ಗುರು ಪೂರ್ಣಿಮಾ ಯಾಕೆ ಆಚರಿಸಬೇಕು? ದಿನಾಂಕ, ಸಮಯ, ಮಹತ್ವವನ್ನು ತಿಳಿಯಿರಿ -Guru Purnima 2024
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗುರು ಪೂರ್ಣಿಮಾ ಯಾಕೆ ಆಚರಿಸಬೇಕು? ದಿನಾಂಕ, ಸಮಯ, ಮಹತ್ವವನ್ನು ತಿಳಿಯಿರಿ -Guru Purnima 2024

ಗುರು ಪೂರ್ಣಿಮಾ ಯಾಕೆ ಆಚರಿಸಬೇಕು? ದಿನಾಂಕ, ಸಮಯ, ಮಹತ್ವವನ್ನು ತಿಳಿಯಿರಿ -Guru Purnima 2024

Guru Purnima 2024: ಶುಭ ಮುಹೂರ್ತದಿಂದ ಆಚರಣೆಗಳವರೆಗೆ. ಗುರು ಪೂರ್ಣಿಮಾದ ದಿನಾಂಕ, ಸಮಯ, ಆಚರಣೆಯ ಮಹತ್ವ ಸೇರಿದಂತೆ ಈ ಶುಭ ದಿನದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಆಸಕ್ತಿಕರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

This year, Guru Purnima will be observed on July 21.
This year, Guru Purnima will be observed on July 21. (Unsplash)

Guru Purnima 2024: ನಾವೆಲ್ಲರೂ ಕೆಲವು ನಂಬಿಕೆಗಳು ಮತ್ತು ಮೌಲ್ಯಗಳನ್ನು ಹೊಂದಿದ್ದೇವೆ. ಮತ್ತು ನಮ್ಮೆಲ್ಲರ ಜೀವನದಲ್ಲಿ, ಹೆಚ್ಚಿನ ಒಳಿತನ್ನು ಹುಡುಕುವ ಮತ್ತು ಯಾವುದು ಸರಿ ಎಂದು ತಿಳಿಯುವ ಮಾರ್ಗದ ಬಗ್ಗೆ ನಮಗೆ ಕಲಿಸಿದ ಕನಿಷ್ಠ ಒಬ್ಬ ಮಾರ್ಗದರ್ಶಕನಿದ್ದಾನೆ. ನಮ್ಮ ಜೀವನದ ಗುರುಗಳಾದ ನಮ್ಮ ಮಾರ್ಗದರ್ಶಕರ ಪ್ರಯತ್ನಗಳ ಮೂಲಕ ನಮ್ಮಲ್ಲಿ ಮೌಲ್ಯ ಮತ್ತು ನಂಬಿಕೆಯ ವ್ಯವಸ್ಥೆಯನ್ನು ತುಂಬಲಾಗಿದೆ. ಗುರು ಪೂರ್ಣಿಮೆಯು ನಮ್ಮ ಜೀವನದಲ್ಲಿ ಸರಿಯಾದ ಹಾದಿಯಲ್ಲಿ ಹೇಗೆ ನಡೆಯಬೇಕು ಮತ್ತು ಸರಿಯಾದ ಆಯ್ಕೆಗಳನ್ನು ಹೇಗೆ ಮಾಡಬೇಕೆಂದು ಕಲಿಸುವ ಗುರುಗಳಿಗೆ ಸಮರ್ಪಿತವಾಗಿದೆ. ಗುರು ಎಂದರೆ ನಮ್ಮ ಜೀವನವನ್ನು ಉತ್ತಮಗೊಳಿಸುವ ಮತ್ತು ಅವರ ಬೋಧನೆಗಳಿಂದ ನಮಗೆ ಜ್ಞಾನೋದಯ ನೀಡುವ ಆಧ್ಯಾತ್ಮಿಕ ಮಾರ್ಗದರ್ಶಕರನ್ನು ಸಹ ಉಲ್ಲೇಖಿಸುತ್ತಾರೆ. 2024ರ ಗುರು ಪೂರ್ಣಿಮಾ ಆಚರಿಸಲು ಸಜ್ಜಾಗುತ್ತಿರುವಾಗ ನಾವು ತಿಳಿದುಕೊಳ್ಳಬೇಕಾದ ಕೆಲವು ವಿಷಯಗಳು ಇಲ್ಲಿವೆ.

2024ರ ಗುರು ಪೂರ್ಣಿಮಾ (ಬುದ್ಧ ಪೂರ್ಣಿಮಾ) ಯಾವಾಗ?

ಈ ವರ್ಷ ಗುರು ಪೂರ್ಣಿಮಾವನ್ನು ಜುಲೈ 21 ರ ಭಾನುವಾರ ಆಚರಿಸಲಾಗುತ್ತದೆ.

