ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಇಂಗ್ಲೆಂಡ್ ವನಿತೆಯರ ಏಕೈಕ ಟೆಸ್ಟ್ ಪಂದ್ಯ; ದಿನಾಂಕ, ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

ಭಾರತ vs ಇಂಗ್ಲೆಂಡ್ ವನಿತೆಯರ ಏಕೈಕ ಟೆಸ್ಟ್ ಪಂದ್ಯ; ದಿನಾಂಕ, ಸಮಯ ಹಾಗೂ ಲೈವ್ ಸ್ಟ್ರೀಮಿಂಗ್ ವಿವರ

India Women vs England Women: ಭಾರತ ಮತ್ತು ಇಂಗ್ಲೆಂಡ್‌ ವನಿತೆಯರ ನಡುವಿನ ಏಕೈಕ ಟೆಸ್ಟ್‌ ಪಂದ್ಯವು ಡಿಸೆಂಬರ್‌ 14ರ ಬುಧವಾರ ನಡೆಯುತ್ತಿದೆ. ಟಿ20 ಸರಣಿಯನ್ನು 2-1 ಅಂತರದಿಂದ ಕಳೆದುಕೊಂಡಿರುವ‌ ಹರ್ಮನ್‌ಪ್ರೀತ್ ಕೌರ್‌ ಬಳಗವು ಟೆಸ್ಟ್‌ ಪಂದ್ಯದಲ್ಲಿ ಗೆಲುವಿನ ನಿರೀಕ್ಷೆಯಲ್ಲಿದೆ.

ಭಾರತ ವನಿತೆಯರ ತಂಡ
ಭಾರತ ವನಿತೆಯರ ತಂಡ (BCCI Twitter)

ಇಂಗ್ಲೆಂಡ್ ವನಿತೆಯರ ವಿರುದ್ಧದ ಟಿ20 ಸರಣಿಯಲ್ಲಿ ಸೋಲೊಪ್ಪಿಕೊಂಡಿರುವ ಭಾರತ ವನಿತೆಯರ ತಂಡವು, ಇದೀಗ ಏಕೈಕ ಟೆಸ್ಟ್‌ ಪಂದ್ಯ ಗೆಲುವಿನತ್ತ ಚಿತ್ತ ಹರಿಸಿದೆ. ಆಂಗ್ಲ ವನಿತೆಯರ ವಿರುದ್ಧದ ಕೊನೆಯ ಟಿ20 ಪಂದ್ಯ ಗೆದ್ದ ವಿಶ್ವಾಸದಲ್ಲಿರುವ ಹರ್ಮನ್‌ಪ್ರೀತ್‌ ಕೌರ್‌ ಬಳಗ, ಗುರುವಾರದಿಂದ ನಡೆಯುವ ಟೆಸ್ಟ್‌ ಪಂದ್ಯದಲ್ಲಿ ಬಿಳಿ ಜೆರ್ಸಿ ತೊಟ್ಟು ಕಣಕ್ಕಿಳಿಯುವ ಉತ್ಸಾಹದಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಭಾರತ ಮಹಿಳೆಯರ ತಂಡವು 2021-22ರಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ಪಂದ್ಯ‌ಗಳನ್ನು ಆಡಿತ್ತು. ಆ ಎರಡೂ ಪಂದ್ಯಗಳು ಡ್ರಾದಲ್ಲಿ ಅಂತ್ಯಗೊಂಡಿವೆ. ಅನುಭವಿ ಆಟಗಾರ್ತಿಯರಾದ ಮಿಥಾಲಿ ರಾಜ್ ಮತ್ತು ಜೂಲನ್ ಗೋಸ್ವಾಮಿ ಅನುಪಸ್ಥಿತಿಯಲ್ಲಿ ಭಾರತ ಮಹಿಳೆಯರ ತಂಡವು ಮೊದಲ ಬಾರಿಗೆ ಟೆಸ್ಟ್ ಪಂದ್ಯವಾಡುತ್ತಿದೆ. ಭಾರತದ ಅತ್ಯುತ್ತಮ ಟೆಸ್ಟ್‌ ಆಟಗಾರ್ತಿಯರು ಎಂಬ ಹಿರಿಮೆ ಆ ಇಬ್ಬರದ್ದು.

ಅತ್ತ ಇಂಗ್ಲೆಂಡ್ ವನಿತೆಯರ ತಂಡವು ಈ ವರ್ಷದ ಜುಲೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಆಡಿತ್ತು. ಆದರೆ ಅಲ್ಲಿ 89 ರನ್‌ಗಳಿಂದ ಆಂಗ್ಲರು ಸೋತಿದ್ದಾರೆ.

ಭಾರತ ವನಿತೆಯರು vs ಇಂಗ್ಲೆಂಡ್ ವನಿತೆಯರ ನಡುವಿನ ಟೆಸ್ಟ್ ಪಂದ್ಯದ ದಿನಾಂಕ ಮತ್ತು ಸಮಯ

ಭಾರತ ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ಟೆಸ್ಟ್ ಪಂದ್ಯವು ಡಿಸೆಂಬರ್ 14ರಂದು ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

ಟೆಸ್ಟ್ ಪಂದ್ಯದ ಸ್ಥಳ

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಟೆಸ್ಟ್ ಪಂದ್ಯ ನಡೆಯಲಿದೆ.

ಭಾರತ ಮತ್ತು ಇಂಗ್ಲೆಂಡ್ ವನಿತೆಯರ ಟೆಸ್ಟ್ ಪಂದ್ಯವನ್ನು ವೀಕ್ಷಿಸುವುದು ಹೇಗೆ?

ಭಾರತ ವನಿತೆಯರು ಮತ್ತು ಇಂಗ್ಲೆಂಡ್ ವನಿತೆಯರ ನಡುವಿನ ಟೆಸ್ಟ್ ಪಂದ್ಯವನ್ನು ಭಾರತದಲ್ಲಿ ಸ್ಪೋರ್ಟ್ಸ್‌ 18 1 ಮತ್ತು ಸ್ಪೋರ್ಟ್ಸ್‌ 18 HD ಚಾನೆಲ್‌ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಇದೇ ವೇಳೆ ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ಗೆ ಮೂಲಕ ಲೈವ್‌ ಸ್ಟ್ರೀಮಿಂಗ್‌ ಅನ್ನು ಮೊಬೈಲ್‌ನಲ್ಲಿ ವೀಕ್ಷಿಸಬಹುದು.

ಭಾರತ ವನಿತೆಯರ ಟೆಸ್ಟ್ ತಂಡ

ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ರಿಚಾ ಘೋಷ್ (ವಿಕೆಟ್ ಕೀಪರ್), ಸ್ನೇಹ ರಾಣಾ, ಶುಭಾ ಸತೀಶ್, ಹರ್ಲೀನ್ ಡಿಯೋಲ್, ಸೈಕಾ ಇಶಾಕ್, ರೇಣುಕಾ ಠಾಕೂರ್, ಟೈಟಾಸ್ ಸಾಧು, ಮೇಘನಾ ಸಿಂಗ್, ರಾಜೇಶ್ವರಿ ಗಾಯಕ್ವಾಡ್, ಪೂಜಾ ವಸ್ತ್ರಾಕರ್.

ಇಂಗ್ಲೆಂಡ್ ವನಿತೆಯರ ಟೆಸ್ಟ್ ತಂಡ

ಹೀದರ್ ನೈಟ್ (ನಾಯಕಿ), ಟ್ಯಾಮಿ ಬ್ಯೂಮಾಂಟ್ (ವಿಕೆಟ್ ಕೀಪರ್), ಡ್ಯಾನಿ ವ್ಯಾಟ್, ಮಾಯಾ ಬೌಚಿಯರ್, ಆಲಿಸ್ ಕ್ಯಾಪ್ಸೆ, ಕೇಟ್ ಕ್ರಾಸ್, ಚಾರ್ಲಿ ಡೀನ್, ಸೋಫಿಯಾ ಡಂಕ್ಲಿ, ಸೋಫಿ ಎಕ್ಲೆಸ್ಟನ್, ಲಾರೆನ್ ಗಿಲರ್, ಕಿರ್ಸ್ಟಿ ಗಾರ್ಡನ್, ಆಮಿ ಜೋನ್ಸ್ (ವಿಕೆಟ್‌ ಕೀಪರ್), ಬೆಸ್ ಹೀತ್ (ವಿಕೆಟ್ ಕೀಪರ್), ನ್ಯಾಟ್ ಸ್ಕಿವರ್-ಬ್ರಂಟ್, ಲಾರೆನ್ ಬೆಲ್.

IPL_Entry_Point