Ramachari Serial: ಕೋದಂಡನ ವರ್ತನೆಯಿಂದ ಬೇಸರಗೊಂಡ ಜಾನಕಿ; ಚಾರು ಮಾತಿನಿಂದ ಸಮಾಧಾನ ಆಗುತ್ತಾ?
ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಯಾವಾಗಲೂ ಮನೆಯ ಸಂತಸವನ್ನೇ ಬಯಸುತ್ತಾಳೆ. ಆದರೆ ಒಂದಲ್ಲೊಂದು ರೀತಿಯಲ್ಲಿ ಅವಳಿಗೆ ಹಾಗೂ ಅವಳ ಕುಟುಂಬಕ್ಕೆ ತೊಂದರೆ ಆಗುತ್ತಲೇ ಇರುತ್ತದೆ. ಯಾವಾಗಲೂ ಸಮಸ್ಯೆ ಬಗೆಹರಿಸುವುದೇ ಅವಳಿಗೆ ಕೆಲಸವಾಗಿದೆ.
ರಾಮಾಚಾರಿಯನ್ನು ಪ್ರೀತಿಸಿ ಮನೆಗೆ ಬಂದವಳು ಅವಳಾಗಿದ್ದರೂ ಇಡೀ ಮನೆಯನ್ನು ಸಂತೋಷದಿಂದ ಇಡಲು ಬಯಸುತ್ತಾಳೆ. ಚಾರು ಯಾವಾಗಲೂ ಮನೆಯವರ ಹಿತಾಸಕ್ತಿಯ ಬಗ್ಗೆ ಹೆಚ್ಚಾಗಿ ಗಮನಕೊಡುತ್ತಾಳೆ. ಅವಳಿಗೆ ಯಾವಾಗಲೂ ತನ್ನ ಕುಟುಂಬಕ್ಕೆ ಒಳಿತಾಗಬೇಕು ಎಂಬ ಆಸೆ ಇದೆ. ಹೀಗಿರುವಾಗ ಈಗ ಕೋದಂಡ ಮನೆಗೆ ಕುಡಿದುಕೊಂಡು ಬಂದ ಕಾರಣ ಜಾನಕಿ ಗಂಡ ನಾರಾಯಣಾಚಾರ್ಯರು ಅವನಿಗೆ ಥಳಿಸಿರುತ್ತಾರೆ. ಅದನ್ನು ನೆನಪಿಸಿಕೊಂಡು ಜಾನಕಿಗೆ ಬೇಸರ ಆಗಿದೆ.
ಆದರೆ ಏನಾದರೂ ತಮಾಷೆ ಮಾಡಿ ಅವಳನ್ನು ಸಮಾಧಾನ ಮಾಡಬೇಕು ಎಂದು ಸೊಸೆಯಂದಿರು ಪ್ರಯತ್ನ ಮಾಡುತ್ತಿದ್ದಾರೆ. ಆಗ ಚಾರು ಹೇಳುತ್ತಾಳೆ. “ಅತ್ತೆ ನೀವು ಯಾವಾಗಲೂ ನಮ್ಮ ಮಾತಿಗೆ ಇಲ್ಲ ಎಂದು ಹೇಳುವುದಿಲ್ಲ. ಯಾವಾಗಲೂ ನಮ್ಮ ಪರವಾಗಿಯೇ ಇರುತ್ತೀರಾ. ನಾನು ಹೀಗಂದ್ರೆ ರುಕ್ಕು ನಂಬ್ತಾನೇ ಇಲ್ಲ” ಎಂದು ಹೇಳುತ್ತಾಳೆ.
ಜಾನಕಿಗೆ ಬೇಸರ
ಆಗ ರುಕ್ಕು ಕೂಡ ಅತ್ತೆಯನ್ನು ಮಾತನಾಡಿಸುವ ಪ್ರಯತ್ನ ಮಾಡುತ್ತಾಳೆ. ಚಾರು ಎರಡರಲ್ಲಿ ಒಂದು ಬೆರಳು ಮುಟ್ಟಿ ಅತ್ತೆ ಎಂದು ಕೇಳುತ್ತಾಳೆ. ನಂತರ ಸುಮ್ಮನೆ ಖುಷಿ ಪಡುತ್ತಾಳೆ. ಯಾಕೆ ಎಂದು ಜಾನಕಿ ಕೇಳಿದಾಗ "ಅತ್ತೆ ನನಗೆ ಹೆಣ್ಣು ಮಗು ಬೇಕು ಎಂದು ಅಂದುಕೊಂಡಿದ್ದೆ ನೀವು ಅದನ್ನೇ ಆಯ್ಕೆ ಮಾಡಿದ್ದೀರಿ, ಇನ್ನು ಗಂಡು ಮಗು ಬೇಕು ಎಂದು ರುಕ್ಕುಗೆ ಆಸೆ ಇತ್ತಂತೆ, ನೀವು ಅದೇ ಬೆರಳು ಮುಟ್ಟಿದ್ದೀರಿ" ಎಂದು ಹೇಳುತ್ತಾಳೆ. ಹೀಗೆ ಅವರಿಬ್ಬರು ತಮಾಷೆ ಮಾಡುವಾಗ ಜಾನಕಿಗೆ ಬೇಸರ ಆಗುತ್ತದೆ. ನಿಮಗೆ ಯಾರಾದರೂ ಹುಟ್ಟಲಿ ಆದರೆ ನನ್ನ ಮಗನ ರೀತಿ ಕುಡಿಯುವುದನ್ನು ಕಲಿಯದೇ ಇರಲಿ ಎನ್ನುತ್ತಾರೆ. ಆ ಮಾತಿನಲ್ಲೇ ಅವರಿಗೆ ಎಷ್ಟು ಬೇಸರ ಆಗಿದೆ ಎನ್ನುವುದು ಅರ್ಥ ಆಗುತ್ತದೆ.
