ಕನ್ನಡ ಸುದ್ದಿ  /  Astrology  /  Tomorrow Horoscope Astrology Prediction In Kannada 23 February 2024 Zodiac Signs Kundali News Sts

Tomorrow Horoscope: ಸ್ಥಿರಾಸ್ಥಿಯೊಂದು ನಿಮ್ಮ ಕೈ ಸೇರಲಿದೆ, ಪುಟ್ಟ ಮಕ್ಕಳ ಆರೋಗ್ಯದಲ್ಲಿ ಎಚ್ಚರ; ಶುಕ್ರವಾರದ ದಿನಭವಿಷ್ಯ

23 February 2024 Horoscope: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ನಿಮಗೆ ಫಲಾಫಲಗಳನ್ನು ನೀಡುತ್ತವೆ. ಇಂದು ಯಾವ ರಾಶಿಯವರಿಗೆ ಶುಭ..? ಯಾರಿಗೆ ಅಶುಭ..? ಎಂಬುದನ್ನು ನೋಡೋಣ, ಶುಕ್ರವಾರದ ದಿನಭವಿಷ್ಯ ಹೀಗಿದೆ..

 ಶುಕ್ರವಾರದ ದಿನಭವಿಷ್ಯ
ಶುಕ್ರವಾರದ ದಿನಭವಿಷ್ಯ

ನಾಳೆಯ ರಾಶಿ ಭವಿಷ್ಯ: ʼನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (Tomorrow Horoscope In Kannada, 23 February 2024)

ನಾಳಿನ ಪಂಚಾಂಗ

ಶ್ರೀ ಶೋಭಕೃತುನಾಮ ಸಂವತ್ಸರ, ಉತ್ತರಾಯನ, ಶಿಶಿರ ಋತು, ಮಾಘ ಮಾಸ, ಶುಕ್ಲಪಕ್ಷ, ಶುಕ್ರವಾರ

ತಿಥಿ : ಚತುರ್ದಶಿ ತಿಥಿಯು ಹಗಲು 03.01 ರವರೆಗು ಇದ್ದು ಆನಂತರ ಹುಣ್ಣಿಮೆ ಆರಂಭವಾಗುತ್ತದೆ.

ನಕ್ಷತ್ರ : ಆಶೇಷ ನಕ್ಷತ್ರವು ರಾ.07.06 ವರೆಗು ಇರುತ್ತದೆ. ಆನಂತರ ಮಖ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆ.06.39

ಸೂರ್ಯಾಸ್ತ: ಸ.06.26

ರಾಹುಕಾಲ : ಬೆ.10.30 ರಿಂದ ಮ. 12.00

ರಾಶಿ ಫಲಗಳು

ಮೇಷ

ಎಲ್ಲರ ಪರಿಶ್ರಮದಿಂದ ಕುಟುಂಬದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಆದ್ಯತೆ ನೀಡುವಿರಿ. ರುಚಿಕರವಾದ ಆಹಾರವನ್ನು ಇಷ್ಟಪಡುವಿರಿ. ಆರೋಗ್ಯದಲ್ಲಿ ಏರಿಳಿತವಿರುತ್ತದೆ. ಮನದಲ್ಲಿ ಧನಾತ್ಮಕ ಚಿಂತನೆಗಳು ಇರುತ್ತವೆ. ಮಾಡುವ ಕಾರ್ಯದಲ್ಲಿ ಶ್ರದ್ಧೆ ತೋರುವಿರಿ. ಸಮಾಜದಲ್ಲಿ ಗೌರವದ ಸ್ಥಾನ ಲಭ್ಯವಾಗುತ್ತದೆ. ವಾದ ವಿವಾದಗಳಿಂದ ದೂರ ಉಳಿಯುವಿರಿ. ಶಾಂತಿಯಿಂದ ಕೆಲಸ ಸಾಧಿಸುವಿರಿ. ಬಂದಷ್ಠೇ ಬೇಗ ಕೋಪ ಶಮನವಾಗುತ್ತದೆ. ಕುಟುಂಬದ ಉನ್ನತಿಗಾಗಿ ಶ್ರಮಿಸುವಿರಿ. ಆಮದು ರಫ್ತಿನ ವ್ಯವಹಾರದಲ್ಲಿ ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಸುಲಭವಾಗಿ ಹಣವನ್ನು ಖರ್ಚು ಮಾಡುವುದಿಲ್ಲ.

ಪರಿಹಾರ : ಮಕ್ಕಳಿಗೆ ಗೋಧಿ ಮತ್ತು ಬೆಲ್ಲದಿಂದ ತಯಾರಿಸಿದ ಸಿಹಿ ತಿಂಡಿಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಮಣ್ಣಿನ ಬಣ್ಣ

ವೃಷಭ

ಯಾವುದೇ ಬದಲಾವಣೆ ಇಲ್ಲದ ಕಾರಣ ಕುಟುಂಬದಲ್ಲಿ ಬೇಸರ ನೆಲೆಸಿರುತ್ತದೆ. ಆಕಸ್ಮಿಕವಾಗಿ ವಾದ ವಿವಾದದಲ್ಲಿ ಸಿಲುಕುವಿರಿ. ಸೋದರನ ಜೊತೆ ಹಣಕಾಸಿನ ವಿಚಾರದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ದುಡುಕಿ ತೆಗೆದುಕೊಳ್ಳುವ ತೀರ್ಮಾನದಿಂದ ತೊಂದರೆ ಇರುತ್ತದೆ. ಉದ್ಯೋಗದಲ್ಲಿನ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿದೆ. ಅನಾವಶ್ಯಕ ಸುತ್ತಾಟದಿಂದ ದೈಹಿಕವಾಗಿ ಬಳಲುವಿರಿ. ಹಿರಿಯರ ವ್ಯಾಪಾರದಲ್ಲಿ ಸಹಾಯ ಮಾಡುವಿರಿ. ಏಕಾಂಗಿತನ ಬಹುವಾಗಿ ಕಾಡುತ್ತದೆ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಗಮನ ನೀಡಲಿದ್ದಾರೆ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಸ್ವಂತ ಮನೆಯನ್ನು ಕಟ್ಟುವ ವಿಚಾರಕ್ಕೆ ಚಾಲನೆ ನೀಡುವಿರಿ. ಅವಶ್ಯವಿದ್ದಲ್ಲಿ ಹಿರಿಯರ ಸಲಹೆಯನ್ನು ಪಾಲಿಸಿ.

ಪರಿಹಾರ : ಇರುವೆಗಳಿಗೆ ಆಹಾರ ಧಾನ್ಯವನ್ನು ಹಾಕಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ : ಕೆಂಪು ಬಣ್ಣ

ಮಿಥುನ

ಕುಟುಂಬದಲ್ಲಿನ ಬದಲಾವಣೆಗಳು ಗಲಿಬಿಲಿಗೆ ಕಾರಣವಾಗಲಿವೆ. ಯಾವುದೇ ವಿಚಾರದಲ್ಲಿಯೂ ದಿಟ್ಟ ನಿಲುವು ತೆಗೆದುಕೊಳ್ಳಲು ವಿಫಲರಾಗುವಿರಿ. ಅತಿಯಾದ ನಿರೀಕ್ಷೆಗಳು ಮಾನಸಿಕ ಒತ್ತಡ ಉಂಟುಮಾಡಲಿವೆ. ಉದ್ಯೋಗದಲ್ಲಿನ ಆಶೋತ್ತರಗಳು ನೆಮ್ಮದಿಯನ್ನು ಕದಡುತ್ತದೆ. ಉತ್ತಮ ಆದಾಯವಿರುತ್ತದೆ. ಹಣವನ್ನು ಉಳಿಸಲು ಪ್ರಯತ್ನಿಸುವಿರಿ. ಪಾಲುಗಾರಿಕೆಯಲ್ಲಿ ಹಣಕಾಸಿನ ವ್ಯವಹಾರವನ್ನುಅರಂಭಿಸುವಿರಿ. ಏಕಾಗ್ರತೆಯನ್ನು ಬೆಳೆಸಿಕೊಂಡಲ್ಲಿ ವಿದ್ಯಾರ್ಥಿಗಳು ಸಫಲತೆ ಕಾಣಬಹುದು. ಆಕಸ್ಮಿಕವಾಗಿ ಸ್ಥಿರಾಸ್ಥಿಯೊಂದು ನಿಮ್ಮ ಕೈ ಸೇರುತ್ತದೆ. ನೂತನ ವಾಹನ ಲಾಭವಿದೆ. ಆತ್ಮೀಯರೊಬ್ಬರ ಹಣದ ವ್ಯವಹಾರದಲ್ಲಿ ಸಂಧಿಗ್ದತೆಗೆ ಒಳಗಾಗುವಿರಿ.

ಪರಿಹಾರ : ತಾಯಿಯವರಿಗೆ ಸಿಹಿತಿಂಡಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಕಿತ್ತಳೆ ಬಣ್ಣ

ಕಟಕ

ಆತುರದ ನಿರ್ಧಾರವೊಂದು ಕುಟುಂಬದ ನೆಮ್ಮದಿ ಕೆಡಿಸುತ್ತದೆ. ಉದ್ಯೋಗದಲ್ಲಿನ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ವಿದ್ಯಾರ್ಥಿಗಳು ವಿಶ್ರಾಂತಿ ಇಲ್ಲದೆ ಅಭ್ಯಾಸದಲ್ಲಿ ನಿರತರಾಗುತ್ತಾರೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ಮನೆಯ ನವೀಕರಣಕ್ಕಾಗಿ ಹಣವನ್ನು ಖರ್ಚುಮಾಡುವಿರಿ. ಬೇರೆಯವರಿಂದ ಹಣವನ್ನು ಎರವಲು ಪಡೆಯಬೇಕಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ನಿಮಗೆ ವಿವಾಹದ ಯೋಗವಿದೆ. ಸರಕಾರದ ಅನುದಾನದಲ್ಲಿ ವ್ಯಾಪಾರವನ್ನು ಅಭಿವೃದ್ಧಿಪಡಿಸುವಿರಿ. ನೀರಿರುವ ಪ್ರದೇಶಕ್ಕೆ ಕಿರುಪ್ರವಾಸ ಕೈಗೊಳ್ಳುವಿರಿ. ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸಮಾನ ಮನಸ್ಕರ ಕೂಟದ ನಾಯಕತ್ವ ವಹಿಸುವಿರಿ.

ಪರಿಹಾರ : ಪಕ್ಷಿಗಳಿಗೆ ಆಹಾರವನ್ನು ನೀಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 3

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹಳದಿ ಬಣ್ಣ

ಸಿಂಹ

ಯಾಂತ್ರಿಕ ಬದುಕಿನಿಂದ ಬೇಸರ ಇರುತ್ತದೆ. ಉದ್ಯೋಗದಲ್ಲಿ ತೋರುವ ತಲ್ಲೀನತೆ ಎಲ್ಲರ ಮೆಚ್ಚುಗೆ ಗಳಿಸುತ್ತದೆ. ಸಹೋದ್ಯೋಗಿಗಳ ನಡುವಿರಿ. ಅಸಹಕಾರ ಮನೋಭಾವನೆ ದೂರವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ನೇರವಾದ ನಡೆನುಡಿ ಕೆಲವರ ಅಸಹನೆಗೆ ಕಾರಣವಾಗಲಿದೆ. ವಿದ್ಯಾರ್ಥಿಗಳು ದೃಢವಾದ ಮನಸ್ಸಿನಿಂದ ಕಲಿಕೆಯಲ್ಲಿ ಮುಂದುವರೆಯಬೇಕಾಗುತ್ತದೆ. ಸೇವಾ ಮನೋಭಾವನೆಯ ಕಾರಣ ಜನಪ್ರಿಯತೆ ಲಭಿಸುತ್ತದೆ. ಉದರ ದೋಷದ ತೊಂದರೆ ಇರುತ್ತದೆ. ಹಣಕಾಸಿನ ಸಮಸ್ಯೆಯೊಂದು ನಿವಾರಣೆ ಆಗುತ್ತದೆ. ಉದ್ಯೋಗದಲ್ಲಿರುವ ಮಹಿಳೆಯರಿಗೆ ಅಧಿಕಾರ ಲಭಿಸುತ್ತದೆ. ಹೊಸ ವ್ಯಾಪಾರ ಆರಂಭಿಸುವ ಯೋಜನೆ ಮುಂದೆ ಹೋಗಲಿದೆ.

