ಗಣೇಶ, ಈಶ್ವರ, ಆಂಜನೇಯ; ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮ್ಮನ್ನು ಸದಾ ಕಾಪಾಡುವ, ಅನುಗ್ರಹಿಸುವ ದೇವರು ಯಾರು ನೋಡಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗಣೇಶ, ಈಶ್ವರ, ಆಂಜನೇಯ; ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮ್ಮನ್ನು ಸದಾ ಕಾಪಾಡುವ, ಅನುಗ್ರಹಿಸುವ ದೇವರು ಯಾರು ನೋಡಿ

ಗಣೇಶ, ಈಶ್ವರ, ಆಂಜನೇಯ; ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮ್ಮನ್ನು ಸದಾ ಕಾಪಾಡುವ, ಅನುಗ್ರಹಿಸುವ ದೇವರು ಯಾರು ನೋಡಿ

ಜ್ಯೋತಿಷ್ಯದಲ್ಲಿ ಜನ್ಮ ದಿನಾಂಕದ ಪ್ರಕಾರ ಜಾತಕವನ್ನು ಹೇಳಲಾಗುತ್ತದೆ. ಅದರಂತೆ ಸಂಖ್ಯಾಶಾಸ್ತ್ರದ ಪ್ರಕಾರ ಪ್ರತಿಯೊಂದು ದಿನಾಂಕವನ್ನು ಬೇರೆ ದೇವರು ಆಳುತ್ತಾನೆ. ಹಾಗಾದರೆ ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮಗೆ ಯಾವ ದೇವರ ಅನುಗ್ರಹವಿದೆ, ಯಾವ ದೇವರು ನಿಮ್ಮನ್ನು ರಕ್ಷಿಸುತ್ತಾನೆ ಎಂಬ ವಿವರ ಇಲ್ಲಿದೆ.

ಜನ್ಮದಿನಾಂಕದ ಪ್ರಕಾರ ನಿಮ್ಮನ್ನು ಸದಾ ಕಾಪಾಡುವ ದೇವರು ಯಾರು
ಜನ್ಮದಿನಾಂಕದ ಪ್ರಕಾರ ನಿಮ್ಮನ್ನು ಸದಾ ಕಾಪಾಡುವ ದೇವರು ಯಾರು

ನಾನು ಹುಟ್ಟುವಾಗಲೇ ಆ ಬ್ರಹ್ಮ ನಮ್ಮ ಹಣೆಬರಹ ಬರೆದಿರುತ್ತಾನೆ ಎಂಬ ನಂಬಿಕೆ ನಮ್ಮಲ್ಲಿದೆ. ಹಣೆಬರಹ ಬದಲಿಸಲು ಸಾಧ್ಯವಿಲ್ಲ ಎಂಬುದೂ ನಿಜ. ಅದರಂತೆ ಜ್ಯೋತಿಷ್ಯದಲ್ಲಿ ನಮ್ಮ ಜನ್ಮ ದಿನಾಂಕಗಳಿಗೆ ವಿಶೇಷ ಮಹತ್ವ ನೀಡಲಾಗುತ್ತದೆ. ವ್ಯಕ್ತಿಯ ಜನ್ಮ ದಿನಾಂಕ, ನಕ್ಷತ್ರ ಮತ್ತು ಸಮಯದ ಆಧಾರದ ಮೇಲೆ ಜಾತಕವನ್ನು ಊಹಿಸಲಾಗುತ್ತದೆ. ಜನ್ಮದಿನಾಂಕಕ್ಕೆ ಅನುಗುಣವಾಗಿ ಪ್ರತಿಯೊಬ್ಬರಿಗೂ ಒಂದೊಂದು ದೇವರ ಅನುಗ್ರಹವಿರುತ್ತದೆ. ಆ ದೇವರು ಸದಾ ನಮ್ಮನ್ನು ರಕ್ಷಿಸುತ್ತಾನೆ ಎಂಬ ನಂಬಿಕೆ ಇದೆ.

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನಾಂಕವನ್ನು ದೇವರು ಅಥವಾ ದೇವತೆ ಆಳುತ್ತಾರೆ ಎಂದು ನಂಬಲಾಗಿದೆ. ಒಂದರಿಂದ ಒಂಬತ್ತರವರೆಗೆ ಒಂದು ಸಂಖ್ಯೆ ಒಬ್ಬರೇ ದೇವರು ಆಳುತ್ತಾರೆ. ಆ ದಿನಾಂಕಗಳಲ್ಲಿ ಜನಿಸಿದವರ ಭವಿಷ್ಯ ಮತ್ತು ಅವರು ಎದುರಿಸಬೇಕಾದ ಸವಾಲುಗಳ ಬಗ್ಗೆ ಸಂಖ್ಯಾಶಾಸ್ತ್ರವು ಸ್ಪಷ್ಟವಾಗಿ ತಿಳಿಸುತ್ತದೆ. ಯಾವ ದಿನಾಂಕದಂದು ಜನಿಸಿದವರಿಗೆ ಯಾವ ದೇವರ ಆಶೀರ್ವಾದ ಸಿಗುತ್ತದೆ ಎಂಬ ವಿವರ ಇಲ್ಲಿದೆ ನೋಡಿ.

