ಕಾರ್ತಿಕ ಹುಣ್ಣಿಮೆಯಂದು ಈ ಕ್ರಮ ಪಾಲಿಸಿದ್ರೆ ಲಕ್ಷ್ಮೀದೇವಿ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ, ಹಣಕಾಸಿನ ಸಮಸ್ಯೆ ಎಂದಿಗೂ ಬಾಧಿಸುವುದಿಲ್ಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕಾರ್ತಿಕ ಹುಣ್ಣಿಮೆಯಂದು ಈ ಕ್ರಮ ಪಾಲಿಸಿದ್ರೆ ಲಕ್ಷ್ಮೀದೇವಿ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ, ಹಣಕಾಸಿನ ಸಮಸ್ಯೆ ಎಂದಿಗೂ ಬಾಧಿಸುವುದಿಲ್ಲ

ಕಾರ್ತಿಕ ಹುಣ್ಣಿಮೆಯಂದು ಈ ಕ್ರಮ ಪಾಲಿಸಿದ್ರೆ ಲಕ್ಷ್ಮೀದೇವಿ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತೆ, ಹಣಕಾಸಿನ ಸಮಸ್ಯೆ ಎಂದಿಗೂ ಬಾಧಿಸುವುದಿಲ್ಲ

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸದ ಹುಣ್ಣಿಮೆಯಂದು ಈ ಕೆಲವು ಕ್ರಮಗಳನ್ನು ಪಾಲಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬಿರುತ್ತದೆ. ಇದರಿಂದ ಮನೆಗೆ ಸಮೃದ್ಧಿ, ಸಂಪತ್ತು ಹಾಗೂ ಅದೃಷ್ಟ ಬರುತ್ತದೆ ಎಂಬ ನಂಬಿಕೆಯೂ ಇದೆ. ಈ ವರ್ಷ ನವೆಂಬರ್ 15 ರಂದು ಕಾರ್ತಿಕ ಪೂರ್ಣಿಮ ಇದೆ. ಈ ದಿನ ಅನುಸರಿಸಬೇಕಾದ ಕ್ರಮಗಳೇನು ನೋಡಿ.

ಕಾರ್ತಿಕ ಹುಣ್ಣಿಮೆ
ಕಾರ್ತಿಕ ಹುಣ್ಣಿಮೆ (PC: Canva)

ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸ ಹಾಗೂ ಕಾರ್ತಿಕ‍ಪೌರ್ಣಮಿಗೆ ವಿಶೇಷ ಮಹತ್ವವಿದೆ. ಈ ದಿನ ಪುಣ್ಯಸ್ನಾನ ಮಾಡುವುದು, ದಾನ ಮಾಡುವುದರ ಜೊತೆಗೆ ಲಕ್ಷ್ಮೀದೇವಿಯನ್ನು ಪೂಜಿಸುವ ಸಂಪ್ರದಾಯವಿದೆ. ಅಗ್ನಿಪುರಾಣದ ಪ್ರಕಾರ, ಕಾರ್ತಿಕ ಪೌರ್ಣಮಿಯ ದಿನ ದೀಪಗಳನ್ನು ಹಚ್ಚುವುದು ಮತ್ತು ದೀಪಗಳನ್ನು ದಾನ ಮಾಡುವುದು ಬಹಳ ಪುಣ್ಯದ ಕೆಲಸ.

ಈ ದಿನದಂದು ದೀಪಾರಾಧನೆ ಮಾಡುವುದಕ್ಕೆ ವಿಶೇಷ ಮಹತ್ವವಿದೆ. ಈ ದಿನದಂದೇ ಶಿವನು ತ್ರಿಪುರಾಸುರ ಎಂಬ ರಾಕ್ಷಸನನ್ನು ಕೊಲ್ಲುತ್ತಾನೆ. ಹಾಗಾಗಿ ಇದನ್ನು ತ್ರಿಪುರಾರಿ ಪೂರ್ಣಿಮಾ ಎಂದೂ ಕೂಡ ಕರೆಯುತ್ತಾರೆ. ಕಾರ್ತಿಕ ಪೌರ್ಣಮಿಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ತುಂಬಿರುತ್ತದೆ ಎಂದು ಭಕ್ತರು ನಂಬುತ್ತಾರೆ.

ಕಾರ್ತಿಕ ಪೂರ್ಣಿಮೆಯ ದಿನದಂದು ಜನರು ಲಕ್ಷ್ಮೀದೇವಿಯ ಆಶೀರ್ವಾದ ಪಡೆಯಲು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಲಕ್ಷ್ಮೀದೇವಿಯನ್ನು ಮೆಚ್ಚಿಸಲು ಹುಣ್ಣಿಮೆಯು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಲಕ್ಷ್ಮೀದೇವಿಯು ಸಂತೋಷಗೊಂಡಾಗ, ಅವಳು ತನ್ನ ಭಕ್ತರಿಗೆ ಬಯಸಿದ ವರಗಳನ್ನು ನೀಡುತ್ತಾಳೆ ಮತ್ತು ಜೀವನದಲ್ಲಿ ಆರ್ಥಿಕ ಸಮೃದ್ಧಿಯನ್ನು ತರುತ್ತಾಳೆ ಎಂಬ ನಂಬಿಕೆಯೂ ಹಿಂದೂ ಧರ್ಮದಲ್ಲಿದೆ. ಕಾರ್ತಿಕ ಪೂರ್ಣಿಮೆಯಂದು ಲಕ್ಷ್ಮೀದೇವಿಯನ್ನು ಮೆಚ್ಚಿಸುವ ವಿಧಾನಗಳನ್ನು ತಿಳಿಯಿರಿ.

