ಕಾರ್ತಿಕ ಹುಣ್ಣಿಮೆ ಯಾವಾಗ, ಈ ದಿನ ಪುಣ್ಯಸ್ನಾನ ಮಾಡಲು ಶುಭ ಸಮಯ ಯಾವುದು, ಅನುಸರಿಸಬೇಕಾದ ಕ್ರಮಗಳೇನು? ಇಲ್ಲಿದೆ ಮಾಹಿತಿ
ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆಗೆ ಹಿಂದೂಗಳು ವಿಶೇಷ ಮಹತ್ವ ನೀಡುತ್ತಾರೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ದಿನ ಹುಣ್ಣಿಮೆ ಬರುತ್ತದೆ. ಈ ದಿನ ಪುಣ್ಯಸ್ನಾನ ಹಾಗೂ ದಾನ ಮಾಡುವುದರಿಂದ ಪುಣ್ಯ ಲಭಿಸುತ್ತದೆ ಎಂದು ನಂಬಿಕೆ ಇದೆ. ಈ ವರ್ಷ ಕಾರ್ತಿಕ ಹುಣ್ಣಿಮೆ ಯಾವಾಗ, ಪುಣ್ಯಸ್ನಾನ ಮಾಡಲು ಶುಭ ಸಮಯ ಹಾಗೂ ದಾನದ ಮಹತ್ವ ತಿಳಿಯಿರಿ.
ಹಿಂದೂ ಧರ್ಮದಲ್ಲಿ ಹುಣ್ಣಿಮೆಗೆ ತಿಥಿಗೆ ವಿಶೇಷ ಮಹತ್ವವಿದೆ. ಅಲ್ಲದೇ ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆಯನ್ನು ಅತ್ಯಂತ ಪವಿತ್ರ ಹಾಗೂ ಮಹತ್ವದ್ದು ಎಂದು ಪರಿಗಣಿಸಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಬರುವ ಹುಣ್ಣಿಮೆ ದಿನ ಕೆಲವು ಕ್ರಮಗಳನ್ನು ಪಾಲಿಸುವುದರಿಂದ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ.
ಕಾರ್ತಿಕ ಹುಣ್ಣಿಮೆಯ ದಿನದಂದು ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಂದಿದ್ದನು. ತ್ರಿಪುರಾಸುರನ ಅಂತ್ಯವಾಗಿದ್ದು ನೋಡಿ ದೇವತೆಗಳು ಇಡೀ ಸ್ವರ್ಗವನ್ನು ದೀಪಗಳಿಂದ ಬೆಳಗಿಸುತ್ತಾರೆ. ಇದನ್ನು ದೇವರ ದೀಪಾವಳಿ ಎಂದೂ ಕೂಡ ಕರೆಯಲಾಗುತ್ತದೆ. ಇದನ್ನು ತ್ರಿಪುರಿ ಪೂರ್ಣಿಮಾ ಅಥವಾ ತ್ರಿಪುರಾರಿ ಪೂರ್ಣಿಮಾ ಎಂದೂ ಕರೆಯುತ್ತಾರೆ. ಹಾಗಾದರೆ ಈ ವರ್ಷ ಕಾರ್ತಿಕ ಪೌರ್ಣಮಿ ಯಾವಾಗ, ಈ ದಿನ ಆಚರಿಸಬೇಕಾದ ಕ್ರಮಗಳೇನು ಎಂಬಿತ್ಯಾದಿ ವಿವರ ಇಲ್ಲಿದೆ.
2024ರಲ್ಲಿ ಕಾರ್ತಿಕ ಹುಣ್ಣಿಮೆ ಯಾವಾಗ?
2024ರಲ್ಲಿ ಕಾರ್ತಿಕ ಹುಣ್ಣಿಮೆ ತಿಥಿಯು ನವೆಂಬರ್ 15ರಂದು ಬೆಳಿಗ್ಗೆ 6:19ಕ್ಕೆ ಪ್ರಾರಂಭವಾಗುತ್ತದೆ. ಮರುದಿನ ನವೆಂಬರ್ 16ರ ಮಧ್ಯಾಹ್ನ 2:28 ರವರೆಗೆ ಇರುತ್ತದೆ. ಕಾರ್ತಿಕ ಪೂರ್ಣಿಮಾ ವ್ರತವನ್ನು ಶುಕ್ರವಾರ ನವೆಂಬರ್ 15ರಂದು ಆಚರಿಸಲಾಗುತ್ತದೆ. ಇಂದು ಕೇದಾರೇಶ್ವರ ಸ್ವಾಮಿ ವ್ರತ ಮತ್ತು ಚಲಿಮಿಲ್ಲಾ ನೋಮುಗಳನ್ನು ಪ್ರದೇಶಗಳಿಗೆ ಅನುಗುಣವಾಗಿ ಆಚರಿಸಲಾಗುತ್ತದೆ.
ಕಾರ್ತಿಕ ಸ್ನಾನ, ದಾನ ಮಾಡುವ ಸಮಯ
ಕಾರ್ತಿಕ ಹುಣ್ಣಿಮೆಯಂದು ದಾನ ಮಾಡುವುದು ಹಾಗೂ ಪುಣ್ಯಸ್ನಾನ ಮಾಡುವುದಕ್ಕೆ ವಿಶೇಷ ಮಹತ್ವವಿದೆ.
ಈ ದಿನ ಸ್ನಾನ ಹಾಗೂ ದಾನ ಮಾಡಲು ಶುಭ ಸಮಯವು ಬೆಳಿಗ್ಗೆ 4:58 ರಿಂದ ಬೆಳಿಗ್ಗೆ 5:51ವರೆಗೆ ಇರುತ್ತದೆ. ಈ ದಿನ ಬೆಳಿಗ್ಗೆ 6:44 ರಿಂದ 10:45 ರವರೆಗೆ ಸತ್ಯನಾರಾಯಣ ಪೂಜೆಗೆ ಶುಭ ಮುಹೂರ್ತಗಳು. ಚಂದ್ರೋದಯ ಸಮಯ ಸಂಜೆ 4:51
ದೇವರ ದೀಪಾವಳಿಯ ಮಂಗಳಕರ ಸಮಯ. ಇದನ್ನು ದೇವ್ ದೀಪಾವಳಿ ಎಂದು ಕರೆಯಲಾಗುತ್ತದೆ. ಈ ದಿನ ಪ್ರದೋಷ ಅವಧಿಯು ಸಂಜೆ 5:10 ರಿಂದ 7:47 ರವರೆಗೆ ಇರುತ್ತದೆ.
ಕಾರ್ತಿಕ ಹುಣ್ಣಿಮೆಯ ಪೂಜಾ ಸಮಯ
* ಬ್ರಹ್ಮ ಮುಹೂರ್ತ- ಬೆಳಿಗ್ಗೆ 4:57 ರಿಂದ ಬೆಳಿಗ್ಗೆ 5:50
* ಅಭಿಜಿತ್ ಮುಹೂರ್ತ- ಬೆಳಿಗ್ಗೆ 11:43 ರಿಂದ ಮಧ್ಯಾಹ್ನ 12:26
* ವಿಜಯ ಮುಹೂರ್ತ- ಮಧ್ಯಾಹ್ನ 1:52 ರಿಂದ 2:35ರವರೆಗೆ
ಸಂಧ್ಯಾ ಮುಹೂರ್ತ- ಸಂಜೆ 5:26 ರಿಂದ 5:53
ಅಮೃತ್ ಕರೆ - ಸಂಜೆ 5:38 ರಿಂದ ಸಂಜೆ 7:04
ಕಾರ್ತಿಯ ಹುಣ್ಣಿಮೆಯಂದು ಲಕ್ಷ್ಮೀ ಪೂಜೆಯ ಮಹತ್ವ
ಕಾರ್ತಿಕ ಪೌರ್ಣಮಿಯ ದಿನದಂದು ಲಕ್ಷ್ಮೀಪೂಜೆಯನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇಂದು ರಾತ್ರಿ 11:39 ರಿಂದ 12:33 ರವರೆಗೆ ಲಕ್ಷ್ಮಿ ಪೂಜೆಗೆ ಶುಭ ಮುಹೂರ್ತ.
