ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಆರ್ದ್ರಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ; 4 ರಾಶಿಯವರಿಗೆ ಅಷ್ಟೈಶ್ವರ್ಯ ನೀಡಿ ಹರಸಲಿದ್ದಾಳೆ ಶುಕ್ರನ ಅಧಿದೇವತೆ ಲಕ್ಷ್ಮೀ ದೇವಿ

ಆರ್ದ್ರಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ; 4 ರಾಶಿಯವರಿಗೆ ಅಷ್ಟೈಶ್ವರ್ಯ ನೀಡಿ ಹರಸಲಿದ್ದಾಳೆ ಶುಕ್ರನ ಅಧಿದೇವತೆ ಲಕ್ಷ್ಮೀ ದೇವಿ

Venus Transit: ಕೆಲವು ದಿನಗಳ ಹಿಂದಷ್ಟೇ ಮಿಥುನ ರಾಶಿ ಪ್ರವೇಶಿಸಿರುವ ಶುಕ್ರ ಇಂದು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಜೂನ್ 29 ವರೆಗೆ ಶುಕ್ರ ಇದೇ ನಕ್ಷತ್ರದಲ್ಲಿ ಇರಲಿದ್ದು ಮೇಷ ಸೇರಿದಂತೆ ಕೆಲವೊಂದು ರಾಶಿಯವರಿಗೆ ವಿವಿಧ ಫಲಗಳನ್ನು ನೀಡುತ್ತಾನೆ.

ಆರ್ದ್ರಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ; 4 ರಾಶಿಯವರಿಗೆ ಅಷ್ಟೈಶ್ವರ್ಯ ನೀಡಿ ಹರಸಲಿದ್ದಾಳೆ ಶುಕ್ರನ ಅಧಿದೇವತೆ ಲಕ್ಷ್ಮೀ ದೇವಿ
ಆರ್ದ್ರಾ ನಕ್ಷತ್ರಕ್ಕೆ ಶುಕ್ರನ ಪ್ರವೇಶ; 4 ರಾಶಿಯವರಿಗೆ ಅಷ್ಟೈಶ್ವರ್ಯ ನೀಡಿ ಹರಸಲಿದ್ದಾಳೆ ಶುಕ್ರನ ಅಧಿದೇವತೆ ಲಕ್ಷ್ಮೀ ದೇವಿ

ಶುಕ್ರ ಸಂಕ್ರಮಣ: ಪ್ರತಿ ಗ್ರಹವು ನಿರ್ದಿಷ್ಟ ಸಮಯದ ನಂತರ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತದೆ. ಸಂತೋಷ, ಸಮೃದ್ಧಿ, ಪ್ರೀತಿ, ಸೌಂದರ್ಯ, ಸಂತೋಷದ ದಾಂಪತ್ಯ ಜೀವನ ಮತ್ತು ಗೌರವಕ್ಕೆ ಕಾರಣವಾದ ಶುಕ್ರ ಇತ್ತೀಚೆಗೆ ತನ್ನ ನಕ್ಷತ್ರವನ್ನು ಬದಲಾಯಿಸಿದ್ದಾನೆ.

ದೃಕ್ ಪಂಚಾಂಗದ ಪ್ರಕಾರ ಜೂನ್ 12 ರಂದು ಶುಕ್ರನು ಮಿಥುನ ರಾಶಿ ಪ್ರವೇಶಿಸಿದ್ದಾನೆ. ಈಗ ಸಂಪತ್ತು ನೀಡುವ ಶುಕ್ರನು ಮಂಗಳವಾರ, ಜೂನ್ 18, 2024 ರಂದು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ್ದಾನೆ. ಜೂನ್ 29 ವರೆಗೆ ಶುಕ್ರ ಇದೇ ನಕ್ಷತ್ರದಲ್ಲಿ ಇರುತ್ತಾನೆ. ಶುಕ್ರನು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ ತಕ್ಷಣ, ಕೆಲವು ರಾಶಿಯವರು ಅತ್ಯುತ್ತಮ ಲಾಭಗಳನ್ನು ಪಡೆಯುತ್ತಾರೆ. ಭೌತಿಕ ಸಂಪತ್ತು ವೃದ್ಧಿಯಾಗಲಿದೆ. ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆ ಆಗುತ್ತವೆ. ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ. ಪ್ರೇಮ ಸಂಬಂಧ ಬಹಳ ಖುಷಿಯಿಂದ ಕೂಡಿರುತ್ತದೆ.

