Darshan discharged: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದರ್ಶನ್; ಅಪ್ಪನನ್ನು ಕರೆದುಕೊಂಡು ಹೋಗಲು ಬಂದ ಮಗ ವಿನೀಶ್
ಆಸ್ಪತ್ರೆಯಿಂದ ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಅವರ ಜೊತೆ ಅವರ ಮಗ ವಿನೀಶ್ ಇದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಬಂಧಿಯಾಗಿದ್ದಾಗಿನಿಂದಲೇ ದರ್ಶನ್‌ಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ತೀವ್ರವಾದ ಬೆನ್ನು ನೋವಿನಿಂದ ಬಳಲುತ್ತಿದ್ದರು ಎಂದು ಹೇಳಲಾಗಿತ್ತು. ಅದಾದ ನಂತರ ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆರೋಗ್ಯದಲ್ಲಿ ಸುಧಾರಣೆ ಕಂಡು ಬರದೇ ಇದ್ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ ಎಂದೂ ಸಹ ಹೇಳಲಾಗಿತ್ತು. ಆದರೆ ಇಂದು ದರ್ಶನ್ ಡಿಸ್ಚಾರ್ಜ್ ಆಗಿದ್ದಾರೆ. ಅವರು ಆಸ್ಪತ್ರೆಯಿಂದ ಹೊರ ನಡೆಯುತ್ತಿರುವ ದ್ರಶ್ಯಗಳು ವೈರಲ್ ಆಗುತ್ತಿದೆ.
ಜೈಲಿಂದ ರಿಲೀಸ್ ಆದ ಬಳಿಕ ನಟ ದರ್ಶನ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣ ಅವರು ನಟ ದರ್ಶನ್ ಸಿಟಿ ಸಿವಿಲ್ ಕೋರ್ಟ್ಗೆ ಹೋಗಿದ್ದಾರೆ. ಜಾಮೀನು ಸಿಕ್ಕ ಬಳಿಕ ಆರೋಪಿ ನ್ಯಾಯಾಧೀಶರ ಮುಂದೆ ಹಾಜರಾಗಬೇಕು ಎಂಬ ಆದೇಶವಿರುವ ಕಾರಣ ಅವರು ಮತ್ತೆ ಕೋರ್ಟ್‌ನತ್ತ ಮುಖ ಮಾಡಿದ್ದಾರೆ.
ಅಲ್ಲಿ ಸಹಿ ಮಾಡಬೇಕಿರುತ್ತದೆ. ಕೆಲವು ನಿಯಮಗಳನ್ನು ಪಾಲಿಸಲೇಬೇಕಾಗಿರುತ್ತದೆ. ಆ ಕಾರಣಕ್ಕಾಗಿ ಅವರು ಮತ್ತೆ ಕೋರ್ಟ್‌ಗೆ ಹೋಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಸಮಯದಲ್ಲಿ ಅವರ ಜೊತೆ ಅವರ ಮಗ ಕೂಡ ಇದ್ದಾರೆ. ಜೊತೆಯಾಗಿ ನಿಂತು ದರ್ಶನ್‌ಗೆ ನಡೆಯಲು ಸಹಾಯ ಮಾಡಿದ್ದಾರೆ. ಆಸ್ಪತ್ರೆಯಿಂದ ಅವರೇ ಭುಜಕೊಟ್ಟು ನಡೆಸಿಕೊಂಡು ಬಂದಿದ್ದಾರೆ ವಿನೀಶ್.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ನಟ ದರ್ಶನ್, ಪವಿತ್ರಾ ಗೌಡ ಸೇರಿ ಪ್ರಕರಣದ 7 ಆರೋಪಿಗಳಿಗೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದೆ. ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಈ ತೀರ್ಪು ನೀಡಿದೆ. ಈ ಹಿಂದೆ ಬೆನ್ನು ಹುರಿಯ ಸಮಸ್ಯೆ ಸಲುವಾಗಿ ಆರು ವಾರಗಳ ಕಾಲ ಮಧ್ಯಂತರ ಜಾಮೀನು ಪಡೆದಿದ್ದ ದರ್ಶನ್ ಚಿಕಿತ್ಸೆಗೆ ಒಳಗಾಗಿದ್ದರು.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟ ದರ್ಶನ್ ಅವರಿಗೆ ಹೈ ಕೋರ್ಟ್ ಷರತ್ತುಬದ್ಧ ಮಧ್ಯಂತರ ಜಾಮೀನು ನೀಡಿದೆ. ಇದರಿಂದ ದರ್ಶನ್‍ಗೆ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ಕೆಲವು ತಿಂಗಳುಗಳ ಕಾಲ ಬೇಸರದಲ್ಲಿದ್ದ ದರ್ಶನ್ ಸಹ ಖುಷಿಯಾಗಿದ್ದಾರೆ.
ಜೂನ್ ತಿಂಗಳಲ್ಲಿ ದರ್ಶನ್ ಬಂಧನಕ್ಕೊಳಗಾದಾಗ, ಅವರು ಮೂರ್ನಾಲ್ಕು ತಿಂಗಳು ಹೊರಗೆ ಬರುವುದು ಕಷ್ಟ ಎಂದು ಹೇಳಲಾಗಿತ್ತು. ಹಾಗಾದರೆ, ದರ್ಶನ್ ಅವರ ಮುಂದಿನ ಚಿತ್ರಗಳ ಕಥೆಯೇನು? ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು ಮತ್ತೆ ‘ದಿ ಡೆವಿಲ್’ ಚಿತ್ರೀಕರಣ ಆರಂಭವಾಗುತ್ತದೆಯೇ? ಎಂಬ ಹೊಸ ಪ್ರಶ್ನೆ ಮೂಡಿದೆ.