ಕಾರ್ತಿಕ ಪೂರ್ಣಿಮಾ ರಾಹು ಕಾಲ, ಭದ್ರಾ ಸಮಯ - ಕಾರ್ತಿಕ ಪೂರ್ಣಿಮೆಯ ದಿನ ಭದ್ರನ ನೆರಳು ಇರುತ್ತದೆ. ಜ್ಯೋತಿಷ್ಯದಲ್ಲಿ ಭದ್ರಾ ಮತ್ತು ರಾಹು ಅವಧಿಗಳನ್ನು ಪೂಜೆ ಮತ್ತು ಮಂಗಳ ಕಾರ್ಯಗಳಿಗೆ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಭದ್ರ ಮತ್ತು ರಾಹು ಕಾಲದಲ್ಲಿ ಶುಭ ಕಾರ್ಯಗಳನ್ನು ನಿಷೇಧಿಸಲಾಗಿದೆ. ಕಾರ್ತಿಕ ಪೂರ್ಣಿಮೆಯಂದು ರಾಹುಕಾಲವು ಬೆಳಿಗ್ಗೆ 10:44 ರಿಂದ ಮಧ್ಯಾಹ್ನ 12:05 ರವರೆಗೆ ಇರುತ್ತದೆ. ಭದ್ರಾ ಬೆಳಿಗ್ಗೆ 06:43 ರಿಂದ ಸಂಜೆ 04:37 ರವರೆಗೆ.
ಅನೇಕ ಭಕ್ತರು ಕಾರ್ತಿಕ ಸ್ನಾನ ಮಾಡುತ್ತಾರೆ. ಬ್ರಹ್ಮ ಮುಹೂರ್ತದಲ್ಲಿ ಸೂರ್ಯೋದಯಕ್ಕೆ ಮೊದಲು ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ನದಿಯಲ್ಲಿ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ನೀವು ಮನೆಯಲ್ಲಿ ಸ್ನಾನ ಮಾಡುವ ನೀರಿಗೆ ಸ್ವಲ್ಪ ಗಂಗಾಜಲವನ್ನು ಸೇರಿಸಬಹುದು.
ಕಾರ್ತಿಕ ಹುಣ್ಣಿಮೆಯ ಮಹತ್ವ
ಕಾರ್ತಿಕ ಪೂರ್ಣಿಮೆಯ ದಿನದಂದು ದೀಪಗಳನ್ನು ದಾನ ಮಾಡುವುದು ವಿಶೇಷ ಮಹತ್ವವನ್ನು ಹೊಂದಿದೆ. ಈ ದಿನದಂದು ಲಕ್ಷ್ಮೀದೇವಿಯನ್ನು ಕ್ರಮದಲ್ಲಿ ಪೂಜಿಸುವುದರಿಂದ ಶಾಶ್ವತ ಪುಣ್ಯ ಲಭಿಸುತ್ತದೆ ಎಂದು ನಂಬಲಾಗಿದೆ. ಈ ದಿನದಂದು ತುಳಸಿಯನ್ನು ಪೂಜಿಸುವುದರಿಂದ ಶುಭ ಫಲಿತಾಂಶಗಳು ದೊರೆಯುತ್ತವೆ ಎಂದು ನಂಬಲಾಗಿದೆ.
ಕಾರ್ತಿಕ ಪೂರ್ಣಿಮೆ ಪರಿಹಾರ
ಕಾರ್ತಿಕ ಪೂರ್ಣಿಮೆಯಂದು ಲಕ್ಷ್ಮೀದೇವಿಯನ್ನು ಮೆಚ್ಚಿಸಲು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಅಶ್ವತ್ಥ ಮರವನ್ನು ಪೂಜಿಸಬೇಕು. ಕಾರ್ತಿಕ ಪೂರ್ಣಿಮೆಯಂದು ಮುಖ್ಯ ಬಾಗಿಲಲ್ಲಿ ದೀಪವನ್ನು ಹಚ್ಚಬೇಕು. ಈ ದಿನ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಮತ್ತು ದೀಪವನ್ನು ದಾನ ಮಾಡುವುದು ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
(ಗಮನಿಸಿ: ಈ ಮೇಲೆ ನೀಡಲಾದ ಮಾಹಿತಿಯು ನಂಬಿಕೆ ಹಾಗೂ ಶಾಸ್ತ್ರಗಳನ್ನು ಆಧರಿಸಿದ ಹಾಗೂ ಅಂತರ್ಜಾಲದಲ್ಲಿ ದೊರೆತ ಮಾಹಿತಿಗಳನ್ನ ಆಧರಿಸಿದ ಬರಹವಾಗಿದೆ. ಇದು ಮಾಹಿತಿಗಾಗಿ ಮಾತ್ರ. ಹಿಂದೂಸ್ತಾನ್ ಟೈಮ್ಸ್ ಕನ್ನಡ ಇದನ್ನು ಪುಷ್ಠೀಕರಿಸುವುದಿಲ್ಲ. ನಿಮಗೆ ಯಾವುದೇ ಸಂದೇಹಗಳಿದ್ದರೆ ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)