ಆರ್ದ್ರಾ ನಕ್ಷತ್ರದ ಸ್ವಭಾವ

27 ನಕ್ಷತ್ರಗಳಲ್ಲಿ ಆರ್ದ್ರಾ, ಆರನೇ ನಕ್ಷತ್ರ . ಈ ನಕ್ಷತ್ರದಲ್ಲಿ ಜನಿಸಿದ ಜನರು ತುಂಬಾ ಕಠಿಣವಾಗಿರುತ್ತಾರೆ. ಮೇಲೆ ಒರಟಾದರೂ ಮನಸ್ಸಿನಲ್ಲಿ ಬಹಳ ಮೃದು ಸ್ವಭಾವದವರು. ಬಹಳ ಲವಲವಿಕೆಯಿಂದ ಜೀವನ ನಡೆಸುತ್ತಾರೆ. ಒಮ್ಮೆ ನೀವು ಅವರೊಂದಿಗೆ ಸ್ನೇಹ ಬೆಳೆಸಿದರೆ, ನೀವು ಅವರನ್ನು ಎಂದಿಗೂ ಬಿಡಲು ಸಾಧ್ಯವಿಲ್ಲ. ಇವರಲ್ಲಿ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಎರಡೂ ಸಮಾನವಾಗಿವೆ. ಶುಕ್ರನು ಆರ್ದ್ರಾ ನಕ್ಷತ್ರವನ್ನು ಪ್ರವೇಶಿಸಿದ ನಂತರ ಯಾವ ರಾಶಿಯವರಿಗೆ ಏನು ಫಲ ದೊರೆಯಲಿದೆ ನೋಡೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಶುಕ್ರ ನಕ್ಷತ್ರ ಬದಲಾವಣೆಯಿಂದ ಹೆಚ್ಚಿನ ಲಾಭವಾಗಲಿದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ನೀವು ಹಳೆಯ ಹೂಡಿಕೆಯಿಂದ ಉತ್ತಮ ಲಾಭವನ್ನು ಪಡೆಯುತ್ತೀರಿ. ಈಗ ಮಾಡಿದ ಹೂಡಿಕೆಗಳು ಭವಿಷ್ಯದಲ್ಲಿ ಇನ್ನೂ ದೊಡ್ಡ ಮಟ್ಟದ ಆರ್ಥಿಕ ಲಾಭವನ್ನು ತರುತ್ತವೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗುತ್ತದೆ. ವೈವಾಹಿಕ ಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ. ಸಂತೋಷ ಮತ್ತು ಐಷಾರಾಮಿ ಜೀವನ ನಿಮ್ಮದಾಗಲಿದೆ.

ಸಿಂಹ ರಾಶಿ

ಶುಕ್ರನ ಸಂಕ್ರಮವು ಸಿಂಹ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸನ್ನು ಸಾಧಿಸುವಿರಿ. ಉತ್ತಮ ಸಂಬಂಳದೊಂದಿಗೆ ನೀವು ಹೊಸ ಉದ್ಯೋಗದ ಪ್ರಸ್ತಾಪ ಪಡೆಯುತ್ತೀರಿ. ಹಠಾತ್ ಆರ್ಥಿಕ ಲಾಭದ ಅವಕಾಶವಿದೆ. ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆ ಹೆಚ್ಚಲಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

ತುಲಾ ರಾಶಿ

ಶುಕ್ರನ ಸಂಕ್ರಮವು ತುಲಾ ರಾಶಿಯವರಿಗೆ ಅಪಾರ ಪ್ರಯೋಜನಗಳನ್ನು ತರುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಬಹಳ ದಿನಗಳಿಂದ ಬೇರೆಯವರ ಬಳಿ ಇದ್ದ ನಿಮ್ಮ ಹಣ ಮರಳಿ ಕೈ ಸೇರಲಿದೆ. ಈ ಅವಧಿಯಲ್ಲಿ ಹೊಸ ಕೆಲಸಗಳನ್ನು ಪ್ರಾರಂಭಿಸುವುದು ಉತ್ತಮ ಫಲಿತಾಂಶವನ್ನು ತರುತ್ತದೆ. ಪಾಲುದಾರಿಕೆ ವ್ಯವಹಾರದಲ್ಲಿ ನೀವು ಸಾಕಷ್ಟು ಪ್ರಗತಿ ಸಾಧಿಸುವಿರಿ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ.

ಮಕರ ರಾಶಿ

ಆರ್ದ್ರಾ ನಕ್ಷತ್ರದಲ್ಲಿ ಶುಕ್ರನ ಪ್ರವೇಶವು ಮಕರ ರಾಶಿಯವರಿಗೆ ಬಹಳ ಲಾಭವನ್ನು ನೀಡುತ್ತದೆ. ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಸಂಬಂಧಗಳಲ್ಲಿನ ಮನಸ್ತಾಪ ನಿವಾರಣೆಯಾಗುತ್ತದೆ. ಪ್ರೇಮ ಸಂಬಂಧಗಳಲ್ಲಿ ಮಾಧುರ್ಯವಿರುತ್ತದೆ. ನಿಮ್ಮ ಸಂಗಾತಿಯಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವೃತ್ತಿಯಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಆದಾಯ ಹೆಚ್ಚಾಗುವ ಸಾಧ್ಯತೆ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.