ಕೋದಂಡನ ಅಂತರಾಳ
ಕೋದಂಡ ತುಂಬಾ ಬೇಸರ ಮಾಡಿಕೊಂಡಿದ್ದಾನೆ. ಮನೆಯವರೆಲ್ಲ ಎದೆ ಎತ್ತರಕ್ಕೆ ಬೆಳೆದ ಮಗನಿಗೆ ಹೊಡೆಯುವುದನ್ನು ನೋಡಿ ಬೇಸರ ಮಾಡಿಕೊಂಡಿದ್ದಾರೆ. ಯಾಕೆ ಇಲ್ಲಿ ಈ ರೀತಿ ಆಗ್ತಾ ಇದೆ ಎಂದು ಕಂಗಾಲಾಗಿದ್ದಾರೆ. ರುಕ್ಕು, ರಾಮಾಚಾರಿ, ಜಾನಕಿ ಎಲ್ಲರೂ ಅಲ್ಲೇ ನಿಂತಿದ್ದಾರೆ. ಆದರೂ ನಾರಾಯಣಾಚಾರ್ಯರು ಮಾತ್ರ ಹೊಡೆಯುವುದನ್ನು ನಿಲ್ಲಿಸಿಲ್ಲ.
ರಾಮಾಚಾರಿ ಧಾರಾವಾಹಿ
ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟಿ ಎಂಬ ಎರಡು ಪಾತ್ರಗಳನ್ನು ಒಬ್ಬರೇ ನಿಭಾಯಿಸುತ್ತಿದ್ದಾರೆ. ದ್ವಿಪಾತ್ರದಲ್ಲಿ ಅಭಿನಯಿಸುತ್ತಿರುವ ಏಕೈಕ ಧಾರಾವಾಹಿ ಇದಾಗಿದ್ದು ಜನಮನ್ನಣೆ ಗಳಿಸಿದೆ. ಇದರಲ್ಲಿ ಗೌರವಯುತ ಕುಟುಂಬಕ್ಕೆ ಒಬ್ಬ ಶ್ರೀಮಂತರ ಮನೆ ಮಗಳು ಚಾರು ಮದುವೆ ಆಗಿ ಬರುತ್ತಾಳೆ. ನಂತರದ ದಿನಗಳಲ್ಲಿ ಅವಳು ಯಾವ ರೀತಿ ತನ್ನ ಸಂಸಾರಕ್ಕೆ ಹೊಂದಿಕೊಳ್ಳುತ್ತಾಳೆ. ಯಾವ ರೀತಿ ಮನೆತನದ ಗೌರವ ಕಾಪಾಡುತ್ತಾಳೆ ಎನ್ನುವುದೇ ಈ ಧಾರಾವಾಹಿಯ ಮೂಲ ಕಥೆಯಾಗಿದೆ.
ರಾಮಾಚಾರಿ ಧಾರಾವಾಹಿ ಪಾತ್ರವರ್ಗ
ಮೌನ ಗುಡ್ಡೆ ಮನೆ - ಚಾರು
ರಿತ್ವಿಕ್ ಕ್ರಪಾಕರ್ - ರಾಮಾಚಾರಿ
ರಿತ್ವಿಕ್ ಕ್ರಪಾಕರ್ - ಕೃಷ್ಣ (ಕಿಟ್ಟಿ)
ಚಿ ಗುರುದತ್ - ಜಯಶಂಕರ್
ಶಂಕರ್ ಅಶ್ವಥ್ - ನಾರಾಯಣಾಚಾರಿ
ಐಶ್ವರ್ಯ ವಿನಯ್ - ವೈಶಾಖ
ಅಂಜಲಿ ಸುಧಾಕರ್ - ಜಾನಕಿ