ಪರಿಹಾರ : ಸಿಹಿಯನ್ನು ತಿಂದು ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಹಸಿರು ಬಣ್ಣ

ಕನ್ಯಾ

ಆತ್ಮೀಯರ ಸಹವಾಸ ಕುಟುಂಬದಲ್ಲಿ ಸಂತಸವನ್ನು ಉಂಟುಮಾಡಲಿದೆ. ದಿನದ ಮುಖ್ಯವಾದ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡುವಿರಿ. ಬಂಧು ಬಳಗದವರ ಕಷ್ಟ ನಷ್ಟಗಳಿಗೆ ಸ್ಪಂದಿಸುಉವಿರಿ. ವೈದ್ಯಕೀಯ ನೆರವಿನಿಂದ ಆರೋಗ್ಕದಲ್ಲಿನ ತೊಂದರೆ ಗುಣವಾಗುವುದು. ತಂದೆಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಕುಟುಂಬದಲ್ಲಿನ ನಿಮ್ಮ ಜವಾಬ್ದಾರಿಯು ಹೆಚ್ಚುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಉದ್ಯೋಗ ಬದಲಿಸುವ ಸೂಚನೆಗಳಿವೆ. ಮನೆಯಲ್ಲಿ ಮಂಗಳಕಾರ್ಯವೊಂದು ನೆರವೇರುತ್ತದೆ. ಸ್ತ್ರೀಯರೊಂದಿಗೆ ವಾದ ವಿವಾದವನ್ನು ಮಾಡದೇ ಇರುವುದು ಒಳ್ಳೆಯದು. ಚಾಡಿಮಾತು ನಂಬದಿರಿ. ವಿದ್ಯಾರ್ಥಿಗಳು ಸ್ನೇಹಮಯ ವಾತಾವರಣದಲ್ಲಿ ಬೆಳೆಯುತ್ತಾರೆ.

ಪರಿಹಾರ : ಬಿಳಿ ಹಸುವಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೀಲಿ ಬಣ್ಣ

ತುಲಾ

ಹಿಂದೊಂದು ದಿನ ಮಾಡಿದ್ದ ಸಹಾಯಕ್ಕೆ ಪ್ರತಿಯಾಗಿ ಆತ್ಮೀಯರ ಸಹಾಯ ದೊರೆಯುತ್ತದೆ. ಆತುರದ ಬುದ್ದಿ ಬಿಟ್ಟಲ್ಲಿ ಕುಟುಂಬದಲ್ಲಿ ನೆಮ್ಮದಿ ಉಳಿಯುತ್ತದೆ. ಉದ್ಯೋಗದಲ್ಲಿ ಎಲ್ಲರ ಸ್ನೇಹ ಪ್ರೀತಿ ದೊರೆಯುತ್ತದೆ. ವ್ಯಾಪಾರ ವ್ಯವಹಾರದಲ್ಲಿ ಸ್ನೇಹಿತರ ಸಹಾಯ ದೊರೆಯಲಿದೆ. ವಿದ್ಯಾರ್ಥಿಗಳು ನೆಮ್ಮದಿಯಿಂದ ತಮ್ಮ ಗುರಿ ತಲುಪುತ್ತಾರೆ. ಮಕ್ಕಳಿಗೆ ಉದ್ಯೋಗ ದೊರೆವ ಸೂಚನೆಗಳಿವೆ. ಕೆಲಸ ಕಾರ್ಯದ ನಡುವೆ ವಿಶ್ರಾಂತಿ ತೆಗೆದುಕೊಳ್ಳಿ. ಸಾರ್ವಜನಿಕ ಕೆಲಸಗಳಲ್ಲಿ ಆಸಕ್ತಿ ಉಂಟಾಗಲಿದೆ. ಹಣದ ಕೊರತೆ ಇರುವುದಿಲ್ಲ. ಗುರು ಹಿರಿಯರನ್ನು ಗೌರವಿಸುವ ಅವಕಾಶ ದೊರೆಯುತ್ತದೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಕಿರುಪ್ರವಾಸ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಗಮನವಿರಲಿ.

ಪರಿಹಾರ : ಹಿರಿಯ ಸೋದರ ಅಥವಾ ಸೋದರಿಗೆ ಸಹಾಯ ಮಾಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ವೃಶ್ಚಿಕ

ಗೆಲ್ಲುವ ಛಲ ಇರುತ್ತದೆ. ಬಿಡುವಿನ ವೇಳೆಯಲ್ಲಿಯೂ ಕೆಲಸ ಕಾರ್ಯಗಳಲ್ಲಿ ನಿರತರಾಗುವಿರಿ. ಕುಟುಂಬದಲ್ಲಿ ನೆಮ್ಮದಿಯ ಕೊರತೆ ಇರಲಿದೆ. ಮಾನಸಿಕ ಶಕ್ತಿ ಹೊಸ ಆಸೆಗಳಿಗೆ ಕಾರಣವಾಗಲಿದೆ. ಉದ್ಯೋಗದಲ್ಲಿ ಹೊಸಬರಿಗೆ ತರಬೇತಿ ನೀಡುವ ಜವಾಬ್ದಾರಿ ದೊರೆಯುತ್ತದೆ. ದೊರೆಯುವ ಅವಕಾಶವನ್ನು ಬಳಸಿಕೊಂಡು ಹೊಸ ವ್ಯಾಪಾರೀ ಸಂಸ್ಥೆಯನ್ನು ಆರಂಭಿಸುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಆಶಾದಾಯಕ ವಿಚಾರ ಇರುತ್ತದೆ. ಕಲಿಕೆಯಲ್ಲಿ ಮಾತ್ರವಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ದಿನನಿತ್ಯದ ಆದಾಯವು ಹೆಚ್ಚುತ್ತದೆ. ಬೆನ್ನು ನೋವು ಬಹಳವಾಗಿ ಕಾಡಲಿದೆ. ಯೋಗಾಸನದಂತಹ ಅಭ್ಯಾಸಗಳನ್ನು ಬೆಳಗಿಸಿಕೊಳ್ಳುವಿರಿ. ವಾಸಸ್ಥಳ ಬದಲಾವಣೆಯ ಸೂಚನೆ ಇದೆ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ಬಿಳಿ ಬಣ್ಣದ ಹೂಗಳನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಧನಸ್ಸು

ಪುಟ್ಟ ಮಕ್ಕಳ ಅರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಕುಟುಂಬದಲ್ಲಿ ಹಣದ ವಿಚಾರವಾಗಿ ಬಿಗುವಿನ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಸ್ಥಿರತೆ ಕಂಡುಬರುತ್ತದೆ. ಆದರೆ ಕೆಲಸ ಕಾರ್ಯಗಳು ಅಪೂರ್ಣಗೊಳ್ಳಲಿವೆ. ಹಣದ ತೊಂದರೆ ಬಾರದು. ಸಹನೆಯಿಂದ ವರ್ತಿಸುವುದು ಒಳ್ಳೆಯದು. ಸಣ್ಣ ಪುಟ್ಟ ವಿಚಾರಗಳಲ್ಲೂ ಅಸಹನೆ ಮತ್ತು ಉದ್ವೇಗದಿಂದ ವರ್ತಿಸುವಿರಿ. ಷೇರಿನಲ್ಲಿ ಹಣ ಹೂಡಿಕೆ ಮಾಡದಿರಿ. ನೌಕರರಿಗೆ ವಿಶೇಷವಾದ ಸೌಲಭ್ಯ ದೊರೆಯುತ್ತದೆ. ಶುಭಕರ ಕೆಲಸವೊಂದನ್ನು ಪೂರೈಸುವಿರಿ. ಸರ್ಕಾರದ ಸಹಾಯದಿಂದ ವಿದ್ಯಾರ್ಥಿಗಳು ವಿದೇಶಕ್ಕೆ ತೆರಳಬಹುದು. ಹಣಕಾಸಿನ ವಿಚಾರದಲ್ಲಿ ಸ್ವಂತ ನಿರ್ಧಾರಗಳಿಗೆ ಬದ್ದರಾಗಿರಿ. ಆರೋಗ್ಯದಲ್ಲಿ ಚೇತರಿಕೆ ಇರಲಿದೆ.

ಪರಿಹಾರ : ಕುಟುಂಬದ ಹಿರಿಯರಿಗೆ ಸಹಾಯ ಮಾಡಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 10

ಅದೃಷ್ಟದ ದಿಕ್ಕು : ದಕ್ಷಿಣ

ಅದೃಷ್ಟದ ಬಣ್ಣ: ಬಿಳಿ ಬಣ್ಣ

ಮಕರ

ಮಾತುಕತೆಯಿಂದ ಕುಟುಂಬದಲ್ಲಿ ನೆಮ್ಮದಿ ನೆಲೆಸುತ್ತದೆ. ಉದೋಗದಲ್ಲಿ ಆತಂಕದ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಸಹನೆ ಮತ್ತು ಬುದ್ದಿವಂತಿಕೆಯಿಂದ ಸಮಸ್ಯೆಯಿಂದ ಹೊರಬರಬಹುದು. ವಿದ್ಯಾರ್ಥಿಗಳು ನಿಧಾನಗತಿಯಲ್ಲಿ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಕಾರ್ಮಿಕ ವಲಯದವರು ತಮ್ಮ ಕಾರ್ಯ ದಕ್ಷತೆಗೆ ವಿಶೇಷವಾದ ಶ್ಲಾಘನೆಯನ್ನು ಪಡೆಯಲಿದ್ದಾರೆ. ಬೃಹತ್ ಯಂತ್ರಗಳ ದುರಸ್ತಿ ಮಾಡುವ ಸೇವಾವೃತ್ತಿ ಲಾಭದಾಯಕ. ಅನಿವಾರ್ಯವಾಗಿ ವೃತ್ತಿ ಬದಲಾವಣೆ ಮಾಡುವಿರಿ. ಸಂತಾನ ಲಾಭವಿದೆ. ನಿಮ್ಮ ಮಕ್ಕಳಿಗೆ ಹಣಕಾಸಿನ ಕಂಪನಿಯಲ್ಲಿ ಉಧ್ಯೋಗ ದೊರೆಯುತ್ತದೆ. ಭೂ ಲಾಭವಿದೆ. ಪ್ರಯಾಣದಿಂದ ಲಾಭವಿದೆ.

ಪರಿಹಾರ : ಬೆಳ್ಳಿಯ ಲೋಟದಲ್ಲಿ ಹಾಲು ಅಥವಾ ನೀರನ್ನು ಕುಡಿದು ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಬೂದು ಬಣ್ಣ

ಕುಂಭ

ಕುಟುಂಬದ ಹಣದ ವಿವಾದ ಪರಿಹಾರವಾಗಿ ಸಂತಸ ತುಂಬಿರುತ್ತದೆ. ಉದ್ಯೋಗದಲ್ಲಿ ಯಾವುದೇ ಕೆಲಸ ಕಾರ್ಯಗಳು ಸಂಪೂರ್ಣತೆ ಪಡೆಯುವುದಿಲ್ಲ. ವ್ಯಾಪಾರ ವ್ಯವಹಾರದಲ್ಲಿ ಹಿನ್ನೆಡೆ ಇರುತ್ತದೆ. ವಿದ್ಯಾರ್ಥಿಗಳು ಸಮಸ್ಯೆಗಳನ್ನು ಎದುರಿಸಿ ಎಲ್ಲರ ಗಮನ ಗಳಿಸುವಿರಿ. ಮಹಿಳಾ ಉದ್ಯೋಗಿಗಳಿಗೆ ವಿಶೇಷವಾದ ಸ್ಥಾನ ಮತ್ತು ವರಮಾನ ಇರಲಿದೆ. ಕಾರ್ಮಿಕ ವಲಯದವರ ಕಾರ್ಯ ದಕ್ಷತೆಗೆ ವಿಶೇಷವಾದ ಶ್ಲಾಘನೆ ದೊರೆಯುತ್ತದೆ. ಸೇವಾಧಾರಿತ ಉದ್ಯೋಗವು ಲಾಭದಾಯಕ. ಅನಿವಾರ್ಯವಾಗಿ ವೃತ್ತಿ ಬದಲಾವಣೆ ಮಾಡುವಿರಿ. ಸಂತಾನ ಲಾಭವಿದೆ. ಪಾಲುಗಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಲಾಭವಿದೆ. ಅರೆತಲೆಶೂಲೆ ನಿಮ್ಮನ್ನು ಭಾದಿಸಬಹುದು. ಅನಿರೀಕ್ಷಿತ ಧನಲಾಭವಿದೆ.

ಪರಿಹಾರ : ಚಿಕ್ಕ ವಯಸ್ಸಿನ ಹೆಣ್ಣು ಮಕ್ಕಳಿಗೆ ಹೊಸ ಉಡುಗೆ ತೊಡುಗೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ಕಂದು ಬಣ್ಣ

ಮೀನ

ಅತಿಯಾದ ನಿಧಾನತೆ ಕುಟುಂಬವನ್ನು ಅಂಧಕಾರಕ್ಕೆ ನೂಕಬಹುದು. ಸಮಯಕ್ಕೆ ತಕ್ಕಂತಹ ನಿರ್ಧಾರವನ್ನು ತೆಗೆದುಕೊಳ್ಳಲು ವಿಫಲರಾಗುವಿರಿ. ಆದರೆ ನಿಮ್ಮ ಮಕ್ಕಳ ಸಹಾಯ ಸದಾ ಇರುತ್ತದೆ. ವ್ಯಾಪಾರ ವ್ಯವಹಾರದಲ್ಲಿ ದೊಡ್ಡ ವಿಪತ್ತಿನಿಂದ ದೂರವಾಗುವಿರಿ. ಕುಟುಂಬದ ಒಟ್ಟಾರೆ ಆದಾಯವು ಹೆಚ್ಚಲಿದೆ. ನಿಮ್ಮ ಮಾತಿನ ದಾಟಿ ನಿಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ. ಅವಿವಾಹಿತರಿಗೆ ಸಂಬಂಧದಲ್ಲಿ ವಿವಾಹವಾಗುತ್ತದೆ. ಹೊಗಳಿಕೆಗೆ ಮರುಳಾಗಿ ಮೋಸ ಹೋಗದಿರಿ. ವೃತ್ತಿಜೀವನದಲ್ಲಿ ಉತ್ತಮ ಬದಲಾವಣೆಗಳು ಉಂಟಾಗುತ್ತವೆ. ಹೊಸದಾದ ವ್ಯಾಪಾರವನ್ನು ಆರಂಭಿಸದಿರಿ. ಮಹಿಳೆಯರಿಗೆ ಶುಭವಿದೆ . ಸೋದರರಿಗೆ ಸಹಾಯ ಮಾಡುವ ಅವಕಾಶ ದೊರೆಯಲಿದೆ.

ಪರಿಹಾರ : ಮನೆಯಲ್ಲಿರುವ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿರಿ

ಅದೃಷ್ಟದ ಸಂಖ್ಯೆ : 11

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ಕಪ್ಪು ಬಣ್ಣ

-----------

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).