ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Sensitive Zodiac Signs: ಈ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು, ತಮಾಷೆ ಮಾಡಿದ್ರೂ ಅತ್ತೇ ಬಿಡ್ತಾರೆ; ನೀವು ಯಾವ ರಾಶಿಗೆ ಸೇರಿದವರು?

Sensitive Zodiac Signs: ಈ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು, ತಮಾಷೆ ಮಾಡಿದ್ರೂ ಅತ್ತೇ ಬಿಡ್ತಾರೆ; ನೀವು ಯಾವ ರಾಶಿಗೆ ಸೇರಿದವರು?

ಒಂದೊಂದು ರಾಶಿಯವರು ಒಂದೊಂದು ಗುಣ ಸ್ವಭಾವ ಹೊಂದಿರುತ್ತಾರೆ. ಅದರಲ್ಲಿ ಕೆಲವರು ಬಹಳ ಸೂಷ್ಮ ಸ್ವಭಾವದವರಿರುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕಟಕ ಸೇರಿದಂತೆ ಈ ನಾಲ್ಕೂ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು, ತಮಾಷೆ ಮಾಡಿದ್ರೂ ಅತ್ತೇ ಬಿಡ್ತಾರೆ.

ಈ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು, ತಮಾಷೆ ಮಾಡಿದ್ರೂ ಅತ್ತೇ ಬಿಡ್ತಾರೆ; ನೀವು ಯಾವ ರಾಶಿಗೆ ಸೇರಿದವರು?
ಈ ರಾಶಿಯವರು ತುಂಬಾ ಸೂಕ್ಷ್ಮ ಸ್ವಭಾವದವರು, ತಮಾಷೆ ಮಾಡಿದ್ರೂ ಅತ್ತೇ ಬಿಡ್ತಾರೆ; ನೀವು ಯಾವ ರಾಶಿಗೆ ಸೇರಿದವರು? (PC: Unsplash)

ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಸ್ವಭಾವವೂ ಒಂದೊಂದು ರೀತಿ ಇರುತ್ತದೆ. ಅವರವರ ರಾಶಿಗಳಿಗನುಗುಣವಾಗಿ ಅವರ ಸ್ವಭಾವವಿರುತ್ತದೆ. ಕೆಲವು ರಾಶಿಯವರು ತುಂಬಾ ಎಂದರೆ ತುಂಬಾ ಸೂಕ್ಷ್ಮ ಸ್ವಭಾವದ ಜೀವಿಯಾಗಿರುತ್ತಾರೆ. ಅವರೊಂದಿಗೆ ಯಾವುದೇ ವಿಷಯದ ಬಗ್ಗೆ ಮಾತನಾಡುವುದು ಕಷ್ಟವಾಗುತ್ತದೆ. ತಮಾಷೆಯ ವಿಷಯಗಳನ್ನು ಕೂಡ ಅವರು ಕೆಲವೊಮ್ಮೆ ಗಂಭೀರವಾಗಿ ಪರಿಗಣಿಸಿ ಭಾವುಕರಾಗುತ್ತಾರೆ.

ಕೆಲವರು ಮನಸ್ಸಿನೊಳಗೇ ದುಃಖಪಟ್ಟರೆ, ಇನ್ನು ಕೆಲವರಂತೂ ಅತ್ತೇ ಬಿಡ್ತಾರೆ. ಆದರೆ ಕೆಲವೊಮ್ಮೆ ಈ ಸ್ವಭಾವವೇ ಅವರಿಗೆ ಅಪಾಯವನ್ನು ತಂದೊಡ್ಡುತ್ತದೆ. ಇವರ ವೀಕ್‌ನೆಸ್‌ ತಿಳಿದವರು ಇವರನ್ನ ಎಮೋಷನಲ್ ಫೂಲ್ ಮಾಡಿಬಿಡುತ್ತಾರೆ. ಹಾಗಾದ್ರೆ ಯಾವ್ಯಾವ ರಾಶಿಗೆ ಸೇರಿದವರು ಸೂಕ್ಷ್ಮ ಹಾಗೂ ಭಾವನಾತ್ಮಕ ವ್ಯಕ್ತಿಗಳಾಗಿರುತ್ತಾರೆ ಎಂದು ನೋಡೋಣ.

ಕಟಕ ರಾಶಿ

ಕಟಕ ಅಥವಾ ಕರ್ಕಾಟಕ ರಾಶಿಗೆ ಸೇರಿದ ಬಹುತೇಕರು ತುಂಬಾ ಸ್ವಭಾವದವರಾಗಿರುತ್ತಾರೆ. ಚಂದ್ರನು ಈ ರಾಶಿಯನ್ನು ಆಳುತ್ತಾನೆ. ಇವರಿಗೆ ಹೆಚ್ಚು ಸಹಾನುಭೂತಿ ಇರುತ್ತದೆ. ಅವರು ತಮ್ಮ ಸುತ್ತಲಿರುವವರ ಭಾವನೆಗಳನ್ನು ಗ್ರಹಿಸುತ್ತಾರೆ. ಸಾಮಾನ್ಯವಾಗಿ ತಮ್ಮ ಅಗತ್ಯಕ್ಕಿಂತ ಇತರರ ಅಗತ್ಯಗಳ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಪ್ರತಿಯೊಂದು ಸಣ್ಣ ವಿಷಯಕ್ಕೂ ಭಾವುಕರಾಗುತ್ತಾರೆ. ಆದರೆ ಅವರ ಮನಸ್ಸಿಗೆ ತುಂಬಾ ನೋವಾದಾಗ ಇತರರನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಸಾಧ್ಯತೆ ಇರುತ್ತದೆ.

ಮೀನ ರಾಶಿ

ಮೀನ ರಾಶಿಯವರು ಸಣ್ಣಪುಟ್ಟ ತೊಂದರೆ ಬಂದರೂ ಹತಾಶರಾಗುತ್ತಾರೆ. ಇದು ಅವರ ಆತ್ಮಸ್ಥೈರ್ಯವನ್ನು ಕುಗ್ಗಿಸಬಹುದು. ಕೆಲವೊಂದು ಸಮಯದಲ್ಲಿ ಅಪಾಯಕಾರಿಯಾಗಬಹುದು. ಏಕೆಂದರೆ ಇವರ ಅತಿಯಾದ ಭಾವನಾತ್ಮಕ ಸ್ವಭಾವವನ್ನು ಕೆಲವರು ಸ್ವಾರ್ಥಕ್ಕೆ ಬಳಸಿಕೊಳ್ಳುವ ಅವಕಾಶಗಳಿವೆ. ತುಂಬಾ ಸೂಕ್ಷ್ಮ ಸ್ವಭಾವದವರಾದ ಇವರು ಯಾರಾದರೂ ಒರಟಾಗಿ ಮಾತನಾಡಿದರೆ ಸಹಿಸಿಕೊಳ್ಳುವುದಿಲ್ಲ. ಒರಟಾಗಿ ಕಾಣುವ ವ್ಯಕ್ತಿಗಳನ್ನು ಇವರು ಕೊನೆಯವರೆಗೂ ಕೆಟ್ಟವರೆಂದೇ ನಂಬುತ್ತಾರೆ. ಹೆಚ್ಚು ಕನಸು ಕಾಣುವ ಸ್ವಭಾವ ಇವರದು. ಸಹಾನುಭೂತಿ ಹೆಚ್ಚು. ಕೆಲವೊಮ್ಮೆ ಇವರು ತಮ್ಮ ಸಾಮರ್ಥ್ಯವನ್ನೇ ಉಪಯೋಗಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ.

ವೃಶ್ಚಿಕ ರಾಶಿ

ಮಂಗಳವು ವೃಶ್ಚಿಕ ರಾಶಿಯ ಆಡಳಿತ ಗ್ರಹವಾಗಿದೆ. ವೃಶ್ಚಿಕ ರಾಶಿಯವರು ಮೇಲ್ನೋಟಕ್ಕೆ ಗಂಭೀರವಾಗಿ ಕಂಡರೂ ಅವರ ಮನಸ್ಸು ಬಹಳ ಸೂಕ್ಷ್ಮವಾಗಿರುತ್ತವೆ. ಇವರು ಸುತ್ತಮುತ್ತಲಿನ ಸೂಕ್ಷ್ಮತೆಗಳನ್ನು ಸಹ ಸುಲಭವಾಗಿ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಅವರ ಭಾವನೆಗಳೇ ಅವರ ಹೃದಯವನ್ನು ನೋಯಿಸುತ್ತವೆ. ಇವರು ಕಷ್ಟದ ಸಂದರ್ಭಗಳನ್ನು ಎದುರಿಸಲಾರದೆ ಅಳುತ್ತಾರೆ.

ಕನ್ಯಾ ರಾಶಿ

ಕನ್ಯಾ ರಾಶಿಯ ಅಧಿಪತಿ ಬುಧ. ಈ ರಾಶಿಯ ಜನರು ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಬಹಳ ಗಮನ ಹರಿಸುತ್ತಾರೆ. ಇತರರ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಮನಸ್ಸು ಸೂಕ್ಷ್ಮವಾಗಿರುವುದರಿಂದ ಸಣ್ಣ ನೋವನ್ನೂ ಸಹಿಸಲಾರದು. ಅಲ್ಲದೆ ಇವರು ಆಗಾಗ್ಗೆ ತಮ್ಮ ಯೋಗಕ್ಷೇಮದ ಬಗ್ಗೆ ಚಿಂತಿಸುತ್ತಾರೆ. ಇದು ಅವರನ್ನು ನೆಗಟಿನ್ ಆಲೋಚನೆಗೆ ದೂಡುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.