ಗುರು ಪೂರ್ಣಿಮಾ 2024: ಸಮಯ ಮತ್ತು ಶುಭ ಮುಹೂರ್ತ

ದೃಶ್ಯ ಪಂಚಾಂಗದ ಪ್ರಕಾರ, ಪೂರ್ಣಿಮಾ ತಿಥಿ ಜುಲೈ 20 ರಂದು ಸಂಜೆ 5:59 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಜುಲೈ 21 ರಂದು ಮಧ್ಯಾಹ್ನ 3:46 ಕ್ಕೆ ಕೊನೆಗೊಳ್ಳುತ್ತದೆ. ಗುರು ಪೂರ್ಣಿಮಾವನ್ನು ವ್ಯಾಸ ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ವ್ಯಾಸ ಪೂರ್ಣಿಮಾವನ್ನು ಹಿಂದೂ ಮಹಾಕಾವ್ಯ ಮಹಾಭಾರತದ ಲೇಖಕ ವೇದವ್ಯಾಸ ಅವರ ಜನ್ಮದಿನದಂದು ಆಚರಿಸಲಾಗುತ್ತದೆ.

ಗುರು ಪೂರ್ಣಿಮಾ 2024: ಆಚರಣೆಗಳು

ಬೌದ್ಧ ಧರ್ಮದ ಪ್ರಕಾರ, ಗುರು ಪೂರ್ಣಿಮಾ ದಿನದಂದು, ಗೌತಮ ಬುದ್ಧನು ತನ್ನ ಮೊದಲ ಐದು ಅನುಯಾಯಿಗಳಿಗೆ ಮೊದಲ ಭಾಷಣವನ್ನು ನೀಡಿದನು. ಸಂಘ ಅಥವಾ ಶಿಷ್ಯರ ಸಮುದಾಯವನ್ನು ರಚಿಸಿದನು. ಈ ದಿನ, ಹಿಂದೂಗಳು ಬೇಗನೆ ಎದ್ದು ಮಹಾ ಗುರುವಿಗೆ ತಮ್ಮ ಪೂಜೆಯನ್ನು ಸಲ್ಲಿಸುತ್ತಾರೆ. ಮಹಾಗೀತೆಯ ಪಠಣದ ಮೂಲಕ, ಮಹಾ ಗುರುವನ್ನು ಸ್ಮರಿಸಲಾಗುತ್ತದೆ. ಅವರ ಬೋಧನೆಗಳನ್ನು ಗೌರವಿಸಲಾಗುತ್ತದೆ. ಹೂವುಗಳು, ಉಡುಗೊರೆಗಳು, ಪ್ರಸಾದ ಮತ್ತು ಚರಣಾಮೃತಗಳು ಈ ಶುಭ ದಿನದಂದು ಆಚರಣೆಯ ಭಾಗಗಳಾಗಿವೆ. ವೇದವ್ಯಾಸರಿಗೆ ಸಮರ್ಪಿತವಾದ ಆಶ್ರಮಗಳು ಶ್ರೀಗಂಧದ ಪೂಜೆಯೊಂದಿಗೆ ದಿನವನ್ನು ಆಚರಿಸುತ್ತವೆ.

ಗುರು ಪೂರ್ಣಿಮಾದ ಮಹತ್ವ

ಗುರು ಪೂರ್ಣಿಮಾ ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಪವಿತ್ರ ದಿನವು ಅಧ್ಯಾತ್ಮಿಕ ಮಾರ್ಗದರ್ಶನದ ಪ್ರಾಮುಖ್ಯತೆಯನ್ನು ಅಂಗೀಕರಿಸುತ್ತೆ. ತಮ್ಮ ಶಿಷ್ಯರ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗುರುಗಳಿಗೆ ಕೃತಜ್ಞತೆ ಮತ್ತು ಗೌರವವನ್ನು ವ್ಯಕ್ತಪಡಿಸಲು ಈ ಹಬ್ಬವನ್ನು ಸಮರ್ಪಿಸಲಾಗಿದೆ.

ಗುರು ಪೂರ್ಣಿಮಾ ಗುರು ಮತ್ತು ಶಿಷ್ಯರ ನಡುವಿನ ಪೂಜ್ಯ ಸಂಬಂಧವನ್ನು ಗೌರವಿಸುತ್ತದೆ. ಗುರು ಎಂಬ ಪದವು ಇಂಗ್ಲಿಷ್ ನಿಘಂಟಿನ ಭಾಗವಾಗಿದೆ. ಆದರೆ ಗುರು ಎಂಬ ಪದದ ಮೂಲ ಸಂಸ್ಕೃತವಾಗಿದೆ. ಅಂದರೆ ನಮ್ಮ ಜೀವನದಿಂದ ಅನಕ್ಷರತೆ ಮತ್ತು ಅಜ್ಞಾನದ ಕತ್ತಲೆಯನ್ನು ತೆಗೆದುಹಾಕುವ ವ್ಯಕ್ತಿ. ಇದನ್ನು ಗು ಅಂದರೆ ಕತ್ತಲೆ ಮತ್ತು ರು ಅಂತರೆ ಕತ್ತಲೆ ತೆಗೆಯುವುದು ಎಂದು ಅರ್ಥೈಸಲಾಗಿದೆ. ಗುರು ಎಂದರೆ ನಮ್ಮ ಜೀವನದಿಂದ ಅನಕ್ಷರತೆ ಮತ್ತು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವವರು.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.