Arun Sagar Back to BBK6: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗಳನ್ನು ನೋಡಿಕೊಂಡು ಮತ್ತೆ ಬಿಗ್‌ಬಾಸ್‌ಗೆ ವಾಪಸಾದ ಅರುಣ್ ಸಾಗರ್
ನವೆಂಬರ್ 19ರ ಎಪಿಸೋಡ್‌ನಲ್ಲಿ ಅರುಣ್ ಸಾಗರ್ ಬಿಗ್ ಬಾಸ್ ಮನೆಯಲ್ಲಿ ಇರಲಿಲ್ಲ. ಸ್ಪರ್ಧಿಗಳು ಕೂಡಾ ಅರುಣ್ ಸಾಗರ್ ಎಲ್ಲಿ ಹೋದರು ಎಂದು ಆತಂಕಕ್ಕೆ ಒಳಗಾಗಿದ್ದರು. ಮತ್ತೆ ಅವರು ವಾಪಸ್ ಬರಲಿದ್ದಾರಾ ಇಲ್ಲವಾ ಎಂಬುದು ವೀಕ್ಷಕರು ಕೂಡಾ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಕನ್ಫೆಷನ್ ರೂಮ್‌ಗೆ ಬರಲು ಹೇಳಿದ ಬಿಗ್ ಬಾಸ್ ನಂತರ, ಅರುಣ್ ಸಾಗರ್ ಪುತ್ರಿ ಅದಿತಿ ಪೆಟ್ಟು ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 9 ಹದಿನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ವಾರ ಅನುಪಮಾ ಗೌಡ ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗಿದ್ದರು. ಅರುಣ್ ಸಾಗರ್, ದಿವ್ಯ ಉರುಡುಗ, ಅಮೂಲ್ಯ ಗೌಡ, ಆರ್ಯವರ್ಧನ್, ದೀಪಿಕಾ ದಾಸ್, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ ಹಾಗೂ ರೂಪೇಶ್ ರಾಜಣ್ಣ ಸೇರಿ ಒಟ್ಟು 8 ಜನರು ಮನೆಯಲ್ಲಿ ಉಳಿದಿದ್ದಾರೆ.
ಅನುಪಮಾ ಗೌಡ ಹೊರ ಹೋದ ನಂತರ ಮನೆಯಲ್ಲಿ ಉಳಿದಿರುವ 8 ಮಂದಿ ಕೂಡಾ ಎಲಿಮಿನೇಟ್ ಆಗಿದ್ದಾರೆ. ಸ್ಪರ್ಧಿಗಳು ಒಂದೊಂದು ಕಾರಣ ನೀಡಿ ತಮ್ಮ ಸಹಸ್ಪರ್ಧಿಗಳನ್ನು ನಾಮಿನೇಟ್ ಮಾಡಿದ್ದಾರೆ. ಈ ಬಾರಿ ಮನೆಯಿಂದ ಯಾರು ಔಟ್ ಆಗಬಹುದು ಎಂಬ ಕುತೂಹಲ ಕಿರುತೆರೆಪ್ರಿಯರಿಗೆ ಕಾಡುತ್ತಿದೆ. ಈ ನಡುವೆ, ಅರುಣ್ ಸಾಗರ್, ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾಗಿ ಮತ್ತೆ ವಾಪಸ್ ಬಂದಿದ್ದಾರೆ. ಅರುಣ್ ಸಾಗರ್, ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾದಾಗ ಇದ್ದಕ್ಕಿದ್ದಂತೆ ಸ್ಪರ್ಧಿಗಳು ಆತಂಕಕ್ಕೆ ಒಳಗಾಗಿದ್ದರು. ಬಹುಶ: ಇದು ಬಿಗ್ ಬಾಸ್ ಬೇಕಂತಲೇ ಮಾಡಿರಬಹುದು ಎಂದುಕೊಂಡಿದ್ದರು. ಆದರೆ ಅರುಣ್ ಸಾಗರ್ ವಾಪಸ್ ಬಂದಾಗ ನಿಜ ತಿಳಿದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಾರಿಯೂ ಅರುಣ್ ಸಾಗರ್ ತಮ್ಮ ಮನರಂಜನೆ ಮುಂದುವರಿಸಿದ್ದಾರೆ. ಫಿನಾಲೆ ತಲುಪಲು ಕೆಲವೇ ದಿನಗಳು ಬಾಕಿ ಇರುವಾಗ ಅವರು ಮನೆಯಿಂದ ಹೊರ ನಡೆದಿದ್ದರು. ರಾತ್ರಿ ವೇಳೆಗೆ ಮರಳಿದ್ದಾರೆ. ನವೆಂಬರ್ 19ರ ಎಪಿಸೋಡ್‌ನಲ್ಲಿ ಅರುಣ್ ಸಾಗರ್ ಬಿಗ್ ಬಾಸ್ ಮನೆಯಲ್ಲಿ ಇರಲಿಲ್ಲ. ಸ್ಪರ್ಧಿಗಳು ಕೂಡಾ ಅರುಣ್ ಸಾಗರ್ ಎಲ್ಲಿ ಹೋದರು ಎಂದು ಆತಂಕಕ್ಕೆ ಒಳಗಾಗಿದ್ದರು. ಮತ್ತೆ ಅವರು ವಾಪಸ್ ಬರಲಿದ್ದಾರಾ ಇಲ್ಲವಾ ಎಂಬುದು ವೀಕ್ಷಕರು ಕೂಡಾ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಕನ್ಫೆಷನ್ ರೂಮ್‌ಗೆ ಬರಲು ಹೇಳಿದ ಬಿಗ್ ಬಾಸ್ ನಂತರ, ಅರುಣ್ ಸಾಗರ್ ಪುತ್ರಿ ಅದಿತಿ ಪೆಟ್ಟು ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಲ್ಲದೆ ಗಾಬರಿಯಾಗುವ ಅವಶ್ಯಕತೆ ಇಲ್ಲ, ಮಗಳನ್ನು ನೋಡಲು ಹೋಗುತ್ತೀರಿ ಎಂದರೆ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾರೆ. ಅರುಣ್ ಸಾಗರ್ ಮಗಳನ್ನು ನೋಡುವ ಆಸೆ ವ್ಯಕ್ತಪಡಿಸಿ ಅಲ್ಲಿಂದ ಹೊರ ಹೋಗಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗಳನ್ನು ನೋಡಿಕೊಂಡು ರಾತ್ರಿ ವೇಳೆಗೆ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಬಂದಿದ್ದಾರೆ. ತಾನು ಮನೆಯಿಂದ ಹೋಗಿದ್ದು ಏಕೆ ಎಂಬುದನ್ನು ಕೂಡಾ ಅರುಣ್ ಸಾಗರ್ ವಿವರಿಸಿದ್ದಾರೆ. ಮಗಳು ತಲೆಸುತ್ತಿ ಬಿದ್ದು ದವಡೆ ಭಾಗಕ್ಕೆ ಪೆಟ್ಟು ಮಾಡಿಕೊಂಡಿದ್ದಾಳೆ. ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಮಗಳು ಸುಧಾರಿಸಿಕೊಳ್ಳುತ್ತಿದ್ದಾಳೆ ಎಂದು ಅರುಣ್ ಸಾಗರ್ ಸಹಸ್ಪರ್ಧಿಗಳ ಬಳಿ ಹೇಳಿಕೊಂಡರು. ಇದನ್ನು ಕೇಳಿ ಉಳಿದ ಸ್ಪರ್ಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅದಿತಿ ಬೇಗ ಗುಣಮುಖಲಾಗಲಿ ಎಂದು ಹಾರೈಸಿದ್ದಾರೆ.