ಕಾರ್ತಿಕ ಹುಣ್ಣಿಮೆಯಂದು ಅನುಸರಿಸಬೇಕಾದ ಕ್ರಮಗಳು 

1. ಹಿಂದೂ ನಂಬಿಕೆಗಳ ಪ್ರಕಾರ, ಕಾರ್ತಿಕ ಪೂರ್ಣಿಮೆಯ ದಿನದಂದು ಲಕ್ಷ್ಮೀದೇವಿಯು ಅಶ್ವತ್ಥ ಮರದ ಮೇಲೆ ನೆಲೆಸುತ್ತಾಳೆ. ಈ ದಿನ ಸ್ನಾನದ ನಂತರ ಸಕ್ಕರೆ ಹಾಕಿದ ಹಾಲನ್ನು ಅಶ್ವತ್ಥ ಮರಕ್ಕೆ ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಲಕ್ಷ್ಮೀದೇವಿ ಸಂತುಷ್ಟಳಾಗಿ, ಭಕ್ತರನ್ನು ಆಶೀರ್ವಾದ ಮಾಡುತ್ತಾಳೆ ಎಂದು ನಂಬಲಾಗಿದೆ.

2. ಕಾರ್ತಿಕ ಪೂರ್ಣಿಮೆಯ ದಿನ ಲಕ್ಷ್ಮೀದೇವಿಗೆ ಪಾಯಸದ ನೈವೇದ್ಯ ಮಾಡಬೇಕು. ಪೂಜೆಯ ಸಮಯದಲ್ಲಿ ಲಕ್ಷ್ಮೀದೇವಿಗೆ ತೆಂಗಿನಕಾಯಿ, ಅರಿಸಿನ ಮತ್ತು ಕುಂಕುಮವನ್ನು ಅರ್ಪಿಸಿ. ಮರುದಿನ ಇವುಗಳನ್ನು ಹಣ ಇಟ್ಟ ಜಾಗದಲ್ಲಿ ಇಡಬೇಕು. ಹೀಗೆ ಮಾಡುವುದರಿಂದ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾಳೆ ಎಂದು ಹೇಳಲಾಗುತ್ತದೆ.

3. ಚಂದ್ರದೇವನನ್ನು ಪೂಜಿಸಲು ಪೂರ್ಣಿಮಾ ತಿಥಿಯನ್ನು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಕಾರ್ತಿಕ ಪೂರ್ಣಿಮೆಯಂದು ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಲಕ್ಷ್ಮೀದೇವಿಯು ಪ್ರಸನ್ನಳಾಗುತ್ತಾಳೆ ಎಂದು ನಂಬಲಾಗಿದೆ. ಇದನ್ನು ಮಾಡುವುದರಿಂದ ವ್ಯಕ್ತಿಯ ಜಾತಕದಲ್ಲಿ ಚಂದ್ರನ ಸ್ಥಾನವು ಬಲಗೊಳ್ಳುತ್ತದೆ ಎಂದು ನಂಬಲಾಗಿದೆ. ಇದರಿಂದ ಚಂದ್ರನ ದೋಷ ನಿವಾರಣೆಯಾಗುತ್ತದೆ.

4. ಕಾರ್ತಿಕ ಪೂರ್ಣಿಮೆಯಂದು ಮನೆಯ ಮುಖ್ಯದ್ವಾರದಲ್ಲಿ ತೋರಣವನ್ನು ಇಟ್ಟು ಹೂಗಳಿಂದ ಅಲಂಕರಿಸಿ. ಬಾಗಿಲಿನ ಬಲ ಮತ್ತು ಎಡಭಾಗದಲ್ಲಿ ದೀಪವನ್ನು ಬೆಳಗಿಸಿ. ಮುಖ್ಯ ದ್ವಾರದಲ್ಲಿ ಮಾವಿನ ಎಲೆಗಳ ತೋರಣ ಕಟ್ಟುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಇದನ್ನು ಮಾಡುವುದರಿಂದ ಜೀವನದಲ್ಲಿ ಆರ್ಥಿಕ ಸಮೃದ್ಧಿ ನೆಲೆಸಿರುತ್ತದೆ ಎಂದು ನಂಬಲಾಗಿದೆ.

5. ಕಾರ್ತಿಕ ಪೂರ್ಣಿಮೆಯ ದಿನದಂದು ಪವಿತ್ರ ನದಿಯಲ್ಲಿ ದೀಪವನ್ನು ಅರ್ಪಿಸುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡಿದರೆ ಸಾಲದ ಬಾಧೆಯಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ದೀಪವನ್ನು ದಾನ ಮಾಡುವುದರಿಂದ ಲಕ್ಷ್ಮಿ ಮತ್ತು ವಿಷ್ಣುವಿನ ಆಶೀರ್ವಾದ ಸಿಗುತ್ತದೆ ಎಂದು ನಂಬಲಾಗಿದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ನಿಜ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ಈ ವಿಧಾನವನ್ನು ಅನುಸರಿಸುವ ಮೊದಲು ಸಂಬಂಧಿತ ಕ್ಷೇತ್ರದ ತಜ್ಞರಿಂದ ಸಲಹೆ ಪಡೆಯಿರಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.