ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಬೆರಳು ತೋರಿದಲ್ಲಿ ಹಸ್ತ ನುಂಗುವ ಚಾಣಾಕ್ಷರು, ವಿದೇಶದಲ್ಲಿ ಕೆಲಸ ಪಡೆದು ನೆಲೆಸುವರು; 23ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

ಬೆರಳು ತೋರಿದಲ್ಲಿ ಹಸ್ತ ನುಂಗುವ ಚಾಣಾಕ್ಷರು, ವಿದೇಶದಲ್ಲಿ ಕೆಲಸ ಪಡೆದು ನೆಲೆಸುವರು; 23ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ

Birth Date Astrology: ಯಾವುದೇ ವ್ಯಕ್ತಿಯ ಗ್ರಹಗತಿಗಳನ್ನು ನೋಡುವಾಗ ಜನ್ಮ ದಿನಾಂಕವನ್ನು ಪರಿಗಣಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ಹೇಗಿರಬಹುದು ಎಂದು ಅಂದಾಜಿಸಲಾಗುತ್ತದೆ. ಅದೇ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕದ ಆಧಾರದ ಮೇಲೆಯೂ ಅವರ ಗುಣಧರ್ಮ ಹೇಗಿದೆ ಎಂಬುದನ್ನು ಹೇಳಬಹುದು. 23ನೇ ತಾರೀಕಿನಂದು ಜನಿಸಿದವರ ಗುಣಲಕ್ಷಣ ತಿಳಿಯಿರಿ.

ಬೆರಳು ತೋರಿದಲ್ಲಿ ಹಸ್ತ ನುಂಗುವ ಚಾಣಾಕ್ಷರು, ವಿದೇಶದಲ್ಲಿ ಕೆಲಸ ಪಡೆದು ನೆಲೆಸುವರು; 23ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ
ಬೆರಳು ತೋರಿದಲ್ಲಿ ಹಸ್ತ ನುಂಗುವ ಚಾಣಾಕ್ಷರು, ವಿದೇಶದಲ್ಲಿ ಕೆಲಸ ಪಡೆದು ನೆಲೆಸುವರು; 23ನೇ ತಾರೀಖಿನಂದು ಜನಿಸಿದವರ ಗುಣಲಕ್ಷಣ (PC: Canva)

23ನೇ ತಾರೀಖಿನಂದು ಜನಿಸಿದವರಿಗೆ ಚಿಕ್ಕ ವಯಸ್ಸಿನಿಂದಲೇ ಜನಸೇವೆ ಮಾಡುವ ಮನಸ್ಸು ಇರುತ್ತದೆ. ಆದರೆ ಮಿತಿ ಮೀರಿದ ತುಂಟತನ ಮತ್ತು ಸೋಮಾರಿತನ ಇದಕ್ಕೆ ಆಸ್ಪದ ನೀಡುವುದಿಲ್ಲ. ಅರಿವೇ ಇಲ್ಲದಂತೆ ಪ್ರತಿದಿನ ಒಂದಲ್ಲಾ ಒಂದು ತಪ್ಪು ಮಾಡುತ್ತೀರಿ. ಚಿಕ್ಕ ವಯಸ್ಸಿನಲ್ಲಿ ಮನೆಯಲ್ಲಿ ಇರುವ ಜನರನ್ನು ಕಾಡಿಸುವುದೆಂದರೆ, ಎಲ್ಲಿಲ್ಲದ ಪ್ರೀತಿ ಮತ್ತು ಮೋಜು. ಆದರೆ ಯಾರಿಗೂ ತೊಂದರೆಯಾಗದಂತೆ ಜೀವನದಲ್ಲಿ ಮುಂದುವರೆಯುವಿರಿ. ನಿಮ್ಮ ಜೀವನದಲ್ಲಿ ನಿಮ್ಮ ತಾಯಿಯೇ ನಿಜವಾದ ಗುರು. ಆಕೆಯಿಂದ ಕಲಿತ ವಿಚಾರಗಳು ಅನೇಕ.

ಹೊಸ ರೀತಿಯ ವಿಚಾರಗಳನ್ನು ಅರಿತುಕೊಳ್ಳಲು ಗುರುವಿಗೆ ಶರಣು ಹೋಗುವಿರಿ. ಅಕ್ಷರ ಕಲಿಸಿದವರೇ ನಿಮ್ಮ ಪಾಲಿನ ಗುರುಗಳಲ್ಲ. ನಿಮಗೆ ಉತ್ತಮ ಸ್ಪೂರ್ತಿ ನೀಡಿದವರೂ ನಿಮ್ಮ ಗುರುಗಳೇ ಆಗುತ್ತಾರೆ. ಇದಲ್ಲದೆ ಗುರು ಪೂಜೆಯಿಂದ ಜೀವನದಲ್ಲಿ ಮಹತ್ತರ ಬದಲಾವಣೆಗಳು ಉಂಟಾಗುತ್ತವೆ. ಆರಂಭದಲ್ಲಿ ಸಾಮಾನ್ಯ ಜೀವನ ನಡೆಸುತ್ತಿದ್ದ ನೀವು ದಿಢೀರನೆ ಎಲ್ಲರಿಗೂ ಮಾದರಿಯಾಗಿ ಬಾಳುವಿರಿ. 

ದೃಢವಾದ ಮನಸ್ಸಿಲ್ಲದ ವ್ಯಕ್ತಿತ್ವ

ಮನಸ್ಸಿಗೆ ಬಂದ ವಿಚಾರಗಳನ್ನು ಎಷ್ಟೇ ಕಷ್ಟವೆನಿಸಿದರೂ ಕಲಿಯುವಿರಿ. ಆದರೆ ದೃಢವಾದ ಮನಸ್ಸಿರುವುದಿಲ್ಲ. ಆರಂಭಿಸಿದ ಕೆಲಸ ಕಾರ್ಯಗಳು ಬೇಸರ ಉಂಟುಮಾಡಿದ್ದಲ್ಲಿ ಮತ್ತೊಂದು ಕೆಲಸಕ್ಕೆ ಕೈ ಹಾಕುವಿರಿ. ಯಾರೊಬ್ಬರೂ ಬುದ್ದಿವಾದ ಹೇಳಿದರೂ ನೀವು ಅರ್ಥ ಮಾಡಿಕೊಳ್ಳುವುದಿಲ್ಲ. ನೀವು ನಡೆಯುವ ಹಾದಿಯೇ ನಿಮಗೆ ನಿಜವೆನಿಸುತ್ತದೆ. ಬೆರಳು ತೋರಿದಲ್ಲಿ ಹಸ್ತ ನುಂಗುವ ಚಾಣಾಕ್ಷರು ನೀವು.

ಬಂಧು ಬಳಗದವರಿಂದ ದೂರ ಉಳಿಯಲು ಇಷ್ಟಪಡುವಿರಿ. ಪ್ರಯೋಜನವಿಲ್ಲದ ಓಡಾಟವಿದ್ದರೂ ಬೇಸರವಾಗುವುದಿಲ್ಲ. ಕುಟುಂಬದವರ ಮತ್ತು ಸಾರ್ವಜನಿಕರ ತೊಂದರೆಗಳನ್ನು ಪರಿಹರಿಸುವುದರಲ್ಲಿ ನೀವೇ ಮೊದಲಿಗರು. ಕೆಲವೊಮ್ಮೆ ಪ್ರವಾಸಗಳಿಂದ ನಿಮಗೆ ಸಾಕಷ್ಟು ಲಾಭವಾಗುತ್ತದೆ. ಸ್ತ್ರೀಯರಾದಲ್ಲಿ ಮನೆಗೆ ಬಂದ ಅತಿಥಿಗಳ ಸತ್ಕಾರ ಮಾಡುವಲ್ಲಿ ಸಂತೋಷ ಪಡುವಿರಿ. ನಿಮಗೆ ರುಚಿಕರ ಆಹಾರವನ್ನು ತಯಾರಿಸುವುದೆಂದರೆ ಬಲು ಪ್ರೀತಿ. ಅನ್ನದಾನ ಮಾಡುವಲ್ಲಿ ಮೊದಲಿಗರು. ವೃದ್ಧಾಶ್ರಮ ಅನಾಥಾಶ್ರಮಗಳಲ್ಲಿ ಅನ್ನದಾನ ಮಾಡುವಲ್ಲಿ ಸಂತಸ ಕಾಣುವಿರಿ.

 ಮದುವೆ ಹುಟ್ಟುಹಬ್ಬ ಉಪನಯನಗಳಂತಹ ಕಾರ್ಯಕ್ರಮಗಳನ್ನು ನಡೆಸಿಕೊಡುವುದು ನಿಮ್ಮ ಮುಖ್ಯ ಹವ್ಯಾಸಗಳಲ್ಲಿ ಒಂದು. ಅವಿವಾಹಿತರಿಗೆ ಧೈರ್ಯ ತುಂಬುವ ಮತ್ತು ವಿವಾಹ ನಡೆಸುವ ಕೆಲಸ ಮಾಡುವಿರಿ. ದಾಂಪತ್ಯ ಸಮಾಲೋಚನಾ ಕೇಂದ್ರಗಳನ್ನು ಆರಂಭಿಸಿ ಯಶಸ್ವಿಯಾಗುವಿರಿ. ಬೇಸಾಯ ಮಾಡುವ ಹವ್ಯಾಸ ನಿಮ್ಮಲ್ಲಿರುತ್ತದೆ. ನೀವು ಹೆಣ್ಣು ದೇವರ ಔಪಾಸಕರು ಹೌದು. ಸಾಧ್ಯವಾದಾಗಲೆಲ್ಲಾ ಯಾತ್ರಾ ಸ್ಥಳಕ್ಕೆ ಭೇಟಿ ನೀಡುವಿರಿ. ನಿಮಗೆ ತಣ್ಣನೆಯ ಹಣ್ಣಿನ ರಸ, ಕುಡಿವ ನೀರು ಮತ್ತು ಇನ್ನಿತರ ಆಹಾರ ಪದಾರ್ಥಗಳೆಂದರೆ ಬಲು ಇಷ್ಟ. ಆದರೆ ಇಂತಹ ಪದಾರ್ಥಗಳ ಸೇವನೆಯಿಂದ ಶ್ವಾಸಕೋಶದ ತೊಂದರೆಯು ಉಂಟಾಗುತ್ತದೆ.

ಅಪಾಯಕಾರಿ ಕೆಲಸಗಳಲ್ಲಿ ಆಸಕ್ತಿ 

ಉದ್ಯೋಗದಲ್ಲಿ ಉತ್ತಮ ಪ್ರಗತಿ ಕಂಡು ಬರುತ್ತದೆ. ಆದರೆ ಸಾಮಾನ್ಯವಾಗಿ ಸಹೋದ್ಯೋಗಿಗಳೊಂದಿಗೆ ವಾದ ವಿವಾದ ಎದುರಾಗುತ್ತವೆ. ಆಧುನಿಕ ತಂತ್ರಜ್ಞಾನವು ನಿಮಗೆ ವರಪ್ರದವಾಗುತ್ತದೆ. ಬೇರೆಯವರಿಗೆ ಅಸಾಧ್ಯವಾದ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡಬಲ್ಲಿರಿ. ಉದ್ಯೋಗದಲ್ಲಿನ ಮೇಲ್ವಿಚಾರಣೆ ನಿಮ್ಮ ಪಾಲಾಗುತ್ತದೆ. ಜೀವನದಲ್ಲಿ ಸದಾಕಾಲ ಯಾವುದಾದರೂ ಬದಲಾವಣೆಗಳು ಕಂಡುಬರುತ್ತವೆ. ಕಷ್ಟಕರ ಮತ್ತು ಸಾಹಸದ ಕೆಲಸಗಳಿಗೆ ಭಯಪಡುವುದಿಲ್ಲ.

 ಅಪಾಯಕಾರಿ ಕೆಲಸಕ್ಕೆ ಕೈ ಹಾಕಲು ಸ್ವಲ್ಪವೂ ಹಿಂಜರಿಯುವುದಿಲ್ಲ. ವಿವಾಹವಾದ ನಂತರ ವಿಶೇಷ ಶುಭ ಫಲಗಳು ದೊರೆಯುತ್ತವೆ. ತಪ್ಪು ದಾರಿಗೆ ಬರುವ ಮಕ್ಕಳನ್ನು ತಿದ್ದಿ ಬೆಳೆಸುವಿರಿ. ಮಕ್ಕಳೆಂದರೆ ಬಲು ಇಷ್ಟ. ವಿದೇಶದಲ್ಲಿ ವಿದ್ಯಾಭ್ಯಾಸ ಮುಂದುವರೆಸುವಿರಿ. ಹೆಚ್ಚಿನ ಪ್ರಯತ್ನದಿಂದ ವಿದೇಶದಲ್ಲೇ ನೆಲೆಸಬಹುದು. ಕುಟುಂಬದ ನಿರ್ವಹಣೆಗಿಂತ ಬೇರೆಯವರಿಗೆ ಸಹಾಯ ಮಾಡುವುದೇ ಹೆಚ್ಚು. ಕುಟುಂಬದಲ್ಲಿ ಯಾವುದೇ ರೀತಿಯ ವಾದ ವಿವಾದ ಇದ್ದರೂ ಅದನ್ನು ಪರಿಹರಿಸಿ ಶಾಂತಿ ನೆಮ್ಮದಿ ನೆಲೆಸುವಂತೆ ಮಾಡುವಿರಿ. ಒಂಟಿತನ ಇಷ್ಟಪಡದೆ ಎಲ್ಲರೊಂದಿಗೆ ಸಂತೋಷದಿಂದ ಬಾಳುವಿರಿ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).