ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Numerology: ದೇವರ ಮೇಲೆ ವಿಶೇಷ ಭಕ್ತಿ, ಭೋಜನಪ್ರಿಯರು, ಸರಳ ಜೀವನದಲ್ಲೇ ಸಂತಸ ಕಾಣುವವರು; 26ನೇ ತಾರೀಕು ಜನಿಸಿದವರ ಗುಣಸ್ವಭಾವ

Numerology: ದೇವರ ಮೇಲೆ ವಿಶೇಷ ಭಕ್ತಿ, ಭೋಜನಪ್ರಿಯರು, ಸರಳ ಜೀವನದಲ್ಲೇ ಸಂತಸ ಕಾಣುವವರು; 26ನೇ ತಾರೀಕು ಜನಿಸಿದವರ ಗುಣಸ್ವಭಾವ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 26ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ.

26ನೇ ತಾರೀಕು ಜನಿಸಿದವರ ಗುಣಸ್ವಭಾವ
26ನೇ ತಾರೀಕು ಜನಿಸಿದವರ ಗುಣಸ್ವಭಾವ

ಈ ದಿನಾಂಕದಲ್ಲಿ ಜನಿಸಿರುವವರ ಜೀವನವು ಬಾಲ್ಯದಲ್ಲಿ ಕೊಂಚ ಕಷ್ಟಕರವಾಗಿರುತ್ತದೆ. ಮಧ್ಯಮ ವಯಸ್ಸಿನಲ್ಲಿ ಜೀವನವು ಸಾಧಾರಣ ಮಟ್ಟದಲ್ಲಿ ಇರುತ್ತದೆ. ಆದರೆ ಜೀವನದಲ್ಲಿ ಅತ್ಯುತ್ತಮ ಮಟ್ಟವನ್ನು ತಲುಪುತ್ತಾರೆ. ಕಷ್ಟ ನಷ್ಟಗಳಿಗೆ ಭಯಪಡುವುದಿಲ್ಲ. ಮನಸ್ಸಿಗೆ ಬೇಸರವಾದಾಗ ಕುಟುಂಬದ ಹಿರಿಯರ ಆಶ್ರಯದಲ್ಲಿ ಸಂತಸ ಕಾಣುತ್ತಾರೆ. ಜೀವನದಲ್ಲಿ ಕಷ್ಟಗಳು ಎದುರಾದಾಗ ದೇವರ ಮೊರೆ ಹೋಗುತ್ತಾರೆ. ಇವರಿಗೆ ಧಾರ್ಮಿಕ ಕ್ರಿಯಾವಿಧಿಗಳನ್ನು ನಡೆಸಲು ಎಲ್ಲಿಲ್ಲದ ಆಸಕ್ತಿ ಇರುತ್ತದೆ. ಅದರಲ್ಲಿಯೂ ಹೆಣ್ಣು ದೇವರಲ್ಲಿ ವಿಶೇಷವಾದಂತಹ ನಂಬಿಕೆ ಮತ್ತು ಭಕ್ತಿ ಇರುತ್ತದೆ. ಈ ಕಾರಣದಿಂದಾಗಿ ತಾಯಿ, ಅತ್ತೆ, ಮಗಳು, ಮಾತ್ರವಲ್ಲದೆ ಯಾವುದೇ ಹೆಣ್ಣು ಮಕ್ಕಳಾಗಲಿ ಅವರನ್ನು ಗೌರವದಿಂದ ಕಾಣುತ್ತಾರೆ. ಸಾಮಾನ್ಯವಾಗಿ ಪಂಚಮುಖಿ ಆಂಜನೇಯ, ಪಂಚಮುಖಿ ಗಣಪತಿ, ಷಣ್ಮುಖ ಅಥವಾ ಹೆಣ್ಣುದೇವರನ್ನು ನಂಬುತ್ತಾರೆ. ಇವರು ತಮ್ಮ ಉತ್ತಮ ಪ್ರಯತ್ನವಿಲ್ಲದೆ ಮತ್ತು ತಮ್ಮ ಜವಾಬ್ದಾರಿಯನ್ನು ಅರಿಯದೆ ದೇವರ ಸಹಾಯವನ್ನು ಬಯಸುವುದಿಲ್ಲ. ಇವರಿಗೆ ತಾಯಿಯವರಿಂದ ಒಳ್ಳೆಯ ಗುಣಗಳು ಬರುತ್ತವೆ. ತಾಯಿಯ ಮೇಲೆ ಪ್ರೀತಿಯು ಹೆಚ್ಚು. ತಾಯಿಗೆ ತಿಳಿಸದೆ ಇವರು ಯಾವುದೇ ಕೆಲಸವನ್ನು ಮಾಡುವುದಿಲ್ಲ. ಈ ದಿನಾಂಕದಲ್ಲಿ ಜನಿಸಿದ ಸ್ತ್ರೀಯರಿಗೆ ವಿಶೇಷವಾದಂತಹ ಫಲಗಳು ದೊರೆಯುತ್ತವೆ.