ಜನ್ಮ ದಿನಾಂಕ 1

1, 10, 19, 28ರಂದು ಜನಿಸಿದವರ ಜನ್ಮದಿನ ದಿನಾಂಕ 1. ಅವರು ವಿಷ್ಣುವಿನ ಮಾರ್ಗದರ್ಶನದಲ್ಲಿ ವಾಸಿಸುತ್ತಾರೆ. ಈ ದಿನಾಂಕಗಳಲ್ಲಿ ಜನಿಸಿದವರ ಮೇಲೆ ವಿಷ್ಣುವಿನ ಅನುಗ್ರಹವಿರುತ್ತದೆ. ಮಹಾವಿಷ್ಣುವು ಮಾನವೀಯತೆಗೆ ಸಹಾಯ ಮಾಡಲು ವಿವಿಧ ಅವತಾರಗಳನ್ನು ತಾಳಿದಂತೆ ಈ ಜನ್ಮದಿನಾಂಕದಲ್ಲಿ ಜನಿಸಿದವರು ಇತರರಿಗೆ ಸಹಾಯ ಮಾಡಲು ಸಾಕಷ್ಟು ಪ್ರಯತ್ನಿಸುತ್ತಾರೆ. ತಾಳ್ಮೆ ಮತ್ತು ಬುದ್ಧಿವಂತಿಕೆ ಅವರ ವಿಶೇಷ ಗುಣಗಳು.

ಜನ್ಮ ದಿನಾಂಕ 2

2, 11, 20 ಮತ್ತು 29 ರಂದು ಜನಿಸಿದವರು ಶಿವನ ಆಶೀರ್ವಾದ ಪಡೆಯುತ್ತಾರೆ. ಅವರು ತಮ್ಮ ಸುತ್ತಮುತ್ತಲಿನ ಜನರ ಮೇಲೆ ವಿಶೇಷವಾದ ಸಹಾನುಭೂತಿ ಹೊಂದಿರುತ್ತಾರೆ. ಶಾಂತ ಸ್ವಭಾವದ ಇವರಲ್ಲಿ ಆಧ್ಯಾತ್ಮಿಕ ಭಾವ ಹೆಚ್ಚಿರುತ್ತದೆ. ಇತರರ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ.

ಜನ್ಮ ದಿನಾಂಕ 3

3, 12, 21, 30.. ಸಂಖ್ಯಾಶಾಸ್ತ್ರದ ಪ್ರಕಾರ 3 ಕೂಡ ವಿಷ್ಣುವಿಗೆ ಸಂಬಂಧಿಸಿದೆ. ಅವರು ಬಹುಮುಖಿಗಳಾಗಿರುತ್ತಾರೆ. ಆತ್ಮವಿಶ್ವಾಸ ಹೆಚ್ಚಿರುತ್ತದೆ. ಇವರಲ್ಲಿ ಪ್ರತಿಭೆ ಅಗಾಧವಾಗಿರುತ್ತದೆ. ಇವರ ಇತರರನ್ನು ಬಹಳ ನಂಬುತ್ತಾರೆ. ಇವರು ಜೀವನದ ಸವಾಲುಗಳನ್ನು ಎದುರಿಸುವ ರೀತಿ ಎಲ್ಲರಿಗೂ ಮೆಚ್ಚುಗೆಯಾಗುತ್ತದೆ.

ಜನ್ಮದಿನಾಂಕ 4

4, 13, 22, 31 ಈ ದಿನಾಂಕಗಳಲ್ಲಿ ಜನಿಸಿದವರ ಜನ್ಮದಿನಾಂಕ 4. ಸಂಖ್ಯಾಶಾಸ್ತ್ರದ ಪ್ರಕಾರ ಇವರಿಗೆ ಗಣೇಶನ ಅನುಗ್ರಹವಿರುತ್ತದೆ. ಇವರು ಜೀವನದಲ್ಲಿ ಬರುವ ಅಡೆತಡೆಗಳನ್ನು ಜಯಿಸುವಲ್ಲಿ ಬಹಳ ಬುದ್ಧಿವಂತರು. ಔಪಚಾರಿಕ ಮತ್ತು ವಿಶ್ಲೇಷಣಾತ್ಮಕವಾಗಿರುತ್ತಾರೆ. ಒಳ್ಳೆಯ ಮಾತುಗಳು ಅವರಿಗೆ ವರ. ಈ ಜನ್ಮದಿನಾಂಕದವರು ಅಡೆತಡೆಗಳಿಗೆ ಹೆದರುವುದಿಲ್ಲ.

