುವ ಫಲಗಳು
- ಏಕಮುಖ ರುದ್ರಾಕ್ಷಿಯನ್ನು ಶಿವನಿಗೆ ಹೋಲಿಸಲಾಗುತ್ತದೆ. ಇದರಿಂದ ಬ್ರಹ್ಮ ಹತ್ಯಾ ದೋಷವು ಪರಿಹಾರವಾಗುತ್ತದೆ
- ದ್ವಿಮುಖ ರುದ್ರಾಕ್ಷಿಯು ಶಿವ ಪಾರ್ವತಿಯನ್ನು ಪ್ರತಿನಿಧಿಸುತ್ತದೆ. ಮುಖ್ಯವಾಗಿ ಈ ರುದ್ರಾಕ್ಷಿಯಿಂದ ಪತಿ-ಪತ್ನಿಯರಲ್ಲಿ ಅನ್ಯೋನ್ಯತೆ ಹೆಚ್ಚುತ್ತದೆ
- ತ್ರಿಮುಖ ರುದ್ರಾಕ್ಷಿಯು ಅಗ್ನಿ ದೇವನನ್ನು ಪ್ರತಿನಿಧಿಸುತ್ತದೆ. ಇದರಿಂದ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ
- ಚತುರ್ಮುಖ ರುದ್ರಾಕ್ಷಿಯು ಬ್ರಹ್ಮನನ್ನು ಸೂಚಿಸುತ್ತದೆ. ಇದು ವಿದ್ಯಾರ್ಥಿಗಳಿಗೆ ಅತಿ ಅವಶ್ಯಕವಾಗಿದೆ
- ಪಂಚಮುಖ ರುದ್ರಾಕ್ಷಿಯು ಶಿವನ ಐದು ರೂಪಗಳನ್ನು ಪ್ರತಿನಿಧಿಸುತ್ತದೆ. ಇದರಿಂದ ಶತ್ರು ಸಹ ನಮ್ಮ ಒಳ್ಳೆಯತನಕ್ಕೆ ಸೋಲುತ್ತಾನೆ ಎಂದು ಹೇಳಲಾಗಿದೆ
- ಷಣ್ಮುಖ ರುದ್ರಾಕ್ಷಿಯು ಸುಬ್ರಹ್ಮಣ್ಯ ಸ್ವಾಮಿ ಮತ್ತು ಗಣೇಶನನ್ನು ಸೂಚಿಸುತ್ತದೆ. ಇದರಿಂದ ಕೆಲಸ ಕಾರ್ಯಗಳಲ್ಲಿನ ಅಡ್ಡಿ ಆತಂಕಗಳು ನಿವಾರಣೆಯಾಗುತ್ತವೆ ಎಂದು ಹೇಳಲಾಗಿದೆ
- ಸಪ್ತ ಮುಖ ರುದ್ರಾಕ್ಷಿಯು ಸಪ್ತ ಮಾತ್ರಿಕೆಯರನ್ನು ಸೂಚಿಸುತ್ತದೆ. ಇದರಿಂದ ಮುಖ್ಯವಾಗಿ ಹಣದ ಕೊರತೆ ನೀಡುತ್ತದೆ
- ಅಷ್ಟಮುಖ ರುದ್ರಾಕ್ಷಿ ಗಣಪತೀಯ ಪ್ರತೀಕ. ಇದರಿಂದ ವಿದ್ಯೆ ಮತ್ತು ಯಶಸ್ಸು ದೊರೆಯುತ್ತದೆ
- ನವಮುಖ ರುದ್ರಾಕ್ಷಿ ಭೈರವ ಮತ್ತು ನವ ದುರ್ಗೆಯರನ್ನು ಸೂಚಿಸುತ್ತದೆ. ಇದರಿಂದ ಆರೋಗ್ಯಕ್ಕೆ ಒಳ್ಳೆಯದು ಮತ್ತು ಆತ್ಮವಿಶ್ವಾಸವು ಹೆಚ್ಚುತ್ತದೆ
- ದಶಮುಖರುದ್ರಾಕ್ಷಿ ವಿಷ್ಣುವನ್ನು ಸೂಚಿಸುತ್ತದೆ. ಇದರಿಂದ ನಮ್ಮಲ್ಲಿರುವ ಊಹಶಕ್ತಿಯು ಹೆಚ್ಚಾಗುತ್ತದೆ
- ಏಕಾದಶ ರುದ್ರಾಕ್ಷಿ ಇದು ರುದ್ರ ಸಂಕೇತವಾಗಿದೆ. ರುದ್ರ ಎಂದರೆ ಕೇವಲ ಒಂದು ದೇವತೆಯಲ್ಲ ಒಟ್ಟಾರೆ 11 ದೇವತೆಗಳು ಆಗುತ್ತಾರೆ. ಆದ್ದರಿಂದಲೇ 11 ಬಾರಿ ರುದ್ರವನ್ನು ಹೇಳಿಕೊಂಡಲ್ಲಿ ಎಲ್ಲಾ ರೀತಿಯ ಅಡ್ಡಿ ಆತಂಕಗಳು ದೂರವಾಗಿ ಯಶಸ್ಸು ಲಭಿಸುತ್ತದೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ತಿಳಿಸಿವೆ
- ದ್ವಾದಶ ಮುಖ ರುದ್ರಾಕ್ಷಿ ಇದು ವಿಷ್ಣುಸ್ವರೂಪಿಯಾಗಿದೆ. ಆರೋಗ್ಯಕ್ಕೆ ಒಳ್ಳೆಯದು ಮತ್ತು ಧಾರಿದ್ಯ ನಿವಾರಣೆ ಆಗುತ್ತದೆ. ತ್ರಯೋದಶಮುಖರುದ್ರಾಕ್ಷಿ ಇದು ಮನ್ಮಥನನ್ನು ಸೂಚಿಸುತ್ತದೆ ಇದರಿಂದ ನಮ್ಮ ಮನೊಕಾಮನೆಗಳು ಕೈಗೂಡುತ್ತವೆ
- ಚತುರ್ಮುಖರುದ್ರಾಕ್ಷಿ ಇದು ಭಗವಾನ್ ಶಿವನನ್ನು ಸೂಚಿಸುತ್ತದೆ. ಇದರಿಂದ ಕೆಟ್ಟ ಹೆಸರು ನಿವಾರಣೆಯಾಗಿ ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನಗಳು ದೊರೆಯಲಿವೆ.