ಗಾಯಕಿಯಾಗಿ, ನಟಿ ಆಗಿ ಗುರುತಿಸಿಕೊಂಡಿರುವ ಅದಿತಿ ಸಾಗರ್
ತಂದೆ ಅರುಣ್ ಸಾಗರ್ ರಂಗಭೂಮಿ ಹಿನ್ನೆಲೆ ಉಳ್ಳವರಾದ್ದರಿಂದ ಅದಿತಿಗೆ ಕೂಡಾ ಕಲೆ ಎಂಬುದು ರಕ್ತಗತವಾಗಿ ಬಂದಿದೆ. ಹಿಂದಿ ಹಾಗೂ ಕನ್ನಡ ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿದ ಬಿ.ವಿ. ಕಾರಂತರನ್ನು ಅರುಣ್ ಸಾಗರ್ ಬಹಳ ಆರಾಧಿಸುತ್ತಾರೆ. ಬಹಳಷ್ಟು ನಾಟಕಗಳಲ್ಲಿ ಅದಿತಿಗೆ ಹಾಡಿದ ಅನುಭವವಿದೆ. ಒಮ್ಮೆ ಬಿ.ವಿ. ಕಾರಂತರ ಹುಟ್ಟುಹಬ್ಬದಂದು ಅದಿತಿ ಪುರಂದರ ದಾಸರ ಆಚಾರವಿಲ್ಲದ ನಾಲಿಗೆ…ಹಾಡನ್ನು ಹಾಡಿದ್ದಾರೆ. ಈ ಹಾಡನ್ನು ಕೇಳಿದ ನಿರ್ದೇಶಕ ತರುಣ್ ಸುಧೀರ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೆ ಅದಿತಿಯನ್ನು ಪರಿಚಯಿಸಿದ್ದಾರೆ. ಅದಿತಿ ಧ್ವನಿಯನ್ನು ಕೇಳಿದ ಅರ್ಜುನ್ ಜನ್ಯಾ, ಶರಣ್ ಅಭಿನಯದ ರ್‍ಯಾಂಬೋ -2 ಸಿನಿಮಾದ 'ದಮ್ ಮಾರೋ ಧಮ್' ಹಾಡನ್ನು ಅದಿತಿ ಅವರಿಂದಲೇ ಹಾಡಿಸಿದ್ದಾರೆ. ಈ ಹಾಡಿಗಾಗಿ 66ನೇ ದಕ್ಷಿಣ ಫಿಲ್ಮ್ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅದಿತಿ ಹೆಸರು ಉತ್ತಮ ಹಿನ್ನೆಲೆ ಗಾಯಕಿ ಕ್ಯಾಟಗಿರಿಯಲ್ಲಿ ನಾಮಿನೇಟ್ ಆಗಿತ್ತು. 14ನೇ ವಯಸ್ಸಿನಲ್ಲಿ ಹಾಡಿದ ಮೊದಲ ಹಾಡಿನ ಮೂಲಕ, ಅದಿತಿ ಸಂಗೀತಪ್ರಿಯರ ಮನ ಸೆಳೆದಿದ್ದರು.
ಅದಿತಿ ಯೂಟ್ಯೂಬ್ ಹಾಗೂ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅವರು ಹಾಡಿರುವ ಅನೇಕ ಹಾಡುಗಳನ್ನು ನೋಡಬಹುದು. 'ರ್‍ಯಾಂಬೋ' ಸಿನಿಮಾ ನಂತರ 'ಕವಲುದಾರಿ' ಸಿನಿಮಾದ ಸಂಶಯ…'ಅರಿಷಡ್ವರ್ಗ' ಸಿನಿಮಾದ ನುಂಗು ಗುಳಿಗೆ…'ಕಥಾ ಸಂಗಮ' ಚಿತ್ರದ ಮನಸಿನ ಒಳಗೆ…'ಫ್ರೆಂಚ್ ಬಿರಿಯಾನಿ' ಚಿತ್ರದ ದಿ ಬೆಂಗಳೂರು ಸಾಂಗ್... ಹಾಡುಗಳನ್ನು ಅದಿತಿ ಹಾಡಿದ್ದಾರೆ. ಪಿಆರ್‌ಕೆ ಬ್ಯಾನರ್ ಅಡಿ ತಯಾರಾದ 'ಫ್ರೆಂಚ್ ಬಿರಿಯಾನಿ' ಚಿತ್ರದ ಬೆಂಗಳೂರು ಸಾಂಗ್ ಹಾಡು, ರ್‍ಯಾಪ್ ಶೈಲಿಯಲ್ಲಿ ಮೂಡಿ ಬಂದಿದೆ. ಮಿರ್ಚಿ ಮ್ಯೂಸಿಕ್ ಸೌತ್ ಅವಾರ್ಡ್ ಕಾರ್ಯಕ್ರಮದಲ್ಲಿ ಕೂಡಾ ಅದಿತಿಗೆ 'ಕವಲುದಾರಿ' ಚಿತ್ರದ ಸಂಶಯ ಹಾಡಿಗಾಗಿ ವರ್ಷದ ಹಿನ್ನೆಲೆ ಗಾಯಕಿ ಪ್ರಶಸ್ತಿ ಒಲಿದುಬಂದಿತ್ತು. ಶಿವರಾಜ್‌ಕುಮಾರ್ ನಟನೆಯ 125ನೇ ಸಿನಿಮಾ 'ವೇದಾ'ದಲ್ಲಿ ಕೂಡಾ ಅದಿತಿ ಸಾಗರ್ ನಟಿಸಿದ್ದಾರೆ.