ಯಾವುದೇ ಕೆಲಸ ಮಾಡಲು ಅಂಜುವವರಲ್ಲ

ಪ್ರಭಾವಕ್ಕೆ ಮಣಿದು ಮನಸ್ಸಿಲ್ಲದೆ ಯಾವುದೇ ಕೆಲಸವನ್ನು ಮಾಡುವುದಿಲ್ಲ. ಹಾಗೆಯೇ ಇವರಿಗೆ ಒಪ್ಪಿಗೆಯಾದರೆ ಬೇರೆಯವರ ಪ್ರಭಾವಕ್ಕೆ ಒಳಗಾಗುವುದು ಇಲ್ಲ. ಒಟ್ಟಾರೆ ತಮ್ಮ ಜೀವನಕ್ಕೆ ತಾವೇ ಶಿಲ್ಪಿಗಳಾಗುತ್ತಾರೆ. ಬೇರೆಯವರಿಗೆ ಸಹಾಯ ಮಾಡುವಲ್ಲಿ ಮೊದಲಿಗರು. ಕೂಲಿ ಕಾರ್ಮಿಕರ ಬಗ್ಗೆ ವಿಶೇಷ ಅನುಕಂಪ ಇರುತ್ತದೆ. ಉದಾರಿಗಳು. ಆದರೆ ಬೇಗನೆ ಕೋಪ ಬರುತ್ತದೆ. ಕೋಪದಲ್ಲಿ ಉದ್ವೇಗದಿಂದ ವರ್ತಿಸುತ್ತಾರೆ. ಆದರೆ ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದರೆ ಸ್ನೇಹಿತರಾಗುತ್ತಾರೆ. ಇವರಿಗೆ ವಿವಾದವೆಂದರೆ ಆಗುವುದಿಲ್ಲ. ಆದರೆ ವಾದ ಮಾಡುವಲ್ಲಿ ಮೊದಲಿಗರು ಸುಲಭವಾಗಿ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಇವರು ಆಡುವ ಮಾತು ಅಥವಾ ಕೆಲಸ ಸರಿ ಇಲ್ಲ ಎಂದು ತಿಳಿದರು ನಿಲ್ಲಿಸುವುದಿಲ್ಲ. ತಾಯಿಯ ಸಂಬಂಧಿಕರ ಜೊತೆಯಲ್ಲಿ ವಿವಾಹವಾಗುತ್ತದೆ. ದಾಂಪತ್ಯ ಜೀವನವು ಸುಖ ಸಂತೋಷಗಳಿಂದ ಕೂಡಿರುತ್ತದೆ. ಮಾತನಾಡಲು ಆರಂಭಿಸಿದರೆ ಸುಲಭವಾಗಿ ನಿಲ್ಲಿಸುವುದಿಲ್ಲ. ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಅಂಜುವುದಿಲ್ಲ. ರುಚಿಕರವಾದ ಭೋಜನವೆಂದರೆ ಬಲು ಇಷ್ಟ. ತಾವು ಆಹಾರ ಸೇವಿಸುವುದಲ್ಲದೆ ಬೇರೆಯವರಿಗೂ ಆಹಾರದ ವ್ಯವಸ್ಥೆ ಮಾಡುವಿರಿ.

ಐಷಾರಾಮಿ ಜೀವನಕ್ಕೆ ಒಲ್ಲೆ ಎನ್ನುವ ಜನ

ಹಣ ಗಳಿಕೆಯಲ್ಲಿ ಸದಾ ಮುಂದಿರುತ್ತಾರೆ. ಕಾನೂನಿನ ಸಹಾಯದಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಹಲವರಿಗೆ ಉದ್ಯೋಗ ಗಳಿಸಲು ಸಹಾಯ ಮಾಡುತ್ತಾರೆ. ಅಜೀರ್ಣದಿಂದ ತೊಂದರೆ ಉಂಟಾಗುತ್ತದೆ. ವಿಶ್ರಾಂತಿ ಪಡೆಯದೆ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಮಧ್ಯವಯಸ್ಸಿನಲ್ಲಿ ಜೀವನದಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತವೆ. ಹಣಕಾಸಿನ ಕೊರತೆ ಇವರನ್ನು ಕಾಡುವುದಿಲ್ಲ. ಇವರ ಕೆಲವೊಂದು ಹವ್ಯಾಸಗಳು ಜೊತೆಗಾರರಿಗೆ ಬೇಸರವನ್ನು ಮೂಡಿಸುತ್ತದೆ. ಹೆಣ್ಣು ಮಕ್ಕಳಾದರೆ ಚಿಕ್ಕವಯಸ್ಸಿನಲ್ಲಿ ಕುಟುಂಬದ ಜವಾಬ್ದಾರಿ ದೊರೆಯುತ್ತದೆ. ವಿಶ್ವಾಸ ಹೆಚ್ಚಿನದಾಗಿರುತ್ತದೆ. ಸುಂದರವಾದ ವಸ್ತುಗಳನ್ನು ಕೊಳ್ಳಲು ಬಯಸುತ್ತಾರೆ. ಐಷಾರಾಮಿ ಜೀವನವನ್ನು ಇಷ್ಟಪಡುವುದಿಲ್ಲ. ಸರಳ ಜೀವನದಲ್ಲಿ ಸಂತಸ ಕಾಣುವಿರಿ. ಧಾರ್ಮಿಕ ಗುರುಗಳ ಆಶೀರ್ವಾದ ಇವರಿಗೆ ದೊರೆಯುತ್ತದೆ. ಕ್ರಮೇಣವಾಗಿ ಜೀವನದಲ್ಲಿ ಅಭಿವೃದ್ಧಿ ಹೊಂದುತ್ತಾರೆ. ಕುಟುಂಬದ ಸದಸ್ಯರಲ್ಲಿ ನಂಬಿಕೆ ಮೂಡಲು ಪ್ರೀತಿ ವಿಶ್ವಾಸ ಹೆಚ್ಚಲು ಶ್ರಮಿಸುತ್ತಾರೆ. ಇವರು ಯಾರನ್ನು ಅವಲಂಬಿಸುವುದಿಲ್ಲ. ಕೂಡಿಟ್ಟ ಹಣವನ್ನು ಖರ್ಚು ಮಾಡಲು ಇಚ್ಚಿಸುವುದಿಲ್ಲ. ಸದಾಕಾಲ ಯಾವುದಾದರೂ ಒಂದು ಕೆಲಸ ಕಾರ್ಯಗಳಲ್ಲಿ ಮುಂದುವರೆಯುತ್ತಾರೆ. ಸರಳ ಜೀವನ ನಡೆಸಲು ಬೇಕಾದ ಹಣ ಸಂಪಾದನೆ ಇವರಿಗೆ ಕಷ್ಟದ ಮಾತಲ್ಲ. ಸ್ವಂತ ಬಳಕೆಗಾಗಿ ಐಷಾರಾಮಿ ವಾಹನವನ್ನು ಕೊಳ್ಳುತ್ತಾರೆ.

ಬರಹ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)