Actress Mahalaskhmi Instagram post: ಟ್ರೋಲ್ ಆದ ಬೆನ್ನಲ್ಲೇ ಹೊಸ ಪೋಸ್ಟ್‌ಗಳ ಮೂಲಕ ಜನರಿಗೆ ಉತ್ತರಿಸಿದ ಮಹಾಲಕ್ಷ್ಮಿ
ಮಹಾಲಕ್ಷ್ಮಿ ನೋಡಲು ಬಹಳ ಸುಂದರವಾಗಿದ್ದಾರೆ. ಆದರೆ ರವೀಂದರ್ ಚಂದ್ರಶೇಖರನ್ ನೋಡಲು ಬಹಳ ಧಡೂತಿಯಾಗಿದ್ದಾರೆ. ಮದುವೆ ಫೋಟೋ ನೋಡಿದವರಿಗೆ ಒಂದು ಕ್ಷಣ ಇದು ರಿಯಲ್ ಮದುವೆ ಎನ್ನಿಸಿಲ್ಲ. ಯಾವುದೋ ಸಿನಿಮಾ ಅಥವಾ ಜಾಹೀರಾತಿಗಾಗಿ ಹೀಗೆ ಫೋಟೋಶೂಟ್ ಮಾಡಿಸಿರಬಹುದು ಎಂಬ ಅನುಮಾನ ಕಾಡಿತ್ತು.
ಸಿನಿಮಾ ನಟ, ನಟಿಯರ ಮದುವೆ ಎಂದರೆ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಇರುತ್ತದೆ. ಮೆಚ್ಚಿನ ನಾಯಕ ಆದರೆ, ಆತ ಮದುವೆ ಆಗುವ ಹುಡುಗಿ ಯಾರಾಗಿರಬಹುದು...?ಆಕೆಯ ಹಿನ್ನೆಲೆ ಏನು..? ಆಕೆ ಕೂಡಾ ಸಿನಿಮಾ ನಟಿ ಇರಬಹುದಾ..? ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಮೆಚ್ಚಿನ ನಟಿ ಆದರೆ ಹುಡುಗ ಏನು ಕೆಲಸದಲ್ಲಿದ್ದಾನೆ..? ನೋಡೋಕೆ ಹೇಗಿದ್ದಾನೆ..? ಹೀಗೆ ಫ್ಯಾನ್ಸ್‌ಗೆ ಸಾಕಷ್ಟು ಕುತೂಹಲ ವ್ಯಕ್ತವಾಗುತ್ತದೆ.
ಆದರೆ ಆ ಜೋಡಿಗೆ ಮ್ಯಾಚ್ ಆಗದಿದ್ದರೆ ಅದೇ ದೊಡ್ಡ ವಿಷಯವಾಗುತ್ತದೆ. ಇದೇ ವಿಚಾರಕ್ಕೆ ಅವರು ಟ್ರೋಲ್ ಆಗುತ್ತಾರೆ. ಕೆಲವು ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟಿ, ನಿರೂಪಕಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ ಕೂಡಾ ಈಗ ಟ್ರೋಲ್‌ಗೆ ಒಳಗಾಗುತ್ತಿದ್ದಾರೆ. ಈ ಜೋಡಿ ಸೆಪ್ಟೆಂಬರ್ 1 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರೂ ಟ್ರೋಲ್ ಆಗಲು ಆರಂಭಿಸಿದ್ದಾರೆ.
ಮಹಾಲಕ್ಷ್ಮಿ ನೋಡಲು ಬಹಳ ಸುಂದರವಾಗಿದ್ದಾರೆ. ಆದರೆ ರವೀಂದರ್ ಚಂದ್ರಶೇಖರನ್ ನೋಡಲು ಬಹಳ ಧಡೂತಿಯಾಗಿದ್ದಾರೆ. ಮದುವೆ ಫೋಟೋ ನೋಡಿದವರಿಗೆ ಒಂದು ಕ್ಷಣ ಇದು ರಿಯಲ್ ಮದುವೆ ಎನ್ನಿಸಿಲ್ಲ. ಯಾವುದೋ ಸಿನಿಮಾ ಅಥವಾ ಜಾಹೀರಾತಿಗಾಗಿ ಹೀಗೆ ಫೋಟೋಶೂಟ್ ಮಾಡಿಸಿರಬಹುದು ಎಂಬ ಅನುಮಾನ ಕಾಡಿತ್ತು. ಆದರೆ ಇದು ನಿಜ ಎಂದು ತಿಳಿದಾಗ, ಕೆಲವರು ಲವ್ ಇಸ್ ಬ್ಲೈಂಡ್, ನಿಮ್ಮ ಜೋಡಿ ಚೆನ್ನಾಗಿಲ್ಲದಿದ್ದರೂ ನಿಮ್ಮ ಪ್ರೀತಿ ನಿಜವಾಗಿದೆ. ನೀವು ನೂರು ಕಾಲ ಬಾಳಿ ಎಂದು ಹಾರೈಸಿದರೆ, ಇನ್ನೂ ಕೆಲವರು ನಿಮ್ಮ ಜೋಡಿ ಸ್ವಲ್ಪವೂ ಚೆನ್ನಾಗಿಲ್ಲ ಎನ್ನುತ್ತಿದ್ದಾರೆ. ಇದೇ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವಿವಿಧ ಮಿಮ್ಸ್ ಹರಿದಾಡುತ್ತಿವೆ.
ಮಹಾಲಕ್ಷ್ಮಿಗೆ ರವೀಂದರ್ ಚಂದ್ರಶೇಖರನ್ ಮೇಲೆ ನಿಜವಾದ ಪ್ರೀತಿ ಇಲ್ಲ. ಆಕೆ ಹಣಕ್ಕಾಗಿ ಆತನನ್ನು ಮದುವೆಯಾಗಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಇಷ್ಟು ದಿನ ಸುಮ್ಮನಿದ್ದ ಮಹಾಲಕ್ಷ್ಮಿ ಇದೀಗ ಮೂರು ಹೊಸ ಪೋಸ್ಟ್‌ಗಳ ಮೂಲಕ ಟ್ರೋಲಿಗರಿಗೆ ಉತ್ತರಿಸಿದ್ದಾರೆ. ಮದುವೆಯ ಮತ್ತೊಂದು ಫೋಟೋ ಹಂಚಿಕೊಂಡಿರುವ ಮಹಾಲಕ್ಷ್ಮಿ, ''ನೀನು ನನ್ನ ಹೃದಯವನ್ನು ಕದ್ದಿರುವೆ, ಆದರೆ ಪರವಾಗಿಲ್ಲ, ಅದನ್ನು ನಿನ್ನ ಬಳಿಯೇ ಇಟ್ಟುಕೊಳ್ಳಲು ಬಿಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಸುಂದರವಾದ ಮನೆಯೊಂದರಲ್ಲಿ ಒಬ್ಬರೇ ಕುಳಿತಿರುವ ಫೋಟೋ ಹಂಚಿಕೊಂಡು, ''ಪ್ರೀತಿಗೆ ಪರಿಪೂರ್ಣತೆ ಇಲ್ಲದಿದ್ದರೂ ಪರವಾಗಿಲ್ಲ, ಅದರೆ ಅದು ನಿಜವಾದ ಪ್ರೀತಿಯಾಗಿದ್ದರೆ ಸಾಕು'' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮಹಾಲಕ್ಷ್ಮಿ ನನ್ನ ಪ್ರೀತಿ ನಿಜ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ.
ಮತ್ತೊಂದು ಪೋಸ್ಟ್‌ನಲ್ಲಿ ಕಾರಂಜಿ ಬಳಿ ನಿಂತಿರುವ ಫೋಟೋ ಹಂಚಿಕೊಂಡು, ''ಜೀವನ ಬಹಳ ಸುಂದರವಾಗಿದೆ, ಅದನ್ನು ಸುಂದರಗೊಳಿಸಿದವನು ನನ್ನ ಪತಿ'' ಎಂದು ಬರೆದುಕೊಂಡಿದ್ದಾರೆ. ರವೀಂದ್ರನ್ ಕೂಡಾ ಮದುವೆ ಫೋಟೋ ಹಂಚಿಕೊಂಡು ''ಜೀವನಕ್ಕೆ ಪ್ರೀತಿ ಬೇಕು, ಪ್ರೀತಿಗೆ ಮಹಾಲಕ್ಷ್ಮಿ ಬೇಕು, ಐ ಲವ್ ಯೂ ಹೆಂಡ್ತಿ'' ಬೇಕು ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ಗಳಿಗೆ ಕೂಡಾ ನೆಟಿಜನ್ಸ್ ವಿವಿಧ ಕಮೆಂಟ್ ಮಾಡುತ್ತಿದ್ದಾರೆ. ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಹಾಗೂ ನಿರೂಪಕಿ ಮಹಾಲಕ್ಷ್ಮಿ ಇಬ್ಬರಿಗೂ ಇದು ಎರಡನೇ ಮದುವೆ ಎನ್ನಲಾಗಿದೆ. ಈ ಜೋಡಿ ಸೆಪ್ಟೆಂಬರ್ 1 ರಂದು ತಿರುಪತಿಯಲ್ಲಿ ವಿವಾಹವಾಗಿದ್ದರು.
ಮಹಾಲಕ್ಷ್ಮಿ ತಮಿಳು ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಧಾರಾವಾಹಿಗಳಲ್ಲಿ ಕೂಡಾ ನಟಿಸಿದ್ದಾರೆ. ತಮಿಳಿನ ವಾಣಿ ರಾಣಿ, ಆಫೀಸ್, ಚೆಲ್ಲಮೇ, ಉಥಿರಿಪೂಕ್ಕಳ್, ಒರು ಕೈ ಒಸೈ ಹಾಗೂ ಇನ್ನಿತರ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಸದ್ಯಕ್ಕೆ ಅವರು ಮಹಾರಸಿ ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದು ಇದು ಸನ್ ಟಿವಿಯಲ್ಲಿ ಪ್ರಸಾರವಾಗುತ್ತಿದೆ. ರವೀಂದರ್ ಚಂದ್ರಶೇಖರನ್, ತಮಿಳಿನಲ್ಲಿ ಕೆಲವೊಂದು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಲಿಬ್ರಾ ಪ್ರೊಡಕ್ಷನ್ಸ್ ಬ್ಯಾನರ್ ಹೊಂದಿರುವ ಅವರು 'ವಿಡಿಯುಮ್ ವಾರೈ ಕಾಥಿರು' 'ನಟ್ಪುನ ಎನ್ನಡು ಥೆರಿಯುಮ', 'ಮುರುಂಗೈಕೈ ಚಿಪ್ಸ್' ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ.