Weekly Horoscope: ಆಸ್ತಿಯಲ್ಲಿ ನ್ಯಾಯಯುತ ಪಾಲು, ಆರೋಗ್ಯದ ಸಮಸ್ಯೆ ದೂರಾಗಲಿದೆ; ಮಾರ್ಚ್​ 17ರಿಂದ 23ರವರೆಗಿನ ವಾರಭವಿಷ್ಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Weekly Horoscope: ಆಸ್ತಿಯಲ್ಲಿ ನ್ಯಾಯಯುತ ಪಾಲು, ಆರೋಗ್ಯದ ಸಮಸ್ಯೆ ದೂರಾಗಲಿದೆ; ಮಾರ್ಚ್​ 17ರಿಂದ 23ರವರೆಗಿನ ವಾರಭವಿಷ್ಯ

Weekly Horoscope: ಆಸ್ತಿಯಲ್ಲಿ ನ್ಯಾಯಯುತ ಪಾಲು, ಆರೋಗ್ಯದ ಸಮಸ್ಯೆ ದೂರಾಗಲಿದೆ; ಮಾರ್ಚ್​ 17ರಿಂದ 23ರವರೆಗಿನ ವಾರಭವಿಷ್ಯ

ಮಾರ್ಚ್ 17ರಿಂದ ಮಾರ್ಚ್ 23 ರವರೆಗಿನ ವಾರ ಭವಿಷ್ಯ: ಪ್ರತಿ ರಾಶಿಗೂ ಅಧಿಪತಿಗಳಿರುತ್ತಾರೆ. ಪಾಪ- ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಈ ವಾರ ಯಾವ ರಾಶಿಯವರಿಗೆ ಏನು ಫಲ? ಒಂದು ವಾರದ ಭವಿಷ್ಯ ಇಲ್ಲಿದೆ. ಎಲ್ಲರಿಗೂ ಸದಾ ಒಳಿತೇ ಆಗುತ್ತದೆ ಎನ್ನುವುದು ಭಾರತೀಯ ಪರಂಪರೆಯ ದೃಢ ನಂಬಿಕೆ. ( March 17 to March 23 Weekly Horoscope)

ವಾರ ಭವಿಷ್ಯ
ವಾರ ಭವಿಷ್ಯ

ಮಾರ್ಚ್ 17ರಿಂದ ಮಾರ್ಚ್ 23 ರವರೆಗಿನ ವಾರ ಭವಿಷ್ಯ: ‘ನಾಳೆ ಏನಾಗುವುದೋ ಬಲ್ಲವರು ಯಾರು’ ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (March 17 to March 23 Weekly Horoscope)

ರಾಶಿ ಫಲಗಳು

ಮೇಷ

ನಿಮ್ಮ ಸ್ವಾರ್ಥರಹಿತ ಮನಸ್ಸಿನಿಂದ ಕುಟುಂಬದ ಸಮಸ್ಯೆಯೊಂದು ದೂರವಾಗಲಿದೆ. ಯಾರನ್ನೂ ನಂಬದೆ ಸ್ವಂತ ನಿರ್ಧಾರಗಳಿಗೆ ಬದ್ದರಾಗುವಿರಿ. ದಂಪತಿಗಳ ನಡುವಿನ ಮನಸ್ತಾಪವು ಮರೆಯಾಗಲಿದೆ. ನಿತ್ಯ ಜೀವನಕ್ಕೆ ಹಣದ ಕೊರತೆ ಕಂಡುಬರುವುದಿಲ್ಲ. ಕಷ್ಟ ನಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡುವಿರಿ. ಹಿಂದಿನ ತಲೆಮಾರಿನಿಂದ ಬಂದ ವ್ಯಾಪಾರವನ್ನು ಮುಂದುವರೆಸುವಿರಿ. ವ್ಯಾಪಾರೋದ್ಯಮದಲ್ಲಿ ಅನಿರೀಕ್ಷಿತ ಧನಲಾಭವಿರುತ್ತದೆ. ಗೃಹಿಣಿಯರು ವಿವಾದವೊಂದನ್ನು ಎದುರಿಸಬೇಕಾಗುತ್ತದೆ. ಬಿಡುವಿಲ್ಲದ ದುಡಿಮೆಯ ಜೊತೆಯಲ್ಲಿ ಬೇಸರವೂ ಇರುತ್ತದೆ. ಸಂಚಾರದಿಂದ ಲಾಭವಿದೆ. ಎಲ್ಲರ ಜೊತೆಯಲ್ಲಿ ಸಂತಸದಿಂದ ಬಾಳುವಿರಿ. ಸಂಗಾತಿ ಮತ್ತು ಮಕ್ಕಳ ಜೊತೆ ಪ್ರವಾಸ ಕೈಗೊಳ್ಳುವಿರಿ.

ವೃಷಭ

ಆದಾಯವನ್ನು ಲೆಕ್ಕಿಸದೆ ಖರ್ಚನ್ನು ಮಾಡುವಿರಿ. ವೃತ್ತಿಜೀವನದಲ್ಲಿ ಮಾಡದ ತಪ್ಪನ್ನು ಒಪ್ಪಬೇಕಾಗಲಿದೆ. ಹಣಕಾಸಿನ ವಿವಾದವನ್ನು ಎದುರಿಸಬೇಕಾಗುತ್ತದೆ. ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುವುದಿಲ್ಲ. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಉಂಟಾಗಲಿದೆ. ಅವಶ್ಯವಿದ್ದಲ್ಲಿ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿರಿ. ಕುಟುಂಬದ ಹಿರಿಯರ ಸಲಹೆಯನ್ನು ಪಾಲಿಸಲು ಪ್ರಯತ್ನಿಸಿ. ನಿಮ್ಮಲ್ಲಿನ ಹಿಂಜರಿಕೆಯ ಗುಣ ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ವೈರಾಗ್ಯದ ಭಾವನೆ ಮೂಡುತ್ತದೆ. ವಿದ್ಯಾರ್ಥಿಗಳ ಒತ್ತಡ ಕಡಿಮೆ ಆಗಲಿದೆ. ಭೂವಿವಾದವೊಂದು ಮಾತುಕತೆಯಿಂದ ಕೊನೆಗೊಳ್ಳಲ್ಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ.

ಮಿಥುನ

ನಿಮ್ಮಒಳ್ಳೆಯತನವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಜನ ಸುತ್ತಮುತ್ತಲಿರುತ್ತಾರೆ. ಮಾನಸಿಕ ಒತ್ತಡದಿಂದ ಬಳಲುವಿರಿ. ಹಠದ ಗುಣದಿಂದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ವಾದ ವಿವಾದದಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ವೃತ್ತಿಯಲ್ಲಿನ ತೊಂದರೆಯೊಂದು ನಿವಾರಣೆ ಆಗಲಿದೆ. ಜನಸೇವಾ ಕೇಂದ್ರವನ್ನು ಆರಂಭಿಸಿ ಕೀರ್ತಿ ಪ್ರತಿಷ್ಠೆ ಗಳಿಸುವಿರಿ. ಸರ್ಕಾರದ ಸಹಾಯದಿಂದ ಸ್ವಂತ ವ್ಯಾಪಾರ ಆರಂಭಿಸುವಿರಿ. ಮನಬಿಚ್ಚಿ ಮಾತನಾಡಿದಲ್ಲಿ ಅನುಕೂಲಗಳಿಗೆ ಕೊರತೆ ಇರುವುದಿಲ್ಲ. ಅತಿಯಾದ ಯೊಚನೆಬೇಡ. ದೀರ್ಘಕಾಲದ ಪ್ರವಾಸ ಕೈಗೊಳ್ಳುವಿರಿ. ಮಕ್ಕಳೊಂದಿಗೆ ಸಂತಸದಿಂದ ಬಾಳುವಿರಿ. ಹಣದ ಸಹಾಯ ದೊರೆಯಲಿದೆ.

ಕಟಕ

ಸದಾ ಕ್ರಿಯಾಶೀಲರಾದ ನೀವು ಚಿಕ್ಕ ವಿಷಯಕ್ಕೂ ಅಧಿಕ ಪ್ರಾಮುಖ್ಯತೆಯನ್ನು ನೀಡುವಿರಿ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ. ದುಡುಕಿದಲ್ಲಿ ದೊರೆವ ಅವಕಾಶವು ದೂರವಾಗಬಹುದು. ಬೇರೆಯವರ ವಿಚಾರದಿಂದ ದಂಪತಿಗಳ ನಡುವೆ ವೈಮನಸ್ಸು ಉಂಟಾಗುತ್ತದೆ. ಸಂಬಂಧಿಕರೊಬ್ಬರ ಹಣಕಾಸಿನ ವ್ಯವಹಾರದ ಜವಾಬ್ದಾರಿ ಒಪ್ಪಿಕೊಳ್ಳುವಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಿರಿ. ಹವ್ಯಾಸಕ್ಕೆಂದು ಕಲಿತ ವಿಧ್ಯೆಯೊಂದು ಜೀವನಕ್ಕೆ ಆಸರೆ ಆಗುತ್ತದೆ. ಉತ್ತಮ ಭವಿಷ್ಯಕ್ಕಾಗಿ ಹಣದ ಉಳಿತಾಯ ಮಾಡುವಿರಿ. ಕೈಕಾಲುಗಳಿಗೆ ಪೆಟ್ಟು ಬೀಳಬಹುದು.

ಸಿಂಹ

ನಿಮ್ಮಲ್ಲಿನ ಆತ್ಮವಿಶ್ವಾಸ ನಿರಾಯಾಸ ಜಯ ನೀಡುತ್ತದೆ. ಬಳಿ ಇರುವ ಹಣವನ್ನು ಖರ್ಚು ಮಾಡುವವರೆಗೂ ವಿಶ್ರಾಂತಿಯನ್ನೂ ಪಡೆಯುವುದಿಲ್ಲ. ಕುಟುಂಬದ ಸೇವೆ ಮಾಡುವಲ್ಲಿ ಸಂತೃಪ್ತಿ ಪಡೆಯುವಿರಿ. ಕುಟುಂಬದ ಆಸ್ತಿಯೊಂದರಲ್ಲಿ ನ್ಯಾಯಯುತ ಪಾಲು ದೊರೆಯುತ್ತದೆ. ಅಧಿಕಾರ ವಲಯದಲ್ಲಿ ಕೆಲಸ ನಿರ್ವಹಿಸುವವರಿಗೆ ವಿಶೇಷ ಯಶಸ್ಸು ದೊರೆಯಲಿದೆ. ಯಾವ ವಿಚಾರದಲ್ಲಿಯೂ ತೃಪ್ತಿ ಇರದು. ಸಂಗಾತಿಯ ಮನಸ್ಸನ್ನು ಅರ್ಥ ಮಾಡಿಕೊಂಡು ಸಂತಸದಿಂದ ಬಾಳುವಿರಿ. ಕನಸಲ್ಲಿ ಕಂಡ ಕೆಲವು ವಿಚಾರಗಳು ನಿಜವಾಗಲಿವೆ. ಗುರು ಹಿರಿಯರ ಕೃಪೆ ನಿಮಗಿರುತದೆ. ಅವಿವಾಹಿತರಿಗೆ ವಿವಾಹಯೋಗವಿದೆ.

ಕನ್ಯಾ

ಬೇರೆಯವರ ಕೆಲಸವನ್ನು ಟೀಕಿಸಿ ವಿವಾದಕ್ಕೆ ಸಿಲುಕುವಿರಿ. ಮಕ್ಕಳ ಜೊತೆಯಲ್ಲಿ ವೇಳೆಯನ್ನು ಕಳೆಯುವಿರಿ. ಸೋದರನ ವಿವಾಹದ ಮಾತುಕತೆ ನಡೆಯುತ್ತದೆ. ಕಲಾವಿದರಾದಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿವೆ. ವೈಭವದ ಅಲಂಕಾರದ ವಸ್ತುಗಳನ್ನು ಕೊಳ್ಳುವಿರಿ. ಹಣ ಉಳಿಸುವ ಯೋಜನೆ ರೂಪಿಸುವಿರಿ. ಹಿರಿಯ ಅಧಿಕಾರಿಗಳು ವಿವಾದಕ್ಕೆ ಸಿಲುಕುತ್ತಾರೆ. ದುಡುಕು ಮತ್ತು ಕೋಪಕ್ಕೆ ಬುದ್ಧಿ ಕೊಡಬೇಡಿ. ಕುಟುಂಬದ ವಿವಾದವೊಂದು ರಾಜಿಯ ಹಂತವನ್ನು ತಲುಪುತ್ತದೆ. ಕುಟುಂಬದ ಹಿರಿಯರಿಗೆ ವಿಶೇಷವಾದ ಅನುಕೂಲತೆ ಕಲ್ಪಿಸುವಿರಿ. ಮೌನದಿಂದ ಜೀವನದ ಸಮಸ್ಯೆಗಳನ್ನು ಗೆಲ್ಲುವ ಮಾರ್ಗ ಕಂಡುಹಿಡಿಯುವಿರಿ. ಯೋಚಿಸಿ ಪ್ರಮುಖ ವಿಚಾರಗಳಲ್ಲಿ ಸ್ಥಿರವಾದ ನಿರ್ಧಾರ ತೆಗೆದುಕೊಳ್ಳ ಪ್ರಯತ್ನಿಸಿ.

ತುಲಾ

ಆತುರದಿಂದ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಸೋಲು ಉಂಟಾಗುತ್ತದೆ. ಸಮಯ ಸಂದರ್ಭವನ್ನು ಅರಿತು ನಡೆದುಕೊಳ್ಳಲು ಪ್ರಯತ್ನಿಸಿ. ಮಾಡದ ತಪ್ಪನ್ನು ಒಪ್ಪುವುದಿಲ್ಲ. ಬುದ್ಧಿವಂತಿಕೆಯ ಮಾತುಕತೆ ಎಲ್ಲರನ್ನೂ ಸೋಲುವಂತೆ ಮಾಡುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ವೈಭವದ ಜೀವನ ನಡೆಸುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಲಾಭವಿರುತ್ತದೆ. ಕಂತು ವ್ಯಾಪಾರದಿಂದ ವರಮಾನ ಹೆಚ್ಚುತ್ತದೆ. ಮಧ್ಯಸ್ಥಿಕೆ ವಹಿಸಿ ಕುಟುಂಬದ ಹಣಕಾಸಿನ ವಿವಾದವನ್ನು ಬಗೆಹರಿಸುವಿರಿ. ಸಹನೆ ಸಂಯಮದಿಂದ ನಡೆದುಕೊಳ್ಳಲಿರಿ. ದೀರ್ಘಕಾಲದ ಪ್ರಯಾಣದಿಂದ ದೈಹಿಕವಾಗಿ ಬಳಲುವಿರಿ. ಹೊಸ ಮನೆಯನ್ನು ಕೊಳ್ಳುವ ಮಾತುಕತೆ ನಡೆಯುತ್ತದೆ.

ವೃಶ್ಚಿಕ

ಹಠದ ಕಾರಣ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ಉದ್ಯೋಗದಲ್ಲಿ ನಿರೀಕ್ಷಿತ ಸ್ಥಾನ ದೊರೆಯಲಿದೆ. ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸಿ ಹಣದ ಕೊರತೆಯಿಂದ ಪಾರಾಗುವಿರಿ. ಬಹುಕಾಲದಿಂದ ಕಾಡುತ್ತಿರುವ ಆರೋಗ್ಯದ ಸಮಸ್ಯೆ ದೂರವಾಗಲಿದೆ. ಅನಿರೀಕ್ಷಿತ ಧನಾಗಮವಿದೆ. ವೃತ್ತಿಜೀವನದಲ್ಲಿ ಅಸೂಯೆ ಪಡುವ ಜನರಿರುತ್ತಾರೆ . ವೃತ್ತಿಯ ಆಂತರಿಕ ರಹಸ್ಯವನ್ನು ಯಾರಿಗೂ ತಿಳಿಸದಿರಿ. ಒತ್ತಡಕ್ಕೆ ಮಣಿದು ವೃತ್ತಿಯನ್ನು ಬದಲಾಯಿಸುವಿರಿ. ಸ್ವಂತ ವಾಹನಲಾಭವಿದೆ. ಕುಟುಂಬದಲ್ಲಿ ನಡೆಯಬೇಕಾದ ವಿವಾಹಕಾರ್ಯವು ಮುಂದೂಡಲ್ಪಡುತ್ತದೆ. ಕೃಷಿ ಭೂಮಿಯನ್ನು ಕೊಳ್ಳುವ ಸಾಧ್ಯತೆಗಳಿವೆ.

ಧನಸ್ಸು

ಕಷ್ಟ ನಷ್ಟದ ಸನ್ನಿವೇಶವನ್ನು ಬುದ್ಧಿವಂತಿಕೆಯಿಂದ ಸಮರ್ಥವಾಗಿ ಎದುರಿಸಬಲ್ಲಿರಿ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆಯನ್ನು ಮಾಡಲಿದ್ದಾರೆ. ಮುಂಗೋಪವನ್ನು ಕಡಿಮೆ ಮಾಡಿಕೊಳ್ಳಿ. ಬಯಸದೇ ಹೋದರೂ ಜನರ ಸಹಾಯ ದೊರೆಯುತ್ತದೆ. ಸ್ಥಿರವಾದ ಮನಸ್ಸನ್ನು ರೂಪಿಸಿಕೊಳ್ಳಿ. ಕುಟುಂಬದ ಹಿರಿಯರಿಂದ ಹಣದ ಸಹಾಯ ದೊರೆಯುತ್ತದೆ. ಸಮಾಜಸೇವಾ ವೃತ್ತಿಯಲ್ಲಿ ನಿರೀಕ್ಷಿತ ಯಶಸ್ಸು ದೊರೆಯುತ್ತವೆ. ಷೇರುಗಳಲ್ಲಿ ಹೂಡಿರುವ ಬಂಡವಾಳದಿಂದ ಲಾಭ ಗಳಿಸುವಿರಿ. ಜನಸೇವೆ ಮಾಡುವ ಇಂಗಿತ ಇರುತ್ತದೆ. ಬೇಸರ ಕಳೆಯಲೆಂದು ಮನರಂಜನಾ ಸ್ಥಳಕ್ಕೆ ಪ್ರವಾಸ ಕೈಗೊಳ್ಳುವಿರಿ. ಆರೋಗ್ಯದ ಬಗ್ಗೆ ಗಮನ ನೀಡಿರಿ.

ಮಕರ

ಕಲುಷಿತ ಆಹಾರ ಸೇವನೆಯಿಂದ ಅನಾರೋಗ್ಯ ಉಂಟಾಗಲಿದೆ. ರಕ್ತದ ಒತ್ತಡದ ತೊಂದರೆ ಇದ್ದಲ್ಲಿ ವೈದ್ಯರ ಸಲಹೆ ಪಡೆಯಿರಿ. ಸಣ್ಣ ಪುಟ್ಟ ಕೆಲಸಗಳಿಗೂ ಬೇರೆಯವರನ್ನು ಅವಲಂಭಿಸುವಿರಿ. ಕುಟುಂಬದ ವಿವಾಹವೊಂದು ಆತ್ಮೀಯರ ಸಹಾಯದಿಂದ ನೆರವೇರುತ್ತದೆ. ವಂಶಾನುಗತವಾಗಿ ಬಂದ ವೃತ್ತಿಯನ್ನು ಆಶ್ರಯಿಸುವಿರಿ. ಆತ್ಮೀಯರು ಅಗತ್ಯವಿದ್ದಲ್ಲಿ ನೆರವಿಗೆ ಬರುತ್ತಾರೆ. ಭೂವಿವಾದದಲ್ಲಿ ಜಯ ಲಭಿಸುತ್ತದೆ. ಕಟ್ಟಡಗಳ ನಿರ್ಮಾಣಕ್ಕೆ ಅವಶ್ಯಕವಾದ ಪರಿಕರಗಳ ವ್ಯಾಪಾರದಲ್ಲಿ ಲಾಭವಿರುತ್ತದೆ. ಹಣದ ವ್ಯವಹಾರದಲ್ಲಿ ತೊಂದರೆಯಿದೆ. ಧಾರ್ಮಿಕ ಕಾರ್ಯವೊಂದನ್ನು ಆಯೋಜಿಸುವಿರಿ. ಸುಖಕರ ನಿದ್ದೆ ಮತ್ತು ಋಚಿಕರ ಭೋಜನ ನಿಮ್ಮದಾಗಲಿದೆ.

ಕುಂಭ

ಸೋದರನ ಜೊತೆ ಪಾಲುಗಾರಿಕೆ ವ್ಯಾಪಾರವನ್ನು ಆರಂಭಿಸುವಿರಿ. ಭೂ ವ್ಯವಹಾರದಲ್ಲಿ ಉತ್ತಮ ಆಧಾಯವಿದೆ. ಮನದಲ್ಲಿನ ನೋವನ್ನು ಹಂಚಿಕೊಂಡಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರ ದೊರೆಯಲಿದೆ. ಆತ್ಮವಿಶ್ವಾಸದ ಕೊರತೆಯಿಂದ ತಪ್ಪುನಿರ್ಧಾರ ತೆಗೆದುಕೊಳ್ಳುವಿರಿ. ಒಳ್ಳೆಯ ಕೆಲಸವನ್ನು ಮಾಡಲು ಅನ್ಯರಿಗೆ ಪ್ರೇರಣೆ ಆಗುವಿರಿ. ವಿಶೇಷವಾದ ಪ್ರತಿಭೆಯನ್ನು ಎಲ್ಲರೂ ಗುರುತಿಸಲಿದ್ದಾರೆ. ಸ್ವಂತ ವ್ಯಾಪಾರದಲ್ಲಿ ಅಲ್ಪಪ್ರಮಾಣದ ಲಾಭ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನಕ್ಕೆ ಅನುಕೂಲತೆ ಇರುತ್ತದೆ. ಎಲ್ಲರಜೊತೆ ಪ್ರಾವಾಸಕ್ಕೆ ತೆರಳುವಿರಿ. ಮನಸ್ತಾಪವನ್ನು ಮರೆತು ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯುವಿರಿ.

ಮೀನ

ಕೆಟ್ಟದಿನಗಳು ಮರೆಯಾದರೂ ಮಾನಸಿಕ ಒತ್ತಡ ಸದಾ ಕಾಡುತ್ತದೆ. ಬರಿ ಮಾತಿನಿಂದಲೇ ನಿಮ್ಮ ಕೆಲಸ ಸಾಧಿಸುವಿರಿ. ಜನಸೇವೆ ಮಾಡುವ ಅವಕಾಶ ದೊರೆಯುತ್ತದೆ. ಹಣದ ಅತಿಯಾಸೆ ಇರುವುದಿಲ್ಲ. ಜೀವನ ನಿರ್ವಹಣೆಗಾಗಿ ಉಪವೃತ್ತಿಯೊಂದನ್ನು ಆರಂಭಿಸುವಿರಿ. ಉದ್ಯೋಗಸ್ಥರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗುವರು. ಸಮಾಜದಲ್ಲಿ ಪ್ರಮುಖ ಸ್ಥಾನವನ್ನು ಅಲಂಕರಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಆದಾಯ ಇರುತ್ತದೆ. ವೃತ್ತಿ ಬದಲಾವಣೆಯ ಯೋಗವಿದೆ. ಹಣಕಾಸಿನ ವಿಚಾರದಲ್ಲಿ ಹಿರಿಯರ ಸಹಾಯದಿಂದ ಶುಭಫಲಗಳು ದೊರೆಯುತ್ತವೆ. ಆರೋಗ್ಯದ ಸಮಸ್ಯೆಯಿ಼ಂದ ಹೊರೆಬರಲು ಯೋಗ ಪ್ರಾಣಾಯಾಮವನ್ನು ಅನುಸರಿಸಿ.

ಜ್ಯೋತಿಷಿ: ಎಚ್‌. ಸತೀಶ್‌, ಬೆಂಗಳೂರು

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.