ಸಿಂಗಂ ಅಗೇನ್ ಬಾಕ್ಸ್ ಆಫೀಸ್ 10ನೇ ದಿನದ ಕಲೆಕ್ಷನ್; 200 ಕೋಟಿ ದಾಟಿದ ಹರ್ಷದಲ್ಲಿ ಚಿತ್ರತಂಡ
ಸಿಂಗಂ ಅಗೇನ್ ಬಾಕ್ಸ್ ಆಫೀಸ್ ಬಾಕ್ಸ್ ಆಫೀಸ್ ಕಲೆಕ್ಷನ್ ಓಟ ಇನ್ನೂ ನಿಂತಿಲ್ಲ. ಸಿನಿಮಾ ಬಿಡುಗಡೆಯಾಗಿ ಹತ್ತು ದಿನಗಳ ನಂತರದ ಕಲೆಕ್ಷನ್ ವರದಿಯ ಪ್ರಕಾರ 200 ಕೋಟಿ ದಾಟಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸಿಂಗಂ ಎಗೇನ್ ಬಾಕ್ಸ್ ಆಫೀಸ್ ಕಲೆಕ್ಷನ್ ಇನ್ನೂ ಸುದ್ದಿಯಲ್ಲಿದೆ. ಅಜಯ್ ದೇವಗನ್ ಅಭಿನಯದ ಈ ಸಿನಿಮಾ ದೀಪಾವಳಿಯ ಸಂದರ್ಭದಲ್ಲಿ ಬಿಡುಗಡೆಯಾಗಿತ್ತು. ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲೈಯಾ 3 ನೊಂದಿಗೆ ಬಾಕ್ಸ್ ಆಫೀಸ್ ಫೈಪೋಟಿ ನಡೆಸುತ್ತಿತ್ತು. ಆದರೆ ಇನ್ನೂ ಸಿಂಗಂ ಘರ್ಜನೆ ನಿಂತಿಲ್ಲ. ದಿನದಿಂದ ದಿನಕ್ಕೆ ಉತ್ತಮ ಬಜೆಟ್ ಗಳಿಸುತ್ತಿದೆ. ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾದ ಚಿತ್ರಗಳ ಜೊತೆಗೆ ಫೈಟ್ ಮಾಡಿ ಸಿಂಗಂ ತನ್ನ ಓಟವನ್ನು ಇನ್ನೂ ಉಳಿಸಿಕೊಂಡಿದೆ. 200ಕೋಟಿ ಕ್ರಾಸ್ ಆಗಿದೆ. ಈ ಬೃಹತ್ ಮೈಲಿಗಲ್ಲಿನ ಬಗ್ಗೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ.
ಶೀಘ್ರದಲ್ಲೇ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂ.ಗಳ ಗಡಿ ದಾಟಲಿದೆ. 10 ನೇ ದಿನದಂದು, Sacnilk ಪ್ರಕಾರ 13.25 ಕೋಟಿ ಗಳಿಸಿತು. ಥಿಯೇಟರ್‌ಗಳಲ್ಲಿ ಒಟ್ಟಾರೆ 34.67 ಪ್ರತಿಶತ ಗಳಿಕೆಯಾಗಿದೆ. ಚಿತ್ರದ ಒಟ್ಟು ಕಲೆಕ್ಷನ್ ಈಗ 206.50 ಕೋಟಿ ರೂ ಆಗಿದೆ ಎಂದು ವರದಿಯಾಗಿದೆ. ಇನ್ನೂ ಮುಂದಿನ ದಿನಗಳಲ್ಲೂ ಕಲೆಕ್ಷನ್ ಭರವಸೆಯನ್ನು ಹೊಂದಿದ್ದು ಇನ್ನಷ್ಟು ಹಣ ಕಲೆಕ್ಷನ್ ಆಗಲಿದೆ ಎಂಬ ಭರವಸೆ ಇದೆಯಂತೆ.
ಇತ್ತೀಚೆಗೆ, ರಣವೀರ್ ಅಲ್ಲಾಬಾಡಿಯಾ ಅವರೊಂದಿಗೆ ಸಂದರ್ಶನವೊಂದರಲ್ಲಿ, ನಿರ್ದೇಶಕ ರೋಹಿತ್ ಚಿತ್ರ 200 ಕೋಟಿ ಕ್ಲಬ್‌ಗೆ ಪ್ರವೇಶಿಸಿದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅವರು ತಮ್ಮ ಮಾತಿನಲ್ಲಿ “ಹೌದು, ನಾವು ಸಂತೋಷವಾಗಿದ್ದೇವೆ, ಆದರೆ ನಮ್ಮ ಮನಸ್ಸು ಈಗಾಗಲೇ ಕೆಲಸದ ಮೋಡ್‌ಗೆ ಮತ್ತೆ ಬಂದಾಗಿದೆ” ಎಂದಿದ್ದಾರೆ.
ಹಲವಾರು ವರದಿಗಳ ಪ್ರಕಾರ, ಸಿಂಗಮ್ ಎಗೇನ್ ಅನ್ನು 375 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ, ಇದರಲ್ಲಿ ನಟರ ಶುಲ್ಕ ಮತ್ತು ಪ್ರಚಾರಗಳು ಸೇರಿವೆ ಎಂದು ಹೇಳಲಾಗಿದೆ. ಆ ಬಜೆಟ್ ನೋಡಿದರೆ ಲಾಭವಾಗಬೇಕು ಎಂದರೆ ಇನ್ನಷ್ಟು ಹಣ ಗಳಿಕೆಯಾಗುವ ಅವಶ್ಯಕತೆ ಇದೆ.
ಮೊದಲ ದಿನದ ಕಲೆಕ್ಷನ್ ಹೀಗಿತ್ತು
ಅಜಯ್ ದೇವಗನ್ ನಟನೆಯ ಸಿಂಗಂ ಅಗೇನ್ ಸಿನಿಮಾವು ನವೆಂಬರ್ 1ರಂದು ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾಗಳ ಬಾಕ್ಸ್ ಆಫೀಸ್ ವರದಿ ನೀಡುವ ಸಕ್‌ನಿಲ್ಕ್.ಕಾಂ ಪ್ರಕಾರ ಈ ಸಿನಿಮಾವು ಮೊದಲ ದಿನ ಬಾಕ್ಸ್ ಆಫೀಸ್‌ನಲ್ಲಿ 43 ಕೋಟಿ ರೂಪಾಯಿ ಗಳಿಕೆ ಮಾಡಿತ್ತು.
ಸಿಂಗಂ ಆಗೇನ್ ಚಿತ್ರದ ಬಗ್ಗೆ
ಸಿಂಗಂ ಸಿನಿಮಾ 2011ರಲ್ಲಿ ಮೊದಲು ಬಿಡುಗಡೆಯಾಗಿತ್ತು. ಕಾಜಲ್ ಅಗರ್ವಾಲ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು, ನಂತರ 2014ರಲ್ಲಿ ಸಿಂಗಂ ರಿಟರ್ನ್ಸ್ ಸಿನಿಮಾ ಆಗಮಿಸಿತ್ತು. ಈ ಎರಡೂ ಪ್ರಾಜೆಕ್ಟ್‌ಗಳು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದವು. ಇದಾದ ಬಳಿಕ ನವೆಂಬರ್1, 2024ರಂದು ಸಿಂಗಂ ಅಗೇನ್ ಸಿನಿಮಾ ಬಿಡುಗಡೆಯಾಗಿತ್ತು.