ಜನ್ಮದಿನಾಂಕ 5

5, 14 ಮತ್ತು 23 ರಂದು ಜನಿಸಿದವರು ಎರಡು ದೇವರುಗಳಿಂದ ರಕ್ಷಿಸಲ್ಪಡುತ್ತಾರೆ. ಒಂದು ಗಣಪತಿ ಮತ್ತು ಇನ್ನೊಂದು ಶ್ರೀರಾಮ. ಇವರು ಯಶಸ್ಸಿನ ಗುಣಗಳನ್ನು ಹೊಂದಿರುತ್ತಾರೆ. ಇವರು ರಾಮನಂತೆ ಶಾಂತ ಸ್ವಭಾವದವರು. ಅಡೆತಡೆಗಳಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಸಹ ಇವರಿಗೆ ತಿಳಿದಿದೆ.

ಜನ್ಮದಿನಾಂಕ 6

5, 15, 24 ಸಂಖ್ಯಾಶಾಸ್ತ್ರದ ಪ್ರಕಾರ ಜನ್ಮದಿನಾಂಕ 6 ಅನ್ನು ಹೊಂದಿರುವವರಿಗೆ ಲಕ್ಷ್ಮೀದೇವಿಯ ಅನುಗ್ರಹ ಚೆನ್ನಾಗಿರುತ್ತದೆ. ಆರೋಗ್ಯ ಮತ್ತು ಸಂಪತ್ತನ್ನು ನೀಡುವ ಲಕ್ಷ್ಮೀದೇವಿಯು ಅವರ ರಕ್ಷಕಳಾಗಿದ್ದಾಳೆ. ಜೀವನದಲ್ಲಿ ಸಮೃದ್ಧಿ ನೆಲೆಸಿರುತ್ತದೆ. ಇವರು ಆಕರ್ಷಕ ಮತ್ತು ಸುಂದರವಾಗಿರುತ್ತಾರೆ.

ಜನ್ಮದಿನಾಂಕ 7

7, 16 ಮತ್ತು 25 ರಂದು ಜನಿಸಿದವರು ಗಣೇಶನಿಂದ ಆಳಲ್ಪಡುತ್ತಾರೆ. ಸ್ವಾಭಾವಿಕವಾಗಿ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಇದರಿಂದ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಇವರು ಹೆಚ್ಚಾಗಿ ಜನರೊಂದಿಗೆ ಬೆರೆಯಲು ಇಷ್ಟಪಡುತ್ತಾರೆ.

ಜನ್ಮದಿನಾಂಕ 8

8, 17 ಮತ್ತು 26ರಂದು ಜನಿಸಿದವರಿಗೆ ಶನಿ ದೇವರು ಮಾರ್ಗದರ್ಶಕ. ಇವರಿಗೆ ಶಿಸ್ತು ಬಹಳ ಮುಖ್ಯ. ಇವರು ಜವಾಬ್ದಾರರಾಗಿರುತ್ತಾರೆ. ಕಷ್ಟಗಳ ನಡುವೆಯೂ ಧೈರ್ಯದಿಂದ ಯಶಸ್ಸಿನತ್ತ ಹೆಜ್ಜೆ ಹಾಕುತ್ತಾರೆ.

ಜನ್ಮದಿನಾಂಕ 9

9, 18 ಮತ್ತು 27 ರಂದು ಜನಿಸಿದವರನ್ನು ಆಂಜನೇಯ ರಕ್ಷಿಸುತ್ತಾನೆ. ಇವರು ಬಲವಾದ ಇಚ್ಛಾಶಕ್ತಿಯುಳ್ಳವರು. ಧೈರ್ಯಶಾಲಿಗಳು. ಈ ಜನ್ಮದಿನಾಂಕದಲ್ಲಿ ಜನಿಸಿದವರು ನಂಬಿಕೆಗೆ ನಿಷ್ಠರಾಗಿ ಮತ್ತು ಸಮರ್ಪಣೆಯೊಂದಿಗೆ ಕೆಲಸ ಮಾಡುವುದು ಮುಖ್ಯವಾಗುತ್ತದೆ.

(ಗಮನಿಸಿ: ಈ ಮೇಲೆ ನೀಡಲಾದ ಮಾಹಿತಿಯು ನಂಬಿಕೆ ಹಾಗೂ ಶಾಸ್ತ್ರಗಳನ್ನು ಆಧರಿಸಿದ ಹಾಗೂ ಅಂತರ್ಜಾಲದಲ್ಲಿ ದೊರೆತ ಮಾಹಿತಿಗಳನ್ನ ಆಧರಿಸಿದ ಬರಹವಾಗಿದೆ. ಇದು ಮಾಹಿತಿಗಾಗಿ ಮಾತ್ರ. ಹಿಂದೂಸ್ತಾನ್‌ ಟೈಮ್ಸ್ ಕನ್ನಡ ಇದನ್ನು ಪುಷ್ಠೀಕರಿಸುವುದಿಲ್ಲ. ನಿಮಗೆ ಯಾವುದೇ ಸಂದೇಹಗಳಿದ್ದರೆ ಸಂಬಂಧಿತ ವೃತ್ತಿಪರರನ್ನು ಸಂಪರ್ಕಿಸಿ)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.