Vastu Tips: ಸಂಪತ್ತು ವೃದ್ಧಿಯಲ್ಲಿ ಅರಿಶಿನದ ಪಾತ್ರ ಮಹತ್ವ; ಈ 3 ವಾಸ್ತು ತಂತ್ರಗಳನ್ನು ಅನುಸರಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Vastu Tips: ಸಂಪತ್ತು ವೃದ್ಧಿಯಲ್ಲಿ ಅರಿಶಿನದ ಪಾತ್ರ ಮಹತ್ವ; ಈ 3 ವಾಸ್ತು ತಂತ್ರಗಳನ್ನು ಅನುಸರಿಸಿ

Vastu Tips: ಸಂಪತ್ತು ವೃದ್ಧಿಯಲ್ಲಿ ಅರಿಶಿನದ ಪಾತ್ರ ಮಹತ್ವ; ಈ 3 ವಾಸ್ತು ತಂತ್ರಗಳನ್ನು ಅನುಸರಿಸಿ

Turmeric Vastu Tips for Wealth: ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೀರಾ? ನಿಮ್ಮ ಮನೆಯಲ್ಲಿ ಧನಲಕ್ಷ್ಮಿ ಕೃಪ ಕಟಾಕ್ಷ ಇಲ್ಲವೇ? ನಿಮ್ಮ ಮನೆಯ ಸಂಪತ್ತು ವೃದ್ಧಿಸುವಲ್ಲಿ ಅರಿಶಿನದ ಪಾತ್ರ ಮಹತ್ವ ಎಂಬುದು ಅನೇಕರಿಗೆ ತಿಳಿದಿಲ್ಲ.

ಸಂಪತ್ತು ವೃದ್ಧಿಯಲ್ಲಿ ಅರಿಶಿನದ ಪಾತ್ರ (ಸಾಂಕೇತಿಕ ಚಿತ್ರ)
ಸಂಪತ್ತು ವೃದ್ಧಿಯಲ್ಲಿ ಅರಿಶಿನದ ಪಾತ್ರ (ಸಾಂಕೇತಿಕ ಚಿತ್ರ)

ಅರಿಶಿನ ಕೇವಲ ಆರೋಗ್ಯ ಪ್ರಯೋಜನಗಳನ್ನು, ಔಷಧೀಯ ಗುಣಗಳನ್ನು ಮಾತ್ರ ಹೊಂದಿಲ್ಲ. ವಾಸ್ತು ಪರಿಹಾರಗಳನ್ನೂ ಒಳಗೊಂಡಿದೆ. ದೇವರಿಗೆ ಅರಿಶಿನ-ಕುಂಕುಮ ಶ್ರೇಷ್ಠ. ಭಾರತದ ಹಿಂದೂ ಧರ್ಮದ ಸಂಸ್ಕೃತಿಯಂಯೆ ಪೂಜಾ ತಟ್ಟೆಯಲ್ಲಿ ಅರಿಶಿನ-ಕುಂಕುಮ ಇದ್ದೇ ಇರುತ್ತದೆ. ಮುತ್ತೈದೆಯರಿಗೆ ಇವು ಮಹತ್ವದ ವಸ್ತುಗಳು. ಇಂದು ನಾವು ಅರಿಶಿನ ವಾಸ್ತುವಿನ ಬಗ್ಗ ಹೇಳಲು ಹೊರಟಿದ್ದೇವೆ.

ನೀವು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೀರಾ? ನಿಮ್ಮ ಮನೆಯಲ್ಲಿ ಧನಲಕ್ಷ್ಮಿ ಕೃಪ ಕಟಾಕ್ಷ ಇಲ್ಲವೇ? ನಿಮ್ಮ ಮನೆಯ ಸಂಪತ್ತು ಮತ್ತು ಸಮೃದ್ಧಿ ವೃದ್ಧಿಸುವಲ್ಲಿ ಅರಿಶಿನದ ಪಾತ್ರ ಮಹತ್ವ ಎಂಬುದು ಅನೇಕರಿಗೆ ತಿಳಿದಿಲ್ಲ. ನಿಮಗಾಗಿ ಇಲ್ಲಿ 3 ಅರಿಶಿನ ವಾಸ್ತು ತಂತ್ರಗಳ ಸಲಹೆ ನೀಡುತ್ತಿದ್ದೇವೆ. ಇದು ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಹಾಗೂ ನೀವು ಶ್ರೀಮಂತರಾಗಲು ಸಹಾಯ ಮಾಡುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ.

1. ಅರಿಶಿನವನ್ನು ಲಾಕರ್‌ನಲ್ಲಿ ಇರಿಸಿ

ಹಣದ ಸಮಸ್ಯೆಗಳನ್ನು ಪರಿಹರಿಸಲು ಒಂದು ಮುಖ್ಯವಾದ ತಂತ್ರವೆಂದರೆ ಹಳದಿ ಅಥವಾ ಕೆಂಪು ಬಟ್ಟೆಯ ತುಂಡಿನಲ್ಲಿ ಅರಿಶಿನವನ್ನು ಉಂಡೆಯಂತೆ ಕಟ್ಟಿ ಅದನ್ನು ನಿಮ್ಮ ಮನೆಯ ಲಾಕರ್​ನಲ್ಲಿರಿಸುವುದು. ಅರಿಶಿನದ ಉಂಡೆ ಇರಿಸುವ ಮೊದಲು ನಿಮ್ಮ ಲಾಕರ್​ ಅನ್ನು ಮೊದಲು ಸ್ವಚ್ಛವಾಗಿರಿಸಬೇಕು ಮತ್ತು ಈಶಾನ್ಯ ದಿಕ್ಕಿನಲ್ಲಿ ಉಂಡೆ ಇರಿಸಬೇಕು. ಇದರಿಂದ ನಿಮ್ಮ ಹಣಕಾಸು ಸಮಸ್ಯೆಗಳು ದೂರವಾಗಿ ಅನಗತ್ಯ ಕಾರಣಗಳಿಗೆ ಹಣ ಖರ್ಚು ಮಾಡುವ ಜನರಿಗೂ ಈ ವಾಸ್ತು ಸಲಹೆಯು ಉಪಯುಕ್ತವಾಗಬಹುದು.

2. ಅರಿಶಿನದಿಂದ ಸ್ವಸ್ತಿಕವನ್ನು ಬಿಡಿಸಿ

ಅರಿಶಿನವನ್ನು ಬಳಸಿ ಮನೆಯ ಪ್ರವೇಶದ್ವಾರದಲ್ಲಿ ಸ್ವಸ್ತಿಕ ಚಿಹ್ನೆಯನ್ನು ಬಿಡಿಸುವುದರಿಂದ ನಿಮಗೆ ಸಮೃದ್ಧಿ ಒಲಿದು ಬರುತ್ತದೆ ಮತ್ತು ವಾಸ್ತು ದೋಷಗಳು ಪರಿಹಾರವಾಗುತ್ತದೆ. ಅರಿಶಿನ ಮತ್ತು ಸ್ವಸ್ತಿಕ ಎರಡನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಇವು ಲಕ್ಷ್ಮಿ ದೇವಿಯನ್ನು ಮೆಚ್ಚಿಸುತ್ತದೆ ಎಂದು ನಂಬಲಾಗಿದೆ. ಅರಿಶಿನವು ಮನೆಯೊಳಗೆ ಪಾಸಿಟಿವ್​ ಶಕ್ತಿಯನ್ನು ಆಕರ್ಷಿಸುತ್ತದೆ ಮತ್ತು ದುಷ್ಟ ಶಕ್ತಿಗಳನ್ನು ಓಡಿಸುತ್ತದೆ. ನಿಮ್ಮ ಮನೆಯಲ್ಲಿ ಯಾವುದೇ ವಾಸ್ತು ದೋಷವನ್ನು ತೊಡೆದುಹಾಕಲು ಇದು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಮನೆಯ ಪ್ರವೇಶದ್ವಾರದ ಬಲಭಾಗದಲ್ಲಿ ಸ್ವಸ್ತಿಕದ ಚಿಹ್ನೆಯನ್ನು ಬಿಡಿಸಬೇಕು. ಅಡುಗೆಗೆ ಬಳಸಿಉದ ಅರಿಶಿನವನ್ನು ಬಳಸಬಾರದು. ಸ್ವಸ್ತಿಕವನ್ನು ಬಿಡಿಸುವ ಮುನ್ನ ನಿಮ್ಮ ಕೈಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು ಮತ್ತು ಸ್ವಸ್ತಿಕದ ವಿನ್ಯಾಸವು ನಿಖರವಾಗಿರಬೇಕು.

3. ಪ್ರವೇಶದ್ವಾರದಲ್ಲಿ ಅರಿಶಿನ ನೀರನ್ನು ಸಿಂಪಡಿಸಿ

ನಿಮ್ಮ ಮನೆಯ ಪ್ರವೇಶದ್ವಾರದಲ್ಲಿ ಅರಿಶಿನ ನೀರನ್ನು ಸಿಂಪಡಿಸುವುದರಿಂದ ಅದು ಮನೆಯೊಳಗೆ ಪಾಸಿಟಿವ್​ ಶಕ್ತಿಯನ್ನು ಆಕರ್ಷಿಸುತ್ತದೆ. ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಚಿಮುಕಿಸುವಾಗ ನೀರು-ಅರಿಶಿನದ ಪಾತ್ರೆಗೆ ನೀವು ನಾಣ್ಯವನ್ನು ಹಾಕಬೇಕು. ಅರಿಶಿನ ನೀರನ್ನು ಸಿಂಪಡಿಸಿದ ನಂತರ ಆ ನಾಣ್ಯವನ್ನು ತೆಗೆದು ಮರೆಯದೇ ಮನೆಯ ದೇವರಕೋಣೆಯಲ್ಲಿ ಇಡಬೇಕು.

(ಗಮನಿಸಿ: ಇದು ಕೇವಲ ಸಲಹೆ. ಇದನ್ನು ಅನುಸರಿಸುವ ಮುನ್ನ ಈ ಕುರಿತು ನಿಮಗೆ ಯಾವುದೇ ಅನುಮಾನಗಳಿದ್ದರೆ ವಾಸ್ತ್ರುಶಾಸ್ತ್ರಜ್ಞರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಿರಿ)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.