ಸಿಂಗಂ ಅಗೇನ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 1: ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆದ ಅಜಯ್‌ ದೇವಗನ್‌ ಸಿನಿಮಾ
ಕನ್ನಡ ಸುದ್ದಿ  /  ಮನರಂಜನೆ  /  ಸಿಂಗಂ ಅಗೇನ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 1: ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆದ ಅಜಯ್‌ ದೇವಗನ್‌ ಸಿನಿಮಾ

ಸಿಂಗಂ ಅಗೇನ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 1: ಮೊದಲ ದಿನವೇ ಗಲ್ಲಾಪೆಟ್ಟಿಗೆಯಲ್ಲಿ ಬಂಗಾರದ ಬೆಳೆ ತೆಗೆದ ಅಜಯ್‌ ದೇವಗನ್‌ ಸಿನಿಮಾ

Singham Again box office collection day 1: ಅಜಯ್‌ ದೇವಗನ್‌ ನಟನೆಯ ಸಿಂಗಂ ಅಗೇನ್‌ ಸಿನಿಮಾವು ನವೆಂಬರ್‌ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಕ್‌ನಿಲ್ಕ್‌.ಕಾಂ ಪ್ರಕಾರ ಈ ಸಿನಿಮಾ ಮೊದಲ ದಿನವೇ 43 ಕೋಟಿ ರೂಪಾಯಿ ಗಳಿಕೆ ಮಾಡಿದೆ.

ಸಿಂಗಂ ಅಗೇನ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 1
ಸಿಂಗಂ ಅಗೇನ್‌ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ದಿನ 1

Singham Again box office collection day 1: ಅಜಯ್‌ ದೇವಗನ್‌ ನಟನೆಯ ಸಿಂಗಂ ಅಗೇನ್‌ ಸಿನಿಮಾವು ನವೆಂಬರ್‌ 1ರಂದು ಭಾರತದ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಸಿನಿಮಾಗಳ ಬಾಕ್ಸ್‌ ಆಫೀಸ್‌ ವರದಿ ನೀಡುವ ಸಕ್‌ನಿಲ್ಕ್‌.ಕಾಂ ಪ್ರಕಾರ ಈ ಸಿನಿಮಾವು ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ 43 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಇದು ಶನಿವಾರ ಬೆಳಗ್ಗಿನವರೆಗಿನ ಲೆಕ್ಕ. ಈ ಮೂಲಕ ರೋಹಿತ್‌ ಶೆಟ್ಟಿ ಕಾಪ್‌ ಫ್ರಾಂಚೈಸ್‌ನ ಮೊದಲ ದಿನ ಅತ್ಯಧಿಕ ಗಳಿಕೆ ಮಾಡಿದ ಸಿನಿಮಾವೆಂಬ ಖ್ಯಾತಿಗೆ ಸಿಂಗಂ ಅಗೇನ್‌ ಪಾತ್ರವಾಗಿದೆ.

ಸಿಂಗಂ ಅಗೇನ್‌ ಸಿನಿಮಾದ ಮೊದಲ ದಿನದ ಗಳಿಕೆ

ರೋಹಿತ್‌ ಶೆಟ್ಟಿಯ ಈ ಸಿನಿಮಾವು ಮೊದಲ ದಿನ 43.5 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಬಾಕ್ಸ್‌ ಆಫೀಸ್‌ನಲ್ಲಿ ಮೊದಲ ದಿನ ಅತ್ಯುತ್ತಮ ಗಳಿಕೆ ಮಾಡಿದೆ. ಈ ಸಿನಿಮಾದ ಥಿಯೇಟರ್‌ ಆಕ್ಯುಪೆನ್ಸಿಯೂ ಉತ್ತಮವಾಗಿತ್ತು. ಬೆಳಗ್ಗಿನ ಶೋಗೆ ಶೇಕಡ 39.39ರಷ್ಟು ಮತ್ತು ಅಪರಾಹ್ನ ನಂತರದ ಶೋಗಳಿಗೆ ಶೇಕಡ 71.90ರಷ್ಟು ಆಕ್ಯುಪೆನ್ಸಿ ಇತ್ತು. ಥಿಯೇಟರ್‌ ಆಕ್ಯುಪೆನ್ಸಿ ಅಂದರೆ ಚಿತ್ರಮಂದಿರಗಳಲ್ಲಿ ಭರ್ತಿಯಾದ ಶೇಕಡವಾರು. ಹೌಸ್‌ಫುಲ್‌ ಆದ್ರೆ ಶೇಕಡ 100 ಆಕ್ಯುಪೆನ್ಸಿ.

ಬಾಕ್ಸ್ ಆಫೀಸ್ ವರದಿಯ ಆಧಾರದಲ್ಲಿ ಹೇಳುವುದಾದರೆ ಮಹಾರಾಷ್ಟ್ರದಲ್ಲಿ ಭೂಲ್ ಭುಲೈಯಾ 3 ಅನ್ನು ಸಿಂಗಂ ಅಗೇನ್ ಕಲೆಕ್ಷನ್‌ ಮೀರಿಸಿರುವಂತೆ ತೋರುತ್ತಿದೆ. ಆದರೆ, ಗಲ್ಲಾಪೆಟ್ಟಿಗೆಯ ಅಂಕಿಅಂಶಗಳು ರೋಹಿತ್ ಶೆಟ್ಟಿ ಚಿತ್ರ ಅಥವಾ ಸಿಂಗಮ್ ಫ್ರಾಂಚೈಸ್‌ನಿಂದ ಸಾಮಾನ್ಯವಾಗಿ ನಿರೀಕ್ಷಿಸುವಷ್ಟೇ ಇದೆ. ತುಂಬಾ ದೊಡ್ಡಮಟ್ಟದ ಗಳಿಕೆ ಎನ್ನುವಂತೆ ಇಲ್ಲ.

ಸಿಂಗಂ ಆಗೇನ್‌ ಚಿತ್ರದ ಬಗ್ಗೆ

ಸಿಂಗಂ ಎಗೇನ್ ಸೂಪರ್-ಹಿಟ್ ಫ್ರಾಂಚೈಸಿಯ ಮೂರನೇ ಕಂತು. ಸಿಂಗಂ ಸಿನಿಮಾ 2011ರಲ್ಲಿ ಬಿಡುಗಡೆಯಾಯಿತು. ಕಾಜಲ್ ಅಗರ್ವಾಲ್ ಮತ್ತು ಪ್ರಕಾಶ್ ರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ನಂತರ 2014ರಲ್ಲಿ ಸಿಂಗಂ ರಿಟರ್ನ್ಸ್ ಸಿನಿಮಾ ಆಗಮಿಸಿತ್ತು. ಈ ಎರಡೂ ಪ್ರಾಜೆಕ್ಟ್‌ಗಳು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗಿದ್ದವು. ಇದಾದ ಬಳಿಕ ನವೆಂಬರ್‌1, 2024ರಂದು ಸಿಂಗಂ ಅಗೇನ್‌ ಸಿನಿಮಾ ಬಿಡುಗಡೆಯಾಗಿದೆ.

ಅಜಯ್ ದೇವಗನ್, ಕರೀನಾ ಕಪೂರ್ ಖಾನ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ರಣವೀರ್ ಸಿಂಗ್ ಅಭಿನಯದ ಸಿನಿಮಾವು ಈ ವೀಕೆಂಡ್‌ನಲ್ಲಿ ಸಾಕಷ್ಟು ಗಳಿಕೆ ಮಾಡುವ ಸೂಚನೆಯಿದೆ. ಅಜಯ್ ದೇವಗನ್ ಅರ್ಜುನ್ ಕಪೂರ್ ವಿರುದ್ಧ ಬಾಜಿರಾವ್ ಸಿಂಗಂ ಆಗಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈತ ಆಧುನಿಕ ರಾಮನನ್ನು ಪ್ರತಿನಿಧಿಸುತ್ತಾನೆ. ಚಿತ್ರವು 'ಒಳ್ಳೆಯ ವರ್ಸಸ್ ದುಷ್ಟ' ಹೋರಾಟದ ಅಂಶಗಳನ್ನು ಹೊಂದಿದೆ. ಈ ಸಿನಿಮಾದಲ್ಲಿ ಕರೀನಾ ಕಪೂರ್ ಅವರು ಅಜಯ್ ದೇವಗನ್‌ ಪತ್ನಿಯಾಗಿ ನಟಿಸಿದ್ದಾರೆ. ರಣವೀರ್ ಸಿಂಗ್ ಮತ್ತು ಅಕ್ಷಯ್ ಕುಮಾರ್ ತಮ್ಮ ಪಾತ್ರಗಳನ್ನು ಸಿಂಬಾ ಮತ್ತು ಸೂರ್ಯವಂಶಿಯಾಗಿ ಮುಂದುವರೆಸಿದ್ದಾರೆ.

ಈ ಸಿನಿಮಾದ ಪೊಲೀಸ್‌ ಜಗತ್ತಿಗೆ ಹೊಸ ಸೇರ್ಪಡೆಯಾಗಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಇವರು ಲೇಡಿ ಸಿಂಗಮ್ ಆಗಿ ಪರಿಚಯಿಸಲ್ಪಟ್ಟಿದ್ದಾರೆ. ಟೈಗರ್ ಶ್ರಾಫ್ ಕೂಡ ಎಸಿಪಿ ಸತ್ಯ ಪಟ್ನಾಯಕ್ ಆಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಕಾರ್ತಿಕ್ ಆರ್ಯನ್ ಅವರ ಭೂಲ್ ಭುಲೈಯಾ 3 ಸಿನಿಮಾದ ಮೂಲಕ ಸಿಂಗಂ ಅಗೇನ್‌ ಚಿತ್ರಕ್ಕೆ ಸ್ಪರ್ಧೆ ನೀಡಿದ್ದಾರೆ.

ಸಿಂಗಂ ಅಗೇನ್‌ (ಸಿಂಘಮ್ ಎಗೇನ್) ಸಿನಿಮಾವು ಬಾಲಿವುಡ್‌ ಆಕ್ಷನ್ ಚಿತ್ರವಾಗಿದ್ದು, ರೋಹಿತ್ ಶೆಟ್ಟಿ ಬರೆದು ನಿರ್ದೇಶಿಸಿದ್ದಾರೆ. ರಿಲಯನ್ಸ್ ಎಂಟರ್‌ಟೈನ್‌ಮೆಂಟ್ , ಜಿಯೋ ಸ್ಟುಡಿಯೋಸ್ ಮತ್ತು ದೇವಗನ್ ಫಿಲ್ಮ್ಸ್ ಜೊತೆಗೆ ರೋಹಿತ್ ಶೆಟ್ಟಿ ಪಿಕ್ಚರ್ಸ್ ಅಡಿಯಲ್ಲಿ ಸಹ ನಿರ್ಮಾಣ ಮಾಡಿದ್ದಾರೆ. ಕರೀನಾ ಕಪೂರ್ ಖಾನ್ , ರಣವೀರ್ ಸಿಂಗ್ , ಅಕ್ಷಯ್ ಕುಮಾರ್ , ದೀಪಿಕಾ ಪಡುಕೋಣೆ , ಟೈಗರ್ ಶ್ರಾಫ್ , ಅರ್ಜುನ್ ಕಪೂರ್ ಮತ್ತು ಜಾಕಿ ಶ್ರಾಫ್ ಜತೆ ಅಜಯ್‌ ದೇವಗನ್‌ ನಟಿಸಿದ್ದಾರೆ. ಇದು ಶೆಟ್ಟಿಯವರ ಕಾಪ್ ಯೂನಿವರ್ಸ್ ಫ್ರಾಂಚೈಸ್‌ನ ಐದನೇ ಕಂತು. ಸಿಂಗಮ್ ರಿಟರ್ನ್ಸ್ (2014) ಸಿನಿಮಾದ ಮುಂದಿನ ಭಾಗವಾಗಿದೆ.

